ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ವಹಿವಾಟಿನ ಅನಿಶ್ಚಿತತೆ ಅನುಸರಿಸಿದ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಹಿನ್ನೆಡೆ ಅನುಭವಿಸಿದೆ.
ಬೆಳಗ್ಗೆ 11.30ರ ವೇಳೆಗೆ ಸೆನ್ಸೆಕ್ಸ್ 86.12 ಅಂಶಗಳ ನಷ್ಟದೊಂದಿಗೆ 39,663 ಅಂಶಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 6 ಅಂಶಗಳ ನಷ್ಟದೊಂದಿಗೆ 11,922 ಅಂಶಗಳ ಮಟ್ಟದಲ್ಲೂ ವ್ಯವಹಾರ ನಡೆಸುತ್ತಿತ್ತು.
ರೂಪಾಯಿಗೆ ಅಲ್ಪ ಹಿನ್ನೆಡೆ:
ಡಾಲರ್ ಎದುರು ರೂಪಾಯಿ ಆರಂಭಿಕ ವಹಿವಾಟಿನಲ್ಲಿ 14 ಪೈಸೆಗಳ ಹಿನ್ನಡೆ ಕಂಡು ₹ 69.83 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬೆಳಗ್ಗಿನ ವಹಿವಾಟಿನಲ್ಲಿ ಯೆಸ್ ಬ್ಯಾಂಕ್, ಎಲ್ಟಿ, ಟಿಸಿಎಸ್, ಪವರ್ ಗ್ರಿಡ್, ಹಿಂದೂಸ್ತಾನ ಯುನಿಲಿವರ್, ಇನ್ಫೋಸಿಸ್, ಎಚ್ಡಿಎಫ್ಸಿ ಬ್ಯಾಂಕ್, ಎಚ್ಸಿಎಲ್ ಟೆಕ್ ಷೇರುಗಳ ಮೌಲ್ಯ ಏರಿಕೆ ಕಂಡುಬಂದರೆ, ಎಚ್ಡಿಎಫ್ಸಿ, ಐಟಿಸಿ, ರಿಲಯನ್ಸ್, ಕೋಲ್ ಇಂಡಿಯಾ, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಕೋಟ್ಯಾಕ್ ಬ್ಯಾಂಕ್, ಬಜಾಜ್ ಆಟೋ, ಇಂಡ್ಲ್ಯಾಂಡ್ ಬ್ಯಾಂಕ್ ಷೇರುಗಳ ದರ ಇಳಿಕೆಯಾಗಿದೆ.