ಮತ್ತೊಮ್ಮೆ ಮೋದಿ ಸರ್ಕಾರ :ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಶ್ವಾಸ

No comments

ದೇಶದಲ್ಲಿ ಮತ್ತೊಮೆ ಮೋದಿ ಸರ್ಕಾರ:ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಶ್ವಾಸ.
ಮಡಿಕೇರಿ:  ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಿ ಆಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
 ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಬಿಜೆಪಿ ಏರ್ಪಡಿಸಿದ್ದ  ಬೃಹತ್  ಪ್ರಚಾರ ಕಾರ್ಯದಲ್ಲಿ ಪಾಳ್ಗೊಂಡು  ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪರಸ್ಪರ ಜಗಳದಲ್ಲಿ ತೊಡಗಿದೆ.
ರಾಜ್ಯದ ಭ್ರಷ್ಟ ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಯುತ್ತಿದೆ.ಆದರೆ ಭ್ರಷ್ಟ ಗುತ್ತಿಗೆದಾರರ ಪರ ನಿಂತು ಸರ್ಕಾರ ಧರಣಿ ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ ಕಳೆದ ಐದು ವರ್ಷದಲ್ಲಿ ೦೯ ಕೋಟಿ ಶೌಚಾಲಯ ನಿರ್ಮಾಣವಾಗಿದೆ.ಕರ್ನಾಟಕದಲ್ಲಿ ೪೫ ಲಕ್ಷ ಕುಟುಂಬಗಳು ಈ ಪ್ರಯೋಜನ ಪಡೆದುಕೊಂಡಿದೆ.
ಐದು ವರ್ಷದಲ್ಲಿ ‌ಮೋದಿ ಸರ್ಕಾರ ಅನೇಕ ಸಾಧನೆ ಮಾಡಿದೆ ಎಂದರು.
೦೫ ವರ್ಷದಲ್ಲಿ ಒಬ್ಬ ವ್ಯಕ್ತಿಯಿಂದ ಇದು ಸಾಧ್ಯವಾಗೋದಾದ್ರೆ, ಆದ್ರೆ ತಲಾತಲಾಂತರಗಳಿಂದ ದೇಶ ಆಳಿದ ಗಾಂಧಿ ವಾದ್ರಾ ಕುಟುಂಬ ಯಾಕೆ ಮಾಡಲಿಲ್ಲಿ.
ಕಾಂಗ್ರೆಸ್ ಪಕ್ಷಕ್ಕೆ ದೇಶದ ಅಭಿವೃದ್ಧಿ ಆಗೋದು ಬೇಕಾಗಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ದೇಶದ ಜನರು ನಮ್ಮ ಮುಂದೆ ಕೈಯೊಡ್ಡಿ ನಿಲ್ಲಬೇಕು ಅನ್ನೋದು ಆ ಪಕ್ಷ ಬಯಸಿತ್ತು ಎಂದರು.
ಅಲ್ಲದೇ ಕೊಡಗು -ಮೈಸೂರು ಕ್ಷೇತ್ರದಲ್ಲಿ ಸಂಸದರಾದ ಪ್ರತಾಪ್ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಯೋಜನೆಯನ್ನು ಕ್ಷೇತ್ರದ ಪ್ರತಿಯೊಬ್ಬರ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಕ್ಷೇತ್ರದ ಶಾಸಕರಾದ  ಬೋಪಯ್ಯ,ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ , ರವಿ ಕುಶಾಲಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎ ಹರೀಶ್, ಇದ್ದರು..

No comments

Post a Comment