ಮುಂಬೈ: ಅಡಾಲ್ಪ್ ಹಿಟ್ಲರ್ ಕೂಡ ಪ್ರಜಾತಂತ್ರ ವ್ಯವಸ್ಥೆ ಮೂಲಕ ಅಧಿಕಾರಕ್ಕೆ ಬಂದು ಸರ್ವಾಧಿಕಾರಿಯಾಗಿದ್ದ. ಪ್ರಧಾನಿ ನರೇಂದ್ರ ಮೋದಿ ಕೂಡ ಅದೇ ಹಾದಿಯಲ್ಲಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.ಮುಂಬೈನಲ್ಲಿ ಶನಿವಾರ ಮಾತನಾಡಿದ ಖರ್ಗೆ, ಮೋದಿ ಹೆಸರಿನಲ್ಲಿ ಚುನಾವಣೆ ನಡೆಸಲಾಗುತ್ತಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಪಕ್ಷ ಅಥವಾ ಸಿದ್ಧಾಂತದ ಹೊರತಾಗಿ ವ್ಯಕ್ತಿ ಹೆಸರಲ್ಲಿ ಮತ ಕೇಳಲಾಗುತ್ತಿದೆ. ಮೋದಿ ಸರ್ಕಾರ್ ಎಂದು ಹೇಳುವ ಮೂಲಕ ಪಕ್ಷ, ದೇಶ ಇವರಿಗೆ ಮುಖ್ಯವಲ್ಲ ಎನ್ನುವಂತಾಗಿದೆ ಎಂದು ಕಿಡಿಕಾರಿದರು.

No comments
Post a Comment