ಪಾಕ್ ಪ್ರಧಾನಿ ಟ್ವಿಟರ್ ಫಾಲೋ ಮಾಡಿದ ಕಾಶ್ಮೀರ ರಾಜ್ಯಪಾಲರ ಖಾತೆ ಹ್ಯಾಕ್
ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು, ವೈರಿ ದೇಶದ ಪ್ರಧಾನಿ ಟ್ವೀಟರ್ ಖಾತೆ ಫಾಲೋ ಮಾಡಿದ್ದು ಆರಂಭದಲ್ಲಿ ಇದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಬಳಿಕ ಮಲಿಕ್‌ರ ಟ್ವೀಟರ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ. ಘಟನೆ ಕುರಿತು ರಾಜ್ಯಪಾಲರ ಕಚೇರಿ, ಪೊಲೀಸರಿಗೆ ದೂರು ಸಲ್ಲಿಸಿದೆ.
ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ: ಸಹರಾ ಎಫ್.ಸಿ ಹೊಳಮಾಲ ಸೆಮಿಫೈನಲ್ಗೆ
ತಾಯಿ ಮಗಳ ಭೀಕರ ಹತ್ಯೆ : ಸೋಮವಾರಪೇಟೆ ಸಮೀಪ ಘಟನೆ
ಸೋಮವಾರಪೇಟೆ : ಕಾಫಿ ತೋಟದಲ್ಲಿ ತಾಯಿ ಮಗಳನ್ನ ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆ ಮಾಡಿರೋ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ದೊಡ್ಡಮಲ್ತೆ ಗ್ರಾಮದಲ್ಲಿ ನಡೆದಿದೆ. ಕವಿತಾ(45), ಜಗಶ್ರೀ(16) ಹತ್ಯೆಯಾದವರು. ಕಾಫಿತೋಟವೊಂದರ ಮನೆಯಲ್ಲಿದ್ದ ಇಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ. ಮಂಗಳೂರಿನ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ
ಮುಗಿಸಿರುವ ಜಗಶ್ರೀ ರಜೆಗೆಂದು ಇತ್ತೀಚೆಗಷ್ಟೇ ಊರಿಗೆ ಬಂದಿದ್ರು. ಆಸ್ತಿ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗಿದ್ದು, ಸೋಮವಾರಪೇಟೆ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಇತ್ತೀಚೆಗಷ್ಟೇ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ಧಾಪುರದಲ್ಲೂ ಡಬ್ಬಲ್ ಮರ್ಡರ್ . ಸಾಮಾನ್ಯವಾಗಿ ಕೊಡಗಿನಲ್ಲಿ ಆಸ್ತಿಗಾಗಿ ವಿಚಾರದಲ್ಲಿ ಶುರುವಾಗೋ ಜಗಳ ಅಷ್ಟಕ್ಕೇ ಮುಗಿಯದೇ ಕೊಲೆಯಲ್ಲಿ ಅಂತ್ಯವಾಗುವ ಪ್ರಕರಣಗಳು ನಡೆಯುತ್ತಲೇ ಇರೋದು ನಿಜಕ್ಕೂ ದುರಂತ.
ಎಸ್.ಎಸ್.ಎಲ್.ಸಿ. ಫಲಿತಾಂಶ ಕೊಡಗು ೨೨ ನೇ ಸ್ಥಾನಕ್ಕೆ ಕುಸಿತ
ಮಡಿಕೇರಿ ಏ.೩೦ : ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷ ೧೮ ನೇ ಸ್ಥಾನದಲ್ಲಿದ್ದ ಕೊಡಗು ಜಿಲ್ಲೆ ಈ ಬಾರಿ ೨೨ ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಗೋಣಿಕೊಪ್ಪಲು ಕಳತ್ಮಾಡ್ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾಗೃತಿ ಸುಬ್ಬಯ್ಯ ಹಾಗೂ ಸೋಮವಾರಪೇಟೆಯ ಸೇಂಟ್ ಜೋಸೆಫ್ ಶಾಲೆಯ ಶ್ರಾವಣಿ ೬೧೬ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಸಂದರ್ಭ ನೀಡಿದ ರಜೆಗಳಿಂದಾಗಿ ಫಲಿತಾಂಶದಲ್ಲಿ ಹಿನ್ನಡೆಯಾಗಿರಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಚ್ಚಾಡೊ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಿ ಶಾಲೆಗಳಾದ ಕೊಂಡಗೇರಿ, ಚೆಂಬು, ಹಂಡ್ಲಿ, ನಿಡ್ತ, ಮಕ್ಕಂದೂರು, ಟಿ.ಶೆಟ್ಟಿಗೇರಿ, ಕಿರಗಂದೂರು ಒಟ್ಟು ೭ ಶಾಲೆಗಳು. ಅನುದಾನಿತ ಶಾಲೆಗಳಾದ ಬಿರುನಾಣಿ ಮರೆನಾಡು ಪ್ರೌಢ ಶಾಲೆ, ಬೆಕ್ಕೆ ಸೊಡ್ಲೂರು ಶಾರದ ಪ್ರೌಢ ಶಾಲೆ, ದೇವಣಗೆರೆ ಬಿ.ಸಿ.ಪ್ರೌಢ ಶಾಲೆ, ಅನುದಾನ ರಹಿತ ಶಾಲೆಗಳಾದ ಪೊನ್ನಂಪೇಟೆಯ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ, ಕೊಡಗರಹಳ್ಳಿಯ ಶಾಂತಿ ನಿಕೇತನ ಪ್ರೌಢ ಶಾಲೆ, ಮೂರ್ನಾಡು ಮಾರುತಿ ಪ್ರೌಢ ಶಾಲೆ, ವಿರಾಜಪೇಟೆಯ ಕಾವೇರಿ ಪ್ರೌಢ ಶಾಲೆ, ಗೋಣಿಕೊಪ್ಪದ ಸಂತ ತೋಮಸ್ ಪ್ರೌಢ ಶಾಲೆ, ವಿರಾಜಪೇಟೆಯ ತ್ರಿವೇಣಿ ಪ್ರೌಢ ಶಾಲೆ, ಶ್ರೀಮಂಗಳದ ಜೆ.ಸಿ. ಆಂಗ್ಲ ಮಾಧ್ಯಮ ಶಾಲೆ, ಕೊಡಂಬೂರು ಜ್ಞಾನ ಜ್ಯೋತಿ ಪ್ರೌಢ ಶಾಲೆ, ಸಿದ್ದಾಪುರದ ಶ್ರೀಕೃಷ್ಣ ವಿದ್ಯಾಮಂದಿರ ಹಾಗೂ ವಿರಾಜಪೇಟೆಯ ಮೌಂಟೇನ್ ವ್ಯೂ ಪ್ರೌಢ ಶಾಲೆ ಒಟ್ಟು ೧೦ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು ೨೦ ಶಾಲೆಗಳಿಗೆ ಶೇ.೧೦೦ ರಷ್ಟು ಫಲಿತಾಂಶ ಪಡೆದಿವೆ.
ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಎಂ.ಜಾಗೃತಿ ಸುಬ್ಬಯ್ಯ ೬೧೬, ಸೋಮವಾರಪೇಟೆ ಸಂತ ಜೋಸೆಫರ ಪ್ರೌಢ ಶಾಲೆಯ ಎಂ.ಯು.ಶ್ರಾವಣಿ ೬೧೬, ಶನಿವಾರಸಂತೆಯ ಸೇಕ್ರೇಡ್ ಹಾರ್ಟ್ ಪ್ರೌಢ ಶಾಲೆಯ ಎ.ಎಚ್.ಕವನ ೬೧೫, ಬಿ.ಅಪೇಕ್ಷಾ ೬೧೨, ಚೌಡ್ಲು ಸಾಂಧೀಪನಿ ಪ್ರೌಢ ಶಾಲೆಯ ಎಚ್.ಕೆ.ಚಿನ್ಮಯಿ ೬೧೨, ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಕೆ.ಎ.ಅನನ್ಯ ೬೧೨, ಕುಶಾಲನಗರ ಫಾತಿಮಾ ಪ್ರೌಢ ಶಾಲೆಯ ಡಿ.ಆರ್.ಶಿವಾನಿ ಮತ್ತು ಎನ್.ಡಿ.ಹರ್ಷಿಣಿ ೬೧೨, ಮಡಿಕೇರಿಯ ಸಂತ ಜೋಸೆಫರ ಪ್ರೌಢ ಶಾಲೆಯ ಪಿ.ಎಲ್.ಮೌನ ಮತ್ತು ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಕೆ.ಪಿ.ಅನನ್ಯ ಅಕ್ಕಮ್ಮ ಅವರು ತಲಾ ೬೧೧ ಅಂಕ ಪಡೆದಿದ್ದಾರೆ.
ಎಸ್ಸೆಸ್ಸಲ್ಸಿ ಫಲಿತಾಂಶ: ರಾಜ್ಯ ಪ್ರಥಮ ಯಾರು..?
624 ಅಂಕ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.ಬೆಂಗಳೂರು ದಕ್ಷಿಣದ ಆನೇಕಲ್ ತಾಲೂಕು ಅತ್ತಿಬೆಲೆಯ ಸೇಂಟ್ ಫಿಲೋಮಿನಾ ಇಂಗ್ಲಿಷ್ ಹೈ ಸ್ಕೂಲ್‌ನ ವಿದ್ಯಾರ್ಥಿನಿ ಡಿ. ಸೃಜನಾ 625 ಅಂಕ, ಕುಮುಟಾದ ಕೊಲಬಾ ವಿಥೋಬ್ ಶಾನ್‌ಭೋಗ್ ಕಲ್ಬಾಕರ್ ಹೈ ಸ್ಕೂಲ್‌ನ ನಾಗಾಂಜಲಿಗೆ 625 ಅಂಕ ಬಂದಿವೆ.
ಬೆಂಗಳೂರು ಉತ್ತರದ ಭಾವನಾ.ಯು.ಎಸ್, ಭಾವನಾ.ಆರ್., ಸಾಯಿರಾಮ್, ಬೆಂಗಳೂರು ದಕ್ಷಿಣದ ಶಾಂಭವಿ ಎಚ್.ವಿ., ತುಮಕೂರಿನ ಹರ್ಷಿತ್ ಸಿ., ಮಂಗಳೂರಿನ ಸಿಂಚನಾ ಲಕ್ಷ್ಮೀ, ಕೃಪಾ ಕೆ.ಆರ್. ಅನುಪಮಾ ಕಾಮತ್, ಚಿನ್ಮಯಿ, ಹಾಸನದ ಪ್ರಗತಿ ಎಂ.ಗೌಡ ಮತ್ತು ಅಭಿನ್ ಬಿ. – 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೇ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಎಸ್ಸೆಸ್ಸಲ್ಸಿ ಫಲಿತಾಂಶ : ಬಾಲಕಿಯರೇ ಮೇಲುಗೈ
ಎಸ್ಸೆಸ್ಸಲ್ಸಿ ಫಲಿತಾಂಶ: ಹಾಸನ ಪ್ರಥಮ ಯಾದಗಿರಿ ಲಾಸ್ಟ್
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಒಟ್ಟಾರೆ ಶೇ. 73.7 ರಷ್ಟು ಫಲಿತಾಂಶ ಬಂದಿದೆ. ಶೇಕಡಾವಾರು ಫಲಿತಾಂಶದ ಆಧಾರದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೆ ಯಾದಗಿರಿ ಕೊನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಈ ಬಾರಿ ಮೂರು ರೀತಿಯಲ್ಲಿ ಜಿಲ್ಲಾವಾರು ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡಿದ್ದು, ಶೇಖಡಾವಾರು ಫಲಿತಾಂಶ, ಆವರೇಜ್ ಮಾರ್ಕ್ಸ್, 60ಕ್ಕಿಂತ ಕಡಿಮೆ ಅಂಕದ ಆಧಾರದ ಮೇಲೆ ಜಿಲ್ಲಾವಾರು ಫಲಿತಾಂಶವನ್ನು ನಿಗದಿಮಾಡಲಾಗಿದೆ.
ಹಾಸನ ಮೊದಲ ಸ್ಥಾನ ಪಡೆದುಕೊಂಡಿದ್ದು, ಎರಡನೆಯದಾಗಿ ರಾಮನಗರ, ಮೂರನೆಯದಾಗಿ ಬೆಂಗಳೂರು ಗ್ರಾಮಾಂತರ ಬಳಿಕ ಉತ್ತರ ಕನ್ನಡ, ಉಡುಪಿ, ಚಿತ್ರದುರ್ಗ, ಮಂಗಳೂರು ಮತ್ತು ಕೋಲಾರ ಕ್ರಮವಾಗಿ ಸ್ಥಾನ ಪಡೆದುಕೊಂಡಿವೆ. ಯಾದಗಿರಿ ಶೇ. 53.95 ಫಲಿತಾಂಶವನ್ನು ಪಡೆಯುವ ಮೂಲಕ ಕೊನೆಯ ಸ್ಥಾನವನ್ನು ಪಡೆದಿದೆ.
ಹಾಸನ ಶೇ. 89.33, ರಾಮನಗರ ಶೇ. 88.49, ಬೆಂಗಳೂರು ಗ್ರಾಮಾಂತರ 88.34, ಉತ್ತರ ಕನ್ನಡ 88.12, ಉಡುಪಿ 87.97, ಚಿತ್ರದುರ್ಗ 87.46, ಮಂಗಳೂರು 86.73, ಕೋಲಾರ 86.71ರಷ್ಟು ಫಲಿತಾಂಶ ಲಭ್ಯವಾಗಿದೆ.ಕಳೆದ ವರ್ಷದ ಫಲಿತಾಂಶದಲ್ಲಿ ಉಡುಪಿಯು ಪ್ರಥಮ ಸ್ಥಾನ ಪಡೆದಿತ್ತು. ಆದರೆ, ಈ ವರ್ಷ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ ಈ ಬಾರಿ ನಾಲ್ಕನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಚಿಕ್ಕೋಡಿ, ಮಂಗಳೂರು, ಮಧುಗಿರಿ, ಬೆಳಗಾವಿ, ಹಾಸನ ಕ್ರಮವಾಗಿ ಸ್ಥಾನ ಪಡೆದಿದ್ದವು.
ಬೆಂಗಳೂರಿನಲ್ಲಿ 801 ವಿದೇಶಿಗರ ಅಕ್ರಮ ವಾಸ : ಹೈಕೋರ್ಟ್ಗೆ ಮಾಹಿತಿ
ಸಾಲ ವಾಪಸ್ ಕೊಡುತ್ತೇನೆ ಅಂದ್ರು ಬ್ಯಾಂಕ್ ಗಳು ಒಪ್ಪುತ್ತಿಲ್ಲ : ವಿಜಯ್ ಮಲ್ಯ
ನಿಜವಾದ ಉದ್ಯಮ ವಿಫಲವಾಗುತ್ತದೆ. ನಾನು ತೆಗೆದುಕೊಂಡಿರುವ ಸಾಲವನ್ನು ಶೇ.100 ರಷ್ಟು ವಾಪಸ್ ಪಾವತಿ ಮಾಡುತ್ತೇನೆ ಅಂದರೂ ನನ್ನ ಮೇಲೆ ಸಿಬಿಐ/ಇಡಿ ಕ್ರಿಮಿನಲ್ ಪ್ರಕರಣ ದಾಖಲಿಸಿವೆ.
ಮತಎಣಿಕೆ ವೇಳೆ 270 ಸಿಬ್ಬಂದಿ ಮೃತ್ಯು
55 ಮೀನುಗಾರರು 5 ನಾಗರಿಕರನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ
ಮೋದಿ ವಿರುದ್ಧ ಬಿಎಸ್ ಎಫ್ ಯೋಧ ಸ್ಪರ್ಧೆ
ನಾಮಪತ್ರ ಸಲ್ಲಿಕೆ ಸಮಯ ಕೊನೆಗೊಳ್ಳುವ ಕೆಲವೇ ಕ್ಷಣಗಳ ಮೊದಲು ತೇಜ್ ಬಹದ್ದೂರ್ ಉಮೇದುವಾರಿಕೆ ಸಲ್ಲಿಸಿದರು. ಬಿಎಸ್‌ಎಫ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಕುರಿತು ಬಹದ್ದೂರ್ ಆರೋಪ ಮಾಡಿದ್ದರು.
ಈ ಮುನ್ನ ಮೋದಿ ಅವರ ಎದುರಾಳಿಯಾಗಿ ಶಾಲಿನಿ ಯಾದವ್ ಅವರನ್ನು ಎಸ್‌ಪಿ ಘೋಷಿಸಿತ್ತು. ಕಾಂಗ್ರೆಸ್‌ನಿಂದ ಬಂದಿದ್ದ ಅವರ ಸ್ಪರ್ಧೆಗೆ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.
ಮುಂಬೈ ವಿರುದ್ಧ ಕೊಲ್ಕತ್ತಾಗೆ 34 ರನ್ ಗಳ ಸೋಲು
SSF ಶಿವಮೊಗ್ಗ ಸುಗರ್ ಫ್ಯಾಕ್ಟರಿ ಯೂನಿಟ್ ವತಿಯಿಂದ ಸಂಸ್ಥಾಪನ ದಿನಾಚರಣೆ
ಕಾರ್ಯಕ್ರಮದಲ್ಲಿ ಸ್ಥಳೀಯ ಎಸ್ಸೆಸ್ಸೆಫ್ ಸಂಘಟನಾ ಸದಸ್ಯರು ಭಾಗವಹಿಸಿದ್ದರು.
ಅನ್ವಾರುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸಫ್ ಸಂಸ್ಥಾಪನಾ ದಿನಾಚರಣೆ
ಸೋಮವಾರಪೇಟೆಯ ಕರ್ಕಳ್ಳಿಯಲ್ಲಿ SSF ಸ್ಥಾಪಕ ದಿನಾಚರಣೆ: ದ್ವಜಾರೋಹಣ
ಕೊಂಡಂಗೇರಿಯಲ್ಲಿ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ
ಅಲ್ಲದೇ ಕೆ.ವೈ.ಸಿ ಕೊಂಡಂಗೇರಿ ಯುವಕ ಸಂಘದ ಸಾರಥ್ಯದಲ್ಲಿ ಜಿಲ್ಲೆಯ ಶೈಕ್ಷಣಿಕ ,ಸಮಾಜಿಕ ರಂಗದಲ್ಲಿ ಸಾಧನೆಗೈದವರನ್ನು ಗುರುತಿಸಿ ಪ್ರೋತ್ಸಾಹಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಅಲ್ಲದೇ ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ರೀತಿಯ ಸಹಕಾರವಿರಲಿದೆ ಎಂದರು.
ಪಂದ್ಯಾಟವನ್ನು ರಾಷ್ಟ್ರೀಗೀತೆ ಹಾಡುವುದರ ಮೂಲಕ ಚಾಲನೆ ನೀಡಲಾಯಿತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದ ಸಂಸ್ಥಾಪಕ ಆಶಿಫ್, ಪಂದ್ಯಾಟದ ಪ್ರಾಯೋಜಕರದ ಉಂಬಾಯಿ ಗೋಣಿಕೊಪ್ಪ, ಟಿ.ಎಸ್.ಕೆ ಕೊಂಡಂಗೇರಿ, ವಿರಾಜಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ ರಾಫಿ, ಪಿ.ಎಫ್‌ಐ ಜಿಲ್ಲಾಧ್ಯಕ್ಷ ಹಾರಿಸ್, ರಶೀದ್ ಎಡಪಲಾ, ಶಾದುಲಿ ಗ್ರಾಮ ಪಂಚಾಯತಿ ಅಧ್ಯಕ್ಷರರು ಹಾಲುಗುಂದ, ಕೆ.ವೈ.ಸಿ ಅಧ್ಯಕ್ಷರಾದ ನಾಸೀರ್, ಕ್ರಿಯೇಟಿವ್ ಖಲೀಲ್, ಮತ್ತಿತ್ತರರು ಇದ್ದರು.
ಚಾಮಿಯಾಲ್ ಹಾಗೂ ನಾಪೋಕ್ಲು ನಡುವಿನ ಪಂದ್ಯಾಟದಲ್ಲಿ ಟ್ರೈಬ್ರೇಕರ್ ನಲ್ಲಿ ೩-೪ ಗೋಲುಗಳ ಅಂತರದಿಂದ ನಾಪೋಕ್ಲು ತಂಡವನ್ನು ಮಣಿಸಿ ಚಾಮಿಯಾಲ್ ತಂಡವು ಗೆದ್ದಿತು.
ನಾಳೆ ಎಸ್ಸೆಸ್ಸಲ್ಸಿ ಫಲಿತಾಂಶ: ಫಲಿತಾಂಶ ನೋಡುವುದು ಹೇಗೆ?
ಈ ಬಗ್ಗೆ ಇಂದು (ಸೋಮವಾರ) ಮಾಹಿತಿ ನೀಡಿರುವ ಎಸ್‌ಎಸ್‌ಎಲ್‌ಸಿ ಬೊರ್ಡ್ ನಿರ್ದೇಶಕಿ ವಿ.ಸುಮಂಗಲಾ, ಮೇನಾಳೆ ( ಎಪ್ರಿಲ್ 30) ಹತ್ತನೇ ತರಗತಿಯ (SSLC) ಫಲಿತಾಂಶ ಪ್ರಕಟ ಆಗಲಿದೆ.ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್ನಲ್ಲಿ ಫಲಿತಾಂಶ ಲಭ್ಯ ಆಗಲಿದೆ. www.kaceb.kar.nic.in ಮತ್ತು www.karresults.nic.inನಲ್ಲಿ ಫಲಿತಾಂಶ ಪ್ರಕಟ ಆಗಲಿದೆ.ಪಾಸಾದ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ನಂಬರ್ಗೆ ಮೆಸೇಜ್ ಮಾಡಲಾಗುತ್ತದೆ. ಆಯಾ ಶಾಲೆಗಳಲ್ಲಿ ಮರುದಿನ ಫಲಿತಾಂಶ ಪ್ರಕಟ ಆಗಲಿದೆ ಎಂದು ಮಾಹಿತಿ ನೀಡಿದರು.ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿತ್ತು. ಒಟ್ಟು 8,41,666 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. 2,847 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು.
* ಅಧಿಕೃತ ವೆಬ್ ತಾಣ www.kaceb.kar.nic.in ಎಂದು ಗೂಗಲ್‌ನಲ್ಲಿ ಟೈಪ್ ಮಾಡಿ. ನಂತರ ವೆಬ್‌ಸೈಟ್ ತೆರೆದುಕೊಳ್ಳುತ್ತದೆ.
* ನಂತರ 'SSLC Result' ಎನ್ನುವ ಲಿಂಕ್ ಕ್ಲಿಕ್ ಮಾಡಿ.ಅಲ್ಲಿ ಬಾಕ್ಸ್ ಓಪನ್ ಆಗುತ್ತೆ.
* ಅಲ್ಲಿ ಕೇಳುವ ನಿಮ್ಮ ರೋಲ್ ನಂಬರ್ (ಹಾಲ್ ಟಿಕೇಟ್ ನಂಬರ್) ಹಾಗೂ ಇನ್ನಿತರ ಮಾಹಿತಿ ನಮೂದಿಸಿ.
* submit ಬಟನ್ ಒತ್ತಿ.
* ಫಲಿತಾಂಶದ ಪ್ರತಿ ಪಡೆಯಲು ಅಲ್ಲೇ ಇರುವ ಡೌನ್‌ಲೋಡ್ ಮೇಲೆ ಕ್ಲಿಕ್ಕಿಸಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.
ಕೊಡಗು ಮುಸ್ಲಿಂ ಕಪ್ ಕ್ರಿಕೆಟ್: ಕೆ.ವೈ.ಸಿ.ಸಿ ಕಡಂಗ ಚಾಂಪಿಯನ್
ಮೇ ೦೪ ಹಾಗೂ ೦೫ ರಿಂದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟ
Redmi ಗೆ ತೀವ್ರ ಪೈಪೋಟಿ ಒಡ್ಡುತ್ತಿರುವ Realme
ಕಡಿಮೆ ದರ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಜನಸಾಮಾನ್ಯರಿಗೆ ಉತ್ತಮ ಸ್ಮಾರ್ಟ್‌ಫೋನ್ ನೀಡುವ ನಿಟ್ಟಿನಲ್ಲಿ Redmiಗೆ ತೀವ್ರ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಮುನ್ನುಗ್ಗುತ್ತಿರುವ Realme ಸಂಸ್ಥೆ 'ಸ್ಪೀಡ್ ಅವೇಕನ್ಸ್' ಎಂಬ ಟ್ಯಾಗ್ ಲೈನ್‌ನೊಂದಿಗೆ Realme 3 Pro ಮತ್ತು ಆರಂಭಿಕ ಹಂತದ ಫೋನ್ ಬಳಕೆದಾರರಿಗೆ ಅತ್ಯಾಕರ್ಷಕವಾಗಿರುವ Realme C2 ಎಂಬ ಎರಡು ಸ್ಮಾರ್ಟ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಏಪ್ರಿಲ್ 29ರ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು Realme ವೆಬ್‌ಸೈಟ್‌ನಲ್ಲಿ Realme 3 Pro ಮಾರಾಟ ಆರಂಭವಾಗಲಿದೆ. ಮೇ 15ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್ ಮತ್ತು Realme ವೆಬ್‌ಸೈಟ್‌ನಲ್ಲಿ ರಿಯಲ್‌ಮಿ C2 ಮಾರಾಟ ಆರಂಭವಾಗಲಿದೆ. Realme ನವದೆಹಲಿಯ ಸುಭಾಶ್ ನಗರದ ಪೆಸಿಫಿಕ್ ಮಾಲ್‌ನಲ್ಲಿ ಏಪ್ರಿಲ್ 27ರಂದು ತನ್ನ ಮೊದಲ ಪಾಪ್‌ಅಪ್ ಮಳಿಗೆ ಆರಂಭಿಸಲಿದ್ದು, ಅಭಿಮಾನಿಗಳು Realme 3 Pro ಮೊದಲ ಮಾರಾಟಕ್ಕೆ ಮುಂಚಿತವಾಗಿಯೇ ಇಲ್ಲಿ ಮೊಬೈಲ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಬೆಂಕಿ
ಕೋಲಾರದಿಂದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದ ಕಡೆಗೆ ರೈಲು ಬರುತ್ತಿತ್ತು. ಈ ವೇಳೆಯಲ್ಲಿ ವೈಟ್‌ಫೀಲ್ಡ್‌ನ ಹೂಡಿ ರೈಲ್ವೆ ನಿಲ್ದಾಣದ ಬಳಿ ಸಂಜೆ 5.45ರ ಸುಮಾರಿಗೆ 11ನೇ ಕೋಚ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು.ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದನ್ನು ಕಂಡು ಪ್ರಯಾಣಿಕರು ಆತಂಕಗೊಂಡರು. ಕೂಡಲೇ ಎಚ್ಚೆತ್ತುಕೊಂಡ ಚಾಲಕ ಹೂಡಿ ರೈಲು ನಿಲ್ಲಿಸಿ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಚಿಗರಿಯಲ್ಲಿ ಸೆನ್ಸಾರ್ ದೋಷ: ಸಂಚಾರ ವ್ಯಸ್ತ
ಧಾರವಾಡದಿಂದ ಹುಬ್ಬಳ್ಳಿ ಸಿಬಿಟಿಗೆ ಹೊರಟಿದ್ದ ಬಿಆರ್‌ಟಿಎಸ್ ಬಸ್ ಇಲ್ಲಿನ ಹಳೇ ಬಸ್ ಮುಂಭಾಗದ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಹೊರಡುವ ಸಂದರ್ಭದಲ್ಲಿ ಸೆನ್ಸಾರ್ ಸಮಸ್ಯೆ ಕಂಡುಬಂತು. ಇದರಿಂದ ಬಸ್‌ನ ಎಲ್ಲಾ ಕಾರ್ಯಗಳು ಸ್ಥಗಿತಗೊಂಡವು. ಸುಮಾರು ಮೂರು ಗಂಟೆಗಳ ಕಾಲ ನಿಲ್ದಾಣದಲ್ಲೇ ಬಸ್ ನಿಂತಿತ್ತು. ಇದರಿಂದಾಗಿ ಉಳಿದ ಬಸ್‌ಗಳು ಪ್ರಯಾಣಿಕರನ್ನು ತುರ್ತು ನಿರ್ಗಮನ ಬಾಗಿಲು ಮೂಲಕ ಕೆಳಗೆ ಇಳಿಸುತ್ತಿರುವುದು ಕಂಡು ಬಂತು. ಮೂರು ಗಂಟೆಗಳ ಕಾಲ ತಂತ್ರಜ್ಞರು ದುರಸ್ತಿಗೊಳಿಸಿದರು.
IPL 2019: RCB ವಿರುದ್ಧ ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ!
IPL 2019: RCB ವಿರುದ್ಧ ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ!
ದೆಹಲಿ(ಏ.28): ಹ್ಯಾಟ್ರಿಕ್ ಗೆಲುವು ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಡೆಲ್ಲಿ ಕ್ಯಾಪಿಟಲ್ಸ್ ಹೋರಾಟಕ್ಕೆ ಸಜ್ಜಾಗಿದೆ. ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಹೆದ್ದ ಡೆಲ್ಲಿ ಬ್ಯಾಟಿಂಗ್‌ಆಯ್ಕೆ ಮಾಡಿಕೊಂಡಿದೆ.RCB ತಂಡದಲ್ಲಿ 3 ಬದಲಾವಣ ಮಾಡಲಾಗಿದೆ. ಮೊಯಿನ್ ಆಲಿ ಬದಲು ಹೆನ್ರಿಚ್ ಕ್ಲೆಸೆನ್ ತಂಡ ಸೇರಿಕೊಂಡಿದ್ದಾರೆ. ಇನ್ನು ಟಿಮ್ ಸೌಥಿ ಬದಲು ಶಿವಂ ದುಬೆ ಹಾಗೂ ಅಕ್ಷದೀಪ್ ನಾಥ್ ಬದಲು ಗುರುಕೀರತ್ ಸಿಂಗ್ ತಂಡ ಸೇರಿಕೊಂಡಿದ್ದಾರೆ,.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 11 ಪಂದ್ಯಗಳಲ್ಲಿ 4 ಗೆಲುವು 7 ಸೋಲು ಕಂಡಿದೆ.
200 ಚೀನಾ ಕಂಪನಿಗಳು ಭಾರತಕ್ಕೆ..
ಈ ನಿಟ್ಟಿನಲ್ಲಿ ಭಾರತದಲ್ಲಿ ಹೊಸ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡಬೇಕು ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರುವ ಅಗತ್ಯವಿದೆ. ಭಾರತ ಮತ್ತು ಅಮೆರಿಕ ಮಧ್ಯೆ ಮುಕ್ತ ವ್ಯಾಪಾರಿ ಒಪ್ಪಂದಕ್ಕೆ ಅನುವು ಮಾಡಿಕೊಡಬೇಕು ಎಂಬುದಾಗಿ ನಾವು ಮುಂಬರುವ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದೇವೆ ಎಂದು ಯುಎಸ್‌ಐಎಸ್‌ಪಿಎಫ್ ಅಧ್ಯಕ್ಷ ಮುಕೇಶ್ ಅಘಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶ್ರೀಲಂಕಗೆ ಅನಗತ್ಯ ಪ್ರವಾಸ ಕೈಗೊಳ್ಳಬೇಡಿ : ಕೇಂದ್ರ ಸರಕಾರ
ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ 'ಪ್ರವಾಸ ಸಲಹೆ'ಯಲ್ಲಿ, ತುರ್ತು ಪ್ರವಾಸ ಕೈಗೊಳ್ಳಲೇಬೇಕಾದ ಸಂದರ್ಭಗಳಲ್ಲಿ ಕೊಲಂಬೋ, ಕ್ಯಾಂಡಿ, ಹಂಬಂಟೋಟಾ ಮತ್ತು ಜಾಫ್ನಾದಲ್ಲಿರುವ ಭಾತೀಯ ಹೈಕಮಿಷನ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದೆ.
ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರಾಕರಣೆ ಹಿನ್ನೆಲೆ : ಪಾಕ್ ಗೆ ಅಮೇರಿಕಾ ನಿರ್ಬಂಧ
ಮೋದಿ ಹಿಟ್ಲರ್ ಗೆ ಸಮ : ಮಲ್ಲಿಕಾರ್ಜುನ ಖರ್ಗೆ
ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು
ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು
ಮಡಿಕೇರಿ ಏ.೨೭ : ನಿಷೇಧಿತ ನಕ್ಸಲ್ ಸಂಘಟನೆಯ ಶಂಕಿತ ನಕ್ಸಲ್ ಮುಖಂಡ, ೨೦೧೦ರಲ್ಲಿ ಭಾಗಮಂಡಲ ವ್ಯಾಪ್ತಿಯ ಮುಂಡ್ರೋಟುವಿನ ಮಾಂಗುಡಿಮಲೆ ಎಂಬಲ್ಲಿ ಪ್ರತ್ಯಕ್ಷನಾಗಿ ಅಲ್ಲಿನ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಆರೋಪ ಎದುರಿಸುತ್ತಿರುವ ರೂಪೇಶ್‌ನನ್ನು ಬಿಗಿ ಭದ್ರತೆಯಲ್ಲಿ ಮಡಿಕೇರಿಯ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮಡಿಕೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿಡಲಾಗಿದ್ದ ರೂಪೇಶ್‌ನನ್ನು ಕೇರಳ ಭಯೋತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸ್ ಕಮಾಂಡೊಗಳು ಶಸ್ತ್ರಸಜ್ಜಿತರಾಗಿ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದರು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ನಕ್ಸಲ್ ಬಾರಿ ಜಿಂದಾಬಾದ್, ಮಾವೋವಾದಿಗಳು ಅಪರಾಧಿಗಳಲ್ಲ, ಹುತಾತ್ಮ ನಕ್ಸಲರು ಅಮರವಾಗಲಿ ಎಂದು ಘೋಷಣೆಗಳನ್ನು ಕೂಗಿದ.
ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವೀರಪ್ಪ.ವಿ.ಮಲ್ಲಾಪುರ ಅವರು ರಜೆಯಲ್ಲಿರುವುದರಿಂದ ೧ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಅವರ ಮುಂದೆ ಶಂಕಿತ ನಕ್ಸಲ್ ಮುಖಂಡ ರೂಪೇಶ್‌ನನ್ನು ಹಾಜರುಪಡಿಸಲಾಯಿತು. ಇಂದು ಸರಕಾರಿ ವಕೀಲರು ಹಾಜರಿಲ್ಲದಿರುವುದರಿಂದ, ಸರಕಾರಿ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ ನಿಗಧಿಗೊಳಿಸಿದ ನ್ಯಾಯಾಧೀಶರಾದ ಪವನೇಶ್ ಅವರು ಮುಂದಿನ ವಿಚಾರಣೆಯನ್ನು ಮೇ ೨೨ಕ್ಕೆ ಮುಂದೂಡಿದರು.
::: ಪ್ರಕರಣ ಹಿನ್ನೆಲೆ :::
ಶಂಕಿತ ನಕ್ಸಲ್ ಮುಖಂಡ ರೂಪೇಶ್ ವಿರುದ್ದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪಗಳಿದ್ದು, ಒಟ್ಟು ೩೮ ಪ್ರಕರಣಗಳಿವೆ. ಈತನ ವಿರುದ್ದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೨ ಪ್ರತ್ಯೇಕ ಪ್ರಕರಣಗಳೂ ದಾಖಲಾಗಿದೆ. ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ೨ ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಇದೀಗ ೬ನೇ ಬಾರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಶನಿವಾರ ವಿಚಾರಣೆ ನಡೆಸಿದ ಬಳಿಕ ಆರೋಪಿ ರೂಪೇಶನನ್ನು ಕೇರಳಕ್ಕೆ ಕರೆದೊಯ್ಯಲಾಯಿತು. ನ್ಯಾಯಾಲಯದ ಹೊರಭಾಗ ನಗರ ಠಾಣಾಧಿಕಾರಿ ಷಣ್ಮುಗ ನೇತೃತ್ವದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು.
ಕೊಡಗು ಮುಸ್ಲಿಂ ಕಪ್ ಕ್ರಿಕೆಟ್: ಕೆ.ವೈ.ಸಿ.ಸಿ ಕಡಂಗ ಫೈನಲ್ಗೆ .:ಮಳೆಯಿಂದ ಬ್ಲ್ಯಾಕ್ ಕೋಬ್ರಾ ವಿರಾಜಪೇಟೆ ಹಾಗೂ ಆಶಸ್ ಗೋಣಿಕೊಪ್ಪ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ರದ್ದು:, ನಾಳೆ ಬೆಳಗ್ಗೆ ಎರಡನೇ ಸೆಮಿಫೈನಲ್ ಪಂದ್ಯ..
ಕಡವೆ ಬೇಟೆ ಬಂಧನ..
ಮಡಿಕೇರಿ ಏ.27 :
ಕೊಡಗು, ಕೇರಳ ಗಡಿಯ ಕುಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿದ ಆರು ಮಂದಿಯ ತಂಡವನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕೇರಳ ಗಡಿಭಾಗ ಕುಟ್ಟ- ಇರ್ಪು ಜಂಕ್ಷನ್‌ನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನ ಸಹಿತ ಕಡವೆ ಮಾಂಸ, ಬೇಟೆಗೆ ಬಳಸಿದ ಆಯುಧಗಳು ಮತ್ತು ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದರು.
ಪೊನ್ನಂಪೇಟೆಯ ಮಾಪಿಳ್ಳೆ ತೋಡು ನಿವಾಸಿಗಳಾದ ಕೆ.ಬಿ.ಸಿದ್ದಿಕ್, ಎಂ.ಹೆಚ್.ಶಮೀರ್, ಎ.ಯು.ಸಮೀರ್, ನಾಪೋಕ್ಲುವಿನ ಕುಂಜಿಲ ಗ್ರಾಮದ ಕೆ.ಇ.ಇಸ್ಮಾಯಿಲ್, ಕೆ.ಎ.ಯೂಸಫ್ ಹಾಗೂ ಕೆ.ಎ.ಮೊಹಮ್ಮದ್ ಬಂಧಿತ ಆರೋಪಿಗಳು.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂಟಿ ನಳಿಕೆಯ ಒಂದು ಬಂದೂಕು, ಇನ್ನಿತರ ಆಯುಧಗಳು, ಸುಮಾರು ೧೫೦ ಕೆ.ಜಿ. ಕಡವೆ ಮಾಂಸ, ಮಾರುತಿ ಸೆಲೋರಿಯಾ ಕಾರು ಹಾಗೂ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್‌ಪೆಕ್ಟರ್ ಕೆ.ನಾಗೇಶ್, ಸಿಬ್ಬಂದಿಗಳಾದ ಕೆ.ಎಸ್.ಅನಿಲ್‌ಕುಮಾರ್, ಬಿ.ಎಲ್.ಯೋಗೇಶ್ ಕುಮಾರ್, ಕೆ.ಆರ್.ವಸಂತ, ಎಂ.ಎಂ.ನಿರಂಜನ್ ಹಾಗೂ ಚಾಲಕ ಕೆ.ಎಸ್.ಶಶಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ತಂಡಕ್ಕೆ ವರಿಷ್ಠಾಧಿಕಾರಿಗಳು ಇದೇ ಸಂದರ್ಭ ೧೦ ಸಾವಿರ ರೂ. ನಗದು ಬಹುಮಾನ ಘೋಷಿಸಿದರು
ಪಾಕಿಸ್ತಾನ ವಿರುದ್ಧದ ಅಂಡರ್-19 ಸರಣಿ ರದ್ದುಗೊಳಿಸಿದ ಶ್ರೀಲಂಕಾ ಕ್ರಿಕೆಟ್
ಮಹಾಮಳೆಯ ಪರಿಸ್ಥಿತಿ ಎದರಿಸಲು ಕೊಡಗು ಜಿಲ್ಲಾಡಳಿತ ಸನ್ನದ್ಧ:ಆತಂಕ ಪಡದಂತೆ ಮನವಿ
ಮಡಿಕೇರಿ ಏ.೨೭ : ಪ್ರಸಕ್ತ ಸಾಲಿನಲ್ಲೂ ಜಿಲ್ಲೆಯಲ್ಲಿ ಮಹಾಮಳೆಯಾದರೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ತುರ್ತು ಸೇವೆಗಳನ್ನು ಒದಗಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾಡಳಿತ ಅಭಯ ನೀಡಿದೆ.
ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಉಂಟಾಗಬಹುದಾದ ಹಾನಿಯ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ ವಿಪತ್ತು ಉಂಟಾಗುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಿ ಅಗತ್ಯ ಕ್ರಮ ವಹಿಸಲು ಮುಂಜಾಗ್ರತೆ ವಹಿಸಲಾಗುತ್ತಿದೆ.
ಜಿಲ್ಲಾಡಳಿತದ ವತಿಯಿಂದ ತುರ್ತು ಪರಿಸ್ಥಿತಿ ಪರಿಹಾರ ಮತ್ತು ಪುನರ್ ನಿರ್ಮಾಣ ಸಮಿತಿಯನ್ನು ಜಿಲ್ಲಾ ಮಟ್ಟದಲ್ಲಿ ಹಿರಿಯರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡವು ಸಾರ್ವಜನಿಕರಿಗೆ ಅಗತ್ಯ ಮಾಹಿತಿ, ಸಲಹೆ ನೆರವನ್ನು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಮತ್ತು ಸ್ಥಳಾಂತರಿಸುವ ಸಮಿತಿ, ಶೋಧನೆ ಮತ್ತು ರಕ್ಷಣಾ ಸಮಿತಿ, ಪ್ರಥಮ ಚಿಕಿತ್ಸಾ, ಸಾಮೂಹಿಕ ಅಪಘಾತ ನಿರ್ವಹಣೆ ಸಮಿತಿ, ಆಶ್ರಯ ನಿರ್ವಹಣೆ, ಪರಿಹಾರ ನಿರ್ವಹಣೆ, ಹಾನಿ ಮೌಲ್ಯಮಾಪನ ಸಮಿತಿ, ಪ್ರಾಣಿ ರಕ್ಷಣಾ ಸಮಿತಿ, ಪೌಷ್ಠಿಕ ಆಹಾರ ವಿತರಣಾ ಸಮಿತಿ, ಸ್ವಚ್ಛತಾ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೇ ಇದೇ ಸಮಿತಿಯನ್ನು ತಾಲೂಕು, ಗ್ರಾಮ ಮತ್ತು ಪಂಚಾಯತ್ ಮಟ್ಟದಲ್ಲಿ ಕೂಡ ರಚಿಸಲು ಕ್ರಮ ವಹಿಸಲಾಗಿದೆ.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಯೂನಿಸೆಫ್, ಕ್ರೈಸ್ಟ್ ಯೂನಿವರ್ಸಿಟಿ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾ ತರಬೇತಿ ಸಂಸ್ಥೆ ಮತ್ತು ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ತಯಾರಿಕೆ ಮತ್ತು ತರಬೇತಿಗೆ ಕ್ರಮವಹಿಸಲಾಗಿದೆ. ಅಲ್ಲದೆ ತುರ್ತು ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಮ ಮಟ್ಟದಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಡಳಿತದ ಕೋರಿಕೆಯಂತೆ ಸರ್ಕಾರ ಎನ್‌ಡಿಆರ್ ಎಫ್‌ನ ಒಂದು ತಂಡವನ್ನು ಪೂರ್ವ ನಿಯೋಜಿತವಾಗಿ ಕೊಡಗು ಜಿಲ್ಲೆಗೆ ಕಳುಹಿಸಿಕೊಡಲಿದೆ. ಈ ತಂಡವು ಮೇ ಕೊನೆಯ ವಾರದಿಂದ ಕಾರ್ಯ ಪ್ರವೃತ್ತವಾಗಿ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲು ಸಿದ್ದವಿದೆ. ಅತೀ ಸೂಕ್ಷ್ಮ ಮತ್ತು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವರದಿ ಸಲ್ಲಿಸುವ ಬಗ್ಗೆ ಈಗಾಗಲೇ ಜಿಯೋಲಾಜಿಕಲ್ ಸರ್ವೆ ಇಂಡಿಯಾ ಅಧಿಕಾರಿಗಳು ಸರ್ವೆ ನಡೆಸಿದ್ದು, ಅಂತಿಮ ವರದಿಯನ್ನು ನಿರೀಕ್ಷಿಸಲಾಗಿದೆ. ಜಿಎಸ್‌ಐ ನೆರವಿನೊಂದಿಗೆ ವೈಜ್ಞಾನಿಕ ಕ್ರಮದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.
ಅತಿವೃಷ್ಟಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ವೈದ್ಯಕೀಯ ಸೇವೆ ಸೇರಿದಂತೆ ಅಗತ್ಯ ತುರ್ತು ಸೇವೆಗಳನ್ನು ನೀಡಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಸಮಯದಲ್ಲಿ ತುರ್ತು ಸೇವೆ ಒದಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಅಧಿಕಾರಿಗಳು ಅಭಯ ನೀಡಿದ್ದಾರೆ.
ಹೊಸ 20 ರೂಪಾಯಿ ನೋಟು ಶೀಘ್ರ ಚಲಾವಣೆಗೆ : ಆರ್ ಬಿ ಐ
'ಹೊಸ ಮಾದರಿಯ 20 ರೂ. ಮುಖಬೆಲೆಯ ನೋಟುಗಳು ಹಸಿರು-ಹಳದಿ ವರ್ಣದ್ದಾಗಿರುತ್ತವೆ. ಒಂದು ಬದಿಯಲ್ಲಿ ಗಾಂಧೀಜಿ ಭಾವಚಿತ್ರ, ಆರ್‌ಬಿಐ ಚಿಹ್ನೆ, ಅಶೋಕ ಸ್ತಂಭ ಮತ್ತು ಆರ್‌ಬಿಐ ಗವರ್ನರ್ ಸಹಿ ಇರುತ್ತದೆ. ಇನ್ನೊಂದು ಬದಿಯಲ್ಲಿ ಭಾರತದ ಹದಿನಾಲ್ಕು ಭಾಷೆಗಳಲ್ಲಿ ರೂಪಾಯಿ ಮೌಲ್ಯ ಬರೆದಿರುವುದರ ಜತೆಗೆ, ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಎಲ್ಲೋರಾದ ಕಲ್ಲಿನ ಗುಹೆಗಳ ಚಿತ್ರ ಇರಲಿದೆ' ಎಂದು ಆರ್‌ಬಿಐನ ಹೇಳಿಕೆ ತಿಳಿಸಿದೆ.
ಭಾರೀ ಮಳೆ ಸಾಧ್ಯತೆ :ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಇರಲು ಕೊಡಗು ಜಿಲ್ಲಾಡಳಿತ ಸೂಚನೆ
ಮಡಿಕೇರಿ ಏ.೨೭ : ಭಾರತೀಯ ಹವಾಮಾನ ಇಲಾಖೆ ವರದಿಯನ್ವಯ ಏ.೨೭ ರ ಸಂಜೆಯಿಂದ ಏ.೩೦ ರವರೆಗೆ ಹಿಂದೂ ಮಹಾಸಾಗರದ ಪೂರ್ವಭಾಗ ಮತ್ತು ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿನ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ.
ರಾಜ್ಯದಾದ್ಯಂತ ಬಸ್ ನಿಲ್ದಾಣಗಳಲ್ಲಿ ತಪಾಸಣೆ
ಘನಿ ಚಂಡಮಾರುತ : ಹವಾಮಾನ ಇಲಾಖೆ ಎಚ್ಚರಿಕೆ
ಭೂಮಿ ಮತ್ತು ಜೀವ ಸಂಕುಲದ ಸಂರಕ್ಷಣೆಯತ್ತ ಗಮನಹರಿಸಿ:ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಸಲಹೆ
ಮಡಿಕೇರಿ ಏ.೨೭ : ಭೂಮಿ ಪ್ರಾಕೃತಿಕ ಸಂಪತ್ತಾಗಿದ್ದು, ಭೂಮಿ ಇಲ್ಲದೆ ಮಾನವನ ಬದುಕು ಊಹಿಸುವುದು ಅಸಾಧ್ಯ. ಆದ್ದರಿಂದ ಭೂಮಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದು ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಮನು ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಅರಣ್ಯ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ’ವಿಶ್ವ ಭೂಮಿ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವನ ಅತೀ ಆಸೆಯಿಂದ ಜೀವ ಸಂಕುಲ ಅವನತಿಯತ್ತ ಸಾಗುತ್ತಿದೆ. ಹಾಗೆಯೇ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದನ್ನು ತಡೆಯಬೇಕು. ಭೂಮಿಯ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್. ಮಂಜುನಾಥ್ ಅವರು ಮಾತನಾಡಿ ನಮ್ಮ ಮನೆಯಂತೆ ಭೂಮಿಯನ್ನು ಸಂರಕ್ಷಣೆ ಮಾಡಬೇಕು. ಪ್ಲಾಸ್ಟಿಕ್‌ನ್ನು ಮರು ಬಳಕೆ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ಪ್ಲಾಸ್ಟಿಕ್‌ನ್ನು ಉಪಯೋಗಿಸಲೇಬಾರದು. ಜೀವ ಸಂಕುಲ ಉಳಿಯಲು ಭೂಮಿ ಉಳಿಸಬೇಕು ಎಂದರು.
ಜಲ ಮಾಲಿನ್ಯ, ವಾಯು ಮಾಲಿನ್ಯದಿಂದ ಅನೇಕ ಜೀವ ಸಂಕುಲಕ್ಕೆ ತೊಂದರೆ ಸಿಲುಕುತ್ತವೆ. ಇದನ್ನು ತಪ್ಪಿಸಬೇಕು. ಪ್ರತಿಯೊಬ್ಬರಲ್ಲೂ ಪರಿಸರ ಪ್ರಜ್ಞೆ ಇರಬೇಕು. ರಾಷ್ಟ್ರದ ಪಶ್ಚಿಮಘಟ್ಟ ಇಡೀ ವಿಶ್ವದಲ್ಲಿಯೇ ಪ್ರಾಕೃತಿಕ ಸಂಪತ್ತನ್ನು ಹೊಂದಿರುವ ಪ್ರದೇಶವಾಗಿದೆ ಎಂದರು.
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಬೆಂಕಿ ಬೀಳದಂತೆ ನೋಡಿಕೊಂಡರೆ ಇನ್ನು ಮೂರು ವರ್ಷದಲ್ಲಿ ಉತ್ತಮ ಅರಣ್ಯ ಕಾಣಬಹುದು ಎಂದು ಅವರು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವರ್ಧನ್ ಸಿಂಗ್ ಅವರು ಮಾತನಾಡಿ ಪ್ರಾಕೃತಿಕ ಸಂಪತ್ತನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಭೂಮಿ ತಾಯಿಯಂತೆ. ಭೂಮಿ ಎಲ್ಲವನ್ನು ನೀಡಿದೆ. ಅದನ್ನು ಸಂರಕ್ಷಣೆ ಮಾಡಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಮಾತನಾಡಿ ಭೂಮಿ ಸಂರಕ್ಷಣೆ ಬಗ್ಗೆ ಪ್ರತಿನಿತ್ಯ ಜಾಗೃತಿ ವಹಿಸಬೇಕು. ಮಾನವನ ದುರಾಸೆಯಿಂದ ವಿಶ್ವದಲ್ಲಿ ೧೦ ಲಕ್ಷ ಜೀವ ಪ್ರಬೇಧಗಳು ವಿನಾಶದ ಅಂಚಿನಲ್ಲಿವೆ ಎಂದು ಅವರು ತಿಳಿಸಿದರು.
ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕರಾದ ಟಿ.ಜಿ.ಪ್ರೇಮಕುಮಾರ್ ಅವರು ಮಾತನಾಡಿ ಇಡೀ ವಿಶ್ವದಲ್ಲಿ ಪಶ್ಚಿಮಘಟ್ಟ ಪ್ರದೇಶವು ೧೨ ನೇ ಸ್ಥಾನ. ಹಾಗೂ ದೇಶದಲ್ಲಿ ಎರಡನೇ ಸ್ಥಾನ ಹೊಂದಿದೆ. ಆದ್ದರಿಂದ ಪಶ್ಚಿಮಘಟ್ಟ ಪ್ರದೇಶ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅವರು ಹೇಳಿದರು.
’ಇರುವುದೊಂದೇ ಭೂಮಿ. ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡಬೇಕು. ಆದ್ದರಿಂದ ಭೂಮಿಯನ್ನು ಕಸದ ತೊಟ್ಟಿ ಮಾಡದೆ, ಕಲ್ಪವೃಕ್ಷ ಮಾಡಬೇಕು ಎಂದರು.’
ಜಿಲ್ಲೆಯ ಬಯಲು ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ವಿವಿಧ ಇಲಾಖೆಗಳು ಸಹಕರಿಸಬೇಕಾಗಿ ಪ್ರೇಮ ಕುಮಾರ್ ಅವರು ಕೋರಿದರು.
ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಪರಿಸರ ಸ್ನೇಹಿ ಪ್ರವಾಸಿ ತಾಣಗಳನ್ನಾಗಿ ನಿರ್ಮಾಣ ಮಾಡಬೇಕು. ಹಸಿ ಮತ್ತು ಒಣ ಕಸ ಬೇರ್ಪಡಿಸಬೇಕು. ಮಳೆ ನೀರು ಸಂಗ್ರಹಣೆಗೆ ಒತ್ತು ನೀಡಬೇಕು ಎಂದರು.
ಪರಿಸರ ಜಾಗೃತಿ ಆಂದೋಲನದ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್ ಅವರು ಮಾತನಾಡಿ ಪಶ್ಚಿಮ ಘಟ್ಟ ಪ್ರದೇಶವು ಸುಮಾರು ೧೬೦೦ ಕಿ.ಮೀ. ಉದ್ದ ಹಾಗೂ ೧.೬೦ ಲಕ್ಷ ಚದರ ಕಿ.ಮೀ. ವ್ಯಾಪ್ತಿಯನ್ನು ಆವರಿಸಿದೆ. ಇದನ್ನು ಸಂರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.
ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಕೃತಿ ಸಂಪನ್ಮೂಲವನ್ನು ಸಂರಕ್ಷಣೆ ಮಾಡಬೇಕು. ಜೀವರಾಶಿಗಳನ್ನು ಉಳಿಸಬೇಕು. ಪ್ರತಿಯೊಬ್ಬ ಮನುಷ್ಯನ ಬದುಕು ಭೂಮಿಯೊಂದಿಗೆ ಹಾಸು ಹೊಕ್ಕಾಗಿದೆ. ಭೂಮಿಯಿಲ್ಲದೆ ಬದುಕು ನಿರರ್ಥಕ ಎಂದು ಅರಿತುಕೊಳ್ಳಬೇಕು ಎಂದರು.
ಪ್ರಕೃತಿಯಲ್ಲಿ ಏಕಾಂಗಿ ಎಂಬುದೇ ಇಲ್ಲ. ಪ್ರತಿಯೊಂದು ಜೀವಿಗೂ ಜೀವಿಸುವ ಸಮಾನ ಹಕ್ಕಿದೆ. ಜೀವಿಗಳಿಗಿರುವ ಏಕೈಕ ಗ್ರಹವಾದ ಭೂಮಿಯೇ ನಮ್ಮ ಮನೆ ಎಂದರು.
ವಿಶ್ವ ಭೂಮಿ ದಿನಾಚರಣೆಯ ಸಂದೇಶದ ಪ್ರತಿಜ್ಞಾ ವಿಧಿಯನ್ನು ಟಿ.ಜಿ.ಪ್ರೇಮಕುಮಾರ್ ಅವರು ಭೋದಿಸಿದರು. ಇದೇ ಸಂದರ್ಭದಲ್ಲಿ ವಿಶ್ವ ಭೂಮಿ ದಿನಾಚರಣೆ ಪ್ರಯುಕ್ತ ಹೊರತಂದಿರುವ ಕರಪತ್ರ ಬಿಡುಗಡೆ ಮಾಡಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಿಣ್ಣಪ್ಪ, ನೆಹರು, ದಯಾನಂದ, ಸೀಮಾ, ವಲಯ ಅರಣ್ಯಾಧಿಕಾರಿ ಜಗದೀಶ್ ಇತರರು ಹಾಜರಿದ್ದರು.
ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎ.ಜಯಪ್ಪ ನಿರೂಪಿಸಿದರು. ಶಿಕ್ಷಕರಾದ ಸಿ.ಎ.ಸುರೇಶ್ ಸ್ವಾಗತಿಸಿದರು. ಶಿಕ್ಷಕಿಯರಾದ ಮಾಲಾದೇವಿ ಮತ್ತು ಎಚ್.ಎಂ.ಭಾರತಿ ಅವರು ಪರಿಸರ ಗೀತೆ ಹಾಡಿದರು. ಎಂ.ಇ.ಮೊಹಿದ್ದೀನ್ ವಂದಿಸಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮಾಲಿನ್ಯ ತಡೆಯೋಣ ಪರಿಸರ ಸಂರಕ್ಷಿಸೋಣ, ಜಾಗತಿಕ ತಾಪಮಾನ ತಗ್ಗಿಸಿ ಭೂಮಿಯನ್ನು ಸಂರಕ್ಷಿಸಿ, ಉರಿಯವ ಭೂಮಿಯನ್ನು ತಂಪಾಗಿಸೋಣ ಬನ್ನಿ, ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ, ಪ್ಲಾಸ್ಟಿಕ್ ತ್ಯಜಿಸಿ ಮಾಲಿನ್ಯ ತಡೆಗಟ್ಟಿ, ಹಸಿರೇ ಉಸಿರು-ಜಲವೇ ಜೀವಜಲ, ಕುಡಿಯಿರಿ ಶುದ್ಧಜಲ ಉಳಿಸಿರಿ. ಅಂತರ್ಜಲ, ಜೀವ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮನೆಗೊಂದು ಮರ ಊರಿಗೊಂದು ವನ, ಸ್ವಚ್ಛ ಗ್ರಾಮ ಆರೋಗ್ಯಧಾಮ, ಜೈವಿಕ ಇಂಧನ ಭವಿಷ್ಯದ ಇಂಧನ, ಬೈಸಿಕಲ್ ಬಳಸಿ ಇಂಧನ ಉಳಿಸಿ, ಬೈಸಿಕಲ್ ಬಳಸಿ ಪರಿಸರ ಸಂರಕ್ಷಿಸಿ ಎಂಬ ಘೋಷ ವಾಕ್ಯಗಳು ಮೊಳಗಿದವು. ಸಭಾ ಕಾರ್ಯಕ್ರಮದ ಮೊದಲು ಅರಣ್ಯ ಭವನದ ಆವರಣದಲ್ಲಿ ಗಿಡ ನೆಡಲಾಯಿತು.











































