ಬೆಂಗಳೂರು: ವಾಡಿಕೆ ಎನ್ನುವಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಬೆಂಗಳೂರು ದಕ್ಷಿಣದ ಡಿ. ಸೃಜನಾ ಮತ್ತು ಉತ್ತರ ಕನ್ನಡ ಜಿಲ್ಲೆಯ ನಾಗಾಂಜಲಿ ಪರಮೇಶ್ವರ್ ನಾಯ್ಕ್‌ಗೆ ಗರಿಷ್ಠ ಅಂಕ ಲಭ್ಯವಾಗಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.625 ಅಂಕಕ್ಕೆ 625 ಅಂಕ ಪಡೆದಿರುವ ಈ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರೆ, ಒಟ್ಟು 11 ವಿದ್ಯಾರ್ಥಿಗಳಿಗೆ
624 ಅಂಕ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.ಬೆಂಗಳೂರು ದಕ್ಷಿಣದ ಆನೇಕಲ್ ತಾಲೂಕು ಅತ್ತಿಬೆಲೆಯ ಸೇಂಟ್ ಫಿಲೋಮಿನಾ ಇಂಗ್ಲಿಷ್ ಹೈ ಸ್ಕೂಲ್‌ನ ವಿದ್ಯಾರ್ಥಿನಿ ಡಿ. ಸೃಜನಾ 625 ಅಂಕ, ಕುಮುಟಾದ ಕೊಲಬಾ ವಿಥೋಬ್ ಶಾನ್‌ಭೋಗ್ ಕಲ್ಬಾಕರ್ ಹೈ ಸ್ಕೂಲ್‌ನ ನಾಗಾಂಜಲಿಗೆ 625 ಅಂಕ ಬಂದಿವೆ.
ಬೆಂಗಳೂರು ಉತ್ತರದ ಭಾವನಾ.ಯು.ಎಸ್, ಭಾವನಾ.ಆರ್., ಸಾಯಿರಾಮ್, ಬೆಂಗಳೂರು ದಕ್ಷಿಣದ ಶಾಂಭವಿ ಎಚ್.ವಿ., ತುಮಕೂರಿನ ಹರ್ಷಿತ್ ಸಿ., ಮಂಗಳೂರಿನ ಸಿಂಚನಾ ಲಕ್ಷ್ಮೀ, ಕೃಪಾ ಕೆ.ಆರ್. ಅನುಪಮಾ ಕಾಮತ್, ಚಿನ್ಮಯಿ, ಹಾಸನದ ಪ್ರಗತಿ ಎಂ.ಗೌಡ ಮತ್ತು ಅಭಿನ್ ಬಿ. – 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೇ ದ್ವಿತೀಯ ಸ್ಥಾನ ಪಡೆದಿದ್ದಾರೆ.

No comments
Post a Comment