Redmi ಗೆ ತೀವ್ರ ಪೈಪೋಟಿ ಒಡ್ಡುತ್ತಿರುವ Realme

No comments


ಕಡಿಮೆ ದರ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಜನಸಾಮಾನ್ಯರಿಗೆ ಉತ್ತಮ ಸ್ಮಾರ್ಟ್‌ಫೋನ್‌ ನೀಡುವ ನಿಟ್ಟಿನಲ್ಲಿ Redmiಗೆ ತೀವ್ರ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಮುನ್ನುಗ್ಗುತ್ತಿರುವ Realme ಸಂಸ್ಥೆ 'ಸ್ಪೀಡ್‌ ಅವೇಕನ್ಸ್‌' ಎಂಬ ಟ್ಯಾಗ್‌ ಲೈನ್‌ನೊಂದಿಗೆ Realme 3 Pro ಮತ್ತು ಆರಂಭಿಕ ಹಂತದ ಫೋನ್‌ ಬಳಕೆದಾರರಿಗೆ ಅತ್ಯಾಕರ್ಷಕವಾಗಿರುವ Realme C2 ಎಂಬ ಎರಡು ಸ್ಮಾರ್ಟ್‌ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಏಪ್ರಿಲ್‌ 29ರ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಮತ್ತು Realme ವೆಬ್‌ಸೈಟ್‌ನಲ್ಲಿ Realme 3 Pro ಮಾರಾಟ ಆರಂಭವಾಗಲಿದೆ. ಮೇ 15ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್‌ ಮತ್ತು Realme ವೆಬ್‌ಸೈಟ್‌ನಲ್ಲಿ ರಿಯಲ್‌ಮಿ C2 ಮಾರಾಟ ಆರಂಭವಾಗಲಿದೆ. Realme ನವದೆಹಲಿಯ ಸುಭಾಶ್‌ ನಗರದ ಪೆಸಿಫಿಕ್‌ ಮಾಲ್‌ನಲ್ಲಿ ಏಪ್ರಿಲ್‌ 27ರಂದು ತನ್ನ ಮೊದಲ ಪಾಪ್‌ಅಪ್‌ ಮಳಿಗೆ ಆರಂಭಿಸಲಿದ್ದು, ಅಭಿಮಾನಿಗಳು Realme 3 Pro ಮೊದಲ ಮಾರಾಟಕ್ಕೆ ಮುಂಚಿತವಾಗಿಯೇ ಇಲ್ಲಿ ಮೊಬೈಲ್‌ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.
                                         

No comments

Post a Comment