ಮೇ ೦೪ ಹಾಗೂ ೦೫ ರಿಂದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟ

No comments

ಮೇ ೦೪, ಹಾಗೂ ೦೫ ರಂದು ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯ
ಚೆಟ್ಟಳ್ಳಿ: ಮೂರ್ನಾಡು ಗೌತಮ್ ಫ್ರೆಂಡ್ಸ್ ವತಿಯಿಂದ ನಡೆಯುತ್ತಿರುವ ನಾಲ್ಕನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟವು ಮೇ ೦೪ ಹಾಗೂ ೦೫ ರಂದು ಮೂರ್ನಾಡಿನ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಖಜಾಂಜಿ ಅಬ್ದುರಹಮಾನ್ ತಿಳಿಸಿದ್ದಾರೆ.
ವಾಲಿಬಾಲ್ ಪಂದ್ಯಾಟವು ಏಪ್ರಿಲ್ ೨೯ ಹಾಗೂ ೩೦ ನಡೆಸಲು ತೀರ್ಮಾನಿಸಿದ್ದು , ಪದವೀಧರ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿರುವ ಕಾರಣ ಪಂದ್ಯಾಟವು ಮೇ ೦೪ ಶನಿವಾರ ಹಾಗೂ ೦೫ ರ ಭಾನುವಾರ ನಡೆಯಲಿದೆ. ಆದ್ದರಿಂದ ತಂಡದ ಮಾಲೀಕರು ಹಾಗೂ ಆಟಗಾರರು ಸಂಘದೊಂದಿಗೆ ಸಹಕರಿಸಬೇಕಾಗಿ ತಿಳಿಸಿದ್ದಾರೆ.

No comments

Post a Comment