ರಾಜಕೀಯ ಜಂಜಾಟದ ನಡುವೆಯೂ ಐಪಿಎಲ್ ಪಂದ್ಯ ವೀಕ್ಷಿಸಿದ ಮಾಜಿ ಸಿ.ಎಂ ಸಿದ್ದರಾಮಯ್ಯ..
ಬೆಂಗಳೂರು: ಎಲ್ಲೆಡೆ ಲೋಕಸಭೆ ಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ನಾಯಕರೆಲ್ಲಾ ಪ್ರಚಾರ, ನಾಮಪತ್ರ ಸಲ್ಲಿಕೆ, ಸಮಾವೇಶ, ಐಟಿ ದಾಳಿ ಮೊದಲಾದವುಗಳಲ್ಲಿ ಬ್ಯುಸಿಯಾಗಿದ್ದಾರೆ.
ರಾಜ್ಯದಲ್ಲಿ ರಾಜಕೀಯ ನಾಯಕರು ಟೆನ್ಷನ್ ನಲ್ಲಿ ಇದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಐಪಿಎಲ್ ಮ್ಯಾಚ್ ವೀಕ್ಷಿಸಿದ್ದಾರೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯವನ್ನು ಸಿದ್ದರಾಮಯ್ಯ ವೀಕ್ಷಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರಿಗೆ ಒತ್ತಡ, ಆತಂಕ ಸಹಜ. ಆದರೆ, ಸಿದ್ದರಾಮಯ್ಯ ಅವರಂತಹ ಸ್ಥಿತಪ್ರಜ್ಞ ಒತ್ತಡವಾದರೂ ಅದನ್ನು ತೋರಗೊಡದೆ ಕೂಲಾಗಿ ಐಪಿಎಲ್ ಪಂದ್ಯ ವೀಕ್ಷಿಸಿದ್ದಾರೆ. ಈ ಹಿಂದೆ ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ ಎಸ್. ಬಂಗಾರಪ್ಪ, ವೋಟ್ ಮಾಡಿ ಮಧ್ಯಾಹ್ನ ಕುಟುಂಬದವರೊಂದಿಗೆ ಸಿನಿಮಾ ವೀಕ್ಷಿಸಿದ್ದರು. ಮತದಾನದ ದಿನ ಕೂಡ ಒತ್ತಡಕ್ಕೆ ಒಳಗಾಗದೇ ಅವರು ಸಿನಿಮಾ ನೋಡಿದ್ದು ಭಾರೀ ಸುದ್ದಿಯಾಗಿತ್ತು.

No comments
Post a Comment