ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ: ಕೆ.ವೈ.ಸಿ.ಸಿ ಕಡಂಗ ಫೈನಲ್ ಗೆ
ಚೆಟ್ಟಳ್ಳಿ:ವಿರಾಜಪೇಟೆ ಸಮೀಪದ ಕಡಂಗದ ಪ್ರೌಢ ಶಾಲಾ ಮೈದಾನದಲ್ಲಿ ಅರಫಾ ಫ್ರೆಂಡ್ಸ್ ವತಿಯಿಂದ ನಡೆಯುತ್ತಿರುವ ೧೬ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಕೆ.ವೈ.ಸಿ .ಸಿ ಕಡಂಗ ತಂಡವು ಕೌವ್ ಬಾಯ್ಸ್ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ.
ಮೊದಲನೇ ಸೆಮಿಫೈನಲ್ ಪಂದ್ಯವು ಕೆ.ವೈ.ಸಿ.ಸಿ ಕಡಂಗ ಹಾಗೂ ಕೌವ್ ಬಾಯ್ಸ್ ವಿರಾಜಪೇಟೆ ನಡುವೆ ನಡೆಯಿತು.ಮೊದಲು ಬ್ಯಾಟ್ ಮಾಡಿದ ಕೆ.ವೈ.ಸಿ.ಸಿ ತಂಡವು ೦೫ ಓವರುಗಳಿಗೆ ೭೬ ರನ್ ಗಳಿಸಿತು.
ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಕೌವ್ ಬಾಯ್ಸ್ ತಂಡವು ೨೫ ರನ್ ಗಳ ಸೋಲು ಕಂಡರು. ಕೆ.ವೈ.ಸಿ.ಸಿ ತಂಡವು ಫೈನಲ್ ಪ್ರವೇಶಿಸಿದರು.
ಕೆ.ವೈ.ಸಿ.ಸಿ ಕಡಂಗ ಹಾಗೂ ಆತಿಥೇಯ ಅರಫಾ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ಅರಫಾ ತಂಡವು ನಿಗದಿತ ೦೪ ಓವರುಗಳಿಗೆ
೩೭ ರನ್ ಕಲೆ ಹಾಕಿತು.ಈ ಗುರಿಯನ್ನು ಬೆನ್ನಟ್ಟಿದ ಕೆ.ವೈ.ಸಿ.ಸಿ ತಂಡವು ೩ ಓವರುಗಳಿಗೆ ಗುರಿ ತಲುಪಿ ಸೆಮಿಫೈನಲ್ ಪ್ರವೇಶಿಸಿದರು.
ಮಾಯಮುಡಿ ಹಾಗೂ ಕೋಬ್ರಾ ವಿರಾಜಪೇಟೆ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಾಯಮುಡಿ ತಂಡವು ೦೪ ಓವರುಗಳಿಗೆ ೩೭ ರನ್ ಗಳಿಸಲಷ್ಟೇ ಶಕ್ತರಾದರು.
ಕೋಬ್ರಾ ತಂಡವು ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು.
ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯವು ಮಾಲ್ದಾರೆ ಹಾಗೂ ಕೌವ್ ಬಾಯ್ಸ್ ವಿರಾಜಪೇಟೆ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಾಲ್ದಾರೆ ತಂಡವು ೦೫ ಓವರುಗಳಿಗೆ ೪೪ ರನ್ ಗಳಿಸಿತು.
ಕೌವ್ ಬಾಯ್ಸ್ ತಂಡವು ೪ ಓವರುಗಳಿಗೆ ಗುರಿ ತಲುಪಿ ಸೆಮಿಫೈನಲ್ ಗೆ ಪ್ರವೇಶಿಸಿದರು.
*ಸಮಾರೋಪ ಸಮಾರಂಭ:* ಕೊಡಗು ಮುಸ್ಲಿಂ ಕ್ರಿಕೆಟ್ ಕಪ್ ೧೬ ನೇ ವರ್ಷದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಸಲಾಂ', ವಕೀಲರಾದ ಜಿ.ಅಪ್ಪಣ್ಣ, ಮುಸ್ಲಿಂ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಖಾದರ್ ಹಾಕತ್ತೂರು, ಕೊಡಗು ಮುಸ್ಲಿಂ ಕ್ರಿಕೆಟ್ ಸಂಸ್ಥಾಪಕ ರಶೀದ್ ಎಡಪಲಾ, ಕಾರ್ಯದರ್ಶಿ ಸೈಫ್ ಮೂರ್ನಾಡು, ಅರಫಾ ಫ್ರೆಂಡ್ಸ್ ವ್ಯವಸ್ಥಾಪಕರಾದ ಅಬ್ದುರಹಮಾನ್ , ಜಮಾಹತ್ ಅಧ್ಯಕ್ಷರಾದ ಕೆ.ಎಂ ಇಬ್ರಾಹಿಂ, ಅಬೂಬಕರ್, ಗ್ರಾಮ ಪಂಚಾಯತಿ ಸದಸ್ಯರಾದ ಅಬ್ದುಲ್ಲಾ, ಸುಬೀರ್, ಇವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಅರಫಾ ಫ್ರೆಂಡ್ಸ್ ಸದಸ್ಯರಾದ ನೌಫಲ್ ತಿಳಿಸಿದ್ದಾರೆ
*ಬಾಕ್ಸ್*
ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಕೆ.ವೈ.ಸಿ.ಸಿ ತಂಡದ ನೌಷಾದ್ ಕೌವ್ ಬಾಯ್ಸ್ ವಿರಾಜಪೇಟೆ ತಂಡದ ವಿರುದ್ಧ ೧೬ ಬಾಲ್ ಗಳಿಗೆ ೫೫ ರನ್ ಕಲೆ ಹಾಕಿ.ತಂಡದ ಗೆಲುವಿಗೆ ಕಾರಣರಾದರು. ಅಲ್ಲದೇ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು.
*ಕೆ.ಎಂ ಇಸ್ಮಾಯಿಲ್ ಕಂಡಕರೆ*
*ಇಂದಿನ ಸೆಮಿಫೈನಲ್ ಪಂದ್ಯಾಟ*
ಆಶಸ್ ಗೋಣಿಕೊಪ್ಪ-ಬ್ಲ್ಯಾಕ್ ಕೋಬ್ರಾ ವಿರಾಜಪೇಟೆ

No comments
Post a Comment