ಚಿಗರಿಯಲ್ಲಿ ಸೆನ್ಸಾರ್‌ ದೋಷ: ಸಂಚಾರ ವ್ಯಸ್ತ

No comments

ಹುಬ್ಬಳ್ಳಿ:ಚಿಗರಿ ಬಸ್‌ನ ಸೆನ್ಸಾರ್‌ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಇಲ್ಲಿನ ಹಳೇ ಬಸ್‌ನಿಲ್ದಾಣ ಮುಂಭಾಗದಲ್ಲಿರುವ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದ ಫ್ಲಾಟ್ಫಾರ್ಮ್ನಲ್ಲಿ ಬಸ್‌ ಕೆಟ್ಟು ನಿಂತು ಉಳಿದ ಬಸ್‌ಗಳೆಲ್ಲ ಮಿಶ್ರಪಥದಲ್ಲಿ ಸಂಚರಿಸಿದವು.
ಧಾರವಾಡದಿಂದ ಹುಬ್ಬಳ್ಳಿ ಸಿಬಿಟಿಗೆ ಹೊರಟಿದ್ದ ಬಿಆರ್‌ಟಿಎಸ್‌ ಬಸ್‌ ಇಲ್ಲಿನ ಹಳೇ ಬಸ್‌ ಮುಂಭಾಗದ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಹೊರಡುವ ಸಂದರ್ಭದಲ್ಲಿ ಸೆನ್ಸಾರ್‌ ಸಮಸ್ಯೆ ಕಂಡುಬಂತು. ಇದರಿಂದ ಬಸ್‌ನ ಎಲ್ಲಾ ಕಾರ್ಯಗಳು ಸ್ಥಗಿತಗೊಂಡವು. ಸುಮಾರು ಮೂರು ಗಂಟೆಗಳ ಕಾಲ ನಿಲ್ದಾಣದಲ್ಲೇ ಬಸ್‌ ನಿಂತಿತ್ತು. ಇದರಿಂದಾಗಿ ಉಳಿದ ಬಸ್‌ಗಳು ಪ್ರಯಾಣಿಕರನ್ನು ತುರ್ತು ನಿರ್ಗಮನ ಬಾಗಿಲು ಮೂಲಕ ಕೆಳಗೆ ಇಳಿಸುತ್ತಿರುವುದು ಕಂಡು ಬಂತು. ಮೂರು ಗಂಟೆಗಳ ಕಾಲ ತಂತ್ರಜ್ಞರು ದುರಸ್ತಿಗೊಳಿಸಿದರು.

No comments

Post a Comment