ನಾಯಿ ಮರಿಯೊಂದಿಗೆ ಆಟವಾಡುತ್ತಿದ್ದ ಬಾಲಕಿ ಕೆರೆಗೆ ಬಿದ್ದು ಸಾವು...ಸುಂಟಿಕೊಪ್ಪದ ೭ನೇ ಹೊಸಕೋಟೆಯಲ್ಲಿ ಘಟನೆ

No comments

*ನಾಯಿಯೊಂದಿಗೆ ಆಟವಾಡುತ್ತಿದ್ದ ಬಾಲಕಿ ಕೆರೆಗೆ ಬಿದ್ದು  ಸಾವು.
: ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕೆರೆಯೊಳಗೆ ಬಿದ್ದು ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.  ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ದಾಸಂಡ ರಂಜನ್ ಎಂಬುವವರ ತೋಟದಲ್ಲಿ ಕಾರ್ಮಿಕರಾಗಿರುವ ಚೋಮ ಎಂಬುವವರ ಪುತ್ರಿ ಭಾರತಿ (13) ಎಂಬಾಕೆಯೇ ನಾಯಿಯೊಂದಿಗೆ ಆಟವಾಡುತ್ತಾ ಕೆರೆಗೆ ಆಹುತಿಯಾಗಿ ಮೃತ ನತದೃಷ್ಟ ಬಾಲಕಿಯಾಗಿದ್ದಾಳೆ.  ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಇಂದು (ತಾ.31) ಬೆಳಿಗ್ಗೆ ಅಂದಾಜು  11.30ರ ಸಮಯದಲ್ಲಿ ತೋಟದ ಲೈನ್ ಮನೆಯ ಪಕ್ಕದಲ್ಲಿ ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದಳು.  ಆಟದ ನಡುವೆ ಭಾರತಿಯನ್ನು ನಾಯಿ ಓಡಿಸಿಕೊಂಡು ಹೋಗಿದೆ.  ಆಟವಾಡುತ್ತಿದ್ದ ಜಾಗದ ಒತ್ತಿನಲ್ಲಿ ಇಳಿಜಾರಿನಿಂದ ಕೂಡಿದ ಪ್ರದೇಶದಲ್ಲಿ ಕೆರೆಯೊಂದಿದ್ದು ನಾಯಿಯ ಕೈಗೆ ಸಿಗದಂತೆ ಓಡುತ್ತಿದ್ದ ಭಾರತಿ ನಿಯಂತ್ರಣ ಕಳೆದುಕೊಂಡು ಅದರೊಳಗೆ ಜಾರಿ ಬಿದ್ದಿದ್ದಾಳೆ.  ನಂತರ ಮೇಲಕ್ಕೆ ಬರಲಾಗದೇ ಇಹಲೋಕ ತ್ಯಜಿಸಿದ್ದಾಳೆ.  ಕುಶಾಲನಗರ ಆಸ್ಪತ್ರೆಯಲ್ಲಿ ಬಾಲಕಿಯ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ. 

No comments

Post a Comment