ಮಡಿಕೇರಿ: ವಿರಾಜಪೇಟೆ ಸಮೀಪದ ಕಡಂಗದ ಪ್ರೌಢ ಶಾಲಾ ಮೈದಾನದಲ್ಲಿ ಅರಫಾ ಫ್ರೆಂಡ್ಸ್ ವತಿಯಿಂದ ಕಳೆದ ಒಂದು ವಾರದಿಂದ ನಡೆದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಕೆ.ವೈ.ಸಿ.ಸಿ ಕಡಂಗ ತಂಡವು ಫೈನಲ್ ನಲ್ಲಿ ಆಶಸ್ ಗೋಣಿಕೊಪ್ಪ ತಂಡವನ್ನು ಮಣಿಸಿ ೧೬ ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಚಾಂಪಿಯನ್ ತಂಡವಾಗಿ ಹೊರಮ್ಮಿದೆ.ಆಶಸ್ ಗೋಣಿಕೊಪ್ಪ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ಫೈನಲ್ ಪಂದ್ಯಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಶಸ್ ತಂಡವು ೭ ಓವರುಗಳಿಗೆ ೨೬ ಗಳಿಸಲಷ್ಟೇ ಶಕ್ತರಾದರು.
ಎದುರಾಳಿ ಕೆ.ವೈ.ಸಿ.ಸಿ ತಂಡವು ಆರಂಭಿಕ ಆಟಗಾರರಾದ ನೌಷಾದ್ ಹಾಗೂ ಅಸ್ಕರ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ೩ ಓವರುಗಳಿಗೆ ಗುರಿ ತಲುಪಿ ಚಾಂಪಿಯನ್ ತಂಡವಾಗಿ ಹೊರಮ್ಮಿದೆ.
ತೃತೀಯ ಸ್ಥಾನಕ್ಕಾಗಿ ನಡೆದ, ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ತಂಡಗಳಾದ ಬ್ಯ್ಲಾಕ್ ಕೋಬ್ರಾ ಹಾಗೂ ಕೌವ್ ಬಾಯ್ಸ್ ನಡುವಿನ ಪಂದ್ಯದಲ್ಲಿ ಕೋಬ್ರಾ ತಂಡ ಗೆಲುವು ಸಾಧಿಸಿ ತೃತೀಯ ಸ್ಥಾನ ಪಡೆದರೆ, ಕೌವ್ ಬಾಯ್ಸ್ ತಂಡ ನಾಲ್ಕನೇ ಸ್ಥಾನವನ್ನು ಪಡೆಯಿತು.
ಕ್ರೀಡಾಕೂಟದ ಕಮಲ್ ಕ್ಯಾಚ್ ಪ್ರಶಸ್ತಿಯನ್ನು ಗೋಣಿಕೊಪ್ಪ ಆಶಸ್ ತಂಡದ ಜಂಶೀರ್, ಬೆಸ್ಟ್ ಕೀಪರ್ ಕೋಬ್ರಾ ತಂಡದ ನಾಸೀರ್, ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಕೆ.ವೈ.ಸಿ.ಸಿ ತಂಡದ ನೌಷಾದ್, ಅತ್ಯುತ್ತಮ ದಾಳಿಗಾರ ಕೌವ್ ಬಾಯ್ಸ್ ತಂಡದ ನವಾಫ್, ಸ್ಟೈಲಿಶ್ ಪ್ಲೆಯರ್ ಆಫ್ ದಿ ಟೂರ್ನಮೆಂಟ್ ನೌಷಾದ್ ಅರಫಾ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಆಶಸ್ ಗೋಣಿಕೊಪ್ಪ ತಂಡದ ಫಾಯಿಸ್, ಕ್ರೀಡಾ ಕೂಟದಲ್ಲಿ ಅರ್ಧಶತಕ ಬಾರಿಸಿದ ಆಟಗಾರ ಕೆ.ವೈ.ಸಿ.ಸಿ ತಂಡದ ನೌಷಾದ್ ಕಡಂಗ , ಬೆಸ್ಟ್ ಟೀಂ ಮಾಲ್ದಾರೆ, ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಅಸ್ಕರ್ , ಹಾಗೂ ಮ್ಯಾನ್ ಆಪ್ ದಿ ಸೀರಿಯಸ್ ಪ್ರಶಸ್ತಿಯನ್ನು ಕೆ.ವೈ.ಸಿ .ಸಿ ತಂಡದ ನೌಷಾದ್ ಪಡೆದುಕೊಂಡರು.
ಕ್ರೀಡಾಕೂಟದ ವೀಕ್ಷಕ ವಿವರಣೆಗಾರರಾಗಿ ಹರ್ಷಾದ್ ಸಿ.ಎಂ, ನೌಫಲ್ , ಅಸ್ಕರ್ ದುಬೈ , ಮನಾಫ್, ಸ್ಕೋರರ್ ಆಗಿ ಜುನೈದ್ ಹಾಗೂ ತೀರ್ಪುಗಾರರಾಗಿ ಅಹ್ಮದ್, ಸತ್ತಾರ್, ಕರೀಂ ನೌವಾಫ್ ಕಾರ್ಯನಿರ್ವಹಿಸಿದರು.
ಸಮಾರೋಪ ಸಮಾರಂಭ:
ಕೊಡಗು ಮುಸ್ಲಿಂ ಕಪ್ ೧೬ ನೇ ವರ್ಷದ ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಅರಫ ಫ್ರೆಂಡ್ಸ್ ಅಧ್ಯಕ್ಷರಾದ ಅಬ್ದುರಹಮಾನ್ ಅರಫಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಕೀಲರಾದ ಕುಂಞಿ ಅಬ್ದುಲ್ಲಾ ಕೊಡಗು ಮುಸ್ಲಿಂ ಕಪ್ ಸಂಸ್ಥಾಪಕ ರಶೀದ್ ಎಡಪಾಲ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಕೆ.ಸಲಾಂ, ಅರಫಾ ಫ್ರೆಂಡ್ಸ್ ಉಪಾಧ್ಯಕ್ಷರಾದ ಸಮೀರ್,ವಿರಾಜಪೇಟೆ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅಬ್ದುರಹಮಾನ್ , ಜಮಾಹತ್ ಅಧ್ಯಕ್ಷರಾದ ಅಬೂಬಕರ್, ಸಬೀರ್ ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಖಾದರ್ ಹಾಕತ್ತೂರು ,ಮೊಹಿದ್ದೀನ್ , ಹಾಗೂ ಛಾಯಾಗ್ರಾಹಕ ರಶೀದ್ ಕೊಳಕೇರಿ ಇದ್ದರು.
*ಬಾಕ್ಸ*
ಸನ್ಮಾನ
ಅರಫಾ ಕಡಂಗ ಫ್ರೆಂಡ್ಸ್ ಅಧ್ಯಕ್ಷರಾದ ಅಬ್ದುರಹಮಾನ್ ಅರಫಾ, ಕೊಡಗು ಮುಸ್ಲಿಂ ಕಪ್ ಸಂಸ್ಥಾಪಕ ರಶೀದ್ ಎಡಪಾಲ ಹಾಗೂ ಛಾಯಾಗ್ರಹಕ ರಶೀದ್ ಕೊಳಕೇರಿ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
*ಕೆ.ಎಂ ಇಸ್ಮಾಯಿಲ್ ಕಂಡಕರೆ*

No comments
Post a Comment