ಸೋಮವಾರಪೇಟೆ ಈದ್ ಕಲ್ಲು ತೂರಾಟ ಪ್ರಕರಣ : ನೈಜಸುದ್ದಿ ಇಲ್ಲಿದೆ

No comments

ಸೋಮವಾರಪೇಟೆ : ನಿನ್ನೆ ಕೊಡಗಿನ  ಸೋಮವಾರಪೇಟೆಯಲ್ಲಿ ಈದುಲ್ ಫಿತರ್ ಮೆರವಣಿಗೆ ಸಂದರ್ಭ ನಡೆದ ಕಲ್ಲುತೂರಾಟ ನಡೆಸಿದ ಪ್ರಕರಣ. ಸೋಮವಾರಪೇಟೆಯಲ್ಲಿ ವರ್ಷಂಪ್ರತಿ ಮುಸ್ಲಿಂ ಭಾಂದವರು ವರ್ಷಂಪ್ರತಿ ಮಸೀದಿಯಿಂದ ಈದ್ಗಾ ತನಕ ಈದುಲ್ ಫಿತರ್ ನಂದು ಮೆರವಣಿಗೆ ಮೂಲಕ ಸಾಗಿ ಈದ್ಗಾದಲ್ಲಿ ಪ್ರಾರ್ಥನೆ ನಡೆಸುವುದು ಸ್ಥಿರ ಕಾರ್ಯಕ್ರಮವಾಗಿದೆ. ಅದೇ ರೀತಿ ನೆನ್ನೆ ಈದ್ ದಿನದಂದು ಮೆರವಣಿಗೆ ಹೋಗುವಾಗ ಕಾರಿನಲ್ಲಿ ಬಂದ ಪ್ರವೀಣ್ ಎಂಬುವವರ ಕಾರು ಅಡ್ಡು ಎಂಬ ಮುಸ್ಲಿಂ ಯುವಕನಿಗೆ ಟಚ್ ಮಾಡಿ ಮುಂದೆಹೋಗಿದೆ. ಇದರಿಂದ ಕೋಪಗೊಂಡ ಕೆಲವು ಯುವಕರು ಕಲ್ಲುತೂರಾಟ ನಡೆಸಿದ್ದಾರೆ. ನಂತರ ಕಾರಿನ ಮಾಲೀಕ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಡ್ಡು ಆಸ್ಪತ್ರೆಯಲ್ಲಿ ದಾಖಾಲಾಗಿರುವ ಸಂಧರ್ಭ ಪೋಲಿಸರು ಅವರ ತಂದೆ ಮತ್ತು ಸಹೋದರ ಸಹಿತ ಸ್ಟೇಷನಿಗೆ ಎಳೆದೊಯ್ದಿದ್ದಾರೆ. ಈ ಸಣ್ಣ ಪ್ರಕರಣವನ್ನು ಕೆಲವು ರಾಜ್ಯ ಮಾಧ್ಯಮಗಳ ಸಹಿತ ತಿರುಚಿ ಸುದ್ದಿ ಮಾಡಿದೆ. ಟಚ್ ಮಾಡಿ ಹೋದ ಕಾರನ್ನು ನಿಲ್ಲಿಸಿದ ಕಾರು ಎಂದು ತೋರಿಸಿ ಪ್ರಕರಣವನ್ನು ಇನ್ನೂ ಬಿಗಡಾಯಿಸುವಂತೆ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.

No comments

Post a Comment