ಮಿಥುನ್ ರೈ ವಿರುದ್ಧ ನಿಂದಿಸಿ, ಜೀವಬೆದರಿಕೆ: ಮತ್ತೆ ಮೂವರು ಸಂಘಪರಿವಾರ ಕಾರ್ಯಕರ್ತರು ಸೆರೆ

                  
ಮಂಗಳೂರು:  ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ಚುನಾವಣಾ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಅವಾಚ್ಯವಾಗಿ ನಿಂದಿಸಿ ಹಾಗೂ ಜೀವಬೆದರಿಕೆ ಒಡ್ಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಮತ್ತೆ ಮೂವರು ಸಂಘಪರಿವಾರದ ಕಾರ್ಯಕರ್ತರನ್ನು ಮಂಗಳವಾರ ಬಂಧಿಸಿದ್ದಾರೆ. ಬಂಟ್ವಾಳದ ನಿವಾಸಿಗಳಾದ ಸಂಜೀವ, ಪ್ರೀತಂ ಮತ್ತು ಕರುಣಾಕರ ಬಂಧಿತ ಆರೋಪಿಗಳಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಇದೀಗ 6ಕ್ಕೇರಿದೆ. ಸಂಘಪರಿವಾರದ ಕಾರ್ಯಕರ್ತರಾದ ಅಮ್ಮುoಜೆ ನಿವಾಸಿಗಳಾದ ನಿಶಾಂತ್ ಸಚಿನ್, ಮತ್ತು ಕಾಸರಗೋಡಿನ ಕಾರ್ತಿಕ್ ಎಂಬವರನ್ನು ಪೊಲೀಸರು ಸೋಮವಾರ ವಶಕ್ಕೆ ತೆಗೆದು ಕೊಂಡಿದ್ದರು. ಬಂಧಿತ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. *W🌍RLD Whatsapp✔* *ನಮಗೆ ನಾವೇ ಮಾಧ್ಯಮ* ಮೇ 23ರಂದು ರಾತ್ರಿ ಬಡಕಬೈಲು ಎಂಬಲ್ಲಿ ಬಿಜೆಪಿಯ ಚುನಾವಣಾ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಅವಾಚ್ಯವಾಗಿ ನಿಂದಿಸಿ ಹಾಗೂ ಜೀವಬೆದರಿಕೆ ಒಡ್ಡಿದರು. ಪ್ರಕರಣದ ಕುರಿತು ಮಿಥುನ್ ರೈ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ದೂರು ನೀಡಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.