ಜಸ್​ಪ್ರೀತ್​ ಬೂಮ್ರಾ ಯಾರ್ಕರ್​ ದಾಳಿಗೆ ಶಕೀಬ್​ ಹಸನ್​ ಕ್ಲೀನ್ ಬೋಲ್ಡ್​!


ಲಂಡನ್​​: ವಿಶ್ವಕಪ್ ಆರಂಭಕ್ಕೂ ಮುನ್ನ ಬಾಂಗ್ಲಾ ವಿರುದ್ಧ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಮಹಾಯುದ್ಧಕ್ಕೆ ಮೈಕೊಡವಿಕೊಂಡು ಸನ್ನದ್ಧಗೊಂಡಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಕೆ.ಎಲ್​ ರಾಹುಲ್​ ಹಾಗೂ ಧೋನಿ ಶತಕದ ಜೊತೆಯಾಟದಿಂದ ತಂಡ 360 ರನ್‌ಗಳ ಬೃಹತ್‌​ ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ್ದ ಬಾಂಗ್ಲಾ ತಂಡ 95 ರನ್​ಗಳ ಸೋಲು ಕಂಡಿದೆ.
ಪಂದ್ಯದಲ್ಲಿ ಟೀಂ ಇಂಡಿಯಾ ಪರ ಸ್ಪಿನ್ನರ್​ಗಳಾದ ಕುಲದೀಪ್‌​ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಮಿಂಚಿದ್ರೂ ಕೂಡ ಯಾರ್ಕರ್​ ಸ್ಪೆಷಲಿಸ್ಟ್​ ಬೂಮ್ರಾ ತಮ್ಮ ಕೈಚಳಕ ತೋರಿದ್ದಾರೆ.
ಬಾಂಗ್ಲಾ ತಂಡದ ಹಿರಿಯ ಆಟಗಾರ ಶಕೀಬ್​ ಅಲ್​ ಹಸನ್ ಬ್ಯಾಟಿಂಗ್​ ಮಾಡಲು ಮೈದಾನಕ್ಕೆ ಬಂದು ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್​ ಒಪ್ಪಿಸಿದರು. ಶಕೀಬ್‌ ಬೋಲ್ಡ್ ಆಗುವ ವೇಳೆ, ಬೌಲಿಂಗ್​ ಮಾಡಿದ ಬೂಮ್ರಾ ಬರೋಬ್ಬರಿ 141 ಕಿ.ಮೀ ವೇಗದಲ್ಲಿ ಯಾರ್ಕರ್​ ರೂಪದಲ್ಲಿ ಬಾಲ್ ಎಸೆದಿದ್ದರು. ಈ ಎಸೆತ ಅರ್ಥ ಮಾಡಿಕೊಳ್ಳಲು ವಿಫಲರಾದ ಶಕೀಬ್​ ವಿಕೆಟ್​ ಒಪ್ಪಿಸಲೇಬೇಕಾಯಿತು.