ತೋಟದಲ್ಲಿ ಕಬ್ಬಿಣದ ಏಣಿಯ ಸಹಾಯದಿಂದ ತೆಂಗಿನ ಕಾಯಿಯನ್ನು ಕೀಳುವ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಮೂವರು ಕಾರ್ಮಿಕರು ಸ್ಥಳದಲ್ಲಿಯೇ ಅಸು ನೀಗಿರುವ ಘಟನೆ ವರದಿಯಾಗಿದೆ. ಗೋಣಿಕೊಪ್ಪ ಸಮೀಪದ ಅರ್ವತ್ತೊಕ್ಲುವಿನ ರಾಮಜಮ್ಮ ಎಂಬುವರಿಗೆ ಸೇರಿದ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾವಡಿ ಗ್ರಾಮದ ಧರ್ಮಜ್ಜ (50), ರವಿ (40) ಮತ್ತು ಸತೀಶ್ (50) ಎಂಬುವವರೇ ಮೃತ ನತದೃಷ್ಟರಾಗಿದ್ದಾರೆ. ಇವರುಗಳು ಇಂದು ಬೆಳಿಗ್ಗೆ ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾಗ ಕಬ್ಬಿಣದ ಏಣಿಗೆ ತೆಂಗಿನ ಮರದ ಪಕ್ಕದಲ್ಲಿ ಹಾದುಹೋಗಿದ್ದ ವಯರ್ ನಿಂದ ವಿದ್ಯುತ್ ಸ್ಪರ್ಶಿಸಿದೆ. ಇದರಿಂದ ವಿದ್ಯುತಾಘಾತಕ್ಕೊಳಗಾದ ಧರ್ಮಜ್ಜ, ರವಿ ಮತ್ತು ಸತೀಶ್ ರವರು ಸ್ಥಳದಲ್ಲಿಯೇ ಅಸುನೀಗಿದ್ದು, ಮೃತದೇಹಗಳು ಸುಟ್ಟು ಕರಕಲಾಗಿವೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments
Post a Comment