ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರ ಮೃತ್ಯು : ಕುಶಾಲನಗರ ಆರ್ ಎಂ ಸಿ ಬಳಿ ಘಟನೆ

No comments

ಮಡಿಕೇರಿ ಜೂನಿಯರ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಕುಶಾಲನಗರದಲ್ಲಿ ತಾ. 5 ರಂದು ಕಾವೇರಿ ನದಿಯಲ್ಲಿ ಮುಳುಗಿ ಜಲ ಸಮಾಧಿಯಾಗಿರುವ ಕಹಿ ಘಟನೆಯ ಕರಾಳ ಛಾಯೆ ಮರೆಯಾಗುವ ಮುನ್ನವೇ ಇಂದು ಇಂಥಹುದೇ ಇನ್ನೊಂದು ದುರಂತ ಸಂಭವಿಸಿದೆ. ಬೆಂಗಳೂರಿನಿಂದ ರಂಜಾನ್ ಹಬ್ಬಕ್ಕೆಂದು ಕುಶಾಲನಗರದಲ್ಲಿರುವ ನೆಂಟರ ಮನೆಗೆ ಬಂದಿದ್ದ ಬಾಲಕ ಹಾಗೂ ಆತನ ಮಾವ ನದಿ ಪಾಲಾಗಿರುವ ಧಾರುಣ ಘಟನೆ ವರದಿಯಾಗಿದೆ.ಕುಶಾಲನಗರದಲ್ಲಿರುವ ನಾಸಿರ್ (44) ರವರ ಮನೆಗೆ ರಂಜಾನ್ ಹಬ್ಬಕ್ಕೆಂದು ಬೆಂಗಳೂರಿಂದ ಬಂದಿದ್ದ ಅವರ ಅಕ್ಕನ ಮಗ ಮೋಹಿನ್ (14) ಇಂದು ಮಧ್ಯಾಹ್ನ ಕುಶಾಲನಗರದ ಆರ್.ಎಂ.ಸಿ ಬಳಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ನೀರಿನ ಸೆಳೆತ ಹೆಚ್ಚಾಗಿ ಮುಳುಗಲಾರಂಭಿಸಿದ್ದಾನೆ. ಅವನನ್ನು ರಕ್ಷಿಸಲೆಂದು ಮುಂದಾದ ಸಂಬಂಧಿ ನಾಸಿರ್ ರವರು ಕೂಡ ನಿಯಂತ್ರಣ ಕಳೆದುಕೊಂಡ ಪರಿಣಾಮ ಇವರಿಬ್ಬರೂ ನೀರು ಪಾಲಾಗಿದ್ದಾರೆ. ಪಾಲಾಗಿದ್ದಾರೆ.-

No comments

Post a Comment