ಚೆಟ್ಟಳ್ಳಿ: ಸಮೀಪದ ಕೊಂಡಂಗೇರಿ ಯೂತ್ ಕ್ಲಬ್ ವತಿಯಿಂದ ಕೊಂಡಂಗೇರಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದಲ್ಲಿ ಹಾಕತ್ತೂರು ಎಫ್.ಸಿ ತಂಡವನ್ನು ೩-೧ ಗೋಲುಗಳ ಅಂತರದಿಂದ ಮಣಿಸಿ ಕ್ರೀಡಾಕೂಟದ ಮೊದಲ ತಂಡವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಚೆಲ್ಸಿ ಗೋಣಿಕೊಪ್ಪ ಹಾಗೂ ಅಲ್ ಅಮೀನ್ ಹಳೇ ತಾಲ್ಲೂಕು ನಡುವಿನ ಪಂದ್ಯಾಟದಲ್ಲಿ ಗೋಣಿಕೊಪ್ಪ ತಂಡವು ೧-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫ್ರೀ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಯೂತ್ ಫಾರ್ ಜಸ್ಟೀಸ್ ಸುಂಟಿಕೊಪ್ಪ ಹಾಗೂ ಚಾಮಿಯಾಲ್ ತಂಡಗಳ ನಡುವಿನ ಪಂದ್ಯಾಟವು ಡ್ರಾ ಆದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಪೆನಾಲ್ಟಿ ಶೂಟೌಟ್ ನಲ್ಲಿ ಚಾಮಿಯಾಲ್ ತಂಡವು ೩-೨ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫ್ರೀ ಕ್ವಾರ್ಟರ್ ಪ್ರವೇಶಿಸಿತು.
ಯಂಗ್ ಇಂಡಿಯಾ ಪಾಲಿಪೆಟ್ಟ ಹಾಗೂ ಕಡಂಗ ತಂಡಗಳ ಪಂದ್ಯಾಟದಲ್ಲಿ ಯಂಗ್ ಇಂಡಿಯಾ ತಂಡವು ೩-೧ ಗೋಲುಗಳ ಅಂತರದಿಂದ ಗೆದ್ದಿತು.
ಕಲ್ಲುಬಾಣೆ ಹಾಗೂ ಯುನೈಟೆಡ್ ಕುಂಜಿಲ ನಡುವಿನ ಪಂದ್ಯಾಟವು ೧-೧ ಗೋಲುಗಳ ಸಮಬಲ ಸಾಧಿಸದ ಕಾರಣ ಪೆನಾಲ್ಟಿ ಶೂಟೌಟ್ ನಲ್ಲಿ ಕುಂಜಿ ತಂಡವು ೨-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫ್ರೀ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಚಿಟ್ಟಡೆ ಎಫ್.ಸಿ ಹಾಗೂ ಎಲಿಯಂಗಾಡು ಫ್ರೆಂಡ್ಸ್ ನಡುವಿನ ಪಂದ್ಯದಲ್ಲಿ ಚಿಟ್ಟಡೆ ತಂಡವು ೪-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.
ಟೀಂ ಕೂಲ್ ಸಿದ್ದಾಪುರ ಹಾಗೂ ಚೆಲ್ಸಿ ಗೋಣಿಕೊಪ್ಪ ತಂಡವು ೨-೧ ಗೋಲುಗಳ ಅಂತರದಿಂದ ಗೆದ್ದಿತು.
ಚಿಟ್ಟಡೆ ಎಫ್.ಸಿ ಹಾಗೂ ಪಡಿಯಾನಿ ಎಫ್.ಸಿ.ನಡುವಿನ ಪಂದ್ಯಾಟದಲ್ಲಿ ಪಡಿಯಾನಿ ತಂಡವು ೨-೦ ಗೋಲುಗಳ ಅಂತರದಿಂದ ಗೆದ್ದಿತು.
*ಕೆ.ಎಂ ಇಸ್ಮಾಯಿಲ್ ಕಂಡಕರೆ*
*ಇಂದಿನ ಪಂದ್ಯಾಟ*
ಚೆಲ್ಸಿ ಗೋಣಿಕೊಪ್ಪ: ಯುನೈಟೆಡ್ ಕುಂಜಿಲ
ಚಾಮಿಯಾಲ್ :ಸಿ.ಟಿ ರೈಡರ್ಸ್ ಕುಂಜಿಲ
ಆರ್.ವೈ.ಸಿ ಎಮ್ಮೆಮಾಡು:ಕಿಪ್ಸ್ಟಾ ಮೂರ್ನಾಡು
ಫ್ಯಾನ್ಸಿ ಕಂಡಕರೆ: ಫೋರ್ ಸ್ಟಾರ್ ಎಡಪಲಾ
ಗರಂಗಂದೂರು:ಎಚ್.ಕೆ.ಜಿ.ಎನ್ ಸುಂಟಿಕೊಪ್ಪ
ಕೆ.ವೈ.ಸಿ ಕೊಂಡಂಗೇರಿ:ಬ್ಲ್ಯಾಕ್ ಬಾಯ್ಸ್
ವಿರಾಜಪೇಟೆ ಫ್ರೆಂಡ್ಸ್: ಕೆ.ಎಂ. ಸಿ ಕಲ್ಲಮೊಟ್ಟೆ.
ರೋಜಾರಿಯನ್ಸ್ ಗೋಣಿಕೊಪ್ಪ: ಚೆಟ್ಟಳ್ಳಿ ಫ್ರೆಂಡ್ಸ್


No comments
Post a Comment