55 ಮೀನುಗಾರರು 5 ನಾಗರಿಕರನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ

No comments

ಕರಾಚಿ:ಪಾಕಿಸ್ಥಾನದ ಜೈಲುಗಳಲ್ಲಿ ಬಂಧಿಸಲ್ಪಟ್ಟಿದ್ದ 55 ಭಾರತೀಯ ಮೀನುಗಾರರು ಹಾಗೂ 5 ನಾಗರಿಕರನ್ನು ಪಾಕಿಸ್ಥಾನ ಸರಕಾರ ಸದ್ಭಾವನೆಯ ಸಂಕೇತವಾಗಿ ಸೋಮವಾರ ಬಿಡುಗಡೆಗೊಳಿಸಿದೆ
ಕರಾಚಿಯ ಮಾಲಿರ್‌ ಜೈಲಿನಿಂದ ಸೋಮವಾರ ಬಿಡುಗಡೆಗೊಂಡ ಮೀನುಗಾರರು ಮತ್ತು ನಾಗರಿಕರನ್ನು ಬಿಗಿಭದ್ರತೆಯೊಂದಿಗೆ ಕರಾಚಿ ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಕರೆ ತರಲಾಯಿತು. ಅನಂತರ, ಅವರನ್ನು ಬ್ಯುಸಿನೆಸ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಲಾಹೋರ್‌ಗೆ ಕಳುಹಿಸಲಾಯಿತು. ಲಾಹೋರ್‌ಗೆ ಬಂದಿಳಿದ ಅವರನ್ನು ವಾಘಾಗೆ ಕರೆದೊಯ್ದು ಭಾರತೀಯ ಪಡೆಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಲಾಗಿದೆ.ಎ. 7ರಂದು 100 ಮೀನುಗಾರರನ್ನು ಬಿಡುಗಡೆಗೊಳಿಸಿದ್ದ ಪಾಕಿಸ್ಥಾನ, ಎ. 14ರಂದು ಇತರ 100 ಮೀನುಗಾರರನ್ನು ಬಿಡುಗಡೆಗೊಳಿಸಿತ್ತು.

No comments

Post a Comment