ತೆಹರಿ ಅರಣ್ಯ ಪ್ರದೇಶದಲ್ಲಿ ಭೀಕರ ಸ್ವರೂಪ ಪಡೆಯುತ್ತಿರುವ ಕಾಡ್ಗಿಚ್ಚು


ಉತ್ತರಾಖಂಡ್​ : ಇಲ್ಲಿನ ತೆಹರಿ ಅರಣ್ಯ ಪ್ರದೇಶದಲ್ಲಿ ಹೊತ್ತಿಕೊಂಡಿರುವ ಕಾಡ್ಗಿಚ್ಚಿನ ಬೆಂಕಿಯ ಕೆನ್ನಾಲಿಗೆ ಇನ್ನಷ್ಟು ವಿಸ್ತರಿಸುತ್ತಿದ್ದು, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗಳು ಮುಂದುವರೆದಿವೆ.

ತೆಹರಿ ಅರಣ್ಯ ಪ್ರದೇಶದಲ್ಲಿ ಹೊತ್ತಿಕೊಂಡಿರುವ ಬೆಂಕಿ
ಸ್ವಲ್ಪವೂ ಮಳೆ ಬಾರದ ಕಾರಣ ಉಷ್ಣಾಂಶವು ತೀವ್ರವಾಗಿದ್ದು, ತೆಹರಿ ಅರಣ್ಯ ಪ್ರದೇಶದಲ್ಲಿ ಬೆಂಕಿಯ ಆರ್ಭಟವೂ ಹೆಚ್ಚಾಗಿದೆ. ಇದರಿಂದ ಸಾವಿರಾರು ಮರಗಳು ಸುಟ್ಟು ಭಸ್ಮವಾಗಿವೆ. ಮಳೆಯಿಲ್ಲದೇ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಈ ವರ್ಷದ ಅವಧಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಮೂರು ಡಿಗ್ರಿ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಮುಂದಿನ ಮೂರು ದಿನಗಳ ಕಾಲ ತಾಪಮಾನವು 40 ಡಿಗ್ರಿ ಸೆಲ್ಷಿಯಸ್ ಇರಲಿದೆ ಎಂದೂ ಊಹಿಸಲಾಗಿದೆ.
ಕೆಲ ತಿಂಗಳ ಹಿಂದೆ ಕರ್ನಾಟಕದಲ್ಲೂ ಕೂಡ ಹೆಚ್ಚಿದ ಉಷ್ಣಾಂಶದಿಂದ ಬಂಡೀಪುರ ಅಭಯಾರಣ್ಯ ಸೇರಿದಂತೆ ರಾಜ್ಯದ ಹಲವೆಡೆ ಅರಣ್ಯ ಪ್ರದೇಶಗಳು ಕಾಡ್ಗಿಚ್ಚಿಗೆ ಸುಟ್ಟು ಭಸ್ಮವಾಗಿತ್ತು.