ಮಾರ್ಚ್ ೩೧ ರಂದು ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಜನ್ಮದಿನಾಚರಣೆ

No comments

ಮಾ. 31 ರಂದು ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಜನ್ಮದಿನಾಚರಣೆ
ಮಡಿಕೇರಿ ಮಾ. ೨೯ : ದೇಶ ಕಂಡ ಅಪ್ರತಿಮ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೩ನೇ ಜನ್ಮದಿನಾಚರಣೆ ಕಾರ್ಯಕ್ರಮವು ಮಾ. ೩೧ ರಂದು ನಗರದ ಸನ್ನಿಸೈಡ್ ಆವರಣದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಜಿ.ಟಿ. ವೃತ್ತದಲ್ಲಿರುವ ತಿಮ್ಮಯ್ಯ ಅವರ ಪ್ರತಿಮೆಗೆ ಪುಷ್ಪಾರ್ಚನೆಯ ಬಳಿಕ ಸನ್ನಿಸೈಡ್ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಮುಂದಾಳ್ವದಲ್ಲಿ ಜಿಲ್ಲಾಡಳಿತದ ಸಹಕಾರ ಪಡೆದು ಹಮ್ಮಿಕೊಳ್ಳಲಾಗಿದ್ದು, ತಿಮ್ಮಯ್ಯ ಅವರ ಅಭಿಮಾನಿಗಳು, ಮಾಜಿ ಸೈನಿಕರು, ನಿವೃತ್ತ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಫೋರಂ ವಿನಂತಿಸಿದೆ.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ಪಿ. ನಂಜಪ್ಪ (ವೀರಚಕ್ರ) ಅವರು ಪಾಲ್ಗೊಳ್ಳಲಿದ್ದಾರೆ. ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ, ಸಂಚಾಲಕ ಮೇಜರ್ ಬಿದ್ದಂಡ ನಂದಾ ನಂಜಪ್ಪ, ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಮತ್ತಿತರರು ಹಾಜರಿರುವರು.
ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನಿಂದ..
ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ವತಿಯಿಂದಲೂ ಮಾ. ೩೧ ರಂದು ಪ್ರತ್ಯೇಕವಾದ ಕಾರ್ಯಕ್ರಮ ಜರಿಗಲಿದೆ. ಬೆಳಿಗ್ಗೆ ೯ಕ್ಕೆ ಶಾಲೆಯಿಂದ ತಿಮ್ಮಯ್ಯ ಪ್ರತಿಮೆ ತನಕ ಮೆರವಣೆಗೆ ನಡೆಸಿ ಅಲ್ಲಿ ಪುಷ್ಪ ನಮನ ಸಲ್ಲಿಸಲಾಗುವುದು. ಬಳಿಕ ಶಾಲಾ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ತಿಮ್ಮಯ್ಯ ಅವರ ಇತಿಹಾಸದ ಮೆಲುಕು ಸಹಿತವಾಗಿ ಸಭಾ ಕಾರ್ಯಕ್ರಮ ನಡೆಯಲಿದೆ.

No comments

Post a Comment