“ಮಹಿರ್ಷಿ” ಸಿನಿಮಾ ಮೂಲಕ ಕಾರ್ಪೋರೇಟ್ ಸಂಸ್ಕøತಿಯ ಅನಾವರಣ* 


✍ರಮೇಶ್ ಹಾಸನ
 ಇತ್ತೀಚಿಗಷ್ಟೆ ಬಿಡುಗಡೆಯಾದ ತೆಗುಲು ಮಹೇಶ್ ಬಾಬು ನಟಿಸಿರುವ ಮಹಿರ್ಷಿಎಂಬ ಸಿನಿಮಾ ದಕ್ಷಿಣ ಭಾರದಾದ್ಯಂತ ನಿರೀಕ್ಷೆಗು ಮೀರಿ ಯಶಸ್ಸಿನೊಂದಿಗೆ ಮುನ್ನಗ್ಗುತ್ತಿದೆ. ಯುವ ಜನತೆಯಂತು ಚಿತ್ರವನ್ನು ನೋಡಲು ಮುಗಿಬೀಳುತ್ತಿರುವುದು ಕಂಡರೆ ಚಿತ್ರವನ್ನ ನಾವು ಕೂಡ ನೋಡಬೇಕೆನ್ನಿಸುತ್ತದೆ. ಚಿತ್ರವನ್ನು ನೋಡುತ್ತಾ ಹೋದರೆ ಮೊದಲನೆ ಭಾಗದಲ್ಲಿ ಮಧ್ಯಮ ವರ್ಗದಲ್ಲಿ ಜನಿಸಿದ ನಟ ಸಾಮಾನ್ಯವಾಗಿ ಎಲ್ಲರು ಎದುರಿಸುವ ಸಮಸ್ಯೆಗಳನ್ನು ಎದುರಿಸುತ್ತಾನೆ, ಹಾಗಯೆ ತಂದೆಯ ಮಾತುಗಳು ಮತ್ತು ತನ್ನ ವಿದ್ಯಾರ್ಥಿ ಜೀವನ ಮತ್ತು ತನ್ನ ಕನಸುಗಳನ್ನು ಬೆನ್ನು ಹತ್ತುತ್ತಾ ತಾನೊಬ್ಬ ದೊಡ್ಡ ವ್ಯಕ್ತಿ ಬಂಡವಾಳಗಾರನಾಗಲು ಪದವಿಗಳನ್ನು ಬೆನ್ನು ಹತ್ತುತ್ತಾ ಹೊರುಡುತ್ತಾನೆ, ಮದ್ಯದಲ್ಲಿ ಒಂದಿಷ್ಟು ಪ್ರೇಮ ಮತ್ತು ಸವಾಲುಗಳನ್ನು ಎದುರಿಸುತ್ತಾ ತನ್ನ ಸ್ನೇಹಿತನ ತ್ಯಾಗದ ಮೂಲಕ ವಿದ್ಯಾಭ್ಯಾಸ ಮುಗಿಸಿ ಹೊರದೇಶಕ್ಕೆ ತೆರಳಿ ತಾನು ಕಂಡ ಕನಸಂತೆಯೆ ದೊಡ್ಡ ಬಂಡವಾಳಗಾರನಾಗುತ್ತಾನೆ. ಹೀಗೆ ತನ್ನ ಯಶಸ್ಸಿಗೆ ಪೂರಕವಾಗಿ ಒಂದು ಔತಣಕೂಟದಲ್ಲಿ ತನ್ನ ಸ್ನೇಹಿತನ ತ್ಯಾಗದ ಕಥೆಯನ್ನು ಕೇಳಿದ ಮರುದಿನವೆ ಭಾರತಕ್ಕೆ ಹಿಂದಿರುಗುವ ಚಿತ್ರದ ನಾಯಕ ತನ್ನ ಸ್ನೇಹಿತನ ಅವಸ್ಥೆಯನ್ನು ಕಂಡು ಮರಗಿ ಮತ್ತವನ ಕನಸು ಮತ್ತು ಪ್ರೀತಿಯನ್ನ ಉಳಿಸಲು ಮುಂದಾಗಿ ಯಶಸ್ಸು ಕಾಣುವುದು ಚಿತ್ರದ ಕಥೆಯಾಗಿ ಕಾಣುತ್ತದೆ. ಕಾರ್ಪೋರೇಟ್ ಜಗತ್ತಿನತ್ತ ಕಥೆಯ ಚಿತ್ತ ಚಿತ್ರವನ್ನು ನೋಡಿದ ನಂತರದಲ್ಲಿ ನಿಜವಾಗಿಯು ಒಂದು ಪ್ರಶ್ನೆ ಮೂಡುತ್ತದೆ, ಚಿತ್ರದ ನಾಯಕ ರಿಷಿ ಮಧ್ಯಮ ವರ್ಗದಿಂದ ಬಂದಂತಹ ಹುಡುಗನಾದರು ತನ್ನ ಎಲ್ಲಾ ಆಲೋಚನೆಗಳು ಜಗತ್ತನ್ನು ಗೆಲ್ಲುವುದು ತಾನೊಬ್ಬ ಬಂಡವಾಳಗಾರನಾಗುವುದು ಇದಕ್ಕೆ ಕಾರಣ ತನ್ನ ಅಪ್ಪನನ್ನು ಎಲ್ಲರು ಹೀಯಾಳಿಸುವ ಘಟನೆಗಳ ಮತ್ತು ಅವಮಾನದ ಸಂಗತಿಗಳು ಆಗಿರುವುದು, ಚಿತ್ರದ ಕಥೆಯ ದಿಕ್ಕನ್ನು ಮತ್ತು ಕಾರ್ಪೋರೇಟ್ ಮನಸ್ಥಿತಿಗಳ ಒಳ ಮರ್ಮವನ್ನು ಕಥೆಯಾಗಿ ಎಣೆದು ಮೂಕ ವಿಸ್ಮರನ್ನಾಗಿಸುವ ಹುನ್ನಾರವಂತು ಸತ್ಯ. ತನ್ನಂತೆಯೆ ತನ್ನ ಸ್ನೇಹಿತ ಒಂದು ಹಳ್ಳಿಯಂದ ಬಂದು ಕೇವಲ ಒಂದೆರೆಡು ವರ್ಷಗಳ ಸ್ನೇಹದಿಂದ ಇಡೀ ಜೀವನವನ್ನೆ ತನಗೆ ಧಾರೆ ಎರಯುವ ಮನಸ್ಸು ಮಾಡಿರುವು ನಿಜವಾದ ಒಬ್ಬ ರೈತನ ಮನಸ್ಸುನ್ನು ಅನಾವಣ ಮಾಡಿದೆ, ಹಾಗೆಯೆ ಕಥೆಗಾರನು ಕೂಡ ತನ್ನ ಚಾಣಾಕ್ಷತನದಿಂದ ರೈತನ ಮಗನ ಜೀವನವನ್ನು ಹಾಳು ಮಾಡಿದ್ದಲ್ಲದೆ ತ್ಯಾಗವನ್ನು ಮುಂದಿಟ್ಟುಕೊಂಡು ಕಥೆಯನ್ನು ಹೆಣೆದಿರುವುದು ಕಾರ್ಪೋರೇಟ್ ಚಿತ್ರ ಮತ್ತು ಚಿತ್ರಣವನ್ನು ಅನಾವರಣಗೊಳಿಸಿದೆ. ಈಗಿನ ಹೊಸ ಆಲೋಚನೆಗಳಂತು ಶ್ರೀಮಂತ ಲೋಕಕ್ಕೆ ಮೀಸಲಿರಿಸುವ ಮತ್ತು ಸಾಮಾಜಿಕ ಶೈಕ್ಷಣಿಕ ಆಯಾಮಗಳನ್ನು ಕಾರ್ಪೋರೇಟ್ ಸಂಸ್ಕøತಿಯತ್ತ ಕೊಂಡಯ್ಯುತ್ತಿರುವು ಅವುಗಳನ್ನು ಸಿನಿಮಾಗಳ ಮೂಲಕ ಜನರನ್ನು ಮೂಕರನ್ನಾಗಿಸುತ್ತಿರುವುದು ದುರಂತವೇ ಸರಿ. ರೈತ ಮತ್ತು ಪ್ರಭುತ್ವದ ಸೋಲು ಕಾರ್ಪೋರೇಟ್ ತಂತ್ರದ ಗೆಲುವು ರಿಷಿ ತನ್ನ ಗೆಳಯನಿಗಾಗಿ ಭಾರಕ್ಕೆ ಹಿಂದುರುಗಿದಾಗ, ತನ್ನ ಗೆಳೆಯ ತನ್ನ ಊರು ತಂದೆಯ ಕನಸಿನಂತೆ ಕೃಷಿ ಭೂಮಿಯನ್ನು ಉಳಿಸಲು ತನ್ನದೆ ಆದ ಹೋರಾಟವನ್ನು ಏಕಾಂಗಿಯಾಗಿ ಹೋರಾಟ ಮುಂದುವರೆಸುತ್ತಿರುತ್ತಾನೆ, ಇದಕ್ಕೆ ಅಲ್ಲಿನ ಭೂಮಿಯನ್ನು ಹಲವಾರು ಕಾರ್ಪೋರೇಟ್ ಕಂಪನಿಗಳು ಮತ್ತು ಕಬಳಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿರುತ್ತದೆ ಇದಕ್ಕೆ ಸಾಕ್ಷಯೆಂಬಂತೆ ಪ್ರಭುತ್ವ ಬಂಡವಳಿಗ ಬೆನ್ನಲುಬಾಗಿ ನಿಂತು ರೈತರ ಕಣ್ಣಿಗೆ ಮಣ್ಣೆರೆಚುವ ಕೆಲವ ಮಾಡುತ್ತಿರುತ್ತದೆ. ಹಈಗೆ ಅಡೆತಡೆಗಳನ್ನು ತಡೆಯಲು ನಾಯಕ ತನ್ನ ಬಂಡವಾಳದ ಮೂಲಕ ಊರಿನಲ್ಲಿ ನಡೆಯುವ ಹೋರಾಟ ಜಗತ್ತಿಗೆ ಪರಿಚಯಿಸಿ ತನ್ನ ಗೆಳಯನ ಕನಸಿಗಾಗಿ ರಿಷಿ ನಿಲ್ಲುತ್ತಾನೆ, ಕೊನೆಗೆ ಊರಿನ ರೈತರನ್ನೆಲ್ಲ ಕಾರ್ಪೋರೇಟ್ ಕಂಪನಿಗಳು ಒಂದಿಷ್ಟು ಹಣ ಭೂಮಿಯನ್ನು ಕೊಡುತ್ತೇವೆ ಎಂದು ಆಸೆಗಳನ್ನು ಒಡ್ಡಿ ಊರಿನವರನ್ನೆಲ್ಲಾ ತನ್ನತ್ತ ಸೆಳೆಯುತ್ತಾ ಗೆಳೆಯನ ಹೋರಾಟವನ್ನು ದಿಕ್ಕು ತಪ್ಪಿಸಲು ಮುಂದಾಗುತ್ತವೆ. ಈ ಎಲ್ಲಾ ಬೆಳವಣಿಗೆಗಳನ್ನು ರಿಷಿ ಮನಗಂಡು ತಾನೂ ಕಾರ್ಪೋರೇಟ್ ಉದ್ಯಮಿಯಾಗಿ ಹೆಚ್ಚಾಗಿ ಹಣ ಮತ್ತು ಸಂಪನ್ಮೂಲಗಳನ್ನು ಒದಗಿಸುವುದಾಗಿ ಹೇಳಿ ರೈತರನ್ನು ತನ್ನತ್ತ ಸೆಳೆದು ಆ ರೈತರ ಮನದಲ್ಲಿ ದೇವರಾಗಿ ಬಿಡುತ್ತಾನೆ ಇದೇ ಕಥೆಯ ಚಿತ್ರಣ, ಆದರೆ ತಮ್ಮ ಪಾಲನ್ನು ಪ್ರಭುತ್ವದ ಹಕ್ಕು ಅಧಿಕಾರದಿಂದ ಪಡೆದುಕೊಳ್ಳಬೇಕಾಗಿದ್ದ ರೈತ ಕಾರ್ಪೋರೇಟಿಗರ ಋಣಕ್ಕೆ ಸಿಲುಕಿಸಿರುವುದಂತು ದುಂತದದ ಸಂಗತಿಯಾಗಿದೆ. ಚಿತ್ರದಲ್ಲಿ ಸ್ನೇಹಿತನ ವೈಯಕ್ತಿಕ ಆಸೆಗೆ ಇಂತಹ ಕೀಳು ಮಟ್ಟದ ಆಲೋಚನೆಯ ಕಥೆಗಳನ್ನು ಎಣೆದು ಎಲ್ಲರ ಮನಸ್ಸುಗಳಲ್ಲಿ ಕಾರ್ಪೋರೇಟ್‍ಶಕ್ತಿಗಳನ್ನು ದೇವರಂತೆ ಕಾಣುವಂತೆ ಚಿತ್ರವನ್ನು ವೈಭರೀಕರಿಸಲಾಗಿದೆ. ಇಂತಹ ಬಂಡಔಆಳಶಾಹಿಗಳ ಬಗ್ಗೆ ಮತ್ತು ಪ್ರಭುತ್ವಗಳ ಕಾರ್ಪೋರೇಟ್ ಮನಸ್ಥಿತಿಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾಗಿದೆ.