ಮಂಡ್ಯದಲ್ಲಿ ಸುಮಲತಾ ಗೆದ್ದರೆ ಅರ್ಧ ಶತಮಾನದ ದಾಖಲೆ ಉಡೀಸ್

No comments

*ಮಂಡ್ಯದಲ್ಲಿ ಸುಮಲತಾ ಗೆದ್ದರೆ:ಅರ್ಧ ಶತಮಾನದ ದಾಖಲೆ ಉಡೀಸ್...*
*ರಾಜ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಜಯಿಸಿದ್ದು ೧೯೬೭ ರಲ್ಲಿ*
*ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ ಸಕ್ಕರೆ ನಾಡಿನ ಪೊಲಿಟಿಕ್ಸ್*
: *ಕೆ‌.ಎಂ ಇಸ್ಮಾಯಿಲ್ ಕಂಡಕರೆ*
ಕೊಡಗು:ಲೋಕಸಭಾ ಚುನಾವಣೆಯು ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಮೊದಲನೇ ಹಂತದ ಚುನಾವಣೆಯು ಏಪ್ರಿಲ್ ೧೮ ಹಾಗೂ ಎರಡನೇ ಹಂತದ ಮತದಾನವು ೨೩ ಕ್ಕೆ ನಡೆಯಲಿದೆ.ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣೆಯು ಮೊದಲ ಹಂತದ ನಡೆಯಲಿದೆ.
ರಾಜ್ಯಾದ್ಯಂತ ಬಾರೀ ಕುತೂಹಲ ಕೆರಳಿಸಿರುವ "ಸಕ್ಕರೆ ನಾಡು" ಮಂಡ್ಯ ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಮೈತ್ರಿ ಅಭ್ಯರ್ಥಿಯಾಗಿ ಗೌಡರ ಕುಟುಂಬದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕಣದಲ್ಲಿದ್ದಾರೆ.
ಭಾರತರ ಜನಾತಾ ಪಕ್ಷವು ಮೈತ್ರಿ ಪಾಳಯಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಬೇಷರತ್ ಬೆಂಬಲ ಘೋಷಿಸಿದೆ.
ಇಡೀ ರಾಜ್ಯದ ಕಣ್ಣು ಮಂಡ್ಯದತ್ತವಾಲಿದೆ.ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗನನ್ನು ಸಂಸದಾನಾಗಿ ಮಾಡಲು ಪಣತೊಟ್ಟು ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ.
ಏತನ್ಮಧ್ಯೆ ಪಕ್ಷೇತರಾರಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಇಡೀ ಚಿತ್ರ ತಂಡ ಬೆನ್ನಿಗೆ ನಿಂತು ಕಾಲಿಗೆ ಚಕ್ರ ಕಟ್ಟಿದಂತೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.ಸುಮಲತಾ ಪರ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಚಾಲೆಂಜಿಗ್ ಸ್ಟಾರ್ ದರ್ಶನ್ ವಹಿಸಿದ್ದರೆ, ಇವರಿಗೆ ಸಾಥ್ ನೀಡುತ್ತಿದ್ದಾರೆ ಕೆ.ಜಿ‌.ಎಫ್‌ ಸ್ಟಾರ್ ಯಶ್.
ಅಲ್ಲದೇ ರೈತ ಸಂಘವು ಸುಮಲತಾಗೆ ಬೆಂಬಲ ಘೋಷಿಸಿದೆ.
ಮಂಡ್ಯ ಕ್ಷೇತ್ರದ ಚುನಾವಣೆ ಕಾವು  ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಪರ ವಿರೋಧ ವಾಕ್ಸಮರಗಳು ತಾರಕಕ್ಕೇರಿದೆ.
ಏತನ್ಮಧ್ಯೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಜಯಿಸಿದರೆ ೫೨ ವರ್ಷಗಳಲ್ಲಿ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಜಯಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ದಾಖಲೆ ಬರೆಯಲಿದ್ದಾರೆ.
*೧೯೬೭ರಲ್ಲಿ ಕೊನೇ ಸಂಸದ*
ಸ್ವತಂತ್ರ ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ನೋಂದಾಯಿತ ಪಕ್ಷಗಳ ಜತೆಗೆ ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದು ಜಯಿಸಿರುವ ಇತಿಹಾಸವಿದೆ.
ಆದರೆ ಕರ್ಣಾಟಕದ ಮಟ್ಟಿಗೆ ಸ್ವತಂತ್ರ ಅಭ್ಯರ್ಥಿಗಳು ಎಂದರೆ ಅಷ್ಟಕಷ್ಟೆ.
ಭಾರತದ ಸಂವಿಧಾನ ರಚನೆ ನಂತರ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ (೧೯೫೭) ಮೈಸೂರು ರಾಜ್ಯದ ಮೊದಲ ಸ್ವತಂತ್ರ ಅಭ್ಯರ್ಥಿಯಾಗಿ ಬಿಜಾಪುರ ಉತ್ತರದಿಂದ ಸುಗಂಧಿ ಮುರುಗೆಪ್ಪ ಸಿದ್ದಪ್ಪ ಜಯಿಸಿದ್ದರು.
ನಂತರ ೧೯೬೭ ರಲ್ಲಿ ನಡೆದ ಸಸಾರ್ವತ್ರಿಕ ಚುನಾವಣೆಯಲ್ಲಿ ಕೆನಾರಾ ಕ್ಷೇತ್ರದಿಂದ ದಿನಕರ ದೇಸಾಯಿ ಸಂಸದರಾಗಿದ್ದರು.
ಅಲ್ಲಿಂದೀಚೆಗೆ ರಾಜ್ಯದಲ್ಲಿ ಯಾವುದೇ ಸ್ವತಂತ್ರ ಅಭ್ಯರ್ಥಿ ಗೆದ್ದಿಲ್ಲ.
ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿದ್ದರೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪರೋಕ್ಷವಾಗಿ ಬೆನ್ನಿಗೆ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷ ಬೆಂಬಲ ಘೋಷಿಸಿದೆ.ಸುಮಲತಾ ಪರ ಬಿಜೆಪಿ ಪ್ರಚಾರಕ್ಕಿಳಿಯಲಿದೆ ಎಂದು ಸ್ವತಃ ಯಡಿಯೂರಪ್ಪರವರು ಇತ್ತೀಚೆಗೆ ಘೋಷಿಸಿದ್ದಾರೆ.
ಇನ್ನೂ ಅಂಬಿ ಮೇಲಿನ ಗೌರವದಿಂದ ಇಡೀ ಚಿತ್ರ ತಂಡವೇ ಸುಮಲತಾ ಹೆಗಲಿಗೆ ,ಹೆಗಲು ಕೊಟ್ಟು  ನಿಂತಿದ್ದಾರೆ.
ಇದೆಲ್ಲದರ ನಡುವೆ ಮಂಡ್ಯ  ಜಿಲ್ಲೆಯಲ್ಲಿ ಪ್ರಬಲವಾಗಿರುವ ತೆನೆ ಪಕ್ಷಕ್ಕೆ ಪೈಪೋಟಿ ನೀಡುವುದು ಖಚಿತವಾಗಿದೆ.
ಅನುಕಂಪದ ಅಲೆಯಲ್ಲಿ ಗೌಡರ ಕುಟುಂಬದ ಎದುರು ಅಂಬರೀಶ್ ಕುಟುಂಬ ಜಯಿಸಿದ್ದೆ ಆದರೆ, ಮೈಸೂರು ರಾಜ್ಯ ಎಂದಿದ್ದ ಹೆಸರು ಕರ್ನಾಟಕ ಎಂದು ನಾಮಕರಣವಾದ ನಂತರ ರಾಜ್ಯದಲ್ಲಿ ಜಯಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ಹೆಗ್ಗಳಿಕೆ ಸುಮಲತಾ ಅಂಬರೀಶ್ ಹೆಗಲೇರಲಿದೆ.
*ಬಾಕ್ಸ್*
*೨೦೧೪ ರಲ್ಲಿ ರಾಜ್ಯದಲ್ಲಿ ೧೯೪ ಸ್ವತಂತ್ರ ಅಭ್ಯರ್ಥಿಗಳು*
೨೦೧೪ ರಲ್ಲಿ ದೇಶಾದ್ಯಂತ ಸ್ಪರ್ಧಿಸಿದ್ದ ೩,೨೩೪ ಸ್ವತಂತ್ರ ಅಭ್ಯರ್ಥಿಗಳ ಪೈಕಿ ೩,೨೧೮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರೆ, ಜಯಿಸಿದ್ದು ಕೇವಲ ಮೂವರು. ಒಟ್ಟಾರೆ ದೇಶದಲ್ಲಿ ಚಲಾವಣೆಯಾದ ಮತಗಳ ಪೈಕಿ ಸ್ವತಂತ್ರ ಅಭ್ಯರ್ಥಿಗಳು ಪಡೆದಿದ್ದು  ಕೇವಲ ಶೇ. ೦.೪೫ , ರಾಜ್ಯದಲ್ಲಿ ೨೦೧೪ ರಲ್ಲಿ ೧೯೪ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿ ೪:೮೩ ಲಕ್ಷ  ಶೇ (೧.೫೭)
ಮತ ಗಳಿಸಿದ್ದರು.ಯಾರೊಬ್ಬರೂ ಗೆಲ್ಲಲಿಲ್ಲ.
ಆದರೆ ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತಗಳಿಂದ ಇತರೆ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
*ಬಾಕ್ಸ್*
ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರರು
ಚುನಾವಣೆ ವರ್ಷ:ರಾಜ್ಯಗಳು: 
೧೯೫೧                ೧೧.   ಜಯಿಸಿದ್ದವರು:೩೭
ವರ್ಷ:ರಾಜ್ಯ:ಜಯಿಸಿದವರು
೧೯೫೭: ೧೧: ಜಯಿಸಿದವರು:೪೨
ವರ್ಷ: ರಾಜ್ಯ:ಜಯಿಸಿದವರು
೧೯೬೨:೦೭:  ೨೦
೧೯೬೭:೧೬: ೩೫
೧೯೭೧:೦೯:೧೪
೧೯೭೭:೦೯:೦೯
೧೯೮೦;೦೦:೦೯
೧೯೮೪:೦೫:೦೫
೧೯೮೯:೦೦-೧೨
೧೯೯೧:೦೧-೦೧
೧೯೯೬:೦೮-೦೯
೧೯೯೯;.೦೬:೦೬
೨೦೦೪:೦೫:೦೫
೨೦೦೯:೦೭:೦೯
೨೦೧೪:೨:೦೩*ಮಂಡ್ಯದಲ್ಲಿ ಸುಮಲತಾ ಗೆದ್ದರೆ:ಅರ್ಧ ಶತಮಾನದ ದಾಖಲೆ ಉಡೀಸ್...*
*ರಾಜ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಜಯಿಸಿದ್ದು ೧೯೬೭ ರಲ್ಲಿ*
*ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ ಸಕ್ಕರೆ ನಾಡಿನ ಪೊಲಿಟಿಕ್ಸ್*
: *ಕೆ‌.ಎಂ ಇಸ್ಮಾಯಿಲ್ ಕಂಡಕರೆ* (ಕೊಡಗು*)
ಕೊಡಗು:ಲೋಕಸಭಾ ಚುನಾವಣೆಯು ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಮೊದಲನೇ ಹಂತದ ಚುನಾವಣೆಯು ಏಪ್ರಿಲ್ ೧೮ ಹಾಗೂ ಎರಡನೇ ಹಂತದ ಮತದಾನವು ೨೩ ಕ್ಕೆ ನಡೆಯಲಿದೆ.ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣೆಯು ಮೊದಲ ಹಂರದ ನಡೆಯಲಿದೆ.
ರಾಜ್ಯಾದ್ಯಂತ ಬಾರೀ ಕುತೂಹಲ ಕೆರಳಿಸಿರುವ "ಸಕ್ಕರೆ ನಾಡು" ಮಂಡ್ಯ ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಮೈತ್ರಿ ಅಭ್ಯರ್ಥಿಯಾಗಿ ಗೌಡರ ಕುಟುಂಬದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕಣದಲ್ಲಿದ್ದಾರೆ.
ಭಾರತರ ಜನಾತಾ ಪಕ್ಷವು ಮೈತ್ರಿ ಪಾಳಯಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಬೇಷರತ್ ಬೆಂಬಲ ಘೋಷಿಸಿದೆ.
ಇಡೀ ರಾಜ್ಯದ ಕಣ್ಣು ಮಂಡ್ಯದತ್ತವಾಲಿದೆ.ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗನನ್ನು ಸಂಸದಾನಾಗಿ ಮಾಡಲು ಪಣತೊಟ್ಟು ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ.
ಏತನ್ಮಧ್ಯೆ ಪಕ್ಷೇತರಾರಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಇಡೀ ಚಿತ್ರ ತಂಡ ಬೆನ್ನಿಗೆ ನಿಂತು ಕಾಲಿಗೆ ಚಕ್ರ ಕಟ್ಟಿದಂತೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.ಸುಮಲತಾ ಪರ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಚಾಲೆಂಜಿಗ್ ಸ್ಟಾರ್ ದರ್ಶನ್ ವಹಿಸಿದ್ದರೆ, ಇವರಿಗೆ ಸಾಥ್ ನೀಡುತ್ತಿದ್ದಾರೆ ಕೆ.ಜಿ‌.ಎಫ್‌ ಸ್ಟಾರ್ ಯಶ್.
ಅಲ್ಲದೇ ರೈತ ಸಂಘವು ಸುಮಲತಾಗೆ ಬೆಂಬಲ ಘೋಷಿಸಿದೆ.
ಮಂಡ್ಯ ಕ್ಷೇತ್ರದ ಚುನಾವಣೆ ಕಾವು  ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಪರ ವಿರೋಧ ವಾಕ್ಸಮರಗಳು ತಾರಕಕ್ಕೇರಿದೆ.
ಏತನ್ಮಧ್ಯೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಜಯಿಸಿದರೆ ೫೨ ವರ್ಷಗಳಲ್ಲಿ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಜಯಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ದಾಖಲೆ ಬರೆಯಲಿದ್ದಾರೆ.
*೧೯೬೭ರಲ್ಲಿ ಕೊನೇ ಸಂಸದ*
ಸ್ವತಂತ್ರ ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ನೋಂದಾಯಿತ ಪಕ್ಷಗಳ ಜತೆಗೆ ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದು ಜಯಿಸಿರುವ ಇತಿಹಾಸವಿದೆ.
ಆದರೆ ಕರ್ಣಾಟಕದ ಮಟ್ಟಿಗೆ ಸ್ವತಂತ್ರ ಅಭ್ಯರ್ಥಿಗಳು ಎಂದರೆ ಅಷ್ಟಕಷ್ಟೆ.
ಭಾರತದ ಸಂವಿಧಾನ ರಚನೆ ನಂತರ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ (೧೯೫೭) ಮೈಸೂರು ರಾಜ್ಯದ ಮೊದಲ ಸ್ವತಂತ್ರ ಅಭ್ಯರ್ಥಿಯಾಗಿ ಬಿಜಾಪುರ ಉತ್ತರದಿಂದ ಸುಗಂಧಿ ಮುರುಗೆಪ್ಪ ಸಿದ್ದಪ್ಪ ಜಯಿಸಿದ್ದರು.
ನಂತರ ೧೯೬೭ ರಲ್ಲಿ ನಡೆದ ಸಸಾರ್ವತ್ರಿಕ ಚುನಾವಣೆಯಲ್ಲಿ ಕೆನಾರಾ ಕ್ಷೇತ್ರದಿಂದ ದಿನಕರ ದೇಸಾಯಿ ಸಂಸದರಾಗಿದ್ದರು.
ಅಲ್ಲಿಂದೀಚೆಗೆ ರಾಜ್ಯದಲ್ಲಿ ಯಾವುದೇ ಸ್ವತಂತ್ರ ಅಭ್ಯರ್ಥಿ ಗೆದ್ದಿಲ್ಲ.
ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿದ್ದರೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪರೋಕ್ಷವಾಗಿ ಬೆನ್ನಿಗೆ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷ ಬೆಂಬಲ ಘೋಷಿಸಿದೆ.ಸುಮಲತಾ ಪರ ಬಿಜೆಪಿ ಪ್ರಚಾರಕ್ಕಿಳಿಯಲಿದೆ ಎಂದು ಸ್ವತಃ ಯಡಿಯೂರಪ್ಪರವರು ಇತ್ತೀಚೆಗೆ ಘೋಷಿಸಿದ್ದಾರೆ.
ಇನ್ನೂ ಅಂಬಿ ಮೇಲಿನ ಗೌರವದಿಂದ ಇಡೀ ಚಿತ್ರ ತಂಡವೇ ಸುಮಲತಾ ಹೆಗಲಿಗೆ ,ಹೆಗಲು ಕೊಟ್ಟು  ನಿಂತಿದ್ದಾರೆ.
ಇದೆಲ್ಲದರ ನಡುವೆ ಮಂಡ್ಯ  ಜಿಲ್ಲೆಯಲ್ಲಿ ಪ್ರಬಲವಾಗಿರುವ ತೆನೆ ಪಕ್ಷಕ್ಕೆ ಪೈಪೋಟಿ ನೀಡುವುದು ಖಚಿತವಾಗಿದೆ.
ಅನುಕಂಪದ ಅಲೆಯಲ್ಲಿ ಗೌಡರ ಕುಟುಂಬದ ಎದುರು ಅಂಬರೀಶ್ ಕುಟುಂಬ ಜಯಿಸಿದ್ದೆ ಆದರೆ, ಮೈಸೂರು ರಾಜ್ಯ ಎಂದಿದ್ದ ಹೆಸರು ಕರ್ನಾಟಕ ಎಂದು ನಾಮಕರಣವಾದ ನಂತರ ರಾಜ್ಯದಲ್ಲಿ ಜಯಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ಹೆಗ್ಗಳಿಕೆ ಸುಮಲತಾ ಅಂಬರೀಶ್ ಹೆಗಲೇರಲಿದೆ.
*ಬಾಕ್ಸ್*
*೨೦೧೪ ರಲ್ಲಿ ರಾಜ್ಯದಲ್ಲಿ ೧೯೪ ಸ್ವತಂತ್ರ ಅಭ್ಯರ್ಥಿಗಳು*
೨೦೧೪ ರಲ್ಲಿ ದೇಶಾದ್ಯಂತ ಸ್ಪರ್ಧಿಸಿದ್ದ ೩,೨೩೪ ಸ್ವತಂತ್ರ ಅಭ್ಯರ್ಥಿಗಳ ಪೈಕಿ ೩,೨೧೮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರೆ, ಜಯಿಸಿದ್ದು ಕೇವಲ ಮೂವರು. ಒಟ್ಟಾರೆ ದೇಶದಲ್ಲಿ ಚಲಾವಣೆಯಾದ ಮತಗಳ ಪೈಕಿ ಸ್ವತಂತ್ರ ಅಭ್ಯರ್ಥಿಗಳು ಪಡೆದಿದ್ದು  ಕೇವಲ ಶೇ. ೦.೪೫ , ರಾಜ್ಯದಲ್ಲಿ ೨೦೧೪ ರಲ್ಲಿ ೧೯೪ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿ ೪:೮೩ ಲಕ್ಷ  ಶೇ (೧.೫೭)
ಮತ ಗಳಿಸಿದ್ದರು.ಯಾರೊಬ್ಬರೂ ಗೆಲ್ಲಲಿಲ್ಲ.
ಆದರೆ ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತಗಳಿಂದ ಇತರೆ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
*ಬಾಕ್ಸ್*
ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರರು
ಚುನಾವಣೆ ವರ್ಷ:ರಾಜ್ಯಗಳು: 
೧೯೫೧                ೧೧.   ಜಯಿಸಿದ್ದವರು:೩೭
ವರ್ಷ:ರಾಜ್ಯ:ಜಯಿಸಿದವರು
೧೯೫೭: ೧೧: ಜಯಿಸಿದವರು:೪೨
ವರ್ಷ: ರಾಜ್ಯ:ಜಯಿಸಿದವರು
೧೯೬೨:೦೭:  ೨೦
೧೯೬೭:೧೬: ೩೫
೧೯೭೧:೦೯:೧೪
೧೯೭೭:೦೯:೦೯
೧೯೮೦;೦೦:೦೯
೧೯೮೪:೦೫:೦೫
೧೯೮೯:೦೦-೧೨
೧೯೯೧:೦೧-೦೧
೧೯೯೬:೦೮-೦೯
೧೯೯೯;.೦೬:೦೬
೨೦೦೪:೦೫:೦೫
೨೦೦೯:೦೭:೦೯
೨೦೧೪:೨:೦೩

No comments

Post a Comment