ಇಂದು ಕಾಂಗ್ರೆಸ್​ ಸಂಸದೀಯ ಸದಸ್ಯರ ಸಭೆ: ಯಾರಿಗೆ ಒಲಿಯಲಿದೆ ಅಧ್ಯಕ್ಷ ಗಾದಿ ?


ನವದೆಹಲಿ: ಲೋಕಸಭಾ ಚುನಾವಣೆ ಪಲಿತಾಂಶದ ನಂತರ ಮೊದಲ ಬಾರಿಗೆ ಕಾಂಗ್ರೆಸ್​ ಸಂಸದೀಯ ಸದಸ್ಯರ ಸಭೆ ಇಂದು ನವದೆಹಲಿಯಲ್ಲಿ ನಡೆಯಲಿದೆ. ರಾಹುಲ್​ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರನ್ನ ಸಂಸದೀಯ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ಕಳೆದ ವಾರವಷ್ಟೇ ನಡೆದ ಕಾಂಗ್ರೆಸ್​ ಕಾರ್ಯಕಾರಿಣಿಯಲ್ಲಿ ರಾಹುಲ್​ ​ಗಾಂಧಿ ಎಐಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಆದ್ರೆ ರಾಹುಲ್​ ಅವರ ನಿರ್ಧಾರವನ್ನ ತಿರಸ್ಕರಿಸಿರುವ ಕೈ ನಾಯಕರು, ತಾವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯ ಬೇಕು ಎಂದು ಮನವಿ ಮಾಡಿದ್ದಾರೆ.
543ರಲ್ಲಿ 52 ಸ್ಥಾನವನ್ನ ಗೆದ್ದಿರುವ ಕಾಂಗ್ರೆಸ್​ ಪಾರ್ಟಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಇನ್ನೂ 3 ಸ್ಥಾನಗಳ ಕೊರತೆಯನ್ನ ಎದುರಿಸುತ್ತಿದೆ. ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಅವರೇ ಸಂಸದೀಯ ಪಕ್ಷದ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಕಂಡಕರೆಯಲ್ಲಿ ಎಸ್.ವೈ.ಎಸ್ ವತಿಯಿಂದ ಇಫ್ತಾರ್ ಕೂಟ. 


ಚೆಟ್ಟಳ್ಳಿ: ಸಮೀಪದ ಕಂಡಕರೆಯ ಸುನ್ನ ಯುವಜನ ಸಂಘ ಇವರ ವತಿಯಿಂದ ಹಯಾತುಲ್ ಇಸ್ಲಾಂ ಮದರಸದಲ್ಲಿ ಬೃಹತ್ ಇಫ್ತಾರ್ ಕೂಟ, ಹಾಗೂ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನೇತೃತ್ವವನ್ನು ಮಹಲ್ ಖತೀಬರಾದ ಮುಸ್ತಫಾ ಸಖಾಫಿ ವಹಿಸಿದ್ದರು. ಈ ಸಂದರ್ಭ ಎಸ್.ವೈ.ಎಸ್ ಯೂನಿಟ್ ಅಧ್ಯಕ್ಷರಾದ ಹನೀಫ ಮುಸ್ಲಿಯಾರ್, ರಜಾಕ್, ಮಹಲ್ ಕಾರ್ಯದರ್ಶಿ ಗಫೂರ್ ಸಾಹೇಬ್, ಗ್ರಾಮ ಪಂಚಾಯತಿ ಸದಸ್ಯ ರಫಿ ಇದ್ದರು ‌.

ಕುಶಾಲನಗರದ ಹಿರಿಯ ಪತ್ರಕರ್ತನಿಂದ ಹಣದ ಬೇಡಿಕೆ, ಕಿರುಕುಳ: ಕ್ರಮಕ್ಕಾಗಿ ಎಸ್.ಪಿ, ಡಿ.ಸಿ ಸೇರಿದಂತೆ ನಾನಾ ಇಲಾಖೆಗೆ ದೂರು


 ಕುಶಾಲನಗರ,ಮೇ೩೧: ಕುಶಾಲನಗರದ ಹಿರಿಯ ಪತ್ರಕರ್ತರೊಬ್ಬರು ಹಣ ಹಣದ ಬೇಡಿಕೆಯಿಡುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಕೊಡಗು ಜಿಲ್ಲಾಧಿಕಾರಿಗಳು ಸೇರಿದಂತೆ ನಾನಾ ಇಲಾಖೆಗಳಿಗೆ ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಾಲೀಕರಾದ ಅಬ್ದುಲ್ ಸಲಾಂ ರಾವತರ್ ಅವರಿಂದ ದೂರು ನೀಡಲಾಗಿದೆ. ಈ ಕುರಿತು ಕುಶಾಲನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪತ್ರಿಕೆಯ ಹೆಸರನ್ನೇಳಿ ಹಣದ ಬೇಡಿಕೆಯಿಡುತ್ತಿದ್ದು, ಆಗಾಗ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಪತ್ರಕರ್ತನ ಹಣದ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ನಮ್ಮ ಸಂಸ್ಥೆಯ ವಿರುದ್ಧ ಪತ್ರಿಕೆಯಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. ನಮ್ಮ ಜಾಗಕ್ಕೆ ನಮ್ಮ ಅನುಮತಿ ಪಡೆಯದೇ ಫೋಟೋ ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಹಾಕುತ್ತಿದ್ದಾರೆ. ಕಾನೂನಿಗೆ ತಲೆ ಬಾಗಿ ನಿಯಮಾನುಸಾರವಾರಿ ಸಂಸ್ಥೆಯನ್ನು ನಡೆಸುತ್ತಿರುವ ಬಗ್ಗೆ ಎಲ್ಲಾ ದಾಖಲೆಗಳು ಇದೆ. ಸಂಬಂಧಪಟ್ಟ ಗ್ರಾಮ.ಪಂ, ತಹಶಿಲ್ದಾರರಿಂದ ದಾಖಲಾತಿಗಳು ಸರಿಯಾಗಿರುವ ಬಗ್ಗೆ ನೀಡಿರುವ ಪತ್ರ ಕೂಡಾ ಇದೆ. ಆದರೂ ಪತ್ರಿಕೆಯಲ್ಲಿ ಸುಳ್ಳು ವರದಿಯನ್ನು ಬಿತ್ತರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಪ್ರಧಾನ ಸಂಪಾದಕರನ್ನು ಭೇಟಿ ಮಾಡಿ ದೂರು ನೀಡಲಾಗಿದೆ. ಈ ಬಗ್ಗೆ ಪತ್ರಕರ್ತನ ವಿರುದ್ಧ ಮಾನನಷ್ಟ ಮುಕದ್ದಮೆಯನ್ನು ಹೂಡಲಾಗುವುದು ಎಂದರು. ಪ್ರತೀ ತಿಂಗಳು ಕಾವೇರಿ ನದಿ ಆರತಿ ಬೆಳಗುವ ಕಾರ್ಯಕ್ರಮಕ್ಕೆ ಹಣ ನೀಡಬೇಕು ಎಂದು ಡಿಮಾಂಡ್ ಮಾಡುತ್ತಿದ್ದು, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯನ್ನು ಹಣಕ್ಕಾಗಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಕುರಿತು ಎಸ್.ಪಿ, ಡಿ.ಸಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಕ್ಲಬ್, ಕುಶಾಲನಗರ ಪತ್ರಕರ್ತರ ಸಂಘ, ಕಾವೇರಿ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ ಸೇರಿದಂತೆ ಹಲವು ಇಲಾಖೆಗಳಿಗೆ ಕ್ರಮಕ್ಕಾಗಿ ಆಗ್ರಹಿಸಿ ದೂರು ನೀಡಲಾಗಿದೆ. ಪತ್ರಕರ್ತ ಹಣದ ಬೇಡಿಕೆ ಇಟ್ಟಿರುವುದಕ್ಕೆ ನನ್ನ ಬಳಿ ದಾಖಲೆಗಳಿದ್ದು, ಇವರ ವಿರುದ್ಧ ಕಾನೂನು ಸಮರ ಸಾರಲು ಮುಂದಾಗಿದ್ದೇನೆ ಎಂದರು.

ತಂಬ್ರಾನ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ: ಬ್ಲೂ ಸ್ಟಾರ್ ವಿರಾಜಪೇಟೆ ಚಾಂಪಿಯನ್ 


ಚೆಟ್ಟಳ್ಳಿ: ವಿರಾಜಪೇಟೆ ಸಮೀಪದ ಕರಡದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಂಬ್ರಾನ್ ಯೂತ್ ಫ್ರೆಂಡ್ಸ್ ಕ್ರಿಕೆಟರ್ಸ್ ಕರಡ ಇವರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸೂಪರ್ ೯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾದಲ್ಲಿ ವಿರಾಜಪೇಟೆ ತಂಡದ ಬ್ಲೂ ಸ್ಟಾರ್ ತಂಡವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ದ್ವಿತೀಯ ಸ್ಥಾನವನ್ನು ರಾಂಕಿಂಗ್ ಸ್ಟಾರ್ ಕುಂಜಿ , ತೃತೀಯ ಸ್ಥಾನವನ್ನು ಭಗವತಿ ಫ್ರೆಂಡ್ಸ್ ಕದನೂರು, ಹಾಗೂ ನಾಲ್ಕನೇ ಸ್ಥಾನವನ್ನು ಆದ್ಯ ಕ್ರಿಕೆಟರ್ಸ್ ಕರಡ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ಒಟ್ಟು ೨೭ ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಶಿಸ್ತಿನ ತಂಡದ ಪ್ರಶಸ್ತಿಯನ್ನು ಬ್ಲೂ ಸ್ಟಾರ್ ತಿತಿಮತಿ, ಬೆಸ್ಟ್ ಬೌಲರ್ ಆದ್ಯ ಫ್ರೆಂಡ್ಸ್ ಕರಡ ತಂಡದ ಮಾಮು, ಹಾಗೂ ಬೆಸ್ಟ್ ಬ್ಯಾಟ್ಸ್ ಮೆನ್ ಪ್ರಶಸ್ತಿಯನ್ನು ಬ್ಲೂ ಸ್ಟಾರ್ ವಿರಾಜಪೇಟೆ ತಂಡದ ಅಜಯ್ ಪಡೆದುಕೊಂಡರು. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ತಂಬ್ರಾನ್ ಯೂತ್ ಫ್ರೆಂಡ್ಸ್ ಅಧ್ಯಕ್ಷರಾದ ಧನಂಜಯ, ಸಂಜು, ಅಣ್ಣಪ್ಪ, ವರುಣ, ಲೋಕೇಶ್, ಮುದ್ದಪ್ಪ ಇದ್ದರು. ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ಕಡಂಗದ ಹರ್ಷಾದ್ ಮಾಡಿದರು.

ವಿರಾಜಪೇಟೆ: ಮನೆಗೆ ಮರಬಿದ್ದು ಗೃಹಿಣಿ ಮೃತ್ಯು 



ಕೊಡಗು, ಮೇ 31: ಭಾರೀ ಗಾಳಿಮಳೆಗೆ ಬೃಹತ್ ಮರವೊಂದು ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪದ ತಾರಿಕಟ್ಟೆ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಮೃತರನ್ನು ತಾರಿಕಟ್ಟೆಯ ನೌಶಾದ್ ಎಂಬವರ ಪತ್ನಿ ರೈಹಾನತ್(23) ಎಂದು ಗುರುತಿಸಲಾಗಿದೆ. ಪತಿ ನೌಶಾದ್‌ರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರಾಜಪೇಟೆಯ ಬಹುತೇಕ ಕಡೆಗಳಲ್ಲಿ ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಭಾರೀ ಗಾಳಿಮಳೆ ಸುರಿದಿದೆ. ಈ ವೇಳೆ ಬೃಹತ್ ಮರವೊಂದು ನೌಶಾದ್ ಅವರ ಮನೆ ಮೇಲೆ ಉರುಳಿಬಿದ್ದಿದೆ. ಈ ವೇಳೆ ಮನೆಯ ಕೋಣೆಯೊಳಗೆ ಮಲಗಿದ್ದ ನೌಶಾದ್ ದಂಪತಿಯ ಮೇಲೆ ಛಾವಣಿ ಕುಸಿದುಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ರೈಹಾನತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನೌಶಾದ್ ಅವರಿಗೂ ಗಂಭೀರ ಗಾಯಗಳಾಗಿವೆ. ನೌಶಾದ್ ಅವರ ಎರಡು ವರ್ಷದ ಪುತ್ರ ಹಾಗೂ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಐಸಿಸಿ ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ 311 ರನ್


ಲಂಡನ್, ಮೇ 30: ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧ ಗುರುವಾರ ನಡೆದ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 311 ರನ್ ಗಳಿಸಿದೆ. ಟಾಸ್ ಜಯಿಸಿದ ದ.ಆಫ್ರಿಕದ ನಾಯಕ ಎಫ್‌ಡು ಪ್ಲೆಸಿಸ್ ಇಂಗ್ಲೆಂಡ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಬೆನ್‌ಸ್ಟೋಕ್ಸ್(89), ಜೇಸನ್ ರಾಯ್(54), ಇಯಾನ್ ಮೊರ್ಗನ್(57)ಹಾಗೂ ಜೋ ರೂಟ್(51) ಸಂಘಟಿತ ಪ್ರದರ್ಶನದಿಂದ ಇಂಗ್ಲೆಂಡ್ ತಂಡ ದ.ಆಫ್ರಿಕದ ಗೆಲುವಿಗೆ ಸ್ಪರ್ಧಾತ್ಮಕ ಗುರಿ ನೀಡಿತು. ದಕ್ಷಿಣ ಆಫ್ರಿಕದ ಪರ ವೇಗದ

ಬೌಲರ್ ಲುಂಗಿ ಗಿಡಿ(3-66) ಯಶಸ್ವಿ ಬೌಲರ್ ಎನಿಸಿಕೊಂಡರೆ, ಇಮ್ರಾನ್ ತಾಹಿರ್(2-61) ಹಾಗೂ ಕಾಗಿಸೊ ರಬಾಡ(2-66)ತಲಾ 2 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕ ಮೊದಲ ಓವರ್‌ನ 2ನೇ ಎಸೆತದಲ್ಲಿ ಆರಂಭಿಕ ಆಟಗಾರ ಬೈರ್‌ಸ್ಟೋವ್(0) ವಿಕೆಟನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 2ನೇ ವಿಕೆಟ್‌ಗೆ 106 ರನ್ ಜೊತೆಯಾಟ ನಡೆಸಿದ ರಾಯ್ ಹಾಗೂ ರೂಟ್ ತಂಡವನ್ನು ಆಧರಿಸಿದರು. ಸ್ಟೋಕ್ಸ್(89, 79 ಎಸೆತ, 9 ಬೌಂಡರಿ) ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು.

ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ


ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿರುವ ನರೇಂದ್ರ ಮೋದಿ ಅವರು ಗುರುವಾರ ಸತತ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ

ಸಮಾರಂಭದಲ್ಲಿ ಎನ್ ಡಿಎ ಸಂಸದೀಯ ಮಂಡಳಿಯ ನಾಯಕ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಕಳೆದ ಬಾರಿ ಈಶ್ವರನ ಹೆಸರನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ನರೇಂದ್ರ ಮೋದಿ ಅವರು ಈ ಬಾರಿಯೂ ಈಶ್ವರನ ಹೆಸರಿನಲ್ಲಿ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರೈಲ್ವೇ ಟಿಕೆಟ್ ಬುಕಿಂಗ್ ವೈಬ್​ಸೈಟ್​ನಲ್ಲಿ ಅಸಭ್ಯ ಜಾಹೀರಾತು: ಸಾರ್ವಜನಿಕರ ಆಕ್ರೋಶ


ಬೆಂಗಳೂರು: ರೈಲ್ವೇ ಟಿಕೆಟ್ ಬುಕಿಂಗ್ ವೈಬ್​ಸೈಟ್ ಆ್ಯಪ್​ನಲ್ಲಿ ಅಸಭ್ಯ ಜಾಹಿರಾತು ಪ್ರಕಟವಾಗುತ್ತಿದ್ದು, ರೈಲ್ವೇ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ರೈಲ್ವೇ ‌ಟಿಕೆಟ್ ಬುಕ್ ಮಾಡೋಕೆ ವೈಬ್​ಸೈಟ್‍ಗೆ ಹೋದರೆ ಅಲ್ಲಿ ಅಶ್ಲೀಲ, ಅಸಭ್ಯ ಜಾಹಿರಾತುಗಳದ್ದೇ ಕಾರುಬಾರು‌ ಜಾಸ್ತಿಯಾಗಿದೆ. ಹೀಗಾಗಿ‌ ಸಾರ್ವಜನಿಕರು ರೈಲ್ವೇ ಇಲಾಖೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ವೆಬ್​ಸೈಟ್​ಗಳಲ್ಲಿ ಈ ರೀತಿ ಜಾಹಿರಾತು ಪ್ರಕಟವಾಗುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ವಿಚಾರ ಸಂಬಂಧಿಸಿದಂತೆ ರೈಲ್ವೇ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ, ಅಶ್ಲೀಲ ಜಾಹೀರಾತುಗಳನ್ನ ಪ್ರಕಟ ಮಾಡಿರುವುದು ಗೂಗಲ್, ಹಾಗಾಗಿ ಅವರೆ ಇದಕ್ಕೆ ಹೊಣೆ. ಹಾಗೆಯೇ ಇದರ ಜವಾಬ್ದಾರಿಯನ್ನ ಕೇಂದ್ರ ರೈಲ್ವೇ ಇಲಾಖೆ ವಹಿಸಬೇಕು ಎಂದು ಹೇಳಿದ್ದಾರೆ.

ಕರ್ನಾಟಕದಿಂದ ಮೋದಿ ಸಂಪುಟ ಸೇರುವ ಸಂಸದರ ಪಟ್ಟಿ ಅಂತಿಮ


ಬೆಂಗಳೂರು, ಮೇ 30 : 2019ರ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು ಬಿಜೆಪಿ ಪ್ರಚಂಡ ಬಹುಮತ ಸಾಧಿಸಿದೆ. ನರೇಂದ್ರ ಮೋದಿ ಅವರು ಗುರುವಾರ ಸಂಜೆ 2ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ 25ರಲ್ಲಿ ಜಯಗಳಿಸಿದೆ. ನರೇಂದ್ರ ಮೋದಿ ಅವರ ಹೊಸ ಸಚಿವ ಸಂಪುಟದಲ್ಲಿ ರಾಜ್ಯದ ನಾಲ್ವರು ಸಂಸದರಿಗೆ ಅವಕಾಶ ನೀಡಲಾಗುತ್ತದೆ. ಎಲ್ಲರೂ ಇಂದು ನರೇಂದ್ರ ಮೋದಿ ಅವರ ಜೊತೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತ ಕೋಟಾದಡಿ ರಾಜ್ಯದ ಮೂವರು ಸಂಸದರನ್ನು ನರೇಂದ್ರ ಮೋದಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ.
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಕೋಟಾದಡಿ ಸಂಪುಟ ಸೇರಲಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮೂವರು ಸಂಸದರಿಗೆ ಕರೆ ಮಾಡಿ ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡುವಂತೆ ಸೂಚನೆ ನೀಡಿದ್ದಾರೆ. ಅಮಿತ್ ಕರೆ ಬಂದಿರುವುದನ್ನು ಸಂಸದರು ಖಚಿತಪಡಿಸಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಈಗಾಗಲೇ ದೆಹಲಿ ತಲುಪಿದ್ದು, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರು ಉತ್ತರ 
ಡಿ.ವಿ.ಸದಾನಂದ ಗೌಡ
ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಲಿದ್ದಾರೆ. ಒಕ್ಕಲಿಗ ಕೋಟಾದಡಿ ಸದಾನಂದ ಗೌಡರನ್ನು ಆಯ್ಕೆ ಮಾಡಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಸದಾನಂದ ಗೌಡರು 824500 ಮತಗಳನ್ನು ಪಡೆದು 147518 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಬೆಳಗಾವಿ ಕ್ಷೇತ್ರ 
ಸುರೇಶ್ ಅಂಗಡಿ
ಬೆಳಗಾವಿ ಕ್ಷೇತ್ರದ ಸಂಸದ ಸುರೇಶ್ ಅಂಗಡಿ ಅವರು ಲಿಂಗಾಯತ ಕೋಟಾದಡಿ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಲಿದ್ದಾರೆ. ಇಂದು ಸಂಜೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರು 761991 ಮತಗಳನ್ನು ಪಡೆದು 391304 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ
ಧಾರವಾಡ ಕ್ಷೇತ್ರ 
ಪ್ರಹ್ಲಾದ್ ಜೋಶಿ
ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಅವರು ಬ್ರಾಹ್ಮಣ ಕೋಟಾದಡಿ ನರೇಂದ್ರ ಮೋದಿ ಸಂಪುಟ ಸೇರುತ್ತಿದ್ದಾರೆ. ಇಂದು ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿ ಅವರು 684837 ಮತಗಳನ್ನು ಪಡೆದು 205072 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಾಜ್ಯಸಭಾ ಸದಸ್ಯರು 
ನಿರ್ಮಲಾ ಸೀತಾರಾಮನ್
ರಾಜ್ಯಸಭಾ ಸದಸ್ಯರಾದ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ಸಂಪುಟ ಸೇರುತ್ತಿದ್ದಾರೆ. ಕರ್ನಾಟಕ ವಿಧಾನಸಭೆಯಿಂದ ಅವರು ರಾಜ್ಯಸಭಾ ಸದಸ್ಯರಾಗಿದ್ದು, ಕರ್ನಾಟಕ ಕೋಟಾದಡಿ ಸಚಿವರಾಗುತ್ತಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ಮೋದಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಅವರಿಗೆ ಯಾವ ಖಾತೆ ಸಿಗಲಿದೆ? ಎಂದು ಕಾದು ನೋಡಬೇಕಿದೆ.
ಧನ್ಯವಾದ ತಿಳಿಸಿದ ಸಂಸದರು 
ಸುರೇಶ್ ಅಂಗಡಿ ಟ್ವೀಟ್
ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿರುವುದಕ್ಕೆ ಸುರೇಶ್ ಅಂಗಡಿ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
ದೇಶ ಕಂಡ ಹೆಮ್ಮೆಯ ನಾಯಕರಾದ @narendramodi ಸಂಪುಟದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ BJP ರಾಷ್ಟ್ರೀಯ ಅಧ್ಯಕ್ಷರಾದ @AmitShah & ರಾಜ್ಯಾಧ್ಯಕ್ಷರಾದ @BSYBJP ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

ನನ್ನ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು & ಬೆಳಗಾವಿ ಲೋಕಸಭಾ ಕ್ಷೇತ್ರದ ಸಮಸ್ತ ಮತ ಬಾಂಧವರಿಗೆ ವಂದನೆಗಳು@BJP4Karnataka

ಬ್ಲಡ್ ಡೋನರ್ಸ್ ಮಂಗಳೂರು(ರಿ)ತಂಡದಿಂದ ರಕ್ತದಾನಕ್ಕಾಗಿ ಮನವಿ

ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯಿಂದ ರಕ್ತದಾನಕ್ಕಾಗಿ ವಿನಂತಿ


ಮಂಗಳೂರು ಮೇ 30
ಮಂಗಳೂರಿನ ಆಸ್ಪತ್ರೆಗಳಲ್ಲಿ ಹಲವು  ರೋಗಿಗಳ ಶಸ್ತ್ರ ಚಿಕಿತ್ಸೆ ಹಾಗು ಇತರ ಸಮಸ್ಯೆಗಳು  ರಕ್ತದ ಕೊರತೆಯ ಕಾರಣದಿಂದ  ಚಿಕಿತ್ಸೆ ಸ್ಥಗಿತಗೊಂಡಿದೆ.
ಕೆಲವು ರೋಗಿಗಳ ಆರೋಗ್ಯದ ಸ್ಥಿತಿ ತುಂಬಾ ಗಂಭೀರವಾಗಿದೆ. ಮಂಗಳೂರಿನ ಪ್ರಮುಖ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ  ಕೊರತೆಯಿಂದ ರೋಗಿಗಳ ಸಂಖ್ಯೆ ಹೆಚ್ಚಿದೆ.

ನಮ್ಮ ಸಂಸ್ಥೆಯ ಸದಸ್ಯರು ಮತ್ತು ಇತರ ಸಾಮಾಜಿಕ ಸಂಘಟನೆಗಳ ಸದಸ್ಯರು ತುರ್ತು ಸಂದರ್ಭಗಳಲ್ಲಿ ಆದಷ್ಟು  ಸ್ವಲ್ಪ ಸಮಯ ಮೀಸಲಿಟ್ಟು  ರಕ್ತದಾನ ಮಾಡಬೇಕಾಗಿದೆ, ರಕ್ತದಾನ ಮಾಡಲು ಎಲ್ಲಾ ಜಾತಿಯವರು ಸೌಹಾರ್ದ ಯುತವಾಗಿ  ರಕ್ತ ದಾನ ಮಾಡಲು ಮುಂದೆ ಬಂದರೆ ರಕ್ತದ ಅವಶ್ಯವಿರುವ ರಿಗೆ ಅಗತ್ಯ ಸಮಯದಲ್ಲಿ ರಕ್ತ ಪೂರೈಕೆ ಮಾಡಬಹುದು. ಎಲ್ಲಾ ಸದಸ್ಯರು ಮತ್ತು ಸಾಮಾಜಿಕ ಸಂಘಟನೆಯ ಸದಸ್ಯರು ತಮಗೆ ಅಗತ್ಯವಿದ್ದಾಗ ಮಾತ್ರ ಜೀವದಾನಿಗಳಾಗದೇ ತಮಗೆ ಅಗತ್ಯ ವಿಲ್ಲದ ಸಂಧರ್ಭಗಳಲ್ಲಿ ಕೂಡ ಜೀವಧಾನಿಗಳಾಗಿ  ಸಹಕರಿಸಬೇಕು ಎಂದು ವಿನಂತಿಸುತ್ತಿದ್ದೇವೆ.

ರಕ್ತ ದಾನ ಮಾಡಲು ಬಯಸುವವರು ಸಂಪರ್ಕಿಸಿ

ಸಿದ್ದೀಕ್ ಮಂಜೇಶ್ವರ
📞+919845707090

ಮುನೀರ್ ಚೆಂಬುಗುಡ್ಡೆ
📞+918050934494 

ಫಾರೂಕ್ ಬಿಗ್ ಗ್ಯಾರೇಜ್
📞+919008334786

ಫಯಾಝ್ ಮಾಡೂರು
📞+918867777771

ದಾವೂದ್ ಬಜಾಲ್
📞+966533163173
📞+919108582527
           

 *www.blooddonorsmangaluru.org*

ಆಂಧ್ರಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಜಗನ್​​ಮೋಹನ್ ರೆಡ್ಡಿ ಪದಗ್ರಹಣ


ವಿಜಯವಾಡ: ಅಭೂತಪೂರ್ವ ವಿಜಯ ಸಾಧಿಸಿದ ವೈಎಸ್​​ಆರ್​ ಕಾಂಗ್ರೆಸ್ ಪಕ್ಷದ ನಾಯಕ ಜಗನ್​ಮೋಹನ್​ ರೆಡ್ಡಿ ಆಂಧ್ರಪ್ರದೇಶದ ನೂತನ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ವಿಜಯವಾಡದ ಇಂದಿರಾ ಗಾಂಧಿ ಮುನ್ಸಿಪಾಲ್​ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಗನ್​ಮೋಹನ್ ರೆಡ್ಡಿ ಅಧಿಕಾರ ಸ್ವೀಕರಿಸಿದ್ದಾರೆ.
ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್​​, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಜಗನ್​​ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಬಳಿಕ ಕೆಸಿಆರ್​ ಹಾಗೂ ಜಗನ್​ ನೇರವಾಗಿ ದೆಹಲಿಗೆ ಪಯಣ ಬೆಳೆಸಲಿದ್ದು ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಹಾಜರಾಗಲಿದ್ದಾರೆ.
175 ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಸಲ ವೈಎಸ್​​ಆರ್​ ಕಾಂಗ್ರೆಸ್​ 151 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದೆ. ಇದರ ಜತೆಗೆ 22 ಲೋಕಸಭೆ ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಮಂಗಳೂರು: ಎಂಟು ತಿಂಗಳ ಹಸುಳೆಯನ್ನು ಹತ್ಯೆಗೈದ ತಂದೆ ➤ ಕತ್ತು ಹಿಸುಕಿ ಕೊಂದು ನದಿಗೆ ಬಿಸಾಡಿದ ತಂದೆ


ಮಂಗಳೂರು, ಮೇ.30. ಸ್ವತಃ ತಂದೆಯೇ ಎಂಟು ತಿಂಗಳ ಹೆಣ್ಣು ಮಗುವಿನ ಕತ್ತು ಹಿಸುಕಿ ಕೊಲೆಗೈದು ಮೃತದೇಹವನ್ನು ನೇತ್ರಾವತಿ ನದಿಗೆ ಎಸೆದ ಹೃದಯ ವಿದ್ರಾವಕ ಘಟನೆ ಸೋಮವಾರದಂದು ನಡೆದಿದ್ದು, ಬುಧವಾರದಂದು ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಕೊಪ್ಪಳ ನಿವಾಸಿ ಪ್ರಸ್ತುತ ಬೋಳಾರದಲ್ಲಿ ವಾಸವಿರುವ ಲಕ್ಷ್ಮಣ ತೆಂಗಿನಹಾಳ ಎಂಬಾತನನ್ನು ಬುಧವಾರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಲಕ್ಷ್ಮಣ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಸೋಮವಾರದಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದನು.ಪತ್ನಿ ರೂಪಾಶ್ರೀ ಎಂಟು ತಿಂಗಳ ಮಗುವನ್ನು ಬೆಳಗ್ಗೆ ಮನೆಯಲ್ಲೇ ಬಿಟ್ಟು ಕೆಲಸಕ್ಕೆ ತೆರಳಿದ್ದರು. ರೂಪಾ ಸಂಜೆ ಮನೆಗೆ ಬಂದ ವೇಳೆ ಮಗು

 ಇಲ್ಲದಿದ್ದರಿಂದ ವಿಚಾರಿಸಿದಾಗ, ತಾನು ಸುಮಾರು 11 ಗಂಟೆಯ ವೇಳೆಗೆ ಮಗುವನ್ನು ಜೋಳಿಗೆಯಲ್ಲಿ ಮಲಗಿಸಿ ಹೊರಗೆ ಹೋಗಿದ್ದು ಮಧ್ಯಾಹ್ನ 12:15ಕ್ಕೆ ಮರಳಿ ಬಂದಾಗ ಮಗು ಕಾಣೆಯಾಗಿತ್ತು ಎಂದು ಆರೋಪಿಯು ಪತ್ನಿಯನ್ನು ನಂಬಿಸಿದ್ದನು. ಮಗುವಿಗಾಗಿ ಹುಡುಕಾಡುತ್ತಿದ್ದಾಗ ಬೋಳಾರ ಬದಿಯ ನೇತ್ರಾವತಿ ನದಿ ದಡದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.
ಮಗುವಿನ ಹಣೆಯ ಎರಡೂ ಬದಿ ತರಚಿದ ಗಾಯ, ಮೂಗಿನ ಬದಿ ಉಗುರಿನ ಗಾಯದ ಗುರುತುಗಳಿರುವುದು ಕಂಡು ಮಗುವಿನ ತಂದೆ ಲಕ್ಷ್ಮಣನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯಿ ಬಿಟ್ಟಿದ್ದು, ತಾನೇ ಉಸಿರು ಕಟ್ಟಿಸಿ ಸಾಯಿಸಿ ನದಿ ನೀರಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹೆಣ್ಣು ಮಕ್ಕಳನ್ನು ಕಂಡರೆ ಬಹಳಷ್ಟು ತಾತ್ಸಾರ ಹೊಂದಿದ್ದರಿಂದ ಪುತ್ರಿಯನ್ನು ಕೊಲೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ಹಿರಿಯ ಪುತ್ರಿಗೆ ಆತ ಬಹಳಷ್ಟು ಹೊಡೆಯುತ್ತಿದ್ದ ಬಗ್ಗೆಯೂ ಬಾಯಿ ಬಿಟ್ಟಿದ್ದಾನೆ.

ಕಲಬುರುಗಿಯಲ್ಲಿ ಬಿಜೆಪಿಯಿಂದ ವಿಜಯೋತ್ಸವ


ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ ಹಿನ್ನೆಲೆ ಜಿಲ್ಲೆಯ ವಾಡಿ‌ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿಸಲಾಯಿತು.
ಮಾಜಿ ಶಾಸಕ‌ ವಾಲ್ಮೀಕ ‌ನಾಯಕ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ಶೋಭಾಯಾತ್ರೆ ಕೈಗೊಂಡ ಬಿಜೆಪಿ ಕಾರ್ಯಕರ್ತರು, ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ನೂತನ ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮೆರವಣಿಗೆ ಸಮಾರೋಪಗೊಂಡಿತು. ಮೆರವಣಿಗೆ ಉದ್ದಕ್ಕೂ ಮೋದಿ ಮೋದಿ ಅಂತಾ ಘೋಷಣೆ ಕೂಗಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪ್ರೇಯಸಿ ಸಾವಿನಿಂದ ಮನನೊಂದು ರೈಲು ಹಳಿಗೆ ತಲೆ ಕೊಟ್ಟ ಪ್ರಿಯಕರ!


ಕಲಬುರಗಿ ಪ್ರೇಯಸಿ ಸಾವಿನಿಂದ ಮನನೊಂದು ರೈಲು ಹಳಿಗೆ ತೆಲೆ ಕೊಟ್ಟು ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯ ಬಿದ್ದಾಪುರ ರೈಲ್ವೆ ಹಳಿ ಬಳಿ ನಡೆದಿದೆ.
ಹನುಮಂತ ಮೇಳಕುಂದಾ (26) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಹನುಮಂತ, ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಕಳೆದೊಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತ ಪ್ರಣಯ ಪಕ್ಷಿಗಳಂತೆ ಹಾರಾಡಿಕೊಂಡಿದ್ದರು.


 ಇವರ ಪ್ರೀತಿ ವಿಷಯ ಯುವತಿಯ ಪೋಷಕರಿಗೆ ಗೊತ್ತಾಗಿ ಅಡ್ಡಿಪಡಿಸಿದ್ದರಂತೆ. ಅಲ್ಲದೆ ಬೇರೆಯೊಬ್ಬನ ಜೊತೆ ಯುವತಿಯ ಮದುವೆಗೆ ನಿಶ್ಚಯಿಸಿದ್ದರಂತೆ. ಪೋಷಕರ ನಿರ್ಧಾರದಿಂದ ಬೇಸತ್ತ ಯುವತಿ ಮೇ 27 ರಂದು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದುಬಂದಿದೆ.
ಪ್ರೇಯಸಿ ಸಾವನ್ನಪ್ಪಿರುವ ವಿಷಯ ಅರಗಿಸಿಕೊಳ್ಳಲು ಆಗದ ಯುವಕ ಆಕೆ ಸಾವನ್ಮಪ್ಪಿದ ಎರಡೇ ದಿನದಲ್ಲಿ ಮನನೊಂದು ತಾನೂ ರೈಲು ಹಳಿಗೆ ತೆಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರೊಂದಿಗೆ ಯುವ ಪ್ರೇಮಿಗಳು ದಾರುಣ ಅಂತ್ಯ ಕಂಡಿದ್ದಾರೆ. ಇನ್ನು ಯುವಕನ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣಮೃಗಗಳ ಹಾವಳಿಗೆ ಕಡಿವಾಣ: ರೈತರ ಜಮೀನನ್ನೇ ಖರೀದಿಸಲು ಮುಂದಾದ ಅರಣ್ಯ ಇಲಾಖೆ!


ತುಮಕೂರು: ಜಿಲ್ಲೆಯಲ್ಲಿರೋ ಜಯಮಂಗಲಿ ಕೃಷ್ಣಮೃಗ ಸಂರಕ್ಷಿತ ವನ್ಯಧಾಮ ರಾಜ್ಯದಲ್ಲಿಯೇ 2 ನೇ ವನ್ಯಧಾಮ ಎಂಬ ಹೆಗ್ಗಳಿಕೆ ಹೊಂದಿದೆ. ಹಾಗೆಯೇ ಇಲ್ಲಿ ರೈತರಿಗೆ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ.

ಕೃಷ್ಣ ಮೃಗಗಳು ಹೆಚ್ಚಿರುವುದು ಅರಣ್ಯ ಇಲಾಖೆಗೆ ಸಂತಸದ ವಿಷಯವಾದ್ರೆ, ಸ್ಥಳೀಯ ರೈತರಿಗೆ ಮಾತ್ರ ಈ ಕೃಷ್ಣಮೃಗಗಳು ದೊಡ್ಡ ಪೀಕಲಾಟ ತಂದಿಟ್ಟಿವೆ. ಪ್ರತಿ ವರ್ಷ ಅಪಾರ ಪ್ರಮಾಣದ ಬೆಳೆಯನ್ನು ಇವು ತಿಂದು ಹಾಕುತ್ತಿವೆ. ಇದರಿಂದ ರೈತರ ನೆರವಿಗೆ ಬರಲು ಮುಂದಾಗಿರುವ ಅರಣ್ಯ ಇಲಾಖೆ ಕೃಷಿ ಜಮೀನು ಖರೀದಿಸಲು ಮುಂದಾಗಿದೆ.
ನಿತ್ಯ ಹಿಂಡು ಹಿಂಡಾಗಿ ಬರುವ ಕೃಷ್ಣಮೃಗಗಳು ಚಿಗುರುವ ಹಂತದಲ್ಲಿರೋ ಬೆಳೆಯನ್ನು ತಿಂದು ಹಾಕುತ್ತಿವೆ. ಇದು ರೈತರಿಗೆ ಸಂಕಷ್ಟ ತಂದೊಡ್ಡುತ್ತಿದೆ. ಹೀಗಾಗಿ ಪ್ರತಿ ವರ್ಷ ಅರಣ್ಯ ಇಲಾಖೆ ವತಿಯಿಂದ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ವಿತರಿಸಲಾಗುತ್ತಿದೆ. ರೈತರು ಕೂಡ ಪ್ರತಿ ಕೃಷ್ಣಮೃಗಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಅರಣ್ಯ ವ್ಯಾಪ್ತಿಯಲ್ಲಿ 400-450 ಸಂಖ್ಯೆಯಲ್ಲಿ ಕೃಷ್ಣಮೃಗಗಳಿವೆ. 323 ಹೆಕ್ಟೇರ್ ಪ್ರದೇಶದಲ್ಲಿರುವ ಹುಲ್ಲುಗಾವಲಿನಲ್ಲಿ, ದಶಕಗಳಿಂದ ಈ ಭಾಗದಲ್ಲಿ ಕೃಷ್ಣಮೃಗಗಳ ಸಂತತಿ ಇದೆ. ಈ ಪ್ರದೇಶದಲ್ಲಿ ವಿಶಾಲವಾದ ಹುಲ್ಲುಗಾವಲಿದ್ದು, ಅಲ್ಲಲ್ಲಿ ಕುರುಚಲು ಗಿಡಗಳಿವೆ. ಹೀಗಾಗಿ ಬೇಟೆಗಾರರ ಕೈಗೆ ಸಿಕ್ಕಿ ಬೀಳದಂತೆ ತಪ್ಪಿಸಿಕೊಳ್ಳುವ ಮತ್ತು ಹುಲ್ಲುಗಾವಲಿನ ಪ್ರದೇಶವಾಗಿರೋದ್ರಿಂದ ಕೃಷ್ಣಮೃಗಗಳಿಗೆ ಇದು ಉತ್ತಮ ಆಶ್ರಯ ತಾಣವಾಗಿದೆ.

ಅರಣ್ಯಕ್ಕೆ ಹೊಂದಿಕೊಂಡ ಕೃಷಿ ಜಮೀನಿಗೆ ಮೇವಿಗಾಗಿ ಇವು ದಾಳಿ ಇಡುವುದು ಸಾಮಾನ್ಯವಾಗಿದೆ. ಹೀಗಾಗಿ ಅರಣ್ಯದ ಸುತ್ತಮುತ್ತಲ ಪ್ರದೇಶದಲ್ಲಿ ರೈತರು ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಮುಂದಾದ್ರೆ ಖರೀದಿಸಲು ಸಿದ್ಧವಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. ರೈತರ ಈ ಜಮೀನುಗಳನ್ನು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ. 1,280 ಎಕರೆ ಕೃಷಿ ಪ್ರದೇಶವನ್ನು ವಶಕ್ಕೆ ಪಡೆಯಲು ರೈತರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಾಧಿಕಾರಿ ರಾಮಲಿಂಗೇಗೌಡ ಮಾಹಿತಿ ನೀಡಿದ್ದಾರೆ.
 

ವಿಶ್ವಕಪ್​ ಮಹಾಸಮರ 2019... ಬಲಿಷ್ಠ ಇಂಗ್ಲೆಂಡ್​ಗೆ ಸವಾಲ್​ ಹಾಕುತ್ತಾ  ದಕ್ಷಿಣ ಆಫ್ರಿಕಾ



ಲಂಡನ್​: ಮೂರು ಬಾರಿ ಫೈನಲ್​ ತಲುಪಿದರೂ ಒಮ್ಮೆಯೂ ಚಾಂಪಿಯನ್​ ಆಗದ ಇಂಗ್ಲೆಂಡ್​, ಮತ್ತೊಂದು ಕಡೆ ಪೈನಲ್​ಗೆ ಎಂಟ್ರಿಕೊಡಲಾಗದೇ ಚೋಕರ್ಸ್​ ಹಣೆಪಟ್ಟಿ ಕಟ್ಟುಕೊಂಡಿರುವ ದ. ಆಫ್ರಿಕಾ ತಂಡ ಇಂದು ನಡೆಯಲಿರುವ 12ನೇ ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಕ್ರಿಕೆಟ್​ ಜನಕರೆಂದು ಕರೆಸಿಕೊಳ್ಳುವ ಇಂಗ್ಲೆಂಡ್​ 44 ವರ್ಷಗಳಿಂದ ವಿಶ್ವಕಪ್​ನಲ್ಲಿ ಪಾಲ್ಗೊಳ್ಳುತ್ತಿದ್ದು, ಮೂರು ಬಾರಿ ಫೈನಲ್​ ತಲುಪಿದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲದೇ ನಿರಾಸೆಯನುಭವಿಸಿದೆ. 1979ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ, 1987ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ 1992ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿ ನಿರಾಸೆಯನುಭವಿಸಿದೆ.
ಆದರೆ, ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಿಕೊಂಡು ತವರಿನ ಲಾಭ ಪಡೆದು ಇಂಗ್ಲೆಂಡ್​​ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೀಗಾಗಿ ನಾಳಿನ ಪಂದ್ಯದಲ್ಲೂ ಗೆಲ್ಲುವ ಫೇವ್​ರಿಟ್​ ಎನಿಸಿಕೊಂಡಿದೆ.
ಬೈರ್​ಸ್ಟೋವ್​ , ಜೋರೂಟ್​, ಜಾಸನ್​ ರಾಯ್​ ಹಾಗೂ ಮಾರ್ಗನ್​ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಇದರ ಜೊತೆಗೆ ಆರ್ಚರ್​, ಪ್ಲಂಕೇಟ್​, ರಶೀದ್​, ಮಾರ್ಕ್​ವುಡ್​ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬೆನ್​ ಸ್ಟೋಕ್ಸ್​ ಹಾಗೂ ಮೊಯಿನ್​ ಅಲಿ ಆಲ್​ರೌಂಡರ್​​​ ಬಲ ಕೂಡ ಇದ್ದೇ ಇದೆ.
ಇನ್ನು ದ.ಆಫ್ರಿಕಾ ತಂಡದ ವಿಶ್ವಕಪ್​ ಇತಿಹಾಸ ನೋಡುವುದಾದರೆ ನಾಲ್ಕು ಬಾರಿ ಸೆಮಿಫೈನಲ್​ ತಲುಪಿದ್ದು ಒಮ್ಮೆಯೂ ಫೈನಲ್​ ತಲುಪಿಲ್ಲ. 1992ರಲ್ಲಿ ಮೊದಲ ವಿಶ್ವಕಪ್​ ಆಡಿದ್ದ ದ.ಆಫ್ರಿಕಾ ತಂಡ ಸೆಮಿಫೈನಲ್​ ತಲುಪಿತ್ತು. ನಂತರ 1999, 2007 ಹಾಗೂ 2015ರಲ್ಲಿ ಸೆಮಿಫೈನಲ್​ ತಲುಪಿರುವುದೇ ಅದರ ಸಾಧನೆಯಾಗಿದೆ. ಆದ್ದರಿಂದಲೇ ದ.ಆಫ್ರಿಕಾವನ್ನು ಚೋಕರ್ಸ್​ ಎಂದು ಕರೆಯಲಾಗುತ್ತಿದೆ.
ಈ ಬಾರಿ ಫಾಫ್​ ಡು ಪ್ಲೆಸಿಸ್​ ನಾಯಕತ್ವದಲ್ಲಿ ಹರಿಣ ಪಡೆ ವಿಶ್ವಕಪ್​ಗೆ ಸಿದ್ದವಾಗಿದ್ದು, ಡಿಕಾಕ್​, ಮಾರ್ಕ್ರಮ್​ , ಡಾಸ್ಸೆನ್​ರಂತಹ ಯುವ ಆಟಗಾರರು ಅರಂಭಿಕ ಸ್ಥಾನ ತುಂಬಲಿದ್ದರೆ, ನಾಯಕ ಪ್ಲೆಸಿಸ್​, ಡುಮಿನಿ, ಮಿಲ್ಲರ್​ ಮಧ್ಯಮ ಕ್ರಮಾಂಕದಲ್ಲಿ ಬಲ ನೀಡಲಿದ್ದಾರೆ. ಇನ್ನು ಬೌಲಿಂಗ್​ ವಿಭಾಗದಲ್ಲಿ ರಬಾಡಾ, ಪೆಹ್ಲುಕ್ವಾಯೋ, ಲುಂಗಿ ಎಂಗಿಡಿಯಂತಹ ಯುವ ಬೌಲರ್​​ಗಳ ಜೊತೆಗೆ ತಾಹೀರ್​,ಮೋರಿಸ್​ ರಂತಹ ಹಿರಿಯರ ಬಲದಿಂದ ಇಂಗ್ಲೆಂಡ್​ ಪೈಪೋಟಿ ನೀಡಲು ಸನ್ನದ್ಧ ವಾಗಿದೆ.
59 ಪಂದ್ಯಗಳಲ್ಲಿ ಇಂಗ್ಲೆಂಡ್​ 26 ಗೆಲುವು ಹಾಗೂ ದ.ಆಫ್ರಿಕಾ 29 ರಲ್ಲಿಗೆಲುವು ಸಾಧಿಸಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.
ವಿಶ್ವಕಪ್​ನಲ್ಲಿ ಮುಖಾಮುಖಿ
ವಿಶ್ವಕಪ್​ನಲ್ಲಿ ಎರಡು ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು ತಲಾ 3ರಲ್ಲಿ ಜಯ ಸಾಧಿಸಿವೆ.
ತಂಡಗಳ ವಿವಿರ:
ಇಂಗ್ಲೆಂಡ್​ ತಂಡ:
ಜಾನಿ ಬೈರ್ಸ್ಟೋವ್, ಇಯಾನ್​ ಮಾರ್ಗನ್​(ನಾಯಕ),ಜೋ ರೂಟ್​, ಜಾಸನ್​ ರಾಯ್​, ಇಯಾನ್​ ಮಾರ್ಗನ್, ಜೋಫ್ರಾ ಆರ್ಚರ್, ಬೆನ್​ ಸ್ಟೋಕ್ಸ್​, ಜಾಸ್​ ಬಟ್ಲರ್​, ಲೈಮ್ ಫ್ಲಂಕೇಟ್​, ಮೊಯಿನ್​ ಅಲಿ, ಆದಿಲ್​ ರಶೀದ್​, ಕ್ರಿಸ್​ ವೋಕ್ಸ್​, ಟಾಮ್​ ಕರ್ರನ್​, ಮಾರ್ಕ್​ ವುಡ್​, ಲೈಮ್​ ಡಾಸನ್,ಜೇಮ್ಸ್​ ವಿನ್ಸ್​ ​
ದಕ್ಷಿಣ ಆಫ್ರಿಕಾ
ಕ್ವಿಂಟನ್​ ಡಿಕಾಕ್​, ಹಾಸಿಂ ಆಮ್ಲ, ಫಾಫ್​ ಡು ಪ್ಲೆಸಿಸ್​ (ನಾಯಕ) ರಾಸ್ಸಿ ವ್ಯಾನ್​ ಡರ್​ ಡಾಸ್ಸೆನ್, ಜೀನ್​ ಪಾಲ್​ ಡುಮಿನಿ, ಡೇವಿಡ್​ ಮಿಲ್ಲರ್​​, ಆ್ಯಂಡಿಲೇ ಪೆಹ್ಲುಕ್ವಾಯೋ, ಡ್ವೈನ್​ ಪ್ರೆಟೋರಿಯಸ್​, ಕಗಿಸೋ ರಬಡಾ, ಲುಂಗಿ ಎಂಗಿಡಿ, ಇಮ್ರಾನ್​ ತಾಹೀರ, ತಬ್ರೈಜ್​ ಶಂಸಿ, ಕ್ರಿಸ್​ ಮೋರಿಸ್

ಅಂಬಿ ಜಯಂತ್ಯುತ್ಸವ: ಮಂಡ್ಯದ ಜನತೆಗೆ ತಲೆ ಬಾಗಿ ನಮಿಸಿದ ಯಜಮಾನ ​​​


ಮಂಡ್ಯ: ಅಂಬರೀಶ್​ ಅವರ ಜಯಂತ್ಯುತ್ಸವ ಸಮಾರಂಭದಲ್ಲಿ ಸಕ್ಕರೆನಾಡಿನ ಜನರಿಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ತಲೆ ಬಾಗಿ ನಮಿಸುವ ಮೂಲಕ ಸುಮಲತಾ ಅವರನ್ನು ಗೆಲ್ಲಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.
ಮಾರಂಭದಲ್ಲಿ ಮಾತನಾಡಿದ ಅವರು, ನಾನು ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲ್ಲ, ಬದಲಾಗಿ ಮಂಡ್ಯ ಜನರಿಗೆ ಶುಭಾಶಯ ಹೇಳ್ತೀನಿ. ಏಕೆಂದರೆ ಪಕ್ಷಗಳನ್ನ ಎದುರು ಹಾಕಿಕೊಂಡು, ನಮಗಾಗಿ ದುಡಿದು ಇಂದು ಸುಮಲತಾ ಅವರನ್ನು ಗೆಲ್ಲಿಸಿದ್ದೀರಿ. ನಾನು ಸಾಯೋವರೆಗೂ ನಿಮಗೆ ರುಣಿಯಾಗಿರುತ್ತೇನೆ ಎಂದರು.
ಏನ್ರಯ್ಯಾ ನಾನು ಬದುಕಿದ್ದಾಗ ಅಷ್ಟು ಪ್ರೀತಿ ಕೊಟ್ರಿ, ನಾನು ಸತ್ತಮೇಲು ಅದರ ಡಬಲ್​ ಪ್ರೀತಿ ಕೊಡ್ತಿದ್ದಿರಲ್ಲ ಅಂತ ವೇದಿಕೆ ಮೇಲಿನ ಅಂಬಿ ಅವರ ಫೋಟೋ ನೋಡ್ತಿದ್ರೆ ನನಗೆ ಅನ್ನಿಸುತ್ತಿತ್ತು ಎಂದು ಅಂಬರೀಶ್​ ಅವರನ್ನು ದಚ್ಚು ಸ್ಮರಿಸಿದರು.

ಕಂಪ್ಲಿ ಗಣೇಶ್ ಅಮಾನತು ದಿಢೀರ್​ ವಾಪಸ್​ ಪಡೆದ ಕಾಂಗ್ರೆಸ್..!


ಬೆಂಗಳೂರು: ರೆಸಾರ್ಟ್​ನಲ್ಲಿ ವಿಜಯನಗರ ಶಾಸಕ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕನಿಗೆ ಮತ್ತೊಂದು ರಿಲೀಫ್​ ಸಿಕ್ಕಿದೆ. ಶಾಸಕ ಗಣೇಶ್ ಅವರ ಅಮಾನತು ಆದೇಶವನ್ನು ಕಾಂಗ್ರೆಸ್ ಹಠಾತ್ತನೇ ಹಿಂಪಡೆದಿದೆ.
ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಮುನ್ನ ಅಮಾನತು ಆದೇಶ ಹಿಂಪಡೆದಿರುವ ಸಂದೇಶವನ್ನು ಕಾಂಗ್ರೆಸ್ ಪಕ್ಷ ಶಾಸಕ ಗಣೇಶ್​ಗೆ ರವಾನಿಸಿದೆ ಎಂದು ತಿಳಿದುಬಂದಿದೆ.
ಆಪರೇಷನ್ ಕಮಲದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕರು ತಮ್ಮ ಶಾಸಕರನ್ನ ಮತ್ತು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗ್ತಿದೆ. ಸ್ವಪಕ್ಷದ ಶಾಸಕನ ಮೇಲೆಯೇ ಹಲ್ಲೆ ನಡೆಸಿ ಕಾರಾಗೃಹ ಶಿಕ್ಷೆ ಅನುಭವಿಸಿ ಬಂದಿರುವ ಶಾಸಕ ಗಣೇಶ್​ ವಿರುದ್ಧದ ಅಮಾನತು ಆದೇಶವನ್ನ ಕಾಂಗ್ರೆಸ್​ ಹಿಂಪಡೆದಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಪರಸ್ಪರ ಚರ್ಚಿಸಿ ಶಾಸಕ ಗಣೇಶ್ ಅವರ ಅಮಾನತು ಆದೇಶವನ್ನು ವಾಪಸ್​ ಪಡೆಯಲಾಗಿದೆ ಎಂದು ಕಾಂಗ್ರೆಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ನಂತರ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗಬೇಕು ಮತ್ತು ಶಾಸಕ ಗಣೇಶ್ ಅಮಾನತು ಮಾಡಿದ್ದಕ್ಕೆ ಸಿಟ್ಟಾಗಿ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಸೇರಿಬಿಡುತ್ತಾರೆನ್ನುವ ಆತಂಕದಿಂದ ಗಣೇಶ್ ಮನವೊಲಿಕೆಗೆ ಈ ಕ್ರಮವನ್ನು ಕೈಗೊಂಡಿದೆ ಎನ್ನಲಾಗ್ತಿದೆ.
ಕಳೆದ ಫೆಬ್ರವರಿ ಬಿಡದಿಯ ರೆಸಾರ್ಟ್​ನಲ್ಲಿ ಆಪರೇಶನ್ ಕಮಲದಿಂದ ಶಾಸಕರನ್ನು ರಕ್ಷಿಸಿಕೊಳ್ಳಲು ತಂಗಿದ್ದ ಸಂದರ್ಭ ಶಾಸಕ ಗಣೇಶ್ ಅವರು ಶಾಸಕ ಆನಂದ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.​ ಬಳಿಕ ಬಂಧನಕ್ಕೊಳಗಾಗಿದ್ದ ಗಣೇಶ್​, ಇತ್ತೀಚೆಗಷ್ಟೇ ಜಾಮೀನು ಜೈಲಿನಿಂದ ಹೊರಬಂದಿದ್ದಾರೆ.

ಪತಿ ರುಂಡ ಕತ್ತರಿಸಿ, ಪೊಲೀಸರಿಗೆ ಶರಣಾದ ಪತ್ನಿ!


ಗುವಾಹಟಿ: ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯ ತಲೆ ಕಡಿದ ವ್ಯಕ್ತಿ ಪೊಲೀಸ್​ ಠಾಣೆಗೆ ಬಂದು ಶರಣಾದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಭಯಾನಕ ಘಟನೆ ಎಲ್ಲರಿಗೂ ಗೊತ್ತಿದೆ. ಅಂತಹುದೇ ಬೆಚ್ಚಿ ಬೀಳಿಸುವ ಘಟನೆಯೊಂದು ಅಸ್ಸೋಂನಲ್ಲಿ ನಡೆದಿದೆ.

ಪತಿಯ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆಯಿಂದ ಬೇಸತ್ತ ಮಹಿಳೆಯೊಬ್ಬರು ಆತನನ್ನು ಕೊಂದು, ತಲೆ ಸಮೇತ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಅಸ್ಸೋಂನ ಲಖಿಂಪುರ ಜಿಲ್ಲೆಯಲ್ಲಿ ನಡೆದಿದೆ.
ಗುಣೇಶ್ವರಿ ಬರ್ಕಾಟಕಿ (48) ಎಂಬಾಕೆ ತನ್ನ ಗಂಡ ಮುಧಿರಾಂ (55) ತಲೆ ಕಡಿದು, ತಾವಿರುವ ಮಜ್​ಗಾಂವ​ನಿಂದ ಧಾಲ್ಪುರ ಪೊಲೀಸ್​ ಠಾಣೆಗೆ ನಿನ್ನೆ ರಾತ್ರಿ ತಂದಿದ್ದಾರೆ. 5 ಕಿ.ಮೀ ನಡೆದು, ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ಗಂಡನ ರುಂಡ ತಂದಿದ್ದ ಮಹಿಳೆಯನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಈ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಗುಣೇಶ್ವರಿ, ಆತ ಹಲವು ವರ್ಷಗಳಿಂದ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ. ಕೊಡಲಿಯಿಂದಲೂ ಹೊಡೆದು, ಗಾಯ ಮಾಡಿದ್ದ. ಈ ಹಿಂದೆಯೇ ಅವನನ್ನು ಬಿಟ್ಟುಹೋಗುವ ಮನಸ್ಸು ಮಾಡಿದ್ದೆ, ಆದರೆ, ಮಕ್ಕಳ ಕಾರಣ ಜೊತೆಗಿದ್ದೆ. ಕೊನೆಕೊನೆಗೆ ಆತ ರಾಕ್ಷಸನಂತೆ ವರ್ತಿಸುತ್ತಿದ್ದ. ನಾನು ಅವನನ್ನು ಕೊಲ್ಲದಿದ್ದರೆ, ಅವನೇ ನನ್ನು ಕೊಂದುಬಿಡುತ್ತಿದ್ದ ಎಂದಿದ್ದಾರೆ.
ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಸೆರೆಯಾದ ಮಹಿಳೆಗೆ ಸ್ಥಳೀಯ ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

“ಮಹಿರ್ಷಿ” ಸಿನಿಮಾ ಮೂಲಕ ಕಾರ್ಪೋರೇಟ್ ಸಂಸ್ಕøತಿಯ ಅನಾವರಣ* 


✍ರಮೇಶ್ ಹಾಸನ
 ಇತ್ತೀಚಿಗಷ್ಟೆ ಬಿಡುಗಡೆಯಾದ ತೆಗುಲು ಮಹೇಶ್ ಬಾಬು ನಟಿಸಿರುವ ಮಹಿರ್ಷಿಎಂಬ ಸಿನಿಮಾ ದಕ್ಷಿಣ ಭಾರದಾದ್ಯಂತ ನಿರೀಕ್ಷೆಗು ಮೀರಿ ಯಶಸ್ಸಿನೊಂದಿಗೆ ಮುನ್ನಗ್ಗುತ್ತಿದೆ. ಯುವ ಜನತೆಯಂತು ಚಿತ್ರವನ್ನು ನೋಡಲು ಮುಗಿಬೀಳುತ್ತಿರುವುದು ಕಂಡರೆ ಚಿತ್ರವನ್ನ ನಾವು ಕೂಡ ನೋಡಬೇಕೆನ್ನಿಸುತ್ತದೆ. ಚಿತ್ರವನ್ನು ನೋಡುತ್ತಾ ಹೋದರೆ ಮೊದಲನೆ ಭಾಗದಲ್ಲಿ ಮಧ್ಯಮ ವರ್ಗದಲ್ಲಿ ಜನಿಸಿದ ನಟ ಸಾಮಾನ್ಯವಾಗಿ ಎಲ್ಲರು ಎದುರಿಸುವ ಸಮಸ್ಯೆಗಳನ್ನು ಎದುರಿಸುತ್ತಾನೆ, ಹಾಗಯೆ ತಂದೆಯ ಮಾತುಗಳು ಮತ್ತು ತನ್ನ ವಿದ್ಯಾರ್ಥಿ ಜೀವನ ಮತ್ತು ತನ್ನ ಕನಸುಗಳನ್ನು ಬೆನ್ನು ಹತ್ತುತ್ತಾ ತಾನೊಬ್ಬ ದೊಡ್ಡ ವ್ಯಕ್ತಿ ಬಂಡವಾಳಗಾರನಾಗಲು ಪದವಿಗಳನ್ನು ಬೆನ್ನು ಹತ್ತುತ್ತಾ ಹೊರುಡುತ್ತಾನೆ, ಮದ್ಯದಲ್ಲಿ ಒಂದಿಷ್ಟು ಪ್ರೇಮ ಮತ್ತು ಸವಾಲುಗಳನ್ನು ಎದುರಿಸುತ್ತಾ ತನ್ನ ಸ್ನೇಹಿತನ ತ್ಯಾಗದ ಮೂಲಕ ವಿದ್ಯಾಭ್ಯಾಸ ಮುಗಿಸಿ ಹೊರದೇಶಕ್ಕೆ ತೆರಳಿ ತಾನು ಕಂಡ ಕನಸಂತೆಯೆ ದೊಡ್ಡ ಬಂಡವಾಳಗಾರನಾಗುತ್ತಾನೆ. ಹೀಗೆ ತನ್ನ ಯಶಸ್ಸಿಗೆ ಪೂರಕವಾಗಿ ಒಂದು ಔತಣಕೂಟದಲ್ಲಿ ತನ್ನ ಸ್ನೇಹಿತನ ತ್ಯಾಗದ ಕಥೆಯನ್ನು ಕೇಳಿದ ಮರುದಿನವೆ ಭಾರತಕ್ಕೆ ಹಿಂದಿರುಗುವ ಚಿತ್ರದ ನಾಯಕ ತನ್ನ ಸ್ನೇಹಿತನ ಅವಸ್ಥೆಯನ್ನು ಕಂಡು ಮರಗಿ ಮತ್ತವನ ಕನಸು ಮತ್ತು ಪ್ರೀತಿಯನ್ನ ಉಳಿಸಲು ಮುಂದಾಗಿ ಯಶಸ್ಸು ಕಾಣುವುದು ಚಿತ್ರದ ಕಥೆಯಾಗಿ ಕಾಣುತ್ತದೆ. ಕಾರ್ಪೋರೇಟ್ ಜಗತ್ತಿನತ್ತ ಕಥೆಯ ಚಿತ್ತ ಚಿತ್ರವನ್ನು ನೋಡಿದ ನಂತರದಲ್ಲಿ ನಿಜವಾಗಿಯು ಒಂದು ಪ್ರಶ್ನೆ ಮೂಡುತ್ತದೆ, ಚಿತ್ರದ ನಾಯಕ ರಿಷಿ ಮಧ್ಯಮ ವರ್ಗದಿಂದ ಬಂದಂತಹ ಹುಡುಗನಾದರು ತನ್ನ ಎಲ್ಲಾ ಆಲೋಚನೆಗಳು ಜಗತ್ತನ್ನು ಗೆಲ್ಲುವುದು ತಾನೊಬ್ಬ ಬಂಡವಾಳಗಾರನಾಗುವುದು ಇದಕ್ಕೆ ಕಾರಣ ತನ್ನ ಅಪ್ಪನನ್ನು ಎಲ್ಲರು ಹೀಯಾಳಿಸುವ ಘಟನೆಗಳ ಮತ್ತು ಅವಮಾನದ ಸಂಗತಿಗಳು ಆಗಿರುವುದು, ಚಿತ್ರದ ಕಥೆಯ ದಿಕ್ಕನ್ನು ಮತ್ತು ಕಾರ್ಪೋರೇಟ್ ಮನಸ್ಥಿತಿಗಳ ಒಳ ಮರ್ಮವನ್ನು ಕಥೆಯಾಗಿ ಎಣೆದು ಮೂಕ ವಿಸ್ಮರನ್ನಾಗಿಸುವ ಹುನ್ನಾರವಂತು ಸತ್ಯ. ತನ್ನಂತೆಯೆ ತನ್ನ ಸ್ನೇಹಿತ ಒಂದು ಹಳ್ಳಿಯಂದ ಬಂದು ಕೇವಲ ಒಂದೆರೆಡು ವರ್ಷಗಳ ಸ್ನೇಹದಿಂದ ಇಡೀ ಜೀವನವನ್ನೆ ತನಗೆ ಧಾರೆ ಎರಯುವ ಮನಸ್ಸು ಮಾಡಿರುವು ನಿಜವಾದ ಒಬ್ಬ ರೈತನ ಮನಸ್ಸುನ್ನು ಅನಾವಣ ಮಾಡಿದೆ, ಹಾಗೆಯೆ ಕಥೆಗಾರನು ಕೂಡ ತನ್ನ ಚಾಣಾಕ್ಷತನದಿಂದ ರೈತನ ಮಗನ ಜೀವನವನ್ನು ಹಾಳು ಮಾಡಿದ್ದಲ್ಲದೆ ತ್ಯಾಗವನ್ನು ಮುಂದಿಟ್ಟುಕೊಂಡು ಕಥೆಯನ್ನು ಹೆಣೆದಿರುವುದು ಕಾರ್ಪೋರೇಟ್ ಚಿತ್ರ ಮತ್ತು ಚಿತ್ರಣವನ್ನು ಅನಾವರಣಗೊಳಿಸಿದೆ. ಈಗಿನ ಹೊಸ ಆಲೋಚನೆಗಳಂತು ಶ್ರೀಮಂತ ಲೋಕಕ್ಕೆ ಮೀಸಲಿರಿಸುವ ಮತ್ತು ಸಾಮಾಜಿಕ ಶೈಕ್ಷಣಿಕ ಆಯಾಮಗಳನ್ನು ಕಾರ್ಪೋರೇಟ್ ಸಂಸ್ಕøತಿಯತ್ತ ಕೊಂಡಯ್ಯುತ್ತಿರುವು ಅವುಗಳನ್ನು ಸಿನಿಮಾಗಳ ಮೂಲಕ ಜನರನ್ನು ಮೂಕರನ್ನಾಗಿಸುತ್ತಿರುವುದು ದುರಂತವೇ ಸರಿ. ರೈತ ಮತ್ತು ಪ್ರಭುತ್ವದ ಸೋಲು ಕಾರ್ಪೋರೇಟ್ ತಂತ್ರದ ಗೆಲುವು ರಿಷಿ ತನ್ನ ಗೆಳಯನಿಗಾಗಿ ಭಾರಕ್ಕೆ ಹಿಂದುರುಗಿದಾಗ, ತನ್ನ ಗೆಳೆಯ ತನ್ನ ಊರು ತಂದೆಯ ಕನಸಿನಂತೆ ಕೃಷಿ ಭೂಮಿಯನ್ನು ಉಳಿಸಲು ತನ್ನದೆ ಆದ ಹೋರಾಟವನ್ನು ಏಕಾಂಗಿಯಾಗಿ ಹೋರಾಟ ಮುಂದುವರೆಸುತ್ತಿರುತ್ತಾನೆ, ಇದಕ್ಕೆ ಅಲ್ಲಿನ ಭೂಮಿಯನ್ನು ಹಲವಾರು ಕಾರ್ಪೋರೇಟ್ ಕಂಪನಿಗಳು ಮತ್ತು ಕಬಳಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿರುತ್ತದೆ ಇದಕ್ಕೆ ಸಾಕ್ಷಯೆಂಬಂತೆ ಪ್ರಭುತ್ವ ಬಂಡವಳಿಗ ಬೆನ್ನಲುಬಾಗಿ ನಿಂತು ರೈತರ ಕಣ್ಣಿಗೆ ಮಣ್ಣೆರೆಚುವ ಕೆಲವ ಮಾಡುತ್ತಿರುತ್ತದೆ. ಹಈಗೆ ಅಡೆತಡೆಗಳನ್ನು ತಡೆಯಲು ನಾಯಕ ತನ್ನ ಬಂಡವಾಳದ ಮೂಲಕ ಊರಿನಲ್ಲಿ ನಡೆಯುವ ಹೋರಾಟ ಜಗತ್ತಿಗೆ ಪರಿಚಯಿಸಿ ತನ್ನ ಗೆಳಯನ ಕನಸಿಗಾಗಿ ರಿಷಿ ನಿಲ್ಲುತ್ತಾನೆ, ಕೊನೆಗೆ ಊರಿನ ರೈತರನ್ನೆಲ್ಲ ಕಾರ್ಪೋರೇಟ್ ಕಂಪನಿಗಳು ಒಂದಿಷ್ಟು ಹಣ ಭೂಮಿಯನ್ನು ಕೊಡುತ್ತೇವೆ ಎಂದು ಆಸೆಗಳನ್ನು ಒಡ್ಡಿ ಊರಿನವರನ್ನೆಲ್ಲಾ ತನ್ನತ್ತ ಸೆಳೆಯುತ್ತಾ ಗೆಳೆಯನ ಹೋರಾಟವನ್ನು ದಿಕ್ಕು ತಪ್ಪಿಸಲು ಮುಂದಾಗುತ್ತವೆ. ಈ ಎಲ್ಲಾ ಬೆಳವಣಿಗೆಗಳನ್ನು ರಿಷಿ ಮನಗಂಡು ತಾನೂ ಕಾರ್ಪೋರೇಟ್ ಉದ್ಯಮಿಯಾಗಿ ಹೆಚ್ಚಾಗಿ ಹಣ ಮತ್ತು ಸಂಪನ್ಮೂಲಗಳನ್ನು ಒದಗಿಸುವುದಾಗಿ ಹೇಳಿ ರೈತರನ್ನು ತನ್ನತ್ತ ಸೆಳೆದು ಆ ರೈತರ ಮನದಲ್ಲಿ ದೇವರಾಗಿ ಬಿಡುತ್ತಾನೆ ಇದೇ ಕಥೆಯ ಚಿತ್ರಣ, ಆದರೆ ತಮ್ಮ ಪಾಲನ್ನು ಪ್ರಭುತ್ವದ ಹಕ್ಕು ಅಧಿಕಾರದಿಂದ ಪಡೆದುಕೊಳ್ಳಬೇಕಾಗಿದ್ದ ರೈತ ಕಾರ್ಪೋರೇಟಿಗರ ಋಣಕ್ಕೆ ಸಿಲುಕಿಸಿರುವುದಂತು ದುಂತದದ ಸಂಗತಿಯಾಗಿದೆ. ಚಿತ್ರದಲ್ಲಿ ಸ್ನೇಹಿತನ ವೈಯಕ್ತಿಕ ಆಸೆಗೆ ಇಂತಹ ಕೀಳು ಮಟ್ಟದ ಆಲೋಚನೆಯ ಕಥೆಗಳನ್ನು ಎಣೆದು ಎಲ್ಲರ ಮನಸ್ಸುಗಳಲ್ಲಿ ಕಾರ್ಪೋರೇಟ್‍ಶಕ್ತಿಗಳನ್ನು ದೇವರಂತೆ ಕಾಣುವಂತೆ ಚಿತ್ರವನ್ನು ವೈಭರೀಕರಿಸಲಾಗಿದೆ. ಇಂತಹ ಬಂಡಔಆಳಶಾಹಿಗಳ ಬಗ್ಗೆ ಮತ್ತು ಪ್ರಭುತ್ವಗಳ ಕಾರ್ಪೋರೇಟ್ ಮನಸ್ಥಿತಿಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾಗಿದೆ.

ಮಹಿಳೆಯಿಂದ ಗಾಂಜಾ ಮಾರಾಟ: ಡಿಸಿಬಿ ಪೊಲೀಸರಿಂದ ಬಂಧನ


ಶಿವಮೊಗ್ಗ: ಮಹಿಳೆಯೊಬ್ಬರು ಗಾಂಜಾ ಮಾರಾಟ ಮಾಡುವ ವೇಳೆ ಡಿಸಿಬಿ ಪೊಲೀಸರು ದಾಳಿ ನಡೆಸಿ, ಮಹಿಳೆಯನ್ನು ಬಂಧಿಸಿದ್ದಾರೆ.

ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ರೆಹಾನ ಎಂಬ ಮಹಿಳೆಯು ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಡಿಸಿಬಿ ಪೊಲಿಸರು ರೆಹಾನರನ್ನು ಬಂಧಿಸಿದ್ದು, ಆಕೆಯ ಬಳಿಯಿಂದ 430 ಗ್ರಾಂ ಗಾಂಜಾನ್ನು ವಶಪಡಿಸಿಕೊಂಡಿದ್ದಾರೆ.
ಡಿಸಿಬಿ ಇನ್​​ಸ್ಪೆಕ್ಟರ್​​ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಸಿಬ್ಬಂದಿಗಳಾದ ನಾಗರಾಜ್, ಹಬೀಬ್, ಹೇಮಾವತಿ, ನಾಗೇಶ್ ಇತರರು ಹಾಜರಿದ್ದರು.

ಮೈತ್ರಿಗೆ ತೊಂದರೆ ಇಲ್ಲ,ಸರ್ಕಾರ ಮುಂದುವರಿಯುತ್ತದೆ: ಕೆ.ಹೆಚ್‌.ಮುನಿಯಪ್ಪ


ಬೆಂಗಳೂರು: ಮೈತ್ರಿ ಸರ್ಕಾರ ಮುಂದುವರಿಯುತ್ತದೆ. ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕುಮಾರ ಕೃಪಾ ಗೆಸ್ಟ್​​ಹೌಸ್​​ನಲ್ಲಿ ಕೆ.ಸಿ ವೇಣುಗೋಪಾಲ್ ಭೇಟಿ ಬಳಿಕ ಮಾತನಾಡಿ, ದೊಡ್ಡ ಪಕ್ಷವಾಗಿರುವ ಕಾರಣ ಕೊಂಚ ಭಿನ್ನಮತ ಉಂಟು. ಕಾಂಗ್ರೆಸ್​ಗೆ ಹಿಂದೆಯೂ ಇಂತಹ ಪರಿಸ್ಥಿತಿ ಬಂದಿತ್ತು. ಮತ್ತೆ ಬಲಿಷ್ಠವಾಗಿ ಪಕ್ಷ ಸಂಘಟನೆ ಆಗಿದೆ. ಈಗಲೂ ಮತ್ತೆ ಪಕ್ಷ ಸದೃಡವಾಗಿ ಬೆಳೆಯಲಿದೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ ಎಂದರು.
ಸೋಲಿಗೆ ಕಾರಣಗಳಿವೆ.ಆದರೆ ಹೇಳುವ ಸಂದರ್ಭ ಇದಲ್ಲ. ಮತ್ತೊಮ್ಮೆ ಆ ಎಲ್ಲ ಕಾರಣಗಳನ್ನು ಹೇಳುತ್ತೇನೆ. ಕೋಲಾರದಲ್ಲಿ ಗೆದ್ದವರು ಒಳ್ಳೆಯ ಕೆಲಸ‌ ಮಾಡಲಿ. ಲೀಡರ್ಸ್ ಬರ್ತಾರೆ ಹೋಗ್ತಾರೆ. ಆದರೆ ಕಾರ್ಯಕರ್ತರು ಇರ್ತಾರೆ. ಕೋಲಾರದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದರು.

ಐ-ಫೋನ್‌ ಬದಲು ಬಾಕ್ಸ್‌ನಲ್ಲಿ ಕಲ್ಲು.. ಫ್ಲಿಫ್‌ಕಾರ್ಟ್ ಡೆಲಿವರಿ ಬಾಯ್​ ಕಣ್ಣಿಗೆ ಮಣ್ಣೆರೆಚಿದ ಖದೀಮರು?


ಬೆಂಗಳೂರು : ಮೊಬೈಲ್​ ನೀಡಲು ಹೋದಾಗ ರಾಹುಲ್​​ ಎಂಬ ಗ್ರಾಹಕ ನನ್ನನು ಯಾಮಾರಿಸಿ ಮೊಬೈಲ್​ ಎಗರಿಸಿದ್ದಾರೆ ಎಂದು ಫ್ಲಿಪ್​ಕಾರ್ಟ್​ ಡೆಲಿವರಿ ಬಾಯ್​ ಆರೋಪಿಸಿದ್ದಾನೆ.

ರಾಹುಲ್ ಎಂಬಾತ ಫ್ಲಿಪ್​ಕಾರ್ಟ್​ನಲ್ಲಿ 50 ಸಾವಿರ ಬೆಲೆಯ ಐ ಫೋನ್ ಬುಕ್ ಮಾಡಿದ್ದ. ಹೀಗಾಗಿ ‌ಫ್ಲಿಫ್‌ಕಾರ್ಟ್ ಡೆಲಿವರಿ ಬಾಯ್ ಮೊಬೈಲ್ ನೀಡಲು ರಾಹುಲ್​ಗೆ ಕರೆ ಮಾಡಿದಾಗ ಆರ್. ಆರ್. ನಗರ ಬಳಿ ‌‌ಇರುವ ಶೆಲ್ ಪೆಟ್ರೋಲ್ ಬಂಕ್​ಗೆ ಬರುವಂತೆ ಹೇಳಿದ್ದಾನೆ.
ಮೊಬೈಲ್ ತೆಗೆದುಕೊಳ್ಳಲು ಬಂದ ರಾಹುಲ್ ಮತ್ತು ಇನ್ನಿತರ ಸ್ನೇಹಿತರು, ಮೊದಲು ‌ಮೊಬೈಲ್ ತೆಗೆದುಕೊಂಡು ನೋಡಿದ್ದಾರೆ. ನಂತರ ಹಣ ಕಡಿಮೆ ಇದೆ‌ ಫ್ಲಿಪ್​ಕಾರ್ಟ್ ಆಫೀಸ್​ಗೆ ಬಂದು ತೆಗೆದುಕೊಳ್ಳುತ್ತೇನೆ ಎಂದು ಬಾಕ್ಸ್​ ಕೊಟ್ಟು ಅಲ್ಲಿಂದ ವಾಪಸ್‌ ಹೋಗಿದ್ದಾರೆ.
ಡೆಲಿವರಿ ಬಾಯ್ ಆಫೀಸ್ ಹೋಗಿ ನೋಡಿದಾಗ ಐ ಫೋನ್ ಬದಲು ಕಲ್ಲು ಇರುವುದು ಬೆಳಕಿಗೆ ಬಂದಿದೆ. ರಾಹುಲ್‌ ಅಂಡ್ ಟೀಂ ಗಮನ‌ ಬೇರೆಡೆ ಸೆಳೆದು ಮೊಬೈಲ್‌ ತೆಗೆದು ಕಲ್ಲಿಟ್ಟು ಯಾಮಾರಿಸಿದ್ದಾರೆ ಎಂದು ಡೆಲಿವರಿ ಬಾಯ್​ ಬಸವರೆಡ್ಡಿ ಆರೋಪಿಸಿದ್ದಾರೆ. ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪೊಲೀಸರ ಜತೆ ವಾಗ್ವಾದ:  ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್​​  ಪುತ್ರ ಪೊಲೀಸರ ವಶಕ್ಕೆ


ಬೆಳಗಾವಿ: ರೈತರ ಪರವಾಗಿ ಪ್ರತಿಭಟನೆ ನಡೆಸುವ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಬೆಳಗಾವಿ ‌ಗ್ರಾಮೀಣ ಕ್ಷೇತ್ರದ ‌ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್‌ ಮುಖಂಡ ಮೃನಾಲ್ ಹೆಬ್ಬಾಳಕರ್​ನನ್ನು ಬೆಳಗಾವಿ ‌ಗ್ರಾಮೀಣ ಠಾಣೆಯ ‌ಪೊಲೀಸರು‌ ವಶಕ್ಕೆ‌ ಪಡೆದಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿರುವ ಹಲಗಾ ಗ್ರಾಮದಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಕ್ರಮಿಸಿಕೊಂಡ ಪ್ರದೇಶದಲ್ಲಿ ಇಂದು ಕಾಮಗಾರಿ ಆರಂಭಿಸಿಲು ಆಗಮಿಸಿದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ರೈತರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದವೂ ನಡೆದಿದೆ. ರೈತರ ಪರವಾಗಿ ಹೆಬ್ಬಾಳ್ಕರ್ ಪುತ್ರ ಮೃನಾಲ್ ಪೊಲೀಸರ ಜತೆ ಮಾತನಾಡುತ್ತಾ ವಾಗ್ವಾದ ನಡೆಸಿದ್ದಾರೆ. ಈ ವೇಳೆ‌, ಬೆಳಗಾವಿ ‌ಠಾಣೆಯ ಪೊಲೀಸರು‌ ಮೃನಾಲ್ ಹೆಬ್ಬಾಳಕರ್ ಸೇರಿದಂತೆ ಹಲವು ರೈತರನ್ನು ವಶಕ್ಕೆ ಪಡೆದಿದ್ದಾರೆ.

ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ ಸಚಿವ ಜಿ ಟಿ ದೇವೇಗೌಡ!


ಬೆಳಗಾವಿ: ನರೇಂದ್ರ ಮೋದಿ ನಿಸ್ವಾರ್ಥಿ ಹಾಗೂ ದೇಶ ಪ್ರೇಮಿ ಆಗಿದ್ದಾರೆ. ಈ‌ ಕಾರಣದಿಂದಲೇ‌ ಅವರಿಗೆ ಎರಡನೇ ‌ಬಾರಿಗೆ ಪ್ರಧಾನಿ ಆಗುವ ಯೋಗ ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.‌ ದೇವೇಗೌಡ ಹೇಳಿದ್ದಾರೆ.

ನಗರದ ವಿಟಿಯು ಆವರಣದಲ್ಲಿ ‌ನಡೆದ ಆರ್​ಸಿಯು 7ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಅವರಿಗೆ ದೇಶ‌ದ ಬಗ್ಗೆ ಸಾಕಷ್ಟು ‌ಗೌರವ, ಅಭಿಮಾನ ಇದೆ. ಯಾವಾಗಲೂ ದೇಶದ ಬಗ್ಗೆಯೇ ಚಿಂತಿಸುತ್ತಾರೆ. ನಿಸ್ವಾರ್ಥ ಭಾವದಿಂದ ಅವರು ದೇಶ ಸೇವೆ ಮಾಡುತ್ತಿದ್ದಾರೆ. ತಾನು ಕೂಡ ಓರ್ವ ಸಂಸದ ಎನ್ನುವಷ್ಟರ ಮಟ್ಟಿಗೆ ಅವರಿಗೆ ಸರಳತೆ ಇದೆ. ದೇಶಕ್ಕಾಗಿ ತಮ್ಮ ಜೀವನ ಎಂಬ ಅವರ ಹೇಳಿಕೆ ನನಗೆ ಇಷ್ಟವಾಗಿದೆ ಎಂದು ಹೊಗಳಿದ್ರು.
ಇನ್ನು ಮೈತ್ರಿ ಸರ್ಕಾರ ‌ಅತಂತ್ರಗೊಳಿಸುವ ಉದ್ದೇಶ ಮೋದಿಗಿಲ್ಲ. ಲೋಕಸಭಾ ‌ಚುನಾವಣೆ ಬಳಿಕ ತಮ್ಮ ಭಾಷಣದಲ್ಲಿ ನರೇಂದ್ರ ‌ಮೋದಿ ಈ ಬಗ್ಗೆ ಹೇಳಿದ್ದಾರೆ. ಎಲ್ಲರೂ ಒಂದಾಗಿ ಕೆಲಸ ಮಾಡೋಣವೆಂದು ಕರೆ ನೀಡಿದ್ದಾರೆ. ರಾಜ್ಯದ ಮೈತ್ರಿ‌ ಸರ್ಕಾರ ಅತಂತ್ರಗೊಳಿಸುವ ಹುನ್ನಾರಕ್ಕೆ ಮೋದಿ ಕೈ ಹಾಕಿಲ್ಲ.‌‌ ಈ ಬಗ್ಗೆ ರಾಜ್ಯದ ಬಿಜೆಪಿ ನಾಯಕರಿಗೂ ಅವರು ಸೂಚನೆ ನೀಡಿಲ್ಲ ಎಂದು ಸಚಿವ ಜಿಟಿಡಿ ಅಭಿಪ್ರಾಯಪಟ್ಟರು.
ಮೈತ್ರಿ ಪಕ್ಷಗಳ ನಾಯಕರಾದ ಸಿಎಂ ಹೆಚ್​ಡಿಕೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ‌ಚುನಾವಣೆ ಮೊದಲೇ ಒಂದಾಗಿರಬೇಕಿತ್ತು. ಫಲಿತಾಂಶದ ಬಳಿಕ ಅವರ ನಿವಾಸಕ್ಕೆ ಇವರು, ಇವರ ನಿವಾಸಕ್ಕೆ ಅವರು ಹೋಗುತ್ತಿದ್ದಾರೆ. ಮೊದ್ಲೇ ಅವರು ಈ ರೀತಿ ಮಾಡಿದ್ದರೆ ಮೈತ್ರಿ ‌ಸರ್ಕಾರದ‌ ಬಗ್ಗೆ ರಾಜ್ಯದ ಜನರಲ್ಲಿ ಹೆಚ್ಚಿನ‌ ನಂಬಿಕೆ ಬರುತ್ತಿತ್ತು. ಹೆಚ್ಚಿನ ಸ್ಥಾನ ಗೆಲ್ಲಲು ಸಹಕಾರಿ ಆಗುತ್ತಿತ್ತು. ದೇವೇಗೌಡರಂತ ಹಿರಿಯರು ಸಂಸತ್​ನಲ್ಲಿ‌ ಇರಬೇಕು. ಅವರ ಸೋಲು ಬೇಸರ ತರಿಸಿದೆ‌ ಎಂದು ಸಚಿವರು ಹೇಳಿದ್ರು.

ಪಶ್ಚಿಮ ಬಂಗಾಳದಲ್ಲಿ ಹಿಜಾಬ್ ಧರಿಸಿದ್ದ ಯುವತಿಯನ್ನು ಅಡ್ಡಗಟ್ಟಿ ಜೈ ಶ್ರೀರಾಮ್ ಕೂಗುವಂತೆ ಬಲವಂತ..


ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 23 ವರ್ಷದ ಹಿಜಾಬಿ ಯುವತಿಯೊಬ್ಬಳನ್ನು ಅಡ್ಡಗಟ್ಟಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತ ಪಡಿಸಿದ ಘಟನೆ ಬೆಳಕಿಗೆ ಬಂದಿದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಉತ್ತರ ಬಂಗಾಳದ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯುತ್ತಿರುವ ಪಿಜಿ ವಿದ್ಯಾರ್ಥಿನಿ ರಾತ್ರಿ ಸುಮಾರು 10ರ ಸಮಯಕ್ಕೆ ಕ್ಯಾಂಟಿನ್ ನಲ್ಲಿ ರಾತ್ರಿಯೂಟ ಮುಗಿಸಿ ಸ್ನೇಹಿತೆಯ ಜೊತೆ ಹಾಸ್ಟೆಲ್‌ಗೆ ಮರಳುತ್ತಿದ್ದಾಗ ವಿದ್ಯಾರ್ಥಿನಿಯ ವೇಶ ಭೂಷಣ ನೋಡಿ ‘ಜೈ ಶ್ರೀ ರಾಮ್’ ಘೋಷಣೆ ಕೂಗುತ್ತಾ ಹತ್ತಿರ ಬಂದ ಯುವಕರ ತಂಡವೊಂದು ಆ ಬಳಿಕ ಯುವತಿಗೆ ಅಡ್ಡ ಗಟ್ಟಿ ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದೆ. ಯುವಕರ ಒತ್ತಾಯಕ್ಕೆ ವಿದ್ಯಾರ್ಥಿನಿ ‘ಜೈ ಶ್ರೀ ರಾಮ್’ ಎಂದು ಹಲವು ಬಾರಿ ಹೇಳಿದ್ದು, ಬಳಿಕ ಅಳುತ್ತಾ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾಳೆ.

ಜಾಗತಿಕ ಷೇರುಪೇಟೆಗಳಲ್ಲಿ ಅನಿಶ್ಚಿತತೆ: ಕುಸಿದ ಸೆನ್ಸೆಕ್ಸ್,ನಿಫ್ಟಿ​ರೂಪಾಯಿಗೆ ಅಲ್ಪ ಹಿನ್ನೆಡೆ


ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ವಹಿವಾಟಿನ ಅನಿಶ್ಚಿತತೆ ಅನುಸರಿಸಿದ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್​ ಆರಂಭಿಕ ವಹಿವಾಟಿನಲ್ಲಿ ಹಿನ್ನೆಡೆ ಅನುಭವಿಸಿದೆ.

ಬೆಳಗ್ಗೆ 11.30ರ ವೇಳೆಗೆ ಸೆನ್ಸೆಕ್ಸ್‌ 86.12 ಅಂಶಗಳ ನಷ್ಟದೊಂದಿಗೆ 39,663 ಅಂಶಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 6 ಅಂಶಗಳ ನಷ್ಟದೊಂದಿಗೆ 11,922 ಅಂಶಗಳ ಮಟ್ಟದಲ್ಲೂ ವ್ಯವಹಾರ ನಡೆಸುತ್ತಿತ್ತು.
ರೂಪಾಯಿಗೆ ಅಲ್ಪ ಹಿನ್ನೆಡೆ:
ಡಾಲರ್‌ ಎದುರು ರೂಪಾಯಿ ಆರಂಭಿಕ ವಹಿವಾಟಿನಲ್ಲಿ 14 ಪೈಸೆಗಳ ಹಿನ್ನಡೆ ಕಂಡು ₹ 69.83 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬೆಳಗ್ಗಿನ ವಹಿವಾಟಿನಲ್ಲಿ ಯೆಸ್​ ಬ್ಯಾಂಕ್, ಎಲ್​ಟಿ, ಟಿಸಿಎಸ್​, ಪವರ್ ಗ್ರಿಡ್, ಹಿಂದೂಸ್ತಾನ ಯುನಿಲಿವರ್, ಇನ್ಫೋಸಿಸ್​, ಎಚ್​ಡಿಎಫ್​ಸಿ ಬ್ಯಾಂಕ್, ಎಚ್​ಸಿಎಲ್​ ಟೆಕ್​ ಷೇರುಗಳ ಮೌಲ್ಯ ಏರಿಕೆ ಕಂಡುಬಂದರೆ, ಎಚ್​ಡಿಎಫ್​ಸಿ, ಐಟಿಸಿ, ರಿಲಯನ್ಸ್​, ಕೋಲ್ ಇಂಡಿಯಾ, ಬಜಾಜ್ ಫೈನಾನ್ಸ್​, ಟಾಟಾ ಸ್ಟೀಲ್​, ಕೋಟ್ಯಾಕ್ ಬ್ಯಾಂಕ್, ಬಜಾಜ್ ಆಟೋ, ಇಂಡ್​ಲ್ಯಾಂಡ್​ ಬ್ಯಾಂಕ್ ಷೇರುಗಳ ದರ ಇಳಿಕೆಯಾಗಿದೆ.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಅಧ್ಯಕ್ಷರಾದ ಮುಫ್ತಿ ಶಂಶುಲ್ ಹಕ್ ಖಾದ್ರಿ ಅಲ್ ಹಸನಿ ವಲ್ ಹುಸೈನಿ ನಿಧನ


ಬೆಂಗಳೂರು : ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ಅದ್ಯಕ್ಷ ಪ್ರಮುಖ ಸೂಫಿ ವರ್ಯರೂ ರಾಜ್ಯದ ಪ್ರಮುಖ ವಿದ್ವಾಂಸರೂ ಆದ ಮೌಲಾನಾ ಮುಫ್ತಿ ಶಂಶುಲ್ ಹಕ್ ಖಾದ್ರಿ ಅಲ್ ಹಸನಿ ವಲ್ ಹುಸೈನಿ  ಇದೀಗ ಇಹಲೋಕ ತ್ಯಜಿಸಿದ್ದಾರೆ .ಮಯ್ಯತ್ ಇದೀಗ ಕಾಟನ್ ಪೇಟೆ ಲಕ್ಕಡಿ ಶಾ ದರ್ಗಾ ಬಳಿಯ ಅವರ ನಿವಾಸದಲ್ಲಿದೆ.

ಭಾರತದ ಆರ್ಥಿಕತೆ ಏರಿಕೆಗೆ ಮೋದಿ ಶ್ರಮ ಅಪಾರ:ಚೀನಾ ನಾಯಕ ಗುಣಗಾನ


ಗುಯಿಝೌ(ಚೀನಾ): ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕತೆಯ ಏರಿಕೆಗೆ ಹಾಗೂ ಜನರ ಜೀವನಮಟ್ಟ ಸುಧಾರಣೆ ತರಲು ಪ್ರಧಾನಿ ಮೋದಿ ಅವರು ಸಾಕಷ್ಟು ಪ್ರಯತ್ನಿಸಿದ್ದಾರೆ ಎಂದು ಚೀನಾ ಕಮ್ಯುನಿಸ್ಟ್​ ಪಕ್ಷದ ಹಿರಿಯ ನಾಯಕ ದೆಗಿಯಿ ಪ್ರಶಂಸಿದ್ದಾರೆ.

ಮೋದಿ ನಾಯಕತ್ವದ ಆಡಳಿತದಲ್ಲಿ ಭಾರತ ಸಾಕಷ್ಟು ಸುಧಾರಣೆ ಕಂಡಿದೆ. ಭಾರತ ಮತ್ತು ಚೀನಾ ದೀರ್ಘಕಾಲದ ಸ್ನೇಹ- ಸೌಹಾರ್ದ ಸಂಬಂಧ ದೊಂದಿದೆ ಎಂದು ದೆಗಿಯಿ ಗುಯಿಝೌ ಪ್ರಾಂತ್ಯದಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ (ಸಿಪಿಸಿ) ಸಭೆಯಲ್ಲಿ ಹೇಳಿದ್ದಾರೆ.
ಚೀನಾ ಭಾರತ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಹೋಗುತ್ತಿದೆ. ರಾಜಕೀಯ ನಂಬಿಕೆ ಮತ್ತು ಪರಸ್ಪರ ಸಹಕಾರದ ಸಹಭಾಗಿತ್ವದಡಿ ಪ್ರಧಾನಿ ಮೋದಿ ಅವರೊಂದಿಗೆ ಕೆಲಸ ಮಾಡಲು ಚೀನಾ ಉತ್ಸುಕವಾಗಿದೆ ಎಂದು ತಿಳಿಸಿದ್ದಾರೆ.

ಜಸ್​ಪ್ರೀತ್​ ಬೂಮ್ರಾ ಯಾರ್ಕರ್​ ದಾಳಿಗೆ ಶಕೀಬ್​ ಹಸನ್​ ಕ್ಲೀನ್ ಬೋಲ್ಡ್​!


ಲಂಡನ್​​: ವಿಶ್ವಕಪ್ ಆರಂಭಕ್ಕೂ ಮುನ್ನ ಬಾಂಗ್ಲಾ ವಿರುದ್ಧ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಮಹಾಯುದ್ಧಕ್ಕೆ ಮೈಕೊಡವಿಕೊಂಡು ಸನ್ನದ್ಧಗೊಂಡಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಕೆ.ಎಲ್​ ರಾಹುಲ್​ ಹಾಗೂ ಧೋನಿ ಶತಕದ ಜೊತೆಯಾಟದಿಂದ ತಂಡ 360 ರನ್‌ಗಳ ಬೃಹತ್‌​ ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ್ದ ಬಾಂಗ್ಲಾ ತಂಡ 95 ರನ್​ಗಳ ಸೋಲು ಕಂಡಿದೆ.
ಪಂದ್ಯದಲ್ಲಿ ಟೀಂ ಇಂಡಿಯಾ ಪರ ಸ್ಪಿನ್ನರ್​ಗಳಾದ ಕುಲದೀಪ್‌​ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಮಿಂಚಿದ್ರೂ ಕೂಡ ಯಾರ್ಕರ್​ ಸ್ಪೆಷಲಿಸ್ಟ್​ ಬೂಮ್ರಾ ತಮ್ಮ ಕೈಚಳಕ ತೋರಿದ್ದಾರೆ.
ಬಾಂಗ್ಲಾ ತಂಡದ ಹಿರಿಯ ಆಟಗಾರ ಶಕೀಬ್​ ಅಲ್​ ಹಸನ್ ಬ್ಯಾಟಿಂಗ್​ ಮಾಡಲು ಮೈದಾನಕ್ಕೆ ಬಂದು ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್​ ಒಪ್ಪಿಸಿದರು. ಶಕೀಬ್‌ ಬೋಲ್ಡ್ ಆಗುವ ವೇಳೆ, ಬೌಲಿಂಗ್​ ಮಾಡಿದ ಬೂಮ್ರಾ ಬರೋಬ್ಬರಿ 141 ಕಿ.ಮೀ ವೇಗದಲ್ಲಿ ಯಾರ್ಕರ್​ ರೂಪದಲ್ಲಿ ಬಾಲ್ ಎಸೆದಿದ್ದರು. ಈ ಎಸೆತ ಅರ್ಥ ಮಾಡಿಕೊಳ್ಳಲು ವಿಫಲರಾದ ಶಕೀಬ್​ ವಿಕೆಟ್​ ಒಪ್ಪಿಸಲೇಬೇಕಾಯಿತು.

ಕಾವೇರಿ ನೀರು ಬಿಡುಗಡೆಗೆ ಆದೇಶ: ಕುರುಬೂರು ಶಾಂತಕುಮಾರ್ ವಿರೋಧ


ಬೆಂಗಳೂರು: ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ಪ್ರಾಧಿಕಾರ ಮಂಡಳಿ ನೀಡಿರುವ ಆದೇಶಕ್ಕೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಬರಗಾಲವಿದೆ, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಇದೆ. ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗುವುದು ಅನುಮಾನ. ವಾಡಿಕೆಗಿಂತ ಕಡಿಮೆ ಮುಂಗಾರು ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರು ಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿಗೂ ಕುಡಿಯುವ ನೀರು ಒದಗಿಸಲು ಕಾವೇರಿ ನೀರಿನ ಅಗತ್ಯತೆ ಇದೆ. ತಮಿಳುನಾಡಿಗೆ ನೀರು ಬಿಟ್ಟ ನಂತರ ಅದನ್ನು ವಾಪಾಸ್ಸು ತರಲು ಸಾಧ್ಯವಿಲ್ಲ. 9.19 ಟಿಎಂಸಿ ನೀರು ಬಿಡುವಂತೆ ನೀಡಿರುವ ಆದೇಶವನ್ನು ಮರುಪರಿಶೀಲಿಸಬೇಕೆಂದು ಕುರುಬೂರು ಒತ್ತಾಯಿಸಿದ್ದಾರೆ.
ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶವನ್ನು ಕಾರ್ಯಗತಗೊಳಿಸುವುದು ಕಷ್ಟಕರವಾಗಿದ್ದು, ರಾಜ್ಯ ಸರಕಾರವು ಆದೇಶ ಮರುಪರಿಶೀಲನೆಗೆ ಒತ್ತಾಯಿಸಬೇಕು. ಕಾವೇರಿ ಅಚ್ಚುಕಟ್ಟು ಪ್ರದೇಶದ ಸಂಸದರುಗಳು ಕೇಂದ್ರ ಸರಕಾರಕ್ಕೆ, ಕಾವೇರಿ ನದಿ ಪ್ರಾಧಿಕಾರಕ್ಕೆ ಕಾವೇರಿ ಸಮಸ್ಯೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ತಿಳಿಸಿದರು.

ನಮಗೊಂದು ಮೆಡಿಕಲ್ ಕಾಲೇಜ್ ಬೇಕಾಗಿದೆ : ಮರ್ಕಝ್ ವಿದ್ಯಾಸಂಸ್ಥೆಯ ಶಿಲ್ಪಿ ಕಾಂತಪುರಂ ಉಸ್ತಾದರಿಗೆ ಪತ್ರ ಬರೆದ ಯುವತಿ


ವರದಿ : ನಿಯಾಸ್ ಕುಶಾಲನಗರ
ಅನುವಾದ : ಸ್ನೇಹಜೀವಿ ಅಡ್ಕ
ಸಹಕಾರ : ಇಮ್ತಿ ಬೈರಿಕಟ್ಟೆ
ಹಾರಿಸ್ ಕೋನಿಮಾರ್

 ಪ್ರೀತಿಯ ಉಸ್ತಾದರೇ.. ನಿಮ್ಮನ್ನು ನಾನು ಇದುವರೆಗೂ ಮುಖತಃವಾಗಿ ನೋಡಿಲ್ಲ. ಆದರೂ ನನಗೆ ನಿಮ್ಮನ್ನು ಚೆನ್ನಾಗಿ ಗೊತ್ತು. ಅದು ನಿಮ್ಮ ಮುಖಾಂತರನೋ, ನಿಮ್ಮ ಶಿಷ್ಯ ವೃಂದದ ಮುಖಾಂತರವಾಗಿಯೋ ಅಲ್ಲ. ತಮಗೆ ಯಾರೊಡನೆಯೂ ವೈರತ್ವ ಇಲ್ಲದಿದ್ದರೂ, ನಿಮ್ಮ ಯಶಸ್ಸುಗಳನ್ನು ನೋಡಿ ವೈರತ್ವ ಬೆಳೆಸಿಕೊಂಡವರ ಮೂಲಕವಾಗಿತ್ತು ನಾನು ಮೊದಲನೆಯದಾಗಿ ನಿಮ್ಮನ್ನು ಪರಿಚಯಿಸಿಕೊಂಡದ್ದು. ಮೊದಲನೆಯದಾಗಿ ಕೇಳಿಸಿಕೊಂಡದ್ದು ಪಂಡಿತರ ಪ್ರೊಫೆಶನಲ್ ಎಂದು ಒಮ್ಮೆ ಮನೋರಮಾ ಪತ್ರಿಕೆಯು ಬರೆದದ್ದನ್ನು ಓದಿದ ನಂತರವಾಗಿತ್ತು ನಾನು ನಿಮ್ಮನ್ನು ಗಮನಿಸತೊಡಗಿದ್ದು. ಯಾರೊಡನೆಯೂ ವೈರತ್ವವಿಲ್ಲದೆ , ಮುಗುಳ್ನಗೆಯೊಂದಿಗೆ ಅನಾಥರ ಪಾಲಿನ ಆಸರೆಯಾಗಿ, ಆಸರೆಯಿಲ್ಲದವರ ಪಾಲಿನ ರಕ್ಷಕರಾಗಿ, ಪಂಡಿತರ ಉಸ್ತಾದರಾಗಿ, ಜಗತ್ತು ಗುರುತಿಸುವ, ಗೌರವಿಸುವ ಭಾರತದ ಮುಸ್ಲಿಂ ನಾಯಕನಾಗಿ, ಈ ಪಟ್ಟಿ ಎಣಿಸಿ ಮುಗಿಸಲು ಸಾಧ್ಯವಿಲ್ಲ. ಮುಟ್ಟಿದೆಲ್ಲವೂ ಚಿನ್ನವಾಗಿ ಮಾರ್ಪಡಿಸುವ ತಮ್ಮೊಂದಿಗೆ ಮಾತನ್ನು‌ ದೀರ್ಗಗೊಳಿಸದೆ ವಿಷಯವನ್ನು ಹಂಚಿಕೊಳ್ಳುತ್ತೇನೆ. ಸಾಂಸ್ಕೃತಿಕ ಕೇರಳಕ್ಕೆ ಒಂದು‌ ಮೆಡಿಕಲ್ ಕಾಲೇಜಿನ ಅಗತ್ಯತೆಯಿದೆ. ಅದು ಕೇರಳದಲ್ಲೇ ಆಗಬೇಕೆಂಬ ನಿರ್ಬಂಧವಿಲ್ಲ. ತಾವೊಮ್ಮೆ ಬೆರಳು ತೋರಿಸಿದರೆ ಜೀವ ಬೇಕಾದರೂ ನೀಡಲು ತಯಾರಿರುವ ಜನಲಕ್ಷಗಳನ್ನೊಳಗೊಂಡ ಒಂದು ಜನಸಮೂಹ ಎಲ್ಲದಕ್ಕೂ ರೆಡಿಯಾಗಿ ತಮ್ಮೊಂದಿಗಿರುವರು ಅನ್ನುವುದು ತಮ್ಮ ಕೆಲವೊಂದು ತೀರ್ಮಾನಗಳು ಸಾಕ್ಷಿಯಾಗಿಸಿದೆ. ಅದಲ್ಲದೆ ನೂರಾರು ಮೆಡಿಕಲ್ ಕಾಲೇಜ್ ಗಳಲ್ಲಿ ತಮ್ಮ ನೇತೃತ್ವದಲ್ಲಿ ಸಾಂತ್ವನ ಸೇವೆಯ ಮೂಲಕ ಕೋಟಿಗಳನ್ನು ವ್ಯಯಿಸಿ ಕೇರಳ ಮಾತ್ರವಲ್ಲದೆ ಭಾರತದ ಇತರ ಪ್ರದೇಶಗಳಲ್ಲೂ ಜಾತಿ, ಧರ್ಮವನ್ನು ನೋಡದೆ ನಡೆಸಲಾಗುತ್ತಿದೆ. ಒಬ್ಬಳು ಮಲಯಾಳಿ ಅನ್ನುವ ಕಾರಣಕ್ಕಾಗಿ ನಾನು ಅಭಿಮಾನ ಪಡುತ್ತಿದ್ದೇನೆ. ಒಂದು ಕೆಲಸವನ್ನು ಮಾಡಬೇಕೆಂದು ತೀರ್ಮಾನಿಸಿದರೆ ಬೆಟ್ಟದಷ್ಟು ಸಮಸ್ಯೆಗಳು ಎದುರಾದರೂ, ಮುಗುಳ್ನಗೆಯೊಂದಿಗೆ ಎದುರಿಸುವ ದೊಡ್ಡ ಧೈರ್ಯವನ್ನು ನಾನು ಕಂಡದ್ದು‌ ನಿಮ್ಮಲ್ಲಿ ಮಾತ್ರವಾಗಿದೆ. ಈ ಭೂಮಿಯಲ್ಲಿ ಐದು ಸೆಂಟ್ಸ್ ಜಾಗ ಇಲ್ಲ ಅಂತ ಹೇಳಲ್ಪಟ್ಟ ನೋಲೆಡ್ಜ್ ಸಿಟಿ , ಎಲ್ಲಾ ಸಂಕಷ್ಟ, ಸಮಸ್ಯೆಗಳನ್ನು ಬದಿಗೊತ್ತಿ ಉದ್ಘಾಟನೆಗೆ ಸಜ್ಜುಗೊಂಡಿರುವುದು ಕೇವಲ ಉದಾಹರಣೆ ಮಾತ್ರ! ಕೆಲವು ವಿಷಯಗಳನ್ನು ಹಂಚಲು ಹಲವರಿದ್ದಾರೆ, ಆದರೆ ನಿಮಗೆ ನೀವೇ ಸರಿಸಾಟಿ. ಇಷ್ಟೊಂದು ವೈರತ್ವವನ್ನು ಎದುರಿಸಿಯೂ ಎಲ್ಲರೊಂದಿಗೂ ಸೌಹಾರ್ದತೆಯೊಂದಿಗೆ ಮುನ್ನಡೆಯುವುದು ಹೇಗೆ ಎಂದು ಹಲವಾರು ಬಾರಿ ನನ್ನಲ್ಲಿ ಆಶ್ಚರ್ಯವನ್ನು ಮೂಡಿಸಿದೆ. ಕಮಾಲಿಯಾ ಮೆಡಿಕಲ್ ಕಾಲೇಜ್ ಅನ್ನುವ ಕನಸಿನ ಪದ್ಧತಿಯು ರಾಜಕೀಯ ಅಂಧತ್ವನ್ನು ಬೆಳೆಸಿದ ಕೆಲವರಿಂದಾಗಿ ಇಲ್ಲವಾಗಿಸಿದ್ದು ಮರೆತಿಲ್ಲ. ಸಮುದಾಯದ ಹೆಸರೇಳಿಕೊಂಡು ಕೆಲವರು ಹಿಂದಿನಿಂದ ತೋರಿದ ದ್ವೇಷಕ್ಕೆ ಬಲಿಪಶುಗಳಾದದ್ದು ಇದೇ ಸಮುದಾಯವಾಗಿದೆ. ಈ ಸಮುದಾಯಕ್ಕೆ ನ್ಯಾಯ, ಭಯಮುಕ್ತ ಕ್ಯಾಂಪಸ್ ಗಳು ಬೇಕು ಅನ್ನುವುದು ನಿಜ. ತಮ್ಮಂತೆಯೇ ಜಗತ್ತು ಗುರುತಿಸಲ್ಪಡುವ ಇನ್ನೊಬ್ಬ ಮುಸ್ಲಿಂ ನಾಯಕ ಭಾರತದಲ್ಲಿಲ್ಲ. ಮುಸ್ಲಿಂ ಭಾರತವಕ್ಕೆ ಐಟೆಕ್ ಕನಸುಗಳನ್ನು ಕಾಣಲು ಕಲಿಸಿದ್ದೂ, ಸಮುದಾಯದ ಪಂಡಿತರನ್ನು ಐಕಾನ್ ಗಳಂತೆ ಕಾಣಲು ಪ್ರೇರೇಪಿಸಿದ್ದೂ ನೀವು. ಬಾಂಬ್ ಸ್ಪೋಟಗಳ ಸದ್ದುಗಳೊಂದಿಗೆ ಜೀವಿಸುತ್ತಿದ್ದ ಕಾಶ್ಮೀರದ ಮಕ್ಕಳನ್ನು‌ ಮರ್ಕಝ್ ಗೆ ಕರೆತಂದು, ಅಲ್ಲಿ ಅವರನ್ನು ಈ ದೇಶಕ್ಕಾಗಿ ಹೋರಾಡುವಂತಹ ಮನೋಸ್ಥಿತಿಯನ್ನು ಬೆಳೆಸಲು ಪ್ರೇರಣೆ ನೀವಾಗಿರುವಿರಿ. ಉತ್ತರ ಪ್ರದೇಶ, ಬಿಹಾರ, ಕಾಶ್ಮೀರ ಸೇರಿದಂತೆ ನೀವು ನಿಮ್ಮ ಸೇವೆ ಲಭಿಸದ ರಾಜ್ಯಗಳು ಇಲ್ಲ ಅಂತಲೇ ಹೇಳಬಹುದು. ಭಾರತದ ವಿವಿಧ ಭಾಗಗಳಲ್ಲಿ‌ ಸಮುದಾಯ, ಸಂಘಟನೆಗಳ ಸಮಯದಾಯದ ಅಭ್ಯುದಯಕ್ಕಾಗಿ ಓಡಾಡಿದ ಚರಿತ್ರೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ರಿಂದಾಗಿದೆ ದೇಶ ಕೇಳಿದ್ದು. ಮರೆಯಲು ಸಾಧ್ಯವಿಲ್ಲ ನಮ್ಮ ರಾಜ್ಯದಲ್ಲಿ ಯಾವುದೇ ಮಕ್ಕಳೂ ಆಹಾರ ಸಿಗದೆ ಅಳೆಯಬಾರದು ಎಂದು ಹೇಳಲು SYS ಹಾಗೂ SSF ನ ಕರ್ಮಧೀರ ಕಾರ್ಯಕರ್ತರಿಗೆ ಕಲಿಸಿಕೊಟ್ಟದ್ದು ತಾವು. ತಾವು ಮನಸ್ಸು ಮಾಡಿದ್ದೇ ಆದಲ್ಲಿ ನಾನು ವಿನಂತಿಸಿದ್ದು ಖಂಡಿತವಾಗಿಯೂ ನಡೆಯಬಹುದು. ನನ್ನ ವಿನಂತಿ ತಮ್ಮ ಗಮನದಲ್ಲಿರಬಹುದೆಂಬ ನಿರೀಕ್ಷೆಯೊಂದಿಗೆ, ಕೆಲವೊಂದು ಕಾರಣಗಳಿಂದ ನಿಮ್ಮ‌ ಗಮನಕ್ಕೆ ಬಂದಿಲ್ಲದಿದ್ದಲ್ಲಿ ಮತ್ತೊಮ್ಮೆ ಕಾಣುವೆ ಅನ್ನುವ ಆತ್ಮವಿಶ್ವಾಸದೊಂದಿಗೆ. ಗೌರವಾದರಗಳೊಂದಿಗೆ... ಫಾತಿಮಾ ರಶೀದ್.

ಹಿರಿಯ ಮುಸ್ಲಿಂ ಧಾರ್ಮಿಕ ವಿದ್ವಾಂಸ, ಸಮಸ್ತ ನೇತಾರ ಡಾ| ಶಾಹ್ ಮುಸ್ಲಿಯಾರ್ ನಿಧನ

  • ಸುಳ್ಯ, ಮೇ.29. ಹಿರಿಯ ಧಾರ್ಮಿಕ ವಿದ್ವಾಂಸ,      ಸಮಸ್ತ ನೇತಾರ ಡಾl. ಶಾಹ್ ಮುಸ್ಲಿಯಾರ್ (87ವ.) ಮೇ 29ರಂದು ಬೆಳಿಗ್ಗೆ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.
  • ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಕೆಲ ವರ್ಷಗಳ ಕಾಲ ಮತ್ತು ಸುಮಾರು 32 ವರ್ಷಗಳ ಕಾಲ ಸುಳ್ಯ ಆರಂತೋಡು ಮಸೀದಿಯಲ್ಲಿಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು. ಕನ್ನಡ ಪಾಂಡಿತ್ಯವನ್ನು ಹೊಂದಿದ್ದ ಇವರು ಸುಮಾರು 20 ವರ್ಷಗಳ ಕಾಲ ಸರಳಪಥ ಮತ್ತು ಅಲಮುಲ್ ಹುದಾ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸಹಕಾರಿ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ಇವರು 1966ರಲ್ಲಿ ಕೊಯಿಲ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪುತ್ರ ಅಬ್ದುಲ್ ಬಶೀರ್, ಪುತ್ರಿಯರಾದ ಸಲಾಮತ್ತ್, ಬರ್ಕತ್ತ್, ಝೀನತ್, ರಹಿಯಾನತ್, ತಾಹಿರರನ್ನು ಅಗಲಿದ್ದಾರೆ

ರಾಯಚೂರು ವಿವಿ ಸ್ಥಾಪಿಸಲು ಕೊನೆಗೂ ರಾಜ್ಯ ಸರ್ಕಾರ ಅಸ್ತು.. ವಿದ್ಯಾರ್ಥಿಗಳಲ್ಲಿ ಮೂಡಿದ ಸಂತಸ


ರಾಯಚೂರು : ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಜಿಲ್ಲೆ ರಾಯಚೂರು. ಇಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕೆಂಬ ಬಹುದಿನದ ಬೇಡಿಕೆ ಕೊನೆಗೂ ಈಡೇರುವ ಕಾಲ ಬಂದಿದೆ.

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯನ್ನೊಳಗೊಂಡಂತೆ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತಾಯಿಸಿ, ಈ ಭಾಗದ ಪ್ರಗತಿಪರ ಸಂಘಟನೆಗಳು, ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ಹೋರಾಟ ಮಾಡಿದ್ದರು. ಇದಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ವಿವಿ ಸ್ಥಾಪನೆಗೆ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗಿದೆ. ಉದ್ದೇಶಿತ ವಿವಿ ಸ್ಥಾಪನೆ ಕುರಿತು ರಾಯಚೂರಿನ ಯರಗೇರಾ ಪಿಜಿ ಸೆಂಟರ್‌ನಲ್ಲಿ ಅನೇಕ ವಿಷಯಗಳ ಸ್ನಾತಕೋತ್ತರ ಪದವಿ ಕಾರ್ಸ್‌ಗಳು ಲಭ್ಯವಿದ್ದು, ಬಾಲಕರ ಹಾಗೂ ಬಾಲಕಿಯರ ಮೈನಾರಿಟಿ, ಒಬಿಸಿ ಪ್ರತ್ಯೇಕ ವಸತಿ ನಿಲಯ, ವಿಶಾಲ ಜಾಗವಿದ್ದು ಇದನ್ನು ವಿಶ್ವವಿದ್ಯಾಲಯವನ್ನಾಗಿ ಮಾಡುವುದು ಉಚಿತ. ಇದರಿಂದ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅನೇಕ ಹೋರಾಟ ನಡೆದಿದೆ.
ವಿವಿ ಸ್ಥಾಪನೆಯ ಬೆಳವಣಿಗೆ ಹಂತ :
ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಯ ಕುರಿತು ವಿವಿಧ ಹಂತಗಳ ಪರಿಣಾಮ ಇದರ ಸಾಧಕ ಬಾಧಕಗಳ ಪರಿಶೀಲನೆ ನಡೆಸಲು, ಗುಲ್ಬರ್ಗಾ ವಿಶ್ವವಿದ್ಯಾಲಯದ ಶಿಕ್ಷಣ ತಂಡ ನಿವೃತ್ತ ಕುಲಪತಿ ಡಾ.ಕುಟಿನೋ ಅವರ ಯರಗೇರಾ ಪಿಜಿ ಸೆಂಟರ್‌ಗೆ ಭೇಟಿ ನೀಡಿ ವರದಿ ಸಲ್ಲಿಸಿತ್ತು. ನಂತರ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಅವಧಿಯಲ್ಲಿಯೇ ವರದಿ ಸಲ್ಲಿಸಿದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇವೆಲ್ಲ ಬೆಳವಣಿಗೆಗಳ ಮಧ್ಯೆ ಈಗ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದ್ದು ಪ್ರಸಕ್ತ ಸಾಲಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬರಲಿದೆ.
ರಾಯಚೂರು ವಿವಿ ವ್ಯಾಪ್ತಿಯಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ 200 ಕಾಲೇಜುಗಳು ಬರಲಿವೆ. ಇವು ಹಿಂದೆ ಗುಲ್ಬರ್ಗ ವಿವಿಯ ವ್ಯಾಪ್ತಿಯಲ್ಲಿದ್ದವು. ನೂತನ ವಿವಿಗೆ ರೂ.6.99 ಕೋಟಿ ಅನುಮೋದನೆ ನೀಡಿದ್ದು, ಇನ್ನೇನು ವಿವಿ ಕಾರ್ಯರಂಭವಾಗಬೇಕಿದೆ. ನಿನ್ನೆ ವಿವಿ ಸ್ಥಾಪನೆಯ ಕುರಿತ ಸುದ್ದಿ ತಿಳಿಯುತ್ತಿದ್ದಂತೆ ಈ ಭಾಗದ ವಿದ್ಯಾರ್ಥಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾಕಂದರೆ, ಗುಲ್ಬರ್ಗಾ ವಿವಿ, ವ್ಯಾಪ್ತಿಯಲ್ಲಿ ಹಲವಾರು ಕಾಲೇಜು ಇದ್ದ ಕಾರಣ ಕಾರ್ಯಭಾರ ಹೆಚ್ಚಾಗಿ ಅನೇಕ ಸಮಸ್ಯೆಯಾಗುತ್ತಿತ್ತು. ಅಲ್ಲದೇ ಈ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ.
'ಬಹುದಿನದ ಬೇಡಿಕೆ ರಾಯಚೂರು ವಿವಿ ಸ್ಥಾಪನೆಗೆ ಕೊನೆಗೆ ಸಮ್ಮಿಶ್ರ ಸರಕಾರ ಮುಂದಾಗಿದ್ದು ಸ್ವಾಗತಾರ್ಹ. ಗುಲ್ಬರ್ಗಾ, ಬಳ್ಳಾರಿ ವಿವಿಯ ಹಾಗೆ ಈ ವಿಶ್ವವಿದ್ಯಾಲಯ ಬೆಳೆಯಬೇಕು. ಇದಕ್ಕೆ ಎರಡು ಜಿಲ್ಲೆಗಳ ಜನಪ್ರತಿನಿಧಿಗಳು ಕಾಳಜಿವಹಿಸಿ ಹೆಚ್‌ಕೆಆರ್‌ಡಿಬಿಯಿಂದ ಹೆಚ್ಚಿನ ಅನುದಾನ ಒದಗಿಸಲು ಮುಂದಾಗಬೇಕು. ಅಂದಾಗ ಮಾತ್ರ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಉದ್ದೇಶಿತ ವಿ.ವಿ.ಯ ಸ್ಥಾಪನೆಯ ಧ್ಯೇಯ ಈಡೇರಲು ಸಾಧ್ಯವಾಗಲಿದೆ' ಎನ್ನುತ್ತಾರೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕ ಡಾ.ರಜಾಕ್ ಉಸ್ತಾದ್.
ರಾಯಚೂರು ವಿಶ್ವವಿದ್ಯಾಲಯದ ಕುರಿತು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು ಈ ಭಾಗದ ವಿದ್ಯಾರ್ಥಿಗಳಿಗೆ ಹೆಮ್ಮೆಯ ವಿಷಯ , ರಾಜ್ಯದ ಇತರೆಡೆ ಒಂದು ಕಾಲೇಜು ಸ್ಥಾಪನೆಗೆ ರೂ.7-8 ಕೋಟಿ ನೀಡುತ್ತೆ ಸರಕಾರ. ಆದರೆ, ವಿವಿ ಸ್ಥಾಪನೆಗೆ ಕೇವಲ 6.99 ಕೋಟಿ ಬಿಡುಗಡೆ ಮಾಡಿದ್ದು ಸರಿಯಲ್ಲ. ಇಷ್ಟರಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಸಲು ಅಗಲ್ಲ. ಹಿಂದುಳಿದ ಜಿಲ್ಲೆಗೆ ತಾರತಮ್ಯ ಮಾಡದೇ ಹೆಚ್ಷಿನ ಅನುದಾನ ಒದಗಿಸಿ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕು ಎನ್ನುತ್ತಾರೆ ಜ್ಞಾನ ವಿಜ್ಞಾನ ಸಮೀತಿಯ ಅಧ್ಯಕ್ಷ ಸೈಯದ್ ಹಫೀಜುಲ್ಲಾ

ಮಂಗಳೂರು: ಕುಖ್ಯಾತ ರೌಡಿಗೆ ಪೊಲೀಸರಿಂದ ಗುಂಡು



29 May, 2019

ಮಂಗಳೂರು: ಬಂಧಿಸಲು ತೆರಳಿದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಕುಖ್ಯಾತ ರೌಡಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗುಂಡೇಟು ಬಿದ್ದಿರುವ ರೌಡಿ ಉಮರ್ ಫಾರೂಕ್ ಸ್ಥಿತಿ ಹೇಗಿದೆ ಎಂದು ಪೊಲೀಸರು ಖಚಿತಪಡಿಸಿಲ್ಲ.

ಸಮೀರ್ ಎಂಬಾತನ ಕೊಲೆ ಸಂಚು ಪ್ರಕರಣದಲ್ಲಿ ಈತನನ್ನು ಬಂಧಿಸಲು ತೆರಳಿದ ವೇಳೆ ಘಟನೆ ನಡೆದಿದೆ. ಸಮೀರ್ ಟಾರ್ಗೆಟ್ ಗ್ರೂಪ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಉಮರ್ ಫಾರೂಕ್ ಇಲ್ಯಾಸ್ ನ ಬಾವ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಸಂದೀಪ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಭೇಟಿ ನೀಡಿದ್ದಾರೆ.

ಸುದ್ದಿ ಕೃಪೆ : ವಾರ್ತಾಭಾರತಿ

ಕಾವೇರಿ ಪ್ರಾಧಿಕಾರ ಆದೇಶದಿಂದ ಆತಂಕ ಪಡುವ ಅಗತ್ಯವಿಲ್ಲ: ಎಂ.ಬಿ.ಪಾಟೀಲ್​​


ಬೆಂಗಳೂರು: ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದಲ್ಲಿ ಯಾವುದೇ ಆತಂಕ ಇಲ್ಲ. ರಾಜ್ಯದ ಜನರು, ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಕಾವೇರಿ ನೀರು ಪ್ರಾಧಿಕಾರದ ಆದೇಶ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಒಳಹರಿವು ಆಧಾರಿತವಾಗಿ ನೀರು ಬಿಡಲು ಹೇಳಿದ್ದಾರೆ. ಜೂನ್ ತಿಂಗಳಲ್ಲಿ ಉತ್ತಮ ಮಳೆಯಾದರೆ ಸಮಸ್ಯೆ ಆಗುವುದಿಲ್ಲ. ಇಲ್ಲವಾದರೆ ಸಂಕಷ್ಟ ಪರಿಸ್ಥಿತಿ ಸೂತ್ರ ಅನುಸರಿಸಬೇಕಾಗುತ್ತದೆ ಎಂದಿದ್ದಾರೆ.
ಮಳೆ ಒಳಹರಿವು ಆಧರಿಸಿ ನೀರು ಕೊಡಲು ಸೂಚಿಸಿದ್ದಾರೆ. ಸ್ವಾಭಾವಿಕ ವರ್ಷದಲ್ಲಿ ನೀರು ಕೊಟ್ಟೇ ಕೊಡುತ್ತೇವೆ. ಬೇರೆ ಸಮಯದಲ್ಲಿ ಸಂಕಷ್ಟ ನಿರ್ವಹಣಾ ಸೂತ್ರದಂತೆ ನಡೆದುಕೊಳ್ಳುತ್ತೇವೆ. ದೇವರಲ್ಲಿ ಉತ್ತಮ ಮಳೆಯಾಗುವಂತೆ ಪ್ರಾರ್ಥನೆ ಮಾಡೋಣ. ತೀರ್ಪಿನ ಕುರಿತಾಗಿ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ಸ್ವಾಭಾವಿಕ ವರ್ಷದಲ್ಲಿ ನೀರು ಕೊಡಲ್ಲ ಅಂದರೆ ತಪ್ಪಾಗುತ್ತೆ. ಒಳಹರಿವು ಉತ್ತಮವಾದರೆ ನೀರು ಕೊಡ್ತೀವಿ. ಮಂಡ್ಯದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇನ್ನು ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ರಾಜಕಾರಣ ಪ್ರವೇಶಿಸುವ ಮನಸ್ಸು ಹೊಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಕ್ಕೆ ತಯಾರಿ ನಡೆಸಲು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡೋದು ಅವರ ಅಧಿಕಾರ. ರಾಜೀನಾಮೆ ನೀಡುವ ಮುನ್ನ ನನ್ನ ಬಳಿ ಬಂದು ಚರ್ಚೆ ನಡೆಸಿದ್ದರು ಎಂದು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಉಗ್ರರು-ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ


ಕುಲ್ಗಾಮ್​​: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್​​ ಜಿಲ್ಲೆಯ ಮೊಹಮದ್​ಪುರದಲ್ಲಿ ಎನ್​ಕೌಂಟರ್​ ನಡೆದಿದೆ. ಕಳೆದ 24 ಗಂಟೆಗಳಲ್ಲಿ ಇದು ಎರಡನೇ ಕಾರ್ಯಾಚರಣೆಯಾಗಿದೆ. ಇನ್ನು ಘಟನೆ ಬಗ್ಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಈಗಾಗಲೇ ಯೋಧರು ಓರ್ವ ಭಯೋತ್ಪಾದಕನ ಗುಂಡಿಕ್ಕಿ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿದು ಬಂದಿದೆ.

ತೆಹರಿ ಅರಣ್ಯ ಪ್ರದೇಶದಲ್ಲಿ ಭೀಕರ ಸ್ವರೂಪ ಪಡೆಯುತ್ತಿರುವ ಕಾಡ್ಗಿಚ್ಚು


ಉತ್ತರಾಖಂಡ್​ : ಇಲ್ಲಿನ ತೆಹರಿ ಅರಣ್ಯ ಪ್ರದೇಶದಲ್ಲಿ ಹೊತ್ತಿಕೊಂಡಿರುವ ಕಾಡ್ಗಿಚ್ಚಿನ ಬೆಂಕಿಯ ಕೆನ್ನಾಲಿಗೆ ಇನ್ನಷ್ಟು ವಿಸ್ತರಿಸುತ್ತಿದ್ದು, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗಳು ಮುಂದುವರೆದಿವೆ.

ತೆಹರಿ ಅರಣ್ಯ ಪ್ರದೇಶದಲ್ಲಿ ಹೊತ್ತಿಕೊಂಡಿರುವ ಬೆಂಕಿ
ಸ್ವಲ್ಪವೂ ಮಳೆ ಬಾರದ ಕಾರಣ ಉಷ್ಣಾಂಶವು ತೀವ್ರವಾಗಿದ್ದು, ತೆಹರಿ ಅರಣ್ಯ ಪ್ರದೇಶದಲ್ಲಿ ಬೆಂಕಿಯ ಆರ್ಭಟವೂ ಹೆಚ್ಚಾಗಿದೆ. ಇದರಿಂದ ಸಾವಿರಾರು ಮರಗಳು ಸುಟ್ಟು ಭಸ್ಮವಾಗಿವೆ. ಮಳೆಯಿಲ್ಲದೇ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಈ ವರ್ಷದ ಅವಧಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಮೂರು ಡಿಗ್ರಿ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಮುಂದಿನ ಮೂರು ದಿನಗಳ ಕಾಲ ತಾಪಮಾನವು 40 ಡಿಗ್ರಿ ಸೆಲ್ಷಿಯಸ್ ಇರಲಿದೆ ಎಂದೂ ಊಹಿಸಲಾಗಿದೆ.
ಕೆಲ ತಿಂಗಳ ಹಿಂದೆ ಕರ್ನಾಟಕದಲ್ಲೂ ಕೂಡ ಹೆಚ್ಚಿದ ಉಷ್ಣಾಂಶದಿಂದ ಬಂಡೀಪುರ ಅಭಯಾರಣ್ಯ ಸೇರಿದಂತೆ ರಾಜ್ಯದ ಹಲವೆಡೆ ಅರಣ್ಯ ಪ್ರದೇಶಗಳು ಕಾಡ್ಗಿಚ್ಚಿಗೆ ಸುಟ್ಟು ಭಸ್ಮವಾಗಿತ್ತು.

ಮಿಥುನ್ ರೈ ವಿರುದ್ಧ ನಿಂದಿಸಿ, ಜೀವಬೆದರಿಕೆ: ಮತ್ತೆ ಮೂವರು ಸಂಘಪರಿವಾರ ಕಾರ್ಯಕರ್ತರು ಸೆರೆ

                  
ಮಂಗಳೂರು:  ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ಚುನಾವಣಾ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಅವಾಚ್ಯವಾಗಿ ನಿಂದಿಸಿ ಹಾಗೂ ಜೀವಬೆದರಿಕೆ ಒಡ್ಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಮತ್ತೆ ಮೂವರು ಸಂಘಪರಿವಾರದ ಕಾರ್ಯಕರ್ತರನ್ನು ಮಂಗಳವಾರ ಬಂಧಿಸಿದ್ದಾರೆ. ಬಂಟ್ವಾಳದ ನಿವಾಸಿಗಳಾದ ಸಂಜೀವ, ಪ್ರೀತಂ ಮತ್ತು ಕರುಣಾಕರ ಬಂಧಿತ ಆರೋಪಿಗಳಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಇದೀಗ 6ಕ್ಕೇರಿದೆ. ಸಂಘಪರಿವಾರದ ಕಾರ್ಯಕರ್ತರಾದ ಅಮ್ಮುoಜೆ ನಿವಾಸಿಗಳಾದ ನಿಶಾಂತ್ ಸಚಿನ್, ಮತ್ತು ಕಾಸರಗೋಡಿನ ಕಾರ್ತಿಕ್ ಎಂಬವರನ್ನು ಪೊಲೀಸರು ಸೋಮವಾರ ವಶಕ್ಕೆ ತೆಗೆದು ಕೊಂಡಿದ್ದರು. ಬಂಧಿತ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. *W🌍RLD Whatsapp✔* *ನಮಗೆ ನಾವೇ ಮಾಧ್ಯಮ* ಮೇ 23ರಂದು ರಾತ್ರಿ ಬಡಕಬೈಲು ಎಂಬಲ್ಲಿ ಬಿಜೆಪಿಯ ಚುನಾವಣಾ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಅವಾಚ್ಯವಾಗಿ ನಿಂದಿಸಿ ಹಾಗೂ ಜೀವಬೆದರಿಕೆ ಒಡ್ಡಿದರು. ಪ್ರಕರಣದ ಕುರಿತು ಮಿಥುನ್ ರೈ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ದೂರು ನೀಡಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈಗ ಸಚಿವನಾಗುವ ಆಸೆ ನನಗಿಲ್ಲ' : ಎಚ್.ವಿಶ್ವನಾಥ್


ಬೆಂಗಳೂರು, ಮೇ 28- ಸಚಿವರಾ ಗುವ ಆಸೆ ಸದ್ಯಕ್ಕೆ ತಮಗಿಲ್ಲ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಯಾರ್ಯಾರಿಗೆ ಅರ್ಜೆಂಟ್ ಇದೆಯೋ ಅವರು ಮೊದಲು ಸಚಿವ ರಾಗಲಿ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ್ಯಾರಿಗೆ ಸಚಿವರಾಗಬೇಕೆಂಬ ಆಸೆ ಇದೆಯೋ ಅವರೆಲ್ಲ ಸಚಿವರಾಗಲಿ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಯಾವಾಗ ವಿಸ್ತರಣೆಯಾಗಲಿದೆ ಎಂಬುದನ್ನು ಅವರನ್ನೇ ಕೇಳಬೇಕು ಎಂದರು.
ಮೈತ್ರಿ ಸರ್ಕಾರದ ಸಮನ್ವಯ ಸಮಿತಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರು ಸೇರ್ಪಡೆಯಾಗುವ ಕಾಲ ಕೂಡಿ ಬಂದಿದೆ. ಉಭಯ ಪಕ್ಷಗಳ ರಾಜ್ಯಾಧ್ಯಕ್ಷರು ಸಮಿತಿಯಲ್ಲಿರಬೇಕು ಎಂಬ ಆಗ್ರಹವನ್ನು ಮೊದಲಿನಿಂದಲೂ ಮಾಡುತ್ತಿದ್ದೇವೆ.
ಸಮನ್ವಯ ಸಮಿತಿಯ ಅಧ್ಯಕ್ಷರಿಗೆ ಮನವಿ ಮಾಡುತ್ತಲೂ ಬಂದಿದ್ದೇವೆ. ಯಾರೆಲ್ಲ ಸಮಿತಿಗೆ ಸೇರಿಸಿಕೊಳ್ಳಬೇಕು ಎಂಬ ನಿರ್ಧಾರ ಅವರೊಬ್ಬರದೇ ಅಂತ ಕಾಣುತ್ತೆ. ರಾಜ್ಯಾಧ್ಯಕ್ಷರುಗಳನ್ನು ಸೇರಿಸಿಕೊಳ್ಳಲು ಕಷ್ಟವೇನು? ಎಂದುಮಾರ್ಮಿಕವಾಗಿ ನುಡಿದರು.
ತಾವು ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಸಮನ್ವಯ ಸಮಿತಿಗೆ ಸೇರುವ ಸಮಯ ಬಂದಿದೆ ಎಂದು ಹೇಳಿದರು. ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು ಜಿಂದಾಲ್ ಸಂಸ್ಥೆಗೆ ಸರ್ಕಾರಿ ಜಮೀನು ನೀಡಬಾರದೆಂದು ಪತ್ರ ಬರೆದಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಮುಖ್ಯಮಂತ್ರಿಗೆ ಲಿಖಿತವಾಗಿ ಪತ್ರ ಬರೆದಿರುವುದರಲ್ಲಿ ವಾಸ್ತವಾಂಶ ಇರಬಹುದು ಎಂದರು.

ದಕ್ಷಿಣ.ಕನ್ನಡ. ಲೋಕಸಭಾ ಕ್ಷೇತ್ರ; 40 ಮತಗಟ್ಟೆಗಳ ಮತ ತಾಳೆ


ಮಹಾನಗರ: ಪ್ರತೀ ಲೋಕಸಭಾ ಕ್ಷೇತ್ರದ ಪೈಕಿ ಪ್ರತೀ ವಿಧಾನ ಸಭಾ ಕ್ಷೇತ್ರದ 5 ಮತಗಟ್ಟೆಗಳ ವಿ.ವಿ. ಪ್ಯಾಟ್‌ಗಳ ಮತಗಳನ್ನು ತಾಳೆ ಹಾಕಲು ಸುಪ್ರೀಂ ಕೋರ್ಟ್‌ ನೀಡಿದ ಸೂಚನೆ ಹಿನ್ನೆಲೆಯಲ್ಲಿ ದ.ಕ.ಲೋಕಸಭಾ ಕ್ಷೇತ್ರದ ಒಟ್ಟು 40 ಮತಗಟ್ಟೆಗಳ ಎಲ್ಲವೂ ಮತಗಳನ್ನು ತಾಳೆ ಮಾಡಲಾಗಿದೆ.
ಮತ ಎಣಿಕೆ ಸಂದರ್ಭ ವಿದ್ಯುನ್ಮಾನ ಮತ ಯಂತ್ರದ ಮತಗಳ ಎಣಿಕೆ ಜತೆ ಒಟ್ಟು 40 ಮತಗಟ್ಟೆಗಳ ವಿ.ವಿ. ಪ್ಯಾಟ್‌ಗಳ ಎಣಿಕೆ ನಡೆಸಲಾಗಿತ್ತು.
ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆಯಾಗಿ ವಿ.ವಿ.ಪ್ಯಾಟ್‌
ಮತಗಟ್ಟೆಗಳ ಸಂಖ್ಯೆ ಹಾಗೂ ವಿವರ:
ಮಂಗಳೂರು ದಕ್ಷಿಣ: 99-ದ.ಕ.ಜಿ.ಪಂ. ಹಿ.ಪ್ರಾ. ಶಾಲೆ ಕಸಬಾ ಬೆಂಗ್ರೆ, 109-ದ.ಕ.ಜಿ.ಪಂ. ಉರ್ದು ಹಿಪ್ರಾ ಶಾಲೆ ಕುದ್ರೋಳಿ, 195-ಆಂಗ್ಲ ಮಾಧ್ಯಮ ಶಾಲೆ ಕಣ್ಣೂರು, 235-ಸರಕಾರಿ ಹೈಸ್ಕೂಲ್‌ ಹೊಯ್ಗೆ ಬಜಾರ್‌, 160-ಇನ್‌ಫಾಂಟ್‌ ಮೇರಿಸ್‌ ಹಿ.ಪ್ರಾ.ಶಾಲೆ ಜೆಪ್ಪು.
ಮಂಗಳೂರು ಉತ್ತರ: 187- ವಿವೇಕಾ ನಂದ ಪಿ.ಯು. ಕಾಲೇಜ್‌ ಎಡಪದವು, 57-ವೆಂಕಟ್ರಮಣ ಹಿ.ಪ್ರಾ. ಶಾಲೆ ಕುಳಾಯಿಗುಡ್ಡೆ, 85-ಸರಕಾರಿ ಪಿ.ಯು. ಕಾಲೇಜ್‌ ಕಾವೂರು, 233-ಸೈಂಟ್‌ ಲಿಗೌರ್ ಅನುದಾನಿತ ಹಿ.ಪ್ರಾ.ಶಾಲೆ ಮೇರ‌್ಲಪದವು, 65-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬೈಕಂಪಾಡಿ.
ಮಂಗಳೂರು: 8-ದ.ಕ.ಜಿ.ಪಂ. ಉರ್ದು ಹಿಪ್ರಾ ಶಾಲೆ ಉಳ್ಳಾಲ, 96-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮೂಳೂರು, 102-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕೊಣಾಜೆ, 116-ಗ್ರೀನ್‌ ವ್ಯೂ ಶಾಲೆ ಕೊಣಾಜೆ, 171-ಶಾರದಾ ವಿದ್ಯಾನಿಕೇತನ ತಲಪಾಡಿ.
ಮೂಡುಬಿದಿರೆ: 45 -ದ.ಕ.ಜಿ.ಪಂ. ಹಿಪ್ರಾ ಶಾಲೆ ಪಣಪಿಲ, 94-ಪೊಂಪೈ ಕಾಲೇಜ್‌ ಐಕಳ, 101-ಸೈಂಟ್‌ ಮೇರಿಸ್‌ ಹಿಪ್ರಾ ಶಾಲೆ ಕಿನ್ನಿಗೋಳಿ, 163-ದ.ಕ.ಜಿ. ಪಂ.ಹಿ.ಪ್ರಾ. ಶಾಲೆ ಕುತ್ತೆತ್ತೂರು, 207-ದ.ಕ. ಜಿ.ಪಂ.ಹಿ.ಪ್ರಾ. ಶಾಲೆ ತೋಡಾರ್‌.
ಬಂಟ್ವಾಳ: 28-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕೊçಲ, 68-ಎಸ್‌ವಿಎಸ್‌ ಶಾಲೆ ಬಂಟ್ವಾಳ, 84-ಚಂದ್ರಮೌಳಿ ಅನುದಾನಿತ ಹಿ.ಪ್ರಾ. ಶಾಲೆ ಕಾವಳಮೂಡೂರು. 137-ಅಂಗನವಾಡಿ ಕೇಂದ್ರ ಜಾರಂದಗುಡ್ಡೆ ಕಳ್ಳಿಗೆ, 138-ದ.ಕ.ಜಿ.ಪಂ. ಹಿಪ್ರಾ ಶಾಲೆ ಕಳ್ಳಿಗೆ
ಬೆಳ್ತಂಗಡಿ: 14-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ನಾವೂರು, 162 – ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹೈಸ್ಕೂಲ್‌ ಧರ್ಮಸ್ಥಳ, 164-ಧರ್ಮಸ್ಥಳ ಮಂಜು ನಾಥೇಶ್ವರ ಅನುದಾನಿತ ಹಿ.ಪ್ರಾ. ಶಾಲೆ ಧರ್ಮಸ್ಥಳ, 164-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಿಯ್ನಾರುಮಠ ಪುದುವೆಟ್ಟು, 210-ದ.ಕ. ಜಿ.ಪಂ.ಹಿ.ಪ್ರಾ. ಶಾಲೆ ನಿಡ್ಲೆ.
ಪುತ್ತೂರು :15-ದ.ಕ.ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ (ನಾರ್ತ್‌ ವಿಭಾಗ) ವಿಟ್ಲ, 16-ಸೈಂಟ್‌ ರೀಟಾ ಅನುದಾನಿತ ಹಿ.ಪ್ರಾ. ಶಾಲೆ ವಿಟ್ಲ, 156-ದ.ಕ.ಜಿ.ಪಂ.ಕಿ.ಪ್ರಾ. ಶಾಲೆ ಇದ್ಯೊಟ್ಟು ಕುರಿಯ, 158-ದ.ಕ.ಜಿ.ಪಂ. ಹಿಪ್ರಾ ಶಾಲೆ ಮಾವಿನಕಟ್ಟೆ ಕುರಿಯ, 193-ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಸರ್ವೆ.
ಸುಳ್ಯ: 145-ದ.ಕ.ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ ಬೆಳ್ಳಾರೆ, 151-ಸರಕಾರಿ ಪಿ.ಯು. ಕಾಲೇಜ್‌ ಐವರ್ನಾಡು, 172-ದ.ಕ.ಜಿ.ಪಂ. ಹಿ.ಪ್ರಾ. ಶಾಲೆ ಜಟ್ಟಿ ಪಳ್ಳ, 191-ದ.ಕ.ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ ಮಂಡೆಕೋಲು, 216-ಗ್ರಾ.ಪಂ. ಸಭಾ ಭವನ ಅರಂತೋಡು .
ಎಲ್ಲ ಮತಗಳು 
ತಾಳೆಯಾಗಿವೆ
ವಿ.ವಿ.ಪ್ಯಾಟ್‌ಗಳ ಮತ ಎಣಿಕೆ ಮಾಡಲು ಮತಗಟ್ಟೆಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗಿತ್ತು. ಈ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರದಲ್ಲಿ ಚಲಾವಣೆಯಾದ ಮತಗಳನ್ನು ವಿ.ವಿ.ಪ್ಯಾಟ್‌ನಲ್ಲಿದ್ದ ಮತಗಳಿಗೆ ತಾಳೆ ಹಾಕಿ ಫ‌ಲಿತಾಂಶವನ್ನು ಖಚಿತ ಪಡಿಸಲಾಗಿದ್ದು ಎಲ್ಲ ಮತಗಳು ತಾಳೆಯಾಗಿವೆ.