ಆಧಾರ್-ಪ್ಯಾನ್ ಲಿಂಕ್ ಗಡುವು 6 ತಿಂಗಳು ವಿಸ್ತರಣೆ; ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ
ಆಧಾರ್ ಜೊತೆ ಪ್ಯಾನ್ ಜೋಡಣೆ ಮಾಡುವ ತನಕ ತೆರಿಗೆ, ಬ್ಯಾಂಕಿಂಗ್, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಆಧಾರ್ ಪ್ಯಾನ್ ಲಿಂಕ್
ಹೊಸದಿಲ್ಲಿ: ಆಧಾರ್ ಜೊತೆ ಪ್ಯಾನ್ ಅನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರಕಾರ ಮತ್ತೆ ವಿಸ್ತರಣೆ ಮಾಡಿದೆ.
ಈ ಮೊದಲು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸೂಚಿಸಿದಂತೆ ಮಾರ್ಚ್ 31ರೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡಿಸಬೇಕಾಗಿತ್ತು.
ಈಗ ಈ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಆಧಾರ್ ಜೊತೆ ಪ್ಯಾನ್ ಜೋಡಣೆ ಮಾಡುವ ತನಕ ತೆರಿಗೆ, ಬ್ಯಾಂಕಿಂಗ್, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಈ ಮೊದಲು ಪ್ಯಾನ್-ಆಧಾರ್ ಜೋಡಣೆಗೆ 2018ರ ಜೂ.30 ಕಡೆಯ ದಿನವಾಗಿತ್ತು. ನಂತರ ಇದನ್ನು ಹಲವು ಬಾರಿ ವಿಸ್ತರಿಸಿ ಕೊನೆಗೆ 2019ರ ಮಾರ್ಚ್ 31 ರೊಳಗೆ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಸೂಚಿಸಲಾಗಿತ್ತು. ಈಗ ಮತ್ತೆ ಅದನ್ನು ವಿಸ್ತರಣೆ ಮಾಡಲಾಗಿದೆ.
ಈಗಾಗಲೇ ಲಿಂಕ್ ಆಗಿದೆಯೇ, ತಿಳಿಯುವುದು ಹೇಗೆ?
ನಿಮ್ಮ ಪ್ಯಾನ್ ಮತ್ತು ಆಧಾರ್ ಈಗಾಗಲೇ ಲಿಂಕ್ ಆಗಿವೆಯೇ? ಈ ಮೊದಲು ಇವುಗಳ ಜೋಡಣೆಗೆ 2018ರ ಜೂನ್ 30 ಕಡೆಯ ದಿನವಾಗಿತ್ತು. ಆ ಸಂದರ್ಭದಲ್ಲಿ ಏನಾದರೂ ಲಿಂಕ್ ಮಾಡಿರಬಹುದಾ ಎನ್ನುವ ಅನುಮಾನ ನಿಮ್ಮಲ್ಲಿರಬಹುದು. ಒಂದು ವೇಳೆ ಮಾಡಿರುವ ನೆನಪೂ ಇರಬಹುದು. ಈ ಬಗ್ಗೆ ದೃಢೀಕರಿಸಿಕೊಳ್ಳಲು ಹೀಗೆ ಮಾಡಿ...
1. ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.incometaxindiaefiling.gov.in/
2. ವೆಬ್‌ಸೈಟ್‌ನ ಹೋಮ್‌ಪೇಜ್‌ನ ಎಡಭಾಗದಲ್ಲಿರುವ Link Aadhaar ಎನ್ನುವುದನ್ನು ಕ್ಲಿಕ್ ಮಾಡಿ. ಆ ಪುಟದಲ್ಲಿ 'ನೀವು ಈಗಾಗಲೇ ಲಿಂಕ್ ಮಾಡಿದ್ದರೆ, ಅದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ' ಎನ್ನುವರ್ಥದ ಸಂದೇಶ ಕಾಣಿಸುತ್ತದೆ. ಅಲ್ಲಿರುವ Link Aadhaar ಅನ್ನುವುದನ್ನು ಕ್ಲಿಕ್ ಮಾಡಿ.
3. ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಅಲ್ಲಿ ಕೊಟ್ಟಿರುವ ಖಾಲಿ ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ. View Link Aadhaar Status ಅನ್ನುವುದನ್ನು ಕ್ಲಿಕ್ ಮಾಡಿ. ಆಗ ನಿಮ್ಮ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಶವು ತೆರೆ ಮೇಲೆ ಕಾಣಿಸುತ್ತದೆ.

No comments
Post a Comment