ಬೆಂಗಳೂರು : ನಟ ಯಶ್ ಕುಟುಂಬ ವಾಸಿಸುತ್ತಿರುವ ಮನೆಯನ್ನು ಇನ್ನು 2 ತಿಂಗಳಲ್ಲಿ ಖಾಲಿ ಮಾಡಬೇಕೆಂದು ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿದೆ . ಮನೆ ಮಾಲಿಕ ಕೊಟ್ಟ ದೂರಿನಂತೆ ಈ ಆದೇಶ ನೀಡಲಾಗಿದೆ. ನಮಗೆ ಈಗ ಬಾಡಿಗೆ ಮನೆ ಹುಡುಕಲು ಕಷ್ಟವಾಗುತ್ತದೆ, ಹಾಸನದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ , ಪೂರ್ಣಗೊಂಡ ತಕ್ಷಣ ಸ್ಥಳಾಂತರಿಸುತ್ತೇವೆ, ಪೂರ್ಣಗೊಳ್ಳಲು ಇನ್ನೂ 6 ತಿಂಗಳು ಕಾಲಾವಕಾಶ ಬೇಕಿದೆ , ಎಂದು ಕಾಲಾವಕಾಶ ಕೋರಿ ಯಶ್ ತಾಯಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ 2 ತಿಂಗಳ ಕಾಲಾವಕಾಶ ನೀಡಿದೆ.

No comments
Post a Comment