ಸಾಲ ವಾಪಸ್ ಕೊಡುತ್ತೇನೆ ಅಂದ್ರು ಬ್ಯಾಂಕ್ ಗಳು ಒಪ್ಪುತ್ತಿಲ್ಲ : ವಿಜಯ್ ಮಲ್ಯ

No comments

ಲಂಡನ್:ಜೆಟ್ ಏರ್ವೇಸ್ ಗೆ ಬಂದೊದಗಿರುವ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ಸುಸ್ತಿದಾರ ವಿಜಯ್ ಮಲ್ಯ, "ನಾನು ಪೂರ್ತಿ ಸಾಲ ವಾಪಸ್ ಕೊಡ್ತೀನಿ ಅಂದರೂ ಬ್ಯಾಂಕ್ ಗಳು ತೆಗೆದುಕೊಳ್ಳುವುದಕ್ಕೆ ಸಿದ್ಧವಿಲ್ಲ ಎಂದು ಹೇಳಿದಾರೆ.
ಜೆಟ್ ಏರ್ವೇಸ್ ಗೆ ಬಂದೊದಗಿರುವ ಸ್ಥಿತಿಯನ್ನು ತಮ್ಮ ಕಿಂಗ್ ಫಿಶರ್ ಏರ್ಲೈನ್ಸ್ ನ ಪತನಕ್ಕೆ ಹೋಲಿಕೆ ಮಾಡಿರುವ ವಿಜಯ್ ಮಲ್ಯ, "ಕಿಂಗ್ ಫಿಶರ್ ಸೇರಿದಂತೆ ಭಾರತದ ಅನೇಕ ವಿಮಾನ ಸಂಸ್ಥೆಗಳು ಕುಸಿದಿವೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ನಿಜವಾದ ಉದ್ಯಮ ವಿಫಲವಾಗುತ್ತದೆ. ನಾನು ತೆಗೆದುಕೊಂಡಿರುವ ಸಾಲವನ್ನು ಶೇ.100 ರಷ್ಟು ವಾಪಸ್ ಪಾವತಿ ಮಾಡುತ್ತೇನೆ ಅಂದರೂ ನನ್ನ ಮೇಲೆ ಸಿಬಿಐ/ಇಡಿ ಕ್ರಿಮಿನಲ್ ಪ್ರಕರಣ ದಾಖಲಿಸಿವೆ.

No comments

Post a Comment