ಇಂದು ಕಾಂಗ್ರೆಸ್​ ಸಂಸದೀಯ ಸದಸ್ಯರ ಸಭೆ: ಯಾರಿಗೆ ಒಲಿಯಲಿದೆ ಅಧ್ಯಕ್ಷ ಗಾದಿ ?


ನವದೆಹಲಿ: ಲೋಕಸಭಾ ಚುನಾವಣೆ ಪಲಿತಾಂಶದ ನಂತರ ಮೊದಲ ಬಾರಿಗೆ ಕಾಂಗ್ರೆಸ್​ ಸಂಸದೀಯ ಸದಸ್ಯರ ಸಭೆ ಇಂದು ನವದೆಹಲಿಯಲ್ಲಿ ನಡೆಯಲಿದೆ. ರಾಹುಲ್​ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರನ್ನ ಸಂಸದೀಯ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ಕಳೆದ ವಾರವಷ್ಟೇ ನಡೆದ ಕಾಂಗ್ರೆಸ್​ ಕಾರ್ಯಕಾರಿಣಿಯಲ್ಲಿ ರಾಹುಲ್​ ​ಗಾಂಧಿ ಎಐಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಆದ್ರೆ ರಾಹುಲ್​ ಅವರ ನಿರ್ಧಾರವನ್ನ ತಿರಸ್ಕರಿಸಿರುವ ಕೈ ನಾಯಕರು, ತಾವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯ ಬೇಕು ಎಂದು ಮನವಿ ಮಾಡಿದ್ದಾರೆ.
543ರಲ್ಲಿ 52 ಸ್ಥಾನವನ್ನ ಗೆದ್ದಿರುವ ಕಾಂಗ್ರೆಸ್​ ಪಾರ್ಟಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಇನ್ನೂ 3 ಸ್ಥಾನಗಳ ಕೊರತೆಯನ್ನ ಎದುರಿಸುತ್ತಿದೆ. ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಅವರೇ ಸಂಸದೀಯ ಪಕ್ಷದ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.