ಮಡಿಕೇರಿಯಲ್ಲಿ ಕ್ರಾಫ್ಟ್ ಮೇಳಕ್ಕೆ ಚಾಲನೆ

No comments

ಮಡಿಕೇರಿಯಲ್ಲಿ ಕ್ರಾಫ್ಟ್ ಮೇಳಕ್ಕೆ ಸಂಭ್ರಮದ ಚಾಲನೆ : ದಕ್ಷಿಣ ಭಾರತದ ವಿವಿಧ ಕಲಾಪರಿಣಿತರಿಂದ ವೈವಿಧ್ಯಮಯ ಕಲಾಪ್ರಕಾರಗಳ ತರಬೇತಿ
ಮಡಿಕೇರಿ ಮಾ. ೩೦ : ಕೇರಳದ ರೋಮಾಂಚಕಾರಿ ಸಮರ ನ?ತ್ಯವಾದ ಕಲರಿ ಪಯಟ್ ಪ್ರದಶ೯ನದೊಂದಿಗೆ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಕ್ರಾಫ್ಟ್ ಮೇಳ -೨೦೧೯ ಕ್ಕೆ ಚಾಲನೆ ದೊರಕಿದೆ.
ಕೊಡಗು ಜಿಲ್ಲೆಯ ವಿವಿಧೆಡೆಗಳ ೮೦೦ ಕ್ಕೂ ಅಧಿಕ ವಿದ್ಯಾಥಿ೯ಗಳಿಗೆ ಕ್ರಾಫ್ಟ್ ಮೇಳದಲ್ಲಿ ದಕ್ಷಿಣ ಭಾರತದ ವಿವಿಧೆಡೆಗಳಿಂದ ಬಂದಿರುವ ವೈವಿಧ್ಯಮಯ ಕಲಾ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ.
ಕ್ರಾಫ್ಟ್ ಮೇಳ -೨೦೧೯ ನ್ನು ವಿದ್ಯುಕ್ತವಾಗಿ ಸಭಾ ಕಾಯ೯ಕ್ರಮದೊಂದಿಗೆ ಉದ್ಘಾಟಿಸಿದ ಭಾರತೀಯ ವಿದ್ಯಾಭವನ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಪಿ. ಉತ್ತಪ್ಪ, ಕೊಡಗು ಜಿಲ್ಲೆಯ ವಿದ್ಯಾಥಿ೯ಗಳಿಗೆ ದೊರಕಿರುವ ಕಲಾ ತರಬೇತಿಯ ಈ ಸುವಣಾ೯ವಕಾಶದ ಪ್ರಯೋಜನವನ್ನು ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾಥಿ೯ಗಳು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಇತರ ವಿದ್ಯಾಥಿ೯ಗಳಿಗೂ ಮಾಗ೯ದಶ೯ನ ನೀಡಬೇಕೆಂದು ಕರೆ ನೀಡಿದರು. ಇಂಥ ಶಿಬಿರಗಳು ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿಯೂ ಸಹಕಾರಿ ಎಂದೂ ಉತ್ತಪ್ಪ ಶ್ಲಾಘಿಸಿದರು.

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಸುಪ್ತಪ್ರತಿಭೆ ಹೊಂದಿರುವ ಗ್ರಾಮೀಣ ಪ್ರದೇಶದ ವಿದ್ಯಾಥಿ೯ಗಳಿಗೆ ಇಂಥ ಕರಕುಶಲ ಕಾಯಾ೯ಗಾರ ಅತ್ಯಂತ ಹೆಚ್ಚು ಉಪಯುಕ್ತವಾಗಿದ್ದು, ಮೊದಲ ಬಾರಿಗೆ ಮಡಿಕೇರಿಯಲ್ಲಿ ಆಯೋಜಿತ ಕಾಯಾ೯ಗಾರಕ್ಕೆ ಅತ್ಯುತ್ತಮ ಸ್ಪಂದನೆ ದೊರಕಿರುವುದು ನಮ್ಮ ಉತ್ಸಾಹ ಇಮ್ಮಡಿಗೊಳಿಸಿದೆ ಎಂದರು. ಅಂತರರಾಷ್ಟ್ರೀಯ ಕಲಾಪರಿಣಿತರು ಸೂಕ್ತ ತರಬೇತಿಯನ್ನು ಮೂರು ದಿನಗಳ ಕಾಲ ನೀಡಲಿದ್ದು. ಕೊಡಗಿನ ಮಕ್ಕಳಿಗೆ ವೈವಿಧ್ಯಮಯ ಕರಕುಶಲ ತರಬೇತಿ ನೀಡಲು ದಕ್ಷಿಣ ಭಾರತದ ಹಲವೆಡೆಗಳಿಂದ ನುರಿತ ಕಲಾವಿದರು ಮಡಿಕೇರಿಗೆ ಬಂದಿರುವುದು ಹೆಮ್ಮೆ ತಂದಿದೆ ಎಂದೂ ದೇವಯ್ಯ ಸಂತೋಷ ವ್ಯಕ್ತಪಡಿಸಿದರು.
ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಗೌರವ ಕಾಯ೯ದಶಿ೯ ಬಾಲಾಜಿ ಕಶ್ಯಪ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮುಖ್ಯಕಾಯ೯ನಿವ೯ಹಣಾಧಿಕಾರಿ ವಿದ್ಯಾ ಹರೀಶ್, ಶೈಕ್ಷಣಿಕ ವಿಭಾಗದ ಅಧ್ಯಕ್ಷೆ ಊವ೯ಶಿ ಮುದ್ದಯ್ಯ, ಆಡಳಿತ ಮಂಡಳಿ ಪ್ರಮುಖರಾದ ರಘುಮಾದಪ್ಪ, ಶಾರದಾ ಮಂದಪ್ಪ ವೇದಿಕೆಯಲ್ಲಿದ್ದರು.
ಇದೇ ಸಂದಭ೯ ಕೇರಳದ ಗುರೂವಾಯೂರಿನ ಚೌವ್ಕಾಡ್ ಗ್ರಾಮದ ವಲ್ಲಭಾಟ್ ಕಲಾಕೇಂದ್ರದಿಂದ ಹೆಸರಾಂತ ಸಮರ ನ?ತ್ಯ ಕಲರಿ ಪಯಟ್ ಪ್ರದಶ೯ನ ಕಲಾಪ್ರೇಮಿಗಳನ್ನು ರೋಮಾಂಚನಗೊಳಿಸಿತು.
ತರಬೇತಿ : ಏಪ್ರಿಲ್ ೧ ರ ಸೋಮವಾರದವರೆಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನಡೆಯುವ ಕ್ಯಾಫ್ಟ್ ಮೇಳದಲ್ಲಿ ವಿವಿಧ ಕಲಾಪ್ರಕಾರಗಳ ಬಗ್ಗೆ ಜಿಲ್ಲೆಯ ಹಲವೆಡೆಗಳಿಂದ ಪಾಲ್ಗೊಂಡಿರುವ ವಿದ್ಯಾಥಿ೯ಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ.
ನೃತ್ಯ ಕಲೆಯ ಬಗ್ಗೆ ಹೆಸರಾಂತ ಅಂತರರಾಷ್ಟ್ರೀಯ ಕಲಾವಿದೆ ವೈಜಯಂತಿ ಕಾಶಿ, ಪ್ರತಿಕ್ಷಾ ಕಾಶಿ, ಯಕ್ಷಗಾನ ಕಲೆಯ ಬಗ್ಗೆ ಹೆಸರಾಂತ ಯಕ್ಷಕಲಾವಿದ ಬೆಂಗಳೂರಿನ ಶ್ರೀನಿವಾಸ್ ಆಸ್ಥಾನ್, ಮಣ್ಣಿನಲ್ಲಿ ರೂಪಿತ ಚೆರಿಯಲ್ ಮುಖವಾಡ ರಚನೆ ಬಗ್ಗೆ ಆಂಧ್ರ ಪ್ರದೇಶದ ಕಲಾವಿದ ನಾಗೇಶ್ವರ್, ಚಿತ್ತಾರ ಕಲೆಯ ಬಗ್ಗೆ ಸಾಗರದ ಅಂತರರಾಷ್ಟ್ರೀಯ ಕಲಾವಿದ ಈಶ್ವರನಾಯಕ್, ಘೋಂಡಾ ಕಲೆಯ ಬಗ್ಗೆ ವೆಂಕಟರಮಣ್ ಸಿಂಗ್ ಶ್ಯಾಮ್, ಪ್ಯಾಪಿಯರ್ ಮೆಶೆ ಬಗ್ಗೆ ಆದ್ದೇಶ್ ಕುಮಾರ್ ಕನ್೯, ಕಸೂತಿ ಬಗ್ಗೆ ಬಳ್ಳಾರಿಯ ಬಸಂತಿ, ಗಂಗೂಬಾಯಿ, ಸಂಗೀತದಲ್ಲಿ ಮೈಸೂರಿನ ವಿದ್ವಾನ್ ಮಂಜುನಾಥ್ , ವಿದ್ವಾನ್ ನಾಗರಾಜ್, ಕಂಸಾಳೆ ಬಗ್ಗೆ ಕನಾ೯ಟಕದ ಹೆಸರಾಂತ ಕಲಾವಿದ ರೇವಣ್ಣ, ಕಲರಿಪಯಟ್ ಬಗ್ಗೆ ಕೇರಳದ ಕ?ಷ್ಣದಾಸ್ ಅವರುಗಳಿಂದ ತರಬೇತಿ ನೀಡಲಾಗುತ್ತಿದೆ.
ಸಂಜೆ ೪.೩೦ ಗಂಟೆಗೆ ಈ ಕಲಾಪರಿಣಿತರು ತಮ್ಮಕಲಾಕ?ತಿಗಳನ್ನು ವಿವಿಧ ಮಳಿಗೆಗಳಲ್ಲಿ ಪ್ರದಶ೯ನ ಮತ್ತು ಮಾರಾಟಕ್ಕೆ ವ್ಯವಸ್ಥೆಗೊಳಿಸಿದ್ದು ಸಾವ೯ಜನಿಕರಿಗೆ ಸಂಜೆ ೪ ಗಂಟೆಯ ನಂತರ ಕ್ರಾಫ್ಟ್ ಮೇಳಕ್ಕೆ ಮುಕ್ತ ಪ್ರವೇಶವಿದೆ ಎಂದು ಮೇಳದ ಸಂಚಾಲಕ ಬಾಲಾಜಿ ಕಶ್ಯಪ್ ಮಾಹಿತಿ ನೀಡಿದ್ದಾರೆ.
ವೈಜಯಂತಿ ಕಾಶಿ ತಂಡದ ಕುಚಿಪುಡಿ ನೃತ್ಯ :
ಮಾಚ್೯ ೩೧ರಂದು ಭಾನುವಾರ ಸಂಜೆ ೬.೩೦ ರಿಂದ ೮ ಗಂಟೆಯವರೆಗೆ ಹೆಸರಾಂತ ನೃತ್ಯಕಲಾವಿದೆ ಬೆಂಗಳೂರಿನ ವೈಜಯಂತಿ ಕಾಶಿ ಮತ್ತು ಪ್ರತಿಕ್ಷಾ ಕಾಶಿ ತಂಡದಿಂದ ಕುಚಿಪುಡಿ ನೃತ್ಯ ಪ್ರದಶ೯ನವಿರುತ್ತದೆ. ವೈವಿಧ್ಯಮಯ ಕಲಕುಶಲ ವಸ್ತುಗಳ ಪ್ರದಶ೯ನ ಮತ್ತು ಮಾರಾಟ ಕೂಡ ಕ್ರಾಫ್ಟ್ ಮೇಳದಲ್ಲಿ ಆಯೋಜಿತವಾಗಿದೆ.

No comments

Post a Comment