ಕೊಡಗಿನ ಬಡವರ ಬೆಳಕು ಸಂಘದ ವತಿಯಿಂದ ಕಿಡ್ನಿ ನಿಷ್ಕ್ರಿಯೆಗೊಂಡ ವ್ಯಕ್ತಿ ೬೦ ಸಾವಿರ ರೂ ಧನಸಹಾಯ
ಕುಶಾಲನಗರ, ಮಾ೩೧: ಕೊಡಗಿನ ಬಡವರ ಬೆಳಕು ಸಂಘದ ವತಿಯಿಂದ ಕಿಡ್ನಿ ನಿಷ್ಕ್ರಿಯೆಗೊಂಡ ಬಡ ವ್ಯಕ್ತಿಗೆ ೬೦ ಸಾವಿರ ರೂ ಧನಸಹಾಯ ಮಾಡಿ ಬಡ ಕುಟುಂಬಕ್ಕೆ ಬೆಳಕನ್ನು ಚೆಲ್ಲಿದ್ದಾರೆ. ಕೊಡಗು ಬಡವರ ಬೆಳಕು ಸಂಘವು ಕೊಡಗಿನಲ್ಲಿರುವ ಬಡವರ ಆಶಾಕಿರಣವಾಗಿದ್ದು, ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಕೊಡಗು ಬಡವರ ಬೆಳಕು ಸಂಘವು ತನ್ನ ಎರಡೂ ಕಿಡ್ನಿಯನ್ನು ಕಳೆದುಕೊಂಡ ಕೊಂಡಂಗೇರಿಯ ಮೂಸಾ ಎಂಬ ಬಡ ಕುಟುಂಬದ ವ್ಯಕ್ತಿಗೆ ಧನಸಹಾಯ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಮುಂದಿನ ಭವಿಷ್ಯಕ್ಕಾಗಿ ಸಹಾಯವಾಗಲೆಂದು ಅರವತ್ತು ಸಾವಿರ ರೂಪಾಯಿಗಳ ಸಹಾಯ ಧನವನ್ನು ನೀಡಿದ ಕೊಡಗು ಬಡವರ ಬೆಳಕು ಸಂಘವು, ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ.
ಬಡ ಕುಟುಂಬವೊಂದಕ್ಕೆ ಸುಮಾರು ಐದು ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿ ಕೊಡಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದರ ಶಂಕುಸ್ಥಾಪನೆ ನಡೆಯಲಿರುವುದಾಗಿ ಕೊಡಗು ಬಡವರ ಬೆಳಕು ಸಂಘದ ಅಧ್ಯಕ್ಷ ಎಂ.ಹೆಚ್.ಮುಹಮ್ಮದ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡಗಿನ ಬಡವರ ಬೆಳಕು ಸಂಘದ ಉಪಾಧ್ಯಕ್ಷರಾದ ಫತಾಹ್ ಕಡಂಗ, ಕಾರ್ಯಾಧ್ಯಕ್ಷರಾದ ಮಜೀದ್ ಚೋಕಂಡಲ್ಲಿ, ಪ್ರಧಾನ ಕಾರ್ಯದರ್ಶಿಗಳಾದ ನಾಸೀರ್ ಮಕ್ಕಿ, ಕಾರ್ಯದರ್ಶಿಗಳಾದ ನೌಶಾದ್ ಜನ್ನತ್, ಸಹ ಕಾರ್ಯದರ್ಶಿ ಶಫೀಕ್ ಗುಂಡಿಗೆರೆ, ಖಜಾಂಜಿ ಶಫೀಕ್ ಸಿ.ಎಚ್, ನಿರ್ದೇಶಕರುಗಳಾದ ಮಜೀದ್ ಕೊಂಡಂಕೇರಿ, ನಾಸೀರ್ ಹುಂಡಿ, ಜಲೀಲ್ ಅಮ್ಮತಿ, ನಜೀರ್ ಚಾಮಿ ಹಾಗೂ ಮತ್ತಿತರರು ಭಾಗವಹಿಸಿದ್ದರು.
No comments
Post a Comment