ಕೊಂಡಂಗೇರಿಯಲ್ಲಿ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ

No comments
ಕೊಂಡಂಗೇರಿಯಲ್ಲಿ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ:

ಚೆಟ್ಟಳ್ಳಿ: ಕೆ.ವೈ.ಸಿ ಯುವ ಸಂಘ ವತಿಯಿಂದ ಕೊಂಡಂಗೇರಿಯ ಪ್ರೌಢ ಶಾಲಾ ಮೈದಾನದಲ್ಲಿ ಎರಡನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪ್ರಗತಿಪರ ಚಿಂತಕ ವಕೀಲರಾದ ಕುಂಞಿ ಅಬ್ದುಲ್ಲಾ ಮಾತನಾಡಿ ಕೊಂಡಂಗೇರಿ ಆಶಿಫ್ ಆಪು ಅವರ  ಸಾರಥ್ಯದಲ್ಲಿ ಕಳೆದ ವರ್ಷ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟವನ್ನು ಆರಂಭಿಸಿರುವುದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ  ಎಂದರು‌.

ಕ್ರೀಡೆಯ ಮೂಲಕ ಸಮುದಾಯದ ಸೌಹಾರ್ದತೆಯನ್ನು ಬೆಳೆಸಲು ಸಾಧ್ಯ.ಶೈಕ್ಷಣಿಕ ರಂಗದಲ್ಲಿ ಮುಸ್ಲಿಂ ಸಮುದಾಯ ಪ್ರಗತಿ ಕಾಣಬೇಕಾಗಿದೆ ಎಂದರು.
ಅಲ್ಲದೇ ಕೆ.ವೈ.ಸಿ ಕೊಂಡಂಗೇರಿ ಯುವಕ ಸಂಘದ ಸಾರಥ್ಯದಲ್ಲಿ ಜಿಲ್ಲೆಯ ಶೈಕ್ಷಣಿಕ ,ಸಮಾಜಿಕ ರಂಗದಲ್ಲಿ ಸಾಧನೆಗೈದವರನ್ನು ಗುರುತಿಸಿ  ಪ್ರೋತ್ಸಾಹಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಅಲ್ಲದೇ ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ರೀತಿಯ ಸಹಕಾರವಿರಲಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯರಾದ ಯೂಸುಫ್ ಮಾತನಾಡಿ ಕೊಂಡಂಗೇರಿಯ ಯುವಕ ಆಶಿಫ್ ಅವರ ಪ್ರಾರಂಭಿಸಿದ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ ಮುಂದಿನ ದಿನಗಳಲ್ಲಿ ಜಿಲ್ಲೆ , ರಾಜ್ಯ, ರಾಷ್ಟ್ರ ಹಾಗೂ ಮಟ್ಟದಲ್ಲಿ ಹೆಸರಗಳಿಸುವಂತೆ ಆಗಲಿ ಎಂದು ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡವರು ಹಾಗೂ ಪುಲ್ವಾಮ ದಾಳಿಯಲ್ಲಿ ಮಡಿದ ಸೈನಿಕರಿಗೆ ಹಾಗೂ ನೂಜಿಲ್ಯಾಂಡ್ ಮಸೀದಿ ದಾಳಿಯಲ್ಲಿ ಮಡಿದವರಿಗೆ  ಹಾಗೂ ಶ್ರೀಲಂಕಾ ಚರ್ಚ್ ಮೇಲೆ ನಡೆದ ದಾಳಿಯಲ್ಲಿ ಮಡಿದವರಿಗೆ ಮೌನಾಚರಣೆ ಮೂಲಕ ಗೌರವಿಸಲಾಯಿತು.
ಪಂದ್ಯಾಟವನ್ನು ರಾಷ್ಟ್ರೀಗೀತೆ ಹಾಡುವುದರ ಮೂಲಕ ಚಾಲನೆ ನೀಡಲಾಯಿತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದ ಸಂಸ್ಥಾಪಕ ಆಶಿಫ್, ಪಂದ್ಯಾಟದ ಪ್ರಾಯೋಜಕರದ ಉಂಬಾಯಿ ಗೋಣಿಕೊಪ್ಪ, ಟಿ.ಎಸ್.ಕೆ ಕೊಂಡಂಗೇರಿ, ವಿರಾಜಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ ರಾಫಿ, ಪಿ.ಎಫ್‌ಐ ಜಿಲ್ಲಾಧ್ಯಕ್ಷ ಹಾರಿಸ್, ರಶೀದ್ ಎಡಪಲಾ, ಶಾದುಲಿ ಗ್ರಾಮ ಪಂಚಾಯತಿ ಅಧ್ಯಕ್ಷರರು ಹಾಲುಗುಂದ, ಕೆ.ವೈ.ಸಿ ಅಧ್ಯಕ್ಷರಾದ ನಾಸೀರ್, ಕ್ರಿಯೇಟಿವ್ ಖಲೀಲ್, ಮತ್ತಿತ್ತರರು ಇದ್ದರು.
*ಉದ್ಘಾಟನಾ ಪಂದ್ಯಾಟ:*
ಚಾಮಿಯಾಲ್ ಹಾಗೂ ನಾಪೋಕ್ಲು ನಡುವಿನ ಪಂದ್ಯಾಟದಲ್ಲಿ ಟ್ರೈಬ್ರೇಕರ್ ನಲ್ಲಿ ೩-೪ ಗೋಲುಗಳ ಅಂತರದಿಂದ ನಾಪೋಕ್ಲು ತಂಡವನ್ನು ಮಣಿಸಿ ಚಾಮಿಯಾಲ್ ತಂಡವು ಗೆದ್ದಿತು.

No comments

Post a Comment