ಈದ್ ಮೀಟ್ ಕ್ರಿಕೆಟ್ ಪಂದ್ಯಾಟ:ಬುಲ್ಲೆಟ್ ಫ್ರೆಂಡ್ಸ್ ಕೊಂಡಂಗೇರಿ ಚಾಂಪಿಯನ್ 

No comments

ಚೆಟ್ಟಳ್ಳಿ: ದುಬೈ ಮರಳುಗಾಡಿನಲ್ಲಿ ಈದುಲ್ ಫಿತ್ರ್ ಹಬ್ಬದಂದು ಕೊಡಗಿನವರಿಗೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಜಮಾಲ್ ನಾಯಕತ್ವದ ಬುಲ್ಲೆಟ್ ಫ್ರೆಂಡ್ಸ್ ತಂಡವು ಸಿದ್ದಾಪುರ ಫ್ರೆಂಡ್ಸ್ ತಂಡವನ್ನು ಮಣಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬುಲ್ಲೆಟ್ ಫ್ರೆಂಡ್ಸ್ ತಂಡವು ದಿಲ್ಶಾದ್ ಹಾಗೂ ನೌಷಾದ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಆಟದಿಂದ ನಿಗದಿತ ೩ ಓವರುಗಳಿಗೆ ೨೮ ರನ್ ಕಲೆಹಾಕಿದರು. ಸಿದ್ದಾಪುರ ಫ್ರೆಂಡ್ಸ್ ತಂಡವು ಮುನ್ನಾಭಾಯಿ ಅವರ ಬೌಲಿಂಗ್ ದಾಳಿಗೆ ತತ್ತರಿಸಿ ವಿಕೆಟ್ ಕಳೆದುಕೊಂಡು ಸೋಲಪ್ಪಿತು. ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಬುಲ್ಲೆಟ್ ಫ್ರೆಂಡ್ಸ್ ಹಾಗೂ ಫೌಝಾನ್ ಫ್ರೆಂಡ್ಸ್ ಕೊಟ್ಟಮುಡಿ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಫೌಝಾನ್ ಫ್ರೆಂಡ್ಸ್ ತಂಡವು ನಿಗದಿತ ೪ ಓವರುಗಳಿಗೆ ೪೮ ರನ್ ಹಾಕಿದರು. ೪೯ ರನ್ ಗಳ ಗುರಿಯನ್ನು ಬೆನ್ನಟ್ಟಿದ ಬುಲ್ಲೆಟ್ ಫ್ರೆಂಡ್ಸ್ ತಂಡವು ನೌಶಾದ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ೩ ಓವರುಗಳಿಗೆ ಗುರಿ ತಲುಪಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯವು ಜಿವೈಸಿ ಗುಂಡಿಕೆರೆ ಹಾಗೂ ಸಿದ್ದಾಪುರ ಫ್ರೆಂಡ್ಸ್ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಜಿವೈಸಿ ಗುಂಡಿಕೆರೆ ತಂಡವು ನಿಗದಿತ ೪ ಓವರುಗಳಿಗೆ ೨೪ ರನ್ ಗಳಿಸಿತು. ಸಿದ್ದಾಪುರ ಫ್ರೆಂಡ್ಸ್ ತಂಡವು ೧ ಓವರುಗಳಿಗೆ ಗುರಿ ತಲುಪಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯಾಟದ ಮ್ಯಾನ್ ಆಫ್ ದಿ ಮ್ಯಾಚ್ ಬುಲ್ಲೆಟ್ ತಂಡದ ಮುನ್ನಭಾಯಿ,ಸರಣಿ ಶ್ರೇಷ್ಠ ಪ್ರಶಸ್ತಿ ಸಿದ್ದಾಪುರ ತಂಡದ ನೂರು, ಬೆಸ್ಟ್ ಬೌಲರ್ ಮುಸಮ್ಮಿಲ್, ಬೆಸ್ಟ್ ಬ್ಯಾಟ್ಸ್‌ಮನ್ ಬುಲ್ಲೆಟ್ ತಂಡದ ನೌಷಾದ್, ಬೆಸ್ಟ್ ಉಬೈಸ್ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಬುಲ್ಲೆಟ್ ತಂಡದ ಕೋಚ್ ಆದಿಲ್, ನೌಷಾದ್ ಕೊಂಡಂಗೇರಿ, ಅರಫಾತ್ ನಾಪೋಕ್ಲು, ಹಮೀದ್ ಚಾಮಿಯಾಲ್ , ಸಲೀಂ ಗುಂಡಿಕೆರೆ ಇದ್ದರು.

No comments

Post a Comment