ಬೆಂಗಳೂರಿನಲ್ಲಿ 801 ವಿದೇಶಿಗರ ಅಕ್ರಮ ವಾಸ : ಹೈಕೋರ್ಟ್ಗೆ ಮಾಹಿತಿ

No comments

ಬೆಂಗಳೂರು:ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸರು ಎಷ್ಟೇ ಅಲರ್ಟ್ ಆಗಿದ್ರೂ ಇನ್ನೂ ನಗರದಲ್ಲಿ ಅಕ್ರಮವಾಗಿ ವಿದೇಶಿಗರು ವಾಸವಿದ್ದಾರೆ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಒಟ್ಟು 801 ವಿದೇಶಿಗರು ಅಕ್ರಮವಾಗಿ ವಾಸ ಮಾಡುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಹೈಕೋರ್ಟ್​​ಗೆ ಮಾಹಿತಿ ಕೊಟ್ಟಿದ್ದಾರೆ.ವೀಸಾ ಅವಧಿ ಮುಗಿದಿದ್ದರೂ ವಿದೇಶಿ ಪ್ರಜೆಗಳು ಸ್ವದೇಶಕ್ಕೆ ಮರಳದೇ ನಗರದಲ್ಲಿ ವಾಸವಿದ್ದಾರೆ. ಈ ಪೈಕಿ ಆಫ್ರಿಕಾ ಮೂಲದವರೇ ಹೆಚ್ಚು ಎನ್ನಲಾಗಿದೆ. 801 ಅಕ್ರಮ ವಿದೇಶಿ ವಲಸಿಗರ ಪೈಕಿ 92 ಜನ ವೀಸಾ ನವೀಕರಣಕ್ಕೆ ಅರ್ಜಿ ಹಾಕಿದ್ದಾರೆ. ಸದ್ಯ ಅಧಿಕಾರಿಗಳು 92 ಅರ್ಜಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಅಕ್ರಮವಾಗಿ ನೆಲೆಸಿರುವ ವಿದೇಶಿಗರಲ್ಲಿ 57 ಜನರ ಮಾಹಿತಿಯೇ ನಗರ ಪೊಲೀಸರಿಗಿಲ್ಲ.

No comments

Post a Comment