ಹಿರಿಯ ರಾಜಕಾರಣಿ ಜೆ.ಎ ಕರುಂಬಯ್ಯ ನಿಧನ
ಹಿರಿಯ ರಾಜಕಾರಣಿ ಜೆ.ಎ.ಕರುಂಬಯ್ಯ ನಿಧನ
ಮಡಿಕೇರಿ ಏ ೧ : ದಕ್ಷ, ಪ್ರಾಮಾಣಿಕ, ಹಿರಿಯ ರಾಜಕಾರಣಿ, ಕೊಡಗು ಜಿಲ್ಲಾ ಪರಿಷತ್ ನ ಮಾಜಿ ಅಧ್ಯಕ್ಷ ಜೆ.ಎ.ಕರುಂಬಯ್ಯ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಕರುಂಬಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ
ಕೊಡಗು ಬ್ರೇಕಿಂಗ್
* ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ ಮೂವರ ದುರ್ಮರಣ
* ಕೊಡಗು ಜಿಲ್ಲೆಯ ಗೋಣಿಕೊಪ್ಪ ಸಮೀಪದ ಅರುವತೋಕ್ಲು ಗ್ರಾಮದಲ್ಲಿ ಘಟನೆ.
* ಕಾವಾಡಿ ಗ್ರಾಮದ ಧರ್ಮಜ್ಜ(50), ರವಿ(40) ಹಾಗೂ ಸತೀಶ್ (50) ಮೃತ ದುರ್ದೈವಿಗಳು
* ತೋಟದಲ್ಲಿ ತೆಂಗಿನ ಕಾಯಿ ಕೀಳುವ ಸಂದರ್ಭ ಕಬ್ಬಿಣದ ಏಣಿ ವಿದ್ಯುತ್ ತಂತುಗೆ ತಗುಲಿ ನಡೆದ ಅವಘಡ.
* ರಾಮಜನ್ಮ ಎಂಬವರ ತೋಟವನ್ನು ಲೀಸ್ ಗೆ ಪಡೆಯಲಾಗಿತ್ತು.
* ಮೂವರ ದೇಹಗಳು ಕರಲಾಗಿವೆ.
* ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
* ವೀರಾಜಪೇಟೆ ತಾಲ್ಲೂಕಿನ ಅರುವತೋಕ್ಲು ಗ್ರಾಮ
ಶ್ರೀ ವಿಜಯವಿನಾಯಕದಲ್ಲಿ ಭಕ್ತರಿಗೆ ಬೇವು - ಬೆಲ್ಲ
ಶ್ರೀ ವಿಜಯವಿನಾಯಕದಲ್ಲಿ ಭಕ್ತರಿಗೆ ಬೇವು - ಬೆಲ್ಲ
ಮಡಿಕೇರಿ : ನಗರದ ಪ್ರಸಿದ್ಧ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. 6ರಂದು ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಹಾಗೂ ಪೂಜೆಗಳು ನಡೆಯಲಿವೆ.
ಭಕ್ತರಿಗೆ ಅಂದು ಬೆಳಿಗ್ಗೆ 6.30 ರಿಂದ 12ರವರೆಗೆ ಹಾಗೂ ಸಂಜೆ 5 ರಿಂದ 8ರವರೆಗೆ ಬೇವು-ಬೆಲ್ಲ, ಸಿಹಿಬೂಂದಿ ಪ್ರಸಾದ ವಿನಿಯೋಗ ನಡೆÀಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ನಾಯಿ ಮರಿಯೊಂದಿಗೆ ಆಟವಾಡುತ್ತಿದ್ದ ಬಾಲಕಿ ಕೆರೆಗೆ ಬಿದ್ದು ಸಾವು...ಸುಂಟಿಕೊಪ್ಪದ ೭ನೇ ಹೊಸಕೋಟೆಯಲ್ಲಿ ಘಟನೆ
*ನಾಯಿಯೊಂದಿಗೆ ಆಟವಾಡುತ್ತಿದ್ದ ಬಾಲಕಿ ಕೆರೆಗೆ ಬಿದ್ದು ಸಾವು.
: ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕೆರೆಯೊಳಗೆ ಬಿದ್ದು ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ದಾಸಂಡ ರಂಜನ್ ಎಂಬುವವರ ತೋಟದಲ್ಲಿ ಕಾರ್ಮಿಕರಾಗಿರುವ ಚೋಮ ಎಂಬುವವರ ಪುತ್ರಿ ಭಾರತಿ (13) ಎಂಬಾಕೆಯೇ ನಾಯಿಯೊಂದಿಗೆ ಆಟವಾಡುತ್ತಾ ಕೆರೆಗೆ ಆಹುತಿಯಾಗಿ ಮೃತ ನತದೃಷ್ಟ ಬಾಲಕಿಯಾಗಿದ್ದಾಳೆ. ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಇಂದು (ತಾ.31) ಬೆಳಿಗ್ಗೆ ಅಂದಾಜು 11.30ರ ಸಮಯದಲ್ಲಿ ತೋಟದ ಲೈನ್ ಮನೆಯ ಪಕ್ಕದಲ್ಲಿ ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದಳು. ಆಟದ ನಡುವೆ ಭಾರತಿಯನ್ನು ನಾಯಿ ಓಡಿಸಿಕೊಂಡು ಹೋಗಿದೆ. ಆಟವಾಡುತ್ತಿದ್ದ ಜಾಗದ ಒತ್ತಿನಲ್ಲಿ ಇಳಿಜಾರಿನಿಂದ ಕೂಡಿದ ಪ್ರದೇಶದಲ್ಲಿ ಕೆರೆಯೊಂದಿದ್ದು ನಾಯಿಯ ಕೈಗೆ ಸಿಗದಂತೆ ಓಡುತ್ತಿದ್ದ ಭಾರತಿ ನಿಯಂತ್ರಣ ಕಳೆದುಕೊಂಡು ಅದರೊಳಗೆ ಜಾರಿ ಬಿದ್ದಿದ್ದಾಳೆ. ನಂತರ ಮೇಲಕ್ಕೆ ಬರಲಾಗದೇ ಇಹಲೋಕ ತ್ಯಜಿಸಿದ್ದಾಳೆ. ಕುಶಾಲನಗರ ಆಸ್ಪತ್ರೆಯಲ್ಲಿ ಬಾಲಕಿಯ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ.
ಆಧಾರ್-ಪ್ಯಾನ್ ಲಿಂಕ್ ಗಡುವು ತಿಂಗಳು ವಿಸ್ತರಣೆ.
ಹೊಸದಿಲ್ಲಿ: ಆಧಾರ್ ಜೊತೆ ಪ್ಯಾನ್ ಅನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರಕಾರ ಮತ್ತೆ ವಿಸ್ತರಣೆ ಮಾಡಿದೆ.
ಈ ಮೊದಲು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸೂಚಿಸಿದಂತೆ ಮಾರ್ಚ್ 31ರೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡಿಸಬೇಕಾಗಿತ್ತು.
ಈಗ ಈ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಆಧಾರ್ ಜೊತೆ ಪ್ಯಾನ್ ಜೋಡಣೆ ಮಾಡುವ ತನಕ ತೆರಿಗೆ, ಬ್ಯಾಂಕಿಂಗ್, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಈ ಮೊದಲು ಪ್ಯಾನ್-ಆಧಾರ್ ಜೋಡಣೆಗೆ 2018ರ ಜೂ.30 ಕಡೆಯ ದಿನವಾಗಿತ್ತು. ನಂತರ ಇದನ್ನು ಹಲವು ಬಾರಿ ವಿಸ್ತರಿಸಿ ಕೊನೆಗೆ 2019ರ ಮಾರ್ಚ್ 31 ರೊಳಗೆ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಸೂಚಿಸಲಾಗಿತ್ತು. ಈಗ ಮತ್ತೆ ಅದನ್ನು ವಿಸ್ತರಣೆ ಮಾಡಲಾಗಿದೆ.
ಈಗಾಗಲೇ ಲಿಂಕ್ ಆಗಿದೆಯೇ, ತಿಳಿಯುವುದು ಹೇಗೆ?
ನಿಮ್ಮ ಪ್ಯಾನ್ ಮತ್ತು ಆಧಾರ್ ಈಗಾಗಲೇ ಲಿಂಕ್ ಆಗಿವೆಯೇ? ಈ ಮೊದಲು ಇವುಗಳ ಜೋಡಣೆಗೆ 2018ರ ಜೂನ್ 30 ಕಡೆಯ ದಿನವಾಗಿತ್ತು. ಆ ಸಂದರ್ಭದಲ್ಲಿ ಏನಾದರೂ ಲಿಂಕ್ ಮಾಡಿರಬಹುದಾ ಎನ್ನುವ ಅನುಮಾನ ನಿಮ್ಮಲ್ಲಿರಬಹುದು. ಒಂದು ವೇಳೆ ಮಾಡಿರುವ ನೆನಪೂ ಇರಬಹುದು. ಈ ಬಗ್ಗೆ ದೃಢೀಕರಿಸಿಕೊಳ್ಳಲು ಹೀಗೆ ಮಾಡಿ...
1. ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.incometaxindiaefiling.gov.in/
2. ವೆಬ್‌ಸೈಟ್‌ನ ಹೋಮ್‌ಪೇಜ್‌ನ ಎಡಭಾಗದಲ್ಲಿರುವ Link Aadhaar ಎನ್ನುವುದನ್ನು ಕ್ಲಿಕ್ ಮಾಡಿ. ಆ ಪುಟದಲ್ಲಿ 'ನೀವು ಈಗಾಗಲೇ ಲಿಂಕ್ ಮಾಡಿದ್ದರೆ, ಅದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ' ಎನ್ನುವರ್ಥದ ಸಂದೇಶ ಕಾಣಿಸುತ್ತದೆ. ಅಲ್ಲಿರುವ Link Aadhaar ಅನ್ನುವುದನ್ನು ಕ್ಲಿಕ್ ಮಾಡಿ.
3. ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಅಲ್ಲಿ ಕೊಟ್ಟಿರುವ ಖಾಲಿ ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ. View Link Aadhaar Status ಅನ್ನುವುದನ್ನು ಕ್ಲಿಕ್ ಮಾಡಿ. ಆಗ ನಿಮ್ಮ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಶವು ತೆರೆ ಮೇಲೆ ಕಾಣಿಸುತ್ತದೆ.
ಬಡವರ ಬೆಳಕು ಸಂಘದಿಂದ ಧನಸಾಹಯ
ಕೊಡಗಿನ ಬಡವರ ಬೆಳಕು ಸಂಘದ ವತಿಯಿಂದ ಕಿಡ್ನಿ ನಿಷ್ಕ್ರಿಯೆಗೊಂಡ ವ್ಯಕ್ತಿ ೬೦ ಸಾವಿರ ರೂ ಧನಸಹಾಯ
ಕುಶಾಲನಗರ, ಮಾ೩೧: ಕೊಡಗಿನ ಬಡವರ ಬೆಳಕು ಸಂಘದ ವತಿಯಿಂದ ಕಿಡ್ನಿ ನಿಷ್ಕ್ರಿಯೆಗೊಂಡ ಬಡ ವ್ಯಕ್ತಿಗೆ ೬೦ ಸಾವಿರ ರೂ ಧನಸಹಾಯ ಮಾಡಿ ಬಡ ಕುಟುಂಬಕ್ಕೆ ಬೆಳಕನ್ನು ಚೆಲ್ಲಿದ್ದಾರೆ. ಕೊಡಗು ಬಡವರ ಬೆಳಕು ಸಂಘವು ಕೊಡಗಿನಲ್ಲಿರುವ ಬಡವರ ಆಶಾಕಿರಣವಾಗಿದ್ದು, ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಕೊಡಗು ಬಡವರ ಬೆಳಕು ಸಂಘವು ತನ್ನ ಎರಡೂ ಕಿಡ್ನಿಯನ್ನು ಕಳೆದುಕೊಂಡ ಕೊಂಡಂಗೇರಿಯ ಮೂಸಾ ಎಂಬ ಬಡ ಕುಟುಂಬದ ವ್ಯಕ್ತಿಗೆ ಧನಸಹಾಯ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಮುಂದಿನ ಭವಿಷ್ಯಕ್ಕಾಗಿ ಸಹಾಯವಾಗಲೆಂದು ಅರವತ್ತು ಸಾವಿರ ರೂಪಾಯಿಗಳ ಸಹಾಯ ಧನವನ್ನು ನೀಡಿದ ಕೊಡಗು ಬಡವರ ಬೆಳಕು ಸಂಘವು, ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ.
ಬಡ ಕುಟುಂಬವೊಂದಕ್ಕೆ ಸುಮಾರು ಐದು ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿ ಕೊಡಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದರ ಶಂಕುಸ್ಥಾಪನೆ ನಡೆಯಲಿರುವುದಾಗಿ ಕೊಡಗು ಬಡವರ ಬೆಳಕು ಸಂಘದ ಅಧ್ಯಕ್ಷ ಎಂ.ಹೆಚ್.ಮುಹಮ್ಮದ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡಗಿನ ಬಡವರ ಬೆಳಕು ಸಂಘದ ಉಪಾಧ್ಯಕ್ಷರಾದ ಫತಾಹ್ ಕಡಂಗ, ಕಾರ್ಯಾಧ್ಯಕ್ಷರಾದ ಮಜೀದ್ ಚೋಕಂಡಲ್ಲಿ, ಪ್ರಧಾನ ಕಾರ್ಯದರ್ಶಿಗಳಾದ ನಾಸೀರ್ ಮಕ್ಕಿ, ಕಾರ್ಯದರ್ಶಿಗಳಾದ ನೌಶಾದ್ ಜನ್ನತ್, ಸಹ ಕಾರ್ಯದರ್ಶಿ ಶಫೀಕ್ ಗುಂಡಿಗೆರೆ, ಖಜಾಂಜಿ ಶಫೀಕ್ ಸಿ.ಎಚ್, ನಿರ್ದೇಶಕರುಗಳಾದ ಮಜೀದ್ ಕೊಂಡಂಕೇರಿ, ನಾಸೀರ್ ಹುಂಡಿ, ಜಲೀಲ್ ಅಮ್ಮತಿ, ನಜೀರ್ ಚಾಮಿ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಭೀಕರ ಅಪಘಾತ ಇಬ್ಬರು ಯುವಕರು ಸಾವು...
ಸುಂಟಿಕೊಪ್ಪ; ಸಮೀಪದ ಕೊಡಗರಹಳ್ಳಿಯ ಮಾರುತಿ ನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ಮಿಶ್ರಣ ಲಾರಿ ಮತ್ತು ಪಿಯೆಟ್ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಕೊಡಗರಹಳ್ಳಿ ಉಪ್ಪುತೋಡುವಿನ ಇರ್ಫಾನ್ ಸ್ಥಳದಲ್ಲಿ ಮೃತಪಟ್ಟರೇ,ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ಸಮ್ಮದ್ ಮೈಸೂರಿಗೆ ಸಾಗಿಸುವಷ್ಟರಲ್ಲಿ ದಾರಿಮದ್ಯೆ ಮೃತಪಟ್ಟಿದ್ದಾರೆ.
ಘಟನೆ ವಿವರ; ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಕಾಂಕ್ರಿಟ್ ಮಿಕ್ಸಿಂಗ್ ಲಾರಿ ಮತ್ತು ಕುಶಾಲನಗರ ಕಡೆಯಿಂದ ಕೊಡಗರಹಳ್ಳಿ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು.ಕಾರಿನಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಯುವಕರನ್ನು ಸಾರ್ವಜನಿಕರು ಶ್ರಮವಹಿಸಿ ಎಳೆದು ಆಸ್ಪತ್ತೆಗೆ ಸಾಗಿಸಿದರು.
ಮತ್ತೊಮ್ಮೆ ಮೋದಿ ಸರ್ಕಾರ :ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಶ್ವಾಸ
ಕೇರಳದ ವಯನಾಡಿನಿಂದ ಕಾಂಗ್ರೆಸ್ ಅಧ್ಯಜ್ಷ ರಾಹುಲ್ ಗಾಂಧಿ ಸ್ಪರ್ಧೆ
ಹೊಸದಿಲ್ಲಿ, ಮಾ.31: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡ್ ನಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ .
ಅಮೇಠಿಯಲ್ಲಿ ಸ್ಪರ್ಧಿಸಲಿರುವ ರಾಹುಲ್ ಗಾಂಧಿ ಅವರು ತನ್ನ ಎರಡನೇ ಕ್ಷೇತ್ರವಾಗಿ ವಯನಾಡನ್ನು ಆಯ್ದುಕೊಂಡಿದ್ದಾರೆ.
ರಾಹುಲ್ ಗಾಂಧಿ ವಯನಾಡ್ ನಿಂದ ಸ್ಪರ್ಧಿಸುವ ಬಗ್ಗೆ ಒಪ್ಪಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಎ.ಕೆ. ಆ್ಯಂಟನಿ ಇಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿ
ಮಂಡ್ಯದಲ್ಲಿ ಸುಮಲತಾ ಗೆದ್ದರೆ ಅರ್ಧ ಶತಮಾನದ ದಾಖಲೆ ಉಡೀಸ್
ಮೊದಲನೇ ಹಂತದ ಚುನಾವಣೆಯು ಏಪ್ರಿಲ್ ೧೮ ಹಾಗೂ ಎರಡನೇ ಹಂತದ ಮತದಾನವು ೨೩ ಕ್ಕೆ ನಡೆಯಲಿದೆ.ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣೆಯು ಮೊದಲ ಹಂತದ ನಡೆಯಲಿದೆ.
ಮೈತ್ರಿ ಅಭ್ಯರ್ಥಿಯಾಗಿ ಗೌಡರ ಕುಟುಂಬದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕಣದಲ್ಲಿದ್ದಾರೆ.
ಭಾರತರ ಜನಾತಾ ಪಕ್ಷವು ಮೈತ್ರಿ ಪಾಳಯಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಬೇಷರತ್ ಬೆಂಬಲ ಘೋಷಿಸಿದೆ.
ಏತನ್ಮಧ್ಯೆ ಪಕ್ಷೇತರಾರಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಇಡೀ ಚಿತ್ರ ತಂಡ ಬೆನ್ನಿಗೆ ನಿಂತು ಕಾಲಿಗೆ ಚಕ್ರ ಕಟ್ಟಿದಂತೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.ಸುಮಲತಾ ಪರ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಚಾಲೆಂಜಿಗ್ ಸ್ಟಾರ್ ದರ್ಶನ್ ವಹಿಸಿದ್ದರೆ, ಇವರಿಗೆ ಸಾಥ್ ನೀಡುತ್ತಿದ್ದಾರೆ ಕೆ.ಜಿ.ಎಫ್ ಸ್ಟಾರ್ ಯಶ್.
ಮಂಡ್ಯ ಕ್ಷೇತ್ರದ ಚುನಾವಣೆ ಕಾವು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಪರ ವಿರೋಧ ವಾಕ್ಸಮರಗಳು ತಾರಕಕ್ಕೇರಿದೆ.
ಸ್ವತಂತ್ರ ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ನೋಂದಾಯಿತ ಪಕ್ಷಗಳ ಜತೆಗೆ ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದು ಜಯಿಸಿರುವ ಇತಿಹಾಸವಿದೆ.
ಭಾರತದ ಸಂವಿಧಾನ ರಚನೆ ನಂತರ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ (೧೯೫೭) ಮೈಸೂರು ರಾಜ್ಯದ ಮೊದಲ ಸ್ವತಂತ್ರ ಅಭ್ಯರ್ಥಿಯಾಗಿ ಬಿಜಾಪುರ ಉತ್ತರದಿಂದ ಸುಗಂಧಿ ಮುರುಗೆಪ್ಪ ಸಿದ್ದಪ್ಪ ಜಯಿಸಿದ್ದರು.
ಅಲ್ಲಿಂದೀಚೆಗೆ ರಾಜ್ಯದಲ್ಲಿ ಯಾವುದೇ ಸ್ವತಂತ್ರ ಅಭ್ಯರ್ಥಿ ಗೆದ್ದಿಲ್ಲ.
ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿದ್ದರೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪರೋಕ್ಷವಾಗಿ ಬೆನ್ನಿಗೆ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷ ಬೆಂಬಲ ಘೋಷಿಸಿದೆ.ಸುಮಲತಾ ಪರ ಬಿಜೆಪಿ ಪ್ರಚಾರಕ್ಕಿಳಿಯಲಿದೆ ಎಂದು ಸ್ವತಃ ಯಡಿಯೂರಪ್ಪರವರು ಇತ್ತೀಚೆಗೆ ಘೋಷಿಸಿದ್ದಾರೆ.
ಅನುಕಂಪದ ಅಲೆಯಲ್ಲಿ ಗೌಡರ ಕುಟುಂಬದ ಎದುರು ಅಂಬರೀಶ್ ಕುಟುಂಬ ಜಯಿಸಿದ್ದೆ ಆದರೆ, ಮೈಸೂರು ರಾಜ್ಯ ಎಂದಿದ್ದ ಹೆಸರು ಕರ್ನಾಟಕ ಎಂದು ನಾಮಕರಣವಾದ ನಂತರ ರಾಜ್ಯದಲ್ಲಿ ಜಯಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ಹೆಗ್ಗಳಿಕೆ ಸುಮಲತಾ ಅಂಬರೀಶ್ ಹೆಗಲೇರಲಿದೆ.
*೨೦೧೪ ರಲ್ಲಿ ರಾಜ್ಯದಲ್ಲಿ ೧೯೪ ಸ್ವತಂತ್ರ ಅಭ್ಯರ್ಥಿಗಳು*
ಮತ ಗಳಿಸಿದ್ದರು.ಯಾರೊಬ್ಬರೂ ಗೆಲ್ಲಲಿಲ್ಲ.
ಆದರೆ ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತಗಳಿಂದ ಇತರೆ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರರು
೧೯೫೧ ೧೧. ಜಯಿಸಿದ್ದವರು:೩೭
೧೯೫೭: ೧೧: ಜಯಿಸಿದವರು:೪೨
೧೯೬೨:೦೭: ೨೦
೧೯೬೭:೧೬: ೩೫
೧೯೭೧:೦೯:೧೪
೧೯೭೭:೦೯:೦೯
೧೯೮೦;೦೦:೦೯
೧೯೮೪:೦೫:೦೫
೧೯೮೯:೦೦-೧೨
೧೯೯೧:೦೧-೦೧
೧೯೯೬:೦೮-೦೯
೧೯೯೯;.೦೬:೦೬
೨೦೦೪:೦೫:೦೫
೨೦೦೯:೦೭:೦೯
೨೦೧೪:೨:೦೩*ಮಂಡ್ಯದಲ್ಲಿ ಸುಮಲತಾ ಗೆದ್ದರೆ:ಅರ್ಧ ಶತಮಾನದ ದಾಖಲೆ ಉಡೀಸ್...*
ಮೊದಲನೇ ಹಂತದ ಚುನಾವಣೆಯು ಏಪ್ರಿಲ್ ೧೮ ಹಾಗೂ ಎರಡನೇ ಹಂತದ ಮತದಾನವು ೨೩ ಕ್ಕೆ ನಡೆಯಲಿದೆ.ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣೆಯು ಮೊದಲ ಹಂರದ ನಡೆಯಲಿದೆ.
ಮೈತ್ರಿ ಅಭ್ಯರ್ಥಿಯಾಗಿ ಗೌಡರ ಕುಟುಂಬದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕಣದಲ್ಲಿದ್ದಾರೆ.
ಭಾರತರ ಜನಾತಾ ಪಕ್ಷವು ಮೈತ್ರಿ ಪಾಳಯಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಬೇಷರತ್ ಬೆಂಬಲ ಘೋಷಿಸಿದೆ.
ಏತನ್ಮಧ್ಯೆ ಪಕ್ಷೇತರಾರಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಇಡೀ ಚಿತ್ರ ತಂಡ ಬೆನ್ನಿಗೆ ನಿಂತು ಕಾಲಿಗೆ ಚಕ್ರ ಕಟ್ಟಿದಂತೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.ಸುಮಲತಾ ಪರ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಚಾಲೆಂಜಿಗ್ ಸ್ಟಾರ್ ದರ್ಶನ್ ವಹಿಸಿದ್ದರೆ, ಇವರಿಗೆ ಸಾಥ್ ನೀಡುತ್ತಿದ್ದಾರೆ ಕೆ.ಜಿ.ಎಫ್ ಸ್ಟಾರ್ ಯಶ್.
ಮಂಡ್ಯ ಕ್ಷೇತ್ರದ ಚುನಾವಣೆ ಕಾವು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಪರ ವಿರೋಧ ವಾಕ್ಸಮರಗಳು ತಾರಕಕ್ಕೇರಿದೆ.
ಸ್ವತಂತ್ರ ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ನೋಂದಾಯಿತ ಪಕ್ಷಗಳ ಜತೆಗೆ ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದು ಜಯಿಸಿರುವ ಇತಿಹಾಸವಿದೆ.
ಭಾರತದ ಸಂವಿಧಾನ ರಚನೆ ನಂತರ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ (೧೯೫೭) ಮೈಸೂರು ರಾಜ್ಯದ ಮೊದಲ ಸ್ವತಂತ್ರ ಅಭ್ಯರ್ಥಿಯಾಗಿ ಬಿಜಾಪುರ ಉತ್ತರದಿಂದ ಸುಗಂಧಿ ಮುರುಗೆಪ್ಪ ಸಿದ್ದಪ್ಪ ಜಯಿಸಿದ್ದರು.
ಅಲ್ಲಿಂದೀಚೆಗೆ ರಾಜ್ಯದಲ್ಲಿ ಯಾವುದೇ ಸ್ವತಂತ್ರ ಅಭ್ಯರ್ಥಿ ಗೆದ್ದಿಲ್ಲ.
ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿದ್ದರೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪರೋಕ್ಷವಾಗಿ ಬೆನ್ನಿಗೆ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷ ಬೆಂಬಲ ಘೋಷಿಸಿದೆ.ಸುಮಲತಾ ಪರ ಬಿಜೆಪಿ ಪ್ರಚಾರಕ್ಕಿಳಿಯಲಿದೆ ಎಂದು ಸ್ವತಃ ಯಡಿಯೂರಪ್ಪರವರು ಇತ್ತೀಚೆಗೆ ಘೋಷಿಸಿದ್ದಾರೆ.
ಅನುಕಂಪದ ಅಲೆಯಲ್ಲಿ ಗೌಡರ ಕುಟುಂಬದ ಎದುರು ಅಂಬರೀಶ್ ಕುಟುಂಬ ಜಯಿಸಿದ್ದೆ ಆದರೆ, ಮೈಸೂರು ರಾಜ್ಯ ಎಂದಿದ್ದ ಹೆಸರು ಕರ್ನಾಟಕ ಎಂದು ನಾಮಕರಣವಾದ ನಂತರ ರಾಜ್ಯದಲ್ಲಿ ಜಯಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ಹೆಗ್ಗಳಿಕೆ ಸುಮಲತಾ ಅಂಬರೀಶ್ ಹೆಗಲೇರಲಿದೆ.
*೨೦೧೪ ರಲ್ಲಿ ರಾಜ್ಯದಲ್ಲಿ ೧೯೪ ಸ್ವತಂತ್ರ ಅಭ್ಯರ್ಥಿಗಳು*
ಮತ ಗಳಿಸಿದ್ದರು.ಯಾರೊಬ್ಬರೂ ಗೆಲ್ಲಲಿಲ್ಲ.
ಆದರೆ ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತಗಳಿಂದ ಇತರೆ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರರು
೧೯೫೧ ೧೧. ಜಯಿಸಿದ್ದವರು:೩೭
೧೯೫೭: ೧೧: ಜಯಿಸಿದವರು:೪೨
೧೯೬೨:೦೭: ೨೦
೧೯೬೭:೧೬: ೩೫
೧೯೭೧:೦೯:೧೪
೧೯೭೭:೦೯:೦೯
೧೯೮೦;೦೦:೦೯
೧೯೮೪:೦೫:೦೫
೧೯೮೯:೦೦-೧೨
೧೯೯೧:೦೧-೦೧
೧೯೯೬:೦೮-೦೯
೧೯೯೯;.೦೬:೦೬
೨೦೦೪:೦೫:೦೫
೨೦೦೯:೦೭:೦೯
೨೦೧೪:೨:೦೩
ಸೂಪರ್ ಓವರ್ ನಲ್ಲಿ ಗೆಲುವು ಕಂಡ ಡೆಲ್ಲಿ:ಒಂದು ರನ್ ನಿಂದ ಶತಕ ವಂಚಿತರಾದ ಪೃಥ್ವಿ ಶಾ
ಕೆರೆಗೆ ಬಿದ್ದ ಮರಿಯಾನೆ ರಕ್ಷಣೆ...
ಚುನಾವಣೆ ಪ್ರಚಾರ ವೇಳೆ ಭತ್ತ ನಾಟಿ ಮಾಡಿದ ನಿಖಿಲ್
ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶನಿವಾರ ರೈತ ಮಹಿಳೆಯರೊಂದಿಗೆ ಗದ್ದೆ ನಾಟಿಯಲ್ಲಿ ಪಾಲ್ಗೊಂಡು ಗಮನಸೆಳೆದರು.ತಂದೆ ಕುಮಾರಸ್ವಾಮಿಯಂತೆ ಭತ್ತ ನಾಟಿಗಿಳಿದರು.ಮಂಡ್ಯ ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಪ್ರಚಾರ ನಡೆಸಿ ಸಮೀಪದಲ್ಲೇ ಇದ್ದ ರೈತ ರಾಮಣ್ಣ ಅವರ ಗದ್ದೆಗಿಳಿದು ನಾಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ' ನಾವು ರೈತರ ಮಕ್ಕಳು, ನಾವು ಗದ್ದೆಗಿಳಿಯದೆ ಇನ್ನಾರು ಇಳಿಯುಹುದು ಎಂದರು
ಹಾಸನ ಜಿಲ್ಲಾಧಿಕಾರಿ ವರ್ಗಾವಣೆ
ರಸ್ತೆ ದುರಸ್ತಿಗೆ ಆಗ್ರಹ....
ಮಡಿಕೇರಿ ಮಾ. ೨೨ : ಕರಿಕೆ ಗ್ರಾಮದ ಬಾಳೆಬಳಪು ಕುಂಡತ್ತಿಕಾನದ ಪರಿಶಿಷ್ಟರ ಕಾಲೋನಿಗೆ ಹೋಗುವ ರಸ್ತೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿರುವ ಸ್ಥಳೀಯ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಕ್ರಾಫ್ಟ್ ಮೇಳಕ್ಕೆ ಚಾಲನೆ
ಮಡಿಕೇರಿ ಮಾ. ೩೦ : ಕೇರಳದ ರೋಮಾಂಚಕಾರಿ ಸಮರ ನ?ತ್ಯವಾದ ಕಲರಿ ಪಯಟ್ ಪ್ರದಶ೯ನದೊಂದಿಗೆ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಕ್ರಾಫ್ಟ್ ಮೇಳ -೨೦೧೯ ಕ್ಕೆ ಚಾಲನೆ ದೊರಕಿದೆ.
ಏಪ್ರಿಲ್ ೨೦ ರಿಂದ ಕಡಂಗದಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ
ಮಡಿಕೇರಿ ಮಾ.೩೦ : ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಕಡಂಗದ ಅರಾಫ ಫ್ರೆಂಡ್ಸ್ ಸಂಯುಕ್ತ ಆಶ್ರಯದಲ್ಲಿ ೧೬ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ಏ.೨೦ರಿಂದ ೨೫ರವೆಗೆ ಕಡಂಗ ವಿಜಯ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ.
ದೇಶದ ಅತೀ ಹೆಚ್ಚು ಶ್ರೀಮಂತ ಪಕ್ಷ ಯಾವುದು ಗೊತ್ತೇ
ನವದೆಹಲಿ : ದೇಶದ ಅತಿ ದೊಡ್ಡ ಶ್ರೀಮತ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಹೊರಹೊಮ್ಮಿದೆ. ಹೌದು, ಇಂಗ್ಲಿಷ್ ಖಾಸಗಿ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ 17-18ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 1,027.34 ಕೋಟಿ ರುಪಾಯಿ ಆದಾಯ ಘೋಷಿಸಿ ಘೋಷಿಸಿಕೊಂಡಿರುವ ಬಿಜೆಪಿ ಪಕ್ಷ ದೇಶದ ಅತಿ ಹೆಚ್ಚು ಆದಾಯವನ್ನು ಹೊಂದಿರುವ ಪಕ್ಷವಾಗಿದ್ದು, ಈ ಹಣದಲ್ಲಿ ಶೇಕಡ 53.9 ಹಣ ಅಂದರೆ ಸರಿ ಸುಮಾರು 700 ಕೋಟಿ ರೂಪಾಯಿಗಳು ಅಜ್ಞಾತ ಮೂಲಗಳಿಂದ ಪಕ್ಷಕ್ಕೆ ಬಂದಿದೆ ಎನ್ನಲಾಗಿದೆ. 17-18ನೇ ಸಾಲಿನ 6 ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯ 1293.051ವಾಗಿದೆ ಎನ್ನಲಾಗಿದೆ.
2017-18ರಲ್ಲಿ ಆರು ರಾಷ್ಟ್ರೀಯ ಪಕ್ಷಗಳು ಪಡೆದ ದೇಣಿಗೆ ವಿವರ ಹೀಗಿದೆ.
ಬಿಜೆಪಿ 1,027.34 ರೂ ಕೋಟಿ ಈ ಪೈಕಿ ಶೇಕಡ 53.9 ಹಣ ಅಜ್ಞಾತ ಮೂಲಗಳಿಂದ ಬಂದಿದೆ ಕಾಂಗ್ರೆಸ್ 199.15 ಕೋಟಿ ರೂ ಬಂದಿದ್ದು ಈ ಪೈಕಿ ಕಾಂಗ್ರೆಸ್ ಪಕ್ಷಕ್ಕೆ ಶೇಕಡ 60.2 ಹಣ ಅಜ್ಞಾತ ಮೂಲಗಳಿಂದ , ಬಿಎಸ್‌ಪಿ ಪಕ್ಷಕ್ಕೆ 51.694 ರೂ ಕೋಟಿ ಹಣ ಬಂದಿದ್ದು, ಇದರಲ್ಲಿ ಶೇಕಡ 20.6 ಹಣ ಅಜ್ಞಾತ ಮೂಲಗಳಿಂದ, ಎನ್‌ಸಿಪಿ ಪಕ್ಷಕ್ಕೆ 8.15 ರೂ ಕೋಟಿ ಹಣ ಬಂದಿದ್ದು, ಈ ಪೈಕಿ ಶೇಕಡ 65.9 ಅನ್ಯ ಮೂಲಗಳಿಂದ ಹಾಗೂ ಎಐಟಿಸಿ ಪಕ್ಷಕ್ಕೆ 5.167ರೂ ಕೋಟಿ ಹಣ ಬಂದಿದ್ದು, ಇದರಲ್ಲಿ ಶೇಕಡ 2.0 ಅಜ್ಞಾತ ಮೂಲಗಳಿಂದ ಕೊನೆಯಾದಾಗಿ ಸಿಪಿಐ ಪಕ್ಷಕ್ಕೆ 1.55 ರೂ ಕೋಟಿ ಹಣ ದೇಣಿಗೆ ರೂಪದಲ್ಲಿ ಬಂದಿದ್ದು, ಶೇಕಡ 0.2 ರಷ್ಟು ಹಣ ಮೂಲಗಳು ತಿಳಿದು ಬಂದಿಲ್ಲವಂತೆ.
ಬೃಹತ್ ರಕ್ತದಾನ ಶಿಬಿರ : ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿ
ನಟ ಯಶ್ ಕುಟುಂಬಕ್ಕೆ ಡೆಡ್ ಲೈನ್
ಬಾಲಚಂದ್ರ ಕಳಗಿ ಸಾವು ಪ್ರಕರಣ ಆರೋಪಿಗಳ ಬಂಧನ
* ಮಾರ್ಚ್ ೧೯ರಂದು ನಡೆದ ಅಪಘಾತದಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣ
* ವೈನ್, ಮರಳು ಮಾಫಿಯಾ, ರಿಕ್ರಿಯೇಶನ್ ಕ್ಲಬ್ ಮಾಡಲು ಬಿಡದಕ್ಕೆ ಹತ್ಯೆ
* ಮೂವರು ಆರೋಪಿಗಳನ್ನು ಬಂಧಿಸಿದ ಕೊಡಗು ಜಿಲ್ಲಾ ಪೊಲೀಸರು
* ಅವರ ಚಿಕ್ಕಪ್ಪ ಸಲ್ಲಿಸಿದ ಸಂಶಯಾಸ್ಪದ ಬಗ್ಗೆ ದೂರು ಪರಿಗಣಿಸಿ ತನಿಖೆ
* ಮೂರು ಗುಮಾನಿ ವ್ಯಕ್ತಿಗಳಾದ ಸಂಪತ್ ಕುಮಾರ್(೩೪), ಹರಿಪ್ರಸಾದ್(೩೬), ಜಯ(೩೪)
* ಬೆಳಗ್ಗೆ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಹತ್ಯೆ ನಡೆಸಿರುವುದು ಬೆಳಕಿಗೆ
* ಅಪಘಾತದ ಮಾದರಿಯಲ್ಲಿ ಅವರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ
* ಅವರ ನಡುವಿನ ವೈಯಕ್ತಿಕ ವಿಚಾರಕ್ಕೆ ಅಸಮಧಾನ ಇದ್ದ ಕಾರಣ ಕೃತ್ಯ
* ಸಂಪತ್ ವೈನ್ ಶಾಪ್‌ಗೆ ಅನುಮತಿ ಪಡೆಯಲು ಹೋದಾಗ ಕಳಗಿ ವಿರೋಧ
* ರಿಕ್ರಿಯೇಶನ್ ಕ್ಲಬ್ ಮಾಡುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದ ಕಳಗಿ
* ಈ ಹಿನ್ನಲೆ ೧ ತಿಂಗಳಿನಿಂದ ಪ್ಲಾನ್ ಮಾಡಿ ಅಪಘಾತದ ರೂಪದಲ್ಲಿ ಕೃತ್ಯ
* ಅವರು ಕೊಯನಾಡಿನಲ್ಲಿ ಹೊರಟಿದ್ದನ್ನು ಗಮನಿಸಿ ಕಾದು ಕುಳಿತು ಲಾರಿ ಹತ್ತಿಸಿ ಹತ್ಯೆ
* ಜಯನ ವಾಹನ ಅಪಘಾತವಾದಾಗ ಬಿಡಿಸಿಕೊಟ್ಟಿದ್ದ ಸಂಪತ್
* ಹತ್ಯೆ ಮಾಡಿದ್ರೆ ೧.೫ ಲಕ್ಷದ ಲೋನ್ ಕ್ಲಿಯರ್ ಮಾಡಿಕೊಡ್ತೀನಿ ಅಂತ ಸಂಪನ್‌ನಿಂದ ಸುಪಾರಿ
* ಹರಿಪ್ರಸಾದ್ ಸ್ವಿಫ್ಟ್ ಕಾರು, ಅಪಘಾತದ ಲಾರಿ ವಶಕ್ಕೆ ಪಡೆಯಲಾಗಿದೆ
* ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ
ಕಾರ್ಯಪ್ಪ ಕಾಲೇಜು ವಾರ್ಷಿಕೋತ್ಸವ...
ಮಡಿಕೇರಿ ಮಾ.೨೯ : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಾಕಷ್ಟು ಅಭಿವೃದ್ಧಿ ಹೊಂದಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಉತ್ತಮ ಗುಣಮಟ್ಟದ ಸೌಲಭ್ಯ ನೀಡುತ್ತಿದೆ. ಉತ್ತಮ ಭವಿಷ್ಯಕ್ಕೆ ಇಂದಿನ ವಿದ್ಯಾರ್ಥಿ ಯುವಜನತೆ ಶ್ರಮವಹಿಸಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರು ಪ್ರೊ.ವಿ.ರವೀಂದ್ರಚಾರಿ ಅಭಿಪ್ರಾಯಪಟ್ಟರು.
ಯುವ ಜನಾಂಗಕ್ಕೆ ಇಂದು ಸಾಕಷ್ಟು ಉತ್ತಮ ಅವಕಾಶಗಳಿದ್ದು ಅದರ ಸದುಪಯೋಗವನ್ನು ಪಡೆದುಕೊಂಡು ಸಮಾಜದಲ್ಲಿನ ಮೌಢ್ಯತೆ, ಅಜ್ಞಾನವನ್ನು ಹಾಗೂ ಸಾಮಾಜಿಕ ಪಿಡುಗುಗಳನ್ನು ತೊಲಗಿಸಲು ಇಂದಿನ ವಿದ್ಯಾರ್ಥಿ ಯುವ ಜನಾಂಗ ಶ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.
ಮಾರ್ಚ್ ೩೧ ರಂದು ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಜನ್ಮದಿನಾಚರಣೆ
ಮಡಿಕೇರಿ ಮಾ. ೨೯ : ದೇಶ ಕಂಡ ಅಪ್ರತಿಮ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೩ನೇ ಜನ್ಮದಿನಾಚರಣೆ ಕಾರ್ಯಕ್ರಮವು ಮಾ. ೩೧ ರಂದು ನಗರದ ಸನ್ನಿಸೈಡ್ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ಪಿ. ನಂಜಪ್ಪ (ವೀರಚಕ್ರ) ಅವರು ಪಾಲ್ಗೊಳ್ಳಲಿದ್ದಾರೆ. ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ, ಸಂಚಾಲಕ ಮೇಜರ್ ಬಿದ್ದಂಡ ನಂದಾ ನಂಜಪ್ಪ, ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಮತ್ತಿತರರು ಹಾಜರಿರುವರು.
ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ವತಿಯಿಂದಲೂ ಮಾ. ೩೧ ರಂದು ಪ್ರತ್ಯೇಕವಾದ ಕಾರ್ಯಕ್ರಮ ಜರಿಗಲಿದೆ. ಬೆಳಿಗ್ಗೆ ೯ಕ್ಕೆ ಶಾಲೆಯಿಂದ ತಿಮ್ಮಯ್ಯ ಪ್ರತಿಮೆ ತನಕ ಮೆರವಣೆಗೆ ನಡೆಸಿ ಅಲ್ಲಿ ಪುಷ್ಪ ನಮನ ಸಲ್ಲಿಸಲಾಗುವುದು. ಬಳಿಕ ಶಾಲಾ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ತಿಮ್ಮಯ್ಯ ಅವರ ಇತಿಹಾಸದ ಮೆಲುಕು ಸಹಿತವಾಗಿ ಸಭಾ ಕಾರ್ಯಕ್ರಮ ನಡೆಯಲಿದೆ.
ಮಡಿಕೇರಿಯಲ್ಲಿ ವಿಶ್ವ ಜಲ ದಿನಾಚರಣೆ
ಮಡಿಕೇರಿ ಮಾ.೨೯ : ಪ್ರತಿಯೊಂದು ದಿನಾಚರಣೆಗೂ ಕೂಡ ತನ್ನದೆ ಆದ ಇತಿಹಾಸವಿದೆ. ಅದರಂತೆ ಇಂದು ವಿಶ್ವ ಜಲ ದಿನವೆಂದು ಆಚರಿಸಲಾಗುತ್ತದೆ. ನೀರಿನ ಕೊರತೆಯು ಕರಾವಳಿಯಿಂದ-ಕಾವೇರಿ ನಾಡಿನಲ್ಲಿಯು ಈ ಭೀತಿ ಕಾಣುತ್ತಿದೆ. ಬಯಲು ಸೀಮೆಯ ಜನರು ತೀವ್ರ ಬರಗಾಲವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಇಂದಿನ ನಗರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಣೆಗೆ ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ನೀರು ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅರಣ್ಯ ರಕ್ಷಣೆಯಿಂದ ನೀರಿನ ಸಂರಕ್ಷಣೆ ಮಾಡಲು ಸಾಧ್ಯ. ನೀರಿನ ಸದ್ಬಳಕೆ ಮತ್ತು ಮರು ಬಳಕೆಯನ್ನು ಮಾಡುವ ಮೂಲಕ ಇಂದಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಜನಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ. ಈ ಮೂಲಕ ಮುಂದಿನ ಭವಿಷ್ಯಕ್ಕೆ ನೀರಿನ ಸಂರಕ್ಷಣೆಯನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅವರು ಮಾತನಾಡಿ ಕಾವೇರಿ ನಾಡಿಗೆ ಬರಗಾಲ ಬಂದಿದೆ. ಜಿಲ್ಲೆಯ ಹಾರಂಗಿ, ಕಣಿವೆ, ತಲಕಾವೇರಿ ಮುಂತಾದ ಸ್ಥಳಗಳಲ್ಲಿ ನೀರಿನ ಗುಣಮಟ್ಟದ ಅಧ್ಯಯನ ನಡೆಸಿದ್ದು, ನೀರಿನ ಕೊರತೆ ಹಾಗೂ ಕಲುಷಿತಗೊಂಡಿರುವುದು ದೃಡಪಟ್ಟಿದೆ. ಆದ್ದರಿಂದ ಚರಂಡಿ ಕಲುಷಿತ ನೀರು ಹಾಗೂ ಪ್ಲಾಷ್ಟಿಕ್, ತ್ಯಾಜ್ಯ ವಸ್ತುಗಳನ್ನು ನದಿಗೆ ಹರಿಯ ಬಿಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮುಂದಿನ ಪೀಳಿಗೆಗೆ ನೀರಿನ ಸಂರಕ್ಷಣೆಯು ಅಗತ್ಯವಾಗಿದೆ. ಇಂದು ನೀರಿನ ಹಿತ-ಮಿತ ಬಳಕೆ ಮಾಡಬೇಕಿದೆ. ದಿನನಿತ್ಯದ ಜೀವನದಲ್ಲಿ ನೀರಿನ ಬಳಕೆಯ ಅಂಕಿ ಅಂಶವನ್ನು ಮಾಡಿಕೊಂಡು ಭವಿಷ್ಯಕ್ಕೆ ನೀರನ್ನು ಉಳಿಸುವಲ್ಲಿ ಇಂದಿನ ಯುವಜನತೆ ಶ್ರಮಿಸಬೇಕು ಎಂದರು.
ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಜಿ.ಶ್ರೀನಾಥ್ ಅವರು ಮಾತನಾಡಿ ತ್ಯಾಜ್ಯ ವಸ್ತುಗಳನ್ನು ನದಿ ನೀರಿಗೆ ಹರಿಯ ಬಿಡುವುದರಿಂದ ಹಲವಾರು ನದಿ-ತೊರೆಗಳು ಕಲುಷಿತಗೊಂಡಿದೆ. ಇದನ್ನು ತಡೆಗಟ್ಟಬೇಕು. ಅಂತರ್ಜಲದ ನೀರಿನ ಮಟ್ಟ ಕುಸಿದಿದ್ದು ಕೊಳವೆ ಬಾವಿಗಳ ನಿರ್ಮಾಣ ಕಡಿಮೆಗೊಳಿಸಬೇಕು. ನೀರಿನ ಅನವಶ್ಯಕ ಬಳಕೆಯನ್ನು ಕಡಿಮೆ ಮಾಡಲು ಜಾಗೃತಿ ವಹಿಸಬೇಕು ಎಂದು ಅವರು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ಚಿತ್ರಾ ಅವರು ಮಾತನಾಡಿ ನೀರು ಸಕಲ ಜೀವಜಂತುಗಳ ಮೂಲಾಧಾರವಾಗಿದ್ದು, ನೀರನ್ನು ಹೊಸದಾಗಿ ಆವಿಷ್ಕಾರ ಮಾಡಲು ಅಸಾಧ್ಯ. ಆದ್ದರಿಂದ ಇರುವ ನೀರಿನ ಮೂಲಗಳನ್ನು ರಕ್ಷಿಸಲು ಪ್ರತಿಯೊಬ್ಬ ಪ್ರಜೆಯು ನೀರಿನ ಸಂರಕ್ಷಣೆ ಮಾಡುವುದು ಮೂಲಭೂತ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಸಂಚಾಲಕರಾದ ಟಿ.ಜಿ.ಪ್ರೇಮ್‌ಕುಮಾರ್ ಅವರು ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು. ಪರಿಸರ ಸಂರಕ್ಷಣೆಯ ಕುರಿತು ನಡೆಸಲಾದ ಪ್ರಬಂಧ ಹಾಗೂ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪರಿಸರ ಸಂರಕ್ಷಣೆಯ ಕುರಿತು ದೃಶ್ಯ ಪ್ರದರ್ಶನ ಏರ್ಪಡಿಸಲಾಯಿತು.
ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ಸ್ಕೌಟ್ ಅಂಡ್ ಗೈಡ್ಸ್‌ನ ಜಿಲ್ಲಾಧ್ಯಕ್ಷರಾದ ಜಿಮ್ಮಿ ಸಿಕ್ವೇರಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಬಿ.ಆರ್.ಶಶಿದರ್, ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯೂ ಹಾಗೂ ವಿವಿಧ ವಿಭಾಗದ ಅಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ. ಬಿ.ಆರ್.ಶಶಿದರ್ ಸ್ವಾಗತಿಸಿದರು, ಬಿ.ಜಯಪ್ಪ ವಂದಿಸಿದರು.
ಮಡಿಕೇರಿಯಲ್ಲಿ ವಿಶ್ವ ಜಲ ದಿನಾಚರಣೆ
ಮಳೆ ನೀರು ಸಂಗ್ರಹಣೆಗೆ ಒತ್ತು ನೀಡಿ : ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಕರೆ

ಲೋಕಸಭಾ ಚುನಾವಣೆ ಕಾರ್ಯ ಚಟುವಟಿಕೆ :ಕೊಡಗಿನ ಮಾಹಿತಿ ಪಡೆದ ಚುನಾವಣಾ ವೀಕ್ಷಕರು
ಮಡಿಕೇರಿ ಮಾ.೨೯ : ಕೊಡಗು-ಮೈಸೂರು ಲೋಕಸಭಾ ಚುನಾವಣಾ ಸಾಮಾನ್ಯ ವೀಕ್ಷಕರಾದ ಕುಲದೀಪ್ ನಾರಾಯಣ ಮತ್ತು ಪೊಲೀಸ್ ವೀಕ್ಷಕರಾದ ಡಾ.ವಿಕಾಸ್ ಪಾಠಕ್ ಅವರು ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಪಿಪ್ರಿಯಾ ಅವರಿಂದ ಮಾಹಿತಿ ಪಡೆದರು.
ಜಿಲ್ಲೆಗೆ ಹೊಂದಿಕೊಂಡಿರುವ ಅಂತರ ರಾಜ್ಯ ಗಡಿಭಾಗ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೧೪ ಚೆಕ್‌ಪೊಸ್ಟ್ ಸ್ಥಾಪಿಸಲಾಗಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಸಹಾಯಕ ಚುನಾವಣಾಧಿಕಾರಿಗಳಾದ ಟಿ.ಜವರೇಗೌಡ, ಶ್ರೀನಿವಾಸ್ ಅವರು ಲೋಕಸಭಾ ಚುನಾವಣೆ ಸಂಬಂಧ ಹಲವು ಮಾಹಿತಿ ನೀಡಿದರು. ತಹಶೀಲ್ದಾರರಾದ ನಟೇಶ್, ಗೋವಿಂದ ರಾಜು, ವೀಕ್ಷಕರ ನೋಡಲ್ ಅಧಿಕಾರಿಗಳಾದ ನಟರಾಜು, ಪ್ರಮೋದ್ ಇತರರು ಹಾಜರಿದ್ದರು.
ರೇವಣ್ಣನ ಎದುರಲ್ಲೇ " ಕೈ" ವಾರ್ : ಹಾಸನ
ದಲ್ಲಿ ಕಾಂಗ್ರೆಸ್ ಕಾರ್ಯಕರ್ತರು-ನಾಯಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. " ಅರಸೀಕೆರೆ ಕಾಂಗ್ರೆಸ್ ಮಾಯವಾಗಿದೆ. ಕನ್ನಡಕ ಇಟ್ಟು ಹುಡುಕಿದರು ಸಿಗಲ್ಲ " ಎಂದು ಆಕ್ರೋಶಗೊಂಡಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಈ ಬಾರಿ ಜೆಡಿಎಸ್ ನಿಂದ ಅಭ್ಯರ್ಥಿ ಸ್ಪರ್ದಧಿಸುತ್ತಿದೆ . ರೇವಣ್ಣರ ಮುಂದೆಯೇ ಜೆಡಿಎಸ್ ವಿರುದ್ದ ಹರಿಹಾಯ್ದ ಕೈ ಕಾರ್ಯಕರ್ತರು " ನಾವು ಕಟ್ಟಾ ಕಾಂಗ್ರೆಸ್, ನಾವು ಜೆಡಿಎಸ್ ಗೆ ಮತ ಹಾಕಲ್ಲ , ನಾವು ಬಿಜೆಪಿಗೆ ಮತ ಹಾಕುತ್ತೇವೆ " ಎಂದು ಘೋಷಣೆ ಕೂಗಿದ್ದಾರೆ. ನಾಯಕರ ಮಾತಿಗೆ ತಲೆಬಾಗದ ಕೈ ಕಾರ್ಯಕರ್ತರು . ತಬ್ಬಿಬಾದ ರೇವಣ್ಣ.
ಕೂಲ್ ಹಾಗಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾಟ ವೀಕ್ಷಿಸಿದ ಮಾಜಿ ಸಿ.ಎಂ ಸಿದ್ದರಾಮಯ್ಯ
ಹಾಸನ ಬಿಜೆಪಿಗೆ ಶಾಕ್...
ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಕಾಂಗ್ರೆಸ್ ಸೇರ್ಪಡೆ
ಅಕ್ರಮ ಸ್ಫೋಟಕ ಪತ್ತೆ: ಕುಶಾಲನಗರದಲ್ಲಿ ಐವರ ಬಂಧನ
ಮಡಿಕೇರಿ ಮಾ.28 :
ಮನೆಯೊಂದರಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿರಿಸಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕುಶಾಲನಗರ ಸಮೀಪದ ಸುಂದರನಗರದ ನಿವಾಸಿಗಳಾದ ಆರ್.ಮಂಜು(೩೭) ಕುಬೇರ(೪೫), ಮಣಿ (೩೩) ಬೈಚನಹಳ್ಳಿಯ ಕೆ.ಆರ್.ರವಿ (೩೧) ಬೆಟ್ಟದಪುರ ಹಲಗನಹಳ್ಳಿಯ ರಿಜ್ವಾನ್ ಅಹಮದ್ (೫೪) ಎಂದು ಗುರುತಿಸಲಾಗಿದೆ.
ಈ ಸಂಬಂಧ ಪೊಲೀಸರು ಸ್ಫೊಟಕ ವಸ್ತುಗಳ ಅಧಿನಿಯಮ-೧೯೦೮ರ ಕಲಂ ೫ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿದ್ದು, ಬಂಧಿತರಲ್ಲಿ ಮಂಜು, ಮಣಿ ಹಾಗೂ ರವಿ ಕೂಲಿ ಕಾರ್ಮಿಕರಾಗಿದ್ದು, ಕುಬೇರ ಆಟೋ ಚಾಲಕ ಮತ್ತು ರಿಜ್ವಾನ್ ಕೃಷಿಕ ಎಂದು ಹೇಳಲಾಗಿದೆ. ಆದರೆ ಇವರುಗಳು ಇಷ್ಟೊಂದು ಪ್ರಮಾಣದ ಸ್ಪೋಟಕ ವಸ್ತುಗಳನ್ನು ಯಾವ ಕಾರಣಕ್ಕೆ ದಾಸ್ತಾನು ಇರಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.
ಈಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಅವರ ಮಾರ್ಗದರ್ಶನ ಹಾಗೂ ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಎಸ್.ದಿನೇಶ್‌ಕುಮಾರ್ ಅವರ ನೇತೃತ್ವದಲ್ಲಿ ಕುಶಾಲನಗರ ಠಾಣಾಧಿಕಾರಿ ನಂದೀಶ್‌ಕುಮಾರ, ಜಗದೀಶ್, ವಿಶೇಷ ಅಪರಾಧ ಪತ್ತೆ ತಂಡದ ದಯಾನಂದ, ಸಜಿ, ಸುರೇಶ್‌ಮ ಜೋಸೆಫ್, ಅಜಿತ್, ಸುಧೀಶ್‌ಕುಮಾರ, ಪ್ರಕಾಶ್, ಅರುಣ, ಮನೋಜ್, ನಾಗರಾಜ್, ಶಾಫಿನ್ ಅಹ್ಮದ್, ಸಂಪತ್ ರೈ, ಚಾಲಕರಾದ ಗಣೇಶ್, ಪ್ರವೀಣ್, ರಾಜ ಹಾಗೂ ಕೊಡಗು ಬಾಂಬ್ ನಿಷ್ಕ್ರಿಯದಳದ ತಜ್ಞ ಜಿತೇಂದ್ರ ರೈ ಮತ್ತು ಶಿವಾನಂದ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.