ಭೀಕರ ಅಪಘಾತ ಇಬ್ಬರು ಯುವಕರು ಸಾವು...

No comments

ಸುಂಟಿಕೊಪ್ಪ; ಲಾರಿ-ಕಾರು ಡಿಕ್ಕಿ. ಇಬ್ಬರು ಸಾವು
ಸುಂಟಿಕೊಪ್ಪ;  ಸಮೀಪದ ಕೊಡಗರಹಳ್ಳಿಯ ಮಾರುತಿ ನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ಮಿಶ್ರಣ ಲಾರಿ ಮತ್ತು ಪಿಯೆಟ್ ಕಾರಿನ ನಡುವೆ ಡಿಕ್ಕಿ ಸಂಭವಿಸಿ‌ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಕೊಡಗರಹಳ್ಳಿ ಉಪ್ಪುತೋಡುವಿನ‌ ಇರ್ಫಾನ್ ಸ್ಥಳದಲ್ಲಿ ಮೃತಪಟ್ಟರೇ,ಗಂಭೀರವಾಗಿ ಗಾಯಗೊಂಡಿದ್ದ  ಅಬ್ದುಲ್ ಸಮ್ಮದ್ ಮೈಸೂರಿಗೆ ಸಾಗಿಸುವಷ್ಟರಲ್ಲಿ‌ ದಾರಿಮದ್ಯೆ ಮೃತಪಟ್ಟಿದ್ದಾರೆ.

ಘಟನೆ ವಿವರ; ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಕಾಂಕ್ರಿಟ್ ಮಿಕ್ಸಿಂಗ್ ಲಾರಿ ಮತ್ತು ಕುಶಾಲನಗರ ಕಡೆಯಿಂದ ಕೊಡಗರಹಳ್ಳಿ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು.ಕಾರಿನಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಯುವಕರನ್ನು ಸಾರ್ವಜನಿಕರು ಶ್ರಮವಹಿಸಿ ಎಳೆದು‌ ಆಸ್ಪತ್ತೆಗೆ ಸಾಗಿಸಿದರು.

No comments

Post a Comment