ದೇಶದ ಅತೀ ಹೆಚ್ಚು ಶ್ರೀಮಂತ ಪಕ್ಷ ಯಾವುದು ಗೊತ್ತೇ

No comments

"ದೇಶದ ಅತಿ ಹೆಚ್ಚು ಶ್ರೀಮಂತ ಪಕ್ಷ ಯಾವುದು ಗೊತ್ತಾ? "
ನವದೆಹಲಿ : ದೇಶದ ಅತಿ ದೊಡ್ಡ ಶ್ರೀಮತ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಹೊರಹೊಮ್ಮಿದೆ. ಹೌದು, ಇಂಗ್ಲಿಷ್‌ ಖಾಸಗಿ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ 17-18ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 1,027.34 ಕೋಟಿ ರುಪಾಯಿ ಆದಾಯ ಘೋಷಿಸಿ ಘೋಷಿಸಿಕೊಂಡಿರುವ ಬಿಜೆಪಿ ಪಕ್ಷ ದೇಶದ ಅತಿ ಹೆಚ್ಚು ಆದಾಯವನ್ನು ಹೊಂದಿರುವ ಪಕ್ಷವಾಗಿದ್ದು, ಈ ಹಣದಲ್ಲಿ ಶೇಕಡ 53.9 ಹಣ ಅಂದರೆ ಸರಿ ಸುಮಾರು 700 ಕೋಟಿ ರೂಪಾಯಿಗಳು ಅಜ್ಞಾತ ಮೂಲಗಳಿಂದ ಪಕ್ಷಕ್ಕೆ ಬಂದಿದೆ ಎನ್ನಲಾಗಿದೆ. 17-18ನೇ ಸಾಲಿನ 6 ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯ 1293.051ವಾಗಿದೆ ಎನ್ನಲಾಗಿದೆ.
2017-18ರಲ್ಲಿ ಆರು ರಾಷ್ಟ್ರೀಯ ಪಕ್ಷಗಳು ಪಡೆದ ದೇಣಿಗೆ ವಿವರ ಹೀಗಿದೆ.
ಬಿಜೆಪಿ 1,027.34 ರೂ ಕೋಟಿ ಈ ಪೈಕಿ ಶೇಕಡ 53.9 ಹಣ ಅಜ್ಞಾತ ಮೂಲಗಳಿಂದ ಬಂದಿದೆ ಕಾಂಗ್ರೆಸ್‌ 199.15 ಕೋಟಿ ರೂ ಬಂದಿದ್ದು ಈ ಪೈಕಿ ಕಾಂಗ್ರೆಸ್‌ ಪಕ್ಷಕ್ಕೆ ಶೇಕಡ 60.2 ಹಣ ಅಜ್ಞಾತ ಮೂಲಗಳಿಂದ , ಬಿಎಸ್‌ಪಿ ಪಕ್ಷಕ್ಕೆ 51.694 ರೂ ಕೋಟಿ ಹಣ ಬಂದಿದ್ದು, ಇದರಲ್ಲಿ ಶೇಕಡ 20.6 ಹಣ ಅಜ್ಞಾತ ಮೂಲಗಳಿಂದ, ಎನ್‌ಸಿಪಿ ಪಕ್ಷಕ್ಕೆ 8.15 ರೂ ಕೋಟಿ ಹಣ ಬಂದಿದ್ದು, ಈ ಪೈಕಿ ಶೇಕಡ 65.9 ಅನ್ಯ ಮೂಲಗಳಿಂದ ಹಾಗೂ ಎಐಟಿಸಿ ಪಕ್ಷಕ್ಕೆ 5.167ರೂ ಕೋಟಿ ಹಣ ಬಂದಿದ್ದು, ಇದರಲ್ಲಿ ಶೇಕಡ 2.0 ಅಜ್ಞಾತ ಮೂಲಗಳಿಂದ ಕೊನೆಯಾದಾಗಿ ಸಿಪಿಐ ಪಕ್ಷಕ್ಕೆ 1.55 ರೂ ಕೋಟಿ ಹಣ ದೇಣಿಗೆ ರೂಪದಲ್ಲಿ ಬಂದಿದ್ದು, ಶೇಕಡ 0.2 ರಷ್ಟು ಹಣ ಮೂಲಗಳು ತಿಳಿದು ಬಂದಿಲ್ಲವಂತೆ.

No comments

Post a Comment