ಮತ ಎಣಿಕೆ ಮಾಡುತ್ತಿದ್ದ 270 ಚುನಾವಣಾ ಸಿಬ್ಬಂದಿಗಳು ಮೃತಪಟ್ಟಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.ಮಿಲಿಯನ್ ಗಟ್ಟಲೆ ಬ್ಯಾಲೆಟ್ ಪೇಪರ್ ಗಳನ್ನು ಎಣಿಕೆ ಮಾಡಲು ದೀರ್ಘಾವಧಿ ಕಾರ್ಯ ನಿರ್ವಹಣೆ ಮಾಡಿರುವ ಪರಿಣಾಮ ಒಟ್ಟು 1,878 ಅಸ್ವಸ್ಥಗೊಂಡಿದ್ದು, 270 ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಏ.17 ರಂದು ನಡೆದ ಮತದಾನದ ಮತ ಎಣಿಕೆಗೆ 7 ಮಿಲಿಯನ್ ಜನರು ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಇಡಿ ಕೆಲಸ ಮಾಡಿರುವ ಪರಿಣಾಮದಿಂದಾಗಿ ತೀವ್ರವಾಗಿ ಆಯಾಸಗೊಂಡು ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ಕೆಪಿಯು ನ ಚುನಾವಣಾ ಆಯೋಗದ ವಕ್ತಾರರು ಮಾಹಿತಿ ನೀಡಿದ್ದಾರೆ.ಚುನಾವಣಾ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಸಂಸತ್, ಅಧ್ಯಕ್ಷೀಯ ಚುನಾವಣೆಯನ್ನು ಒಟ್ಟಿಗೆ ನಡೆಸಲಾಗಿದ್ದು 260 ಮಿಲಿಯನ್ ಜನರು ಇದೇ ಮೊದಲ ಬಾರಿಗೆ ಒಟ್ಟಿಗೆ ಮತದಾನ ಮಾಡಿದ್ದರು.

No comments
Post a Comment