ಮಾನವೀಯ ಸ್ನೇಹಿತರ ಒಕ್ಕೂಟದ ವ್ಯಾಟ್ಸ್ ಅಪ್ ಗ್ರೂಪ್ ವತಿಯಿಂದ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

No comments

ಮಡಿಕೇರಿ: ಮಾನವೀಯ ಸ್ನೇಹಿತರ ಒಕ್ಕೂಟದ ವ್ಯಾಟ್ಸ್ ಅಪ್ ಗ್ರೂಪ್ ವತಿಯಿಂದ ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಲುಂಗಿಯನ್ನು ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಗ್ರೂಪಿನ ಅಡ್ಮಿನ್ ಮೈಕಲ್ ವೆಗಾಸ್ ಮಾನವೀಯ ಸ್ನೇಹಿತರ ಒಕ್ಕೂಟದ ವ್ಯಾಟ್ಸ್ ಅಪ್ ರಕ್ತದಾನ, ಬಡವರಿಗೆ ಆರ್ಥಿಕ ಸಹಾಯ, ಹಾಗೂ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದು ಗ್ರೂಪಿನ ಮುಖ್ಯ ಉದ್ದೇಶವಾಗಿದೆ ಎಂದರು‌.

ಮುಂದಿನ ದಿನಗಳಲ್ಲಿ ೩೫ ಬಡ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಇನ್ನಿತರ ವಸ್ತುಗಳನ್ನು ನೀಡುವುದಾಗಿ ಹೇಳಿದರು. ರಶೀದ್ ಕೂರತ್ ಮಾತನಾಡಿ , ಈ ಕಾರ್ಯಕ್ರಮವು ದಾನಿಗಳ ಸಹಾಯದಿಂದ ಯಶಸ್ವಿಯಾಗಿದೆ ಎಂದರು.ಗ್ರೂಪಿನ ಸದಸ್ಯರು ದಾನಿಗಳಾದ ವಿನು ಮಡಿಕೇರಿ ಹಾಗೂ ಮೊಯ್ದು ಅವರಿಗೆ

ಧನ್ಯವಾದ ಸಲ್ಲಿಸಿದರು. ಈ ಸಂದರ್ಭ ಗ್ರೂಪಿನ ಸದಸ್ಯರಾದ ರವಿ ಗೌಡ, ಸುಕುಮಾರ್, ಅಜಿತ್, ನಾಗೇಶ್, ಸಂದೀಪ್, ಉಮೇಶ್ ಗೌಡ ,ಕುಲ್ ದಿಪ್ ಪೂಣಚ್ಚ, ವಿನು, ಎಡ್ವರ್ಡ್ ಡಿ ಸೋಜಾ, ಲತೀಫ್ ಚೆಟ್ಟಳ್ಳಿ, ಚಂದ್ರ ಇದ್ದರು.

No comments

Post a Comment