ಸೂಪರ್ ಓವರ್ ನಲ್ಲಿ ಗೆಲುವು ಕಂಡ ಡೆಲ್ಲಿ:ಒಂದು ರನ್ ನಿಂದ ಶತಕ ವಂಚಿತರಾದ ಪೃಥ್ವಿ ಶಾ

No comments

ಸೂಪರ್ ಓವರ್‌ನಲ್ಲಿ ಕೋಲ್ಕತವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್
ಹೊಸದಿಲ್ಲಿ, ಮಾ.31: ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮಧ್ಯೆ ಶನಿವಾರ ಇಲ್ಲಿ ನಡೆದ ಐಪಿಎಲ್‌ನ 10ನೇ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ. ಅಂತಿಮವಾಗಿ ಸೂಪರ್ ಓವರ್‌ನಲ್ಲಿ ಡೆಲ್ಲಿ ತಂಡ ಗೆಲುವು ಸಾಧಿಸಿದೆ. ಗೆಲುವಿಗೆ 186 ರನ್ ಗುರಿ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಆಟಗಾರ ಪೃಥ್ವಿ ಶಾ(99, 55 ಎಸೆತ,12 ಬೌಂಡರಿ, 3 ಸಿಕ್ಸರ್)ಅತ್ಯುತ್ತಮ ಬ್ಯಾಟಿಂಗ್ ಸಾಹಸದಿಂದ 20 ಓವರ್ ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 185 ರನ್ ಗಳಿಸಿ ಪಂದ್ಯವನ್ನು ಟೈ ಗೊಳಿಸಿತು.
ಈ ವರ್ಷದ ಐಪಿಎಲ್‌ನಲ್ಲಿ ಅಳವಡಿಸಿದ ಮೊದಲ ಸೂಪರ್ ಓವರ್ ಇದಾಗಿದೆ.
ಡೆಲ್ಲಿ ಪರ ನಾಯಕ ಶ್ರೇಯಸ್ ಅಯ್ಯರ್ (43) ಹಾಗೂ ಶಿಖರ್ ಧವನ್(16 ರನ್) ಎರಡಂಕೆಯ ಸ್ಕೋರ್ ಗಳಿಸಿದರು. ಇದಕ್ಕೂ ಮೊದಲು ಆಲ್‌ರೌಂಡರ್ ಆ್ಯಂಡ್ರೆ ರಸೆಲ್(62,28 ಎಸೆತ)ಅಬ್ಬರದ ಆಟ ಹಾಗೂ ನಾಯಕ ದಿನೇಶ್ ಕಾರ್ತಿಕ್ ಅರ್ಧಶತಕ(50)ಸಹಾಯದಿಂದ ಕೋಲ್ಕತಾ ತಂಡ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಐಪಿಎಲ್‌ನ 10ನೇ ಪಂದ್ಯ ಗೆಲ್ಲಲು 186 ರನ್ ಗುರಿ ನೀಡಿತು.

No comments

Post a Comment