ಪಶ್ಚಿಮಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ: ಕಚ್ಚಾ ಬಾಂಬ್​ ದಾಳಿಗೆ ಇಬ್ಬರು ಸಾವು, ನಾಲ್ವರಿಗೆ ಗಂಭೀರ ಗಾಯ

No comments

ಪಶ್ಚಿಮಬಂಗಾಳ (ಜೂ.11): ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆ  ಬೆನ್ನಲ್ಲೇ ಅಪರಿಚಿತರ ಗುಂಪೊಂದು ನಿನ್ನೆ ಮಧ್ಯಾರಾತ್ರಿ  24 ಪರಗಣ ಜಿಲ್ಲೆಯ ಕಂಕಿನಾರದಲ್ಲಿ ಕಚ್ಚಾ ಬಾಂಬ್​ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಸ್ಥಳದಲ್ಲಿ ಕಳ್ಳತನ ನಡೆಯುತ್ತಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾವು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಈ ಮಧ್ಯೆ ನಿನ್ನೆ ರಾತ್ರಿ ಅಪರಿಚಿತರ ಗುಂಪೊಂದು ಬಾಂಬ್​ ದಾಳಿ ನಡೆಸಿದೆ. ಇದರಿಂದ ನಾವು ಭಯಗೊಂಡಿದ್ದೇವೆ ಎಂದು ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.


ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿದ್ದು, ಈ ನಡುವೆ ಈ ಬಾಂಬ್​ ದಾಳಿ ನಡೆದಿದೆ.
ಶನಿವಾರ ಇಲ್ಲಿನ ನಯ್‌ಜತ್‌ನಲ್ಲಿನ ಹಟ್ಗಾಚ್‌ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾಕಲಾಗಿದ್ದ ಪಕ್ಷದ ಧ್ವಜಗಳನ್ನು ತೆಗೆದುಹಾಕುವ ವಿಚಾರಕ್ಕೆ  ಮಾರಾಮಾರಿಯಾಗಿದ್ದು, 26 ವರ್ಷ ವಯಸ್ಸಿನ ಟಿಎಂಸಿ ಕಾರ್ಯಕರ್ತ ಕ್ಯೂಮ್‌ ಮೊಲ್ಲಾ ಎಂಬುವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಬಿಜೆಪಿಯ ಪ್ರದೀಪ್‌ ಮಂಡಲ್‌ ಮತ್ತು ಸುಕಾಂತ ಮಂಡಲ್‌ ಎಂಬ ಇಬ್ಬರನ್ನು ಹತ್ಯೆ ಮಾಡಲಾಗಿದೆ.

‘ಬಿಜೆಪಿ ಟಿಎಂಸಿ ಕಾರ್ಯಕರ್ತರ ನಡುವಿನ ಈ ಮಾರಾಮಾರಿಗೆ ಬಿಜೆಪಿಯೇ ಕಾರಣ. ಇದೊಂದು ರಾಜಕೀಯ ಪ್ರೇರಿತ ದಾಳಿ  ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.

No comments

Post a Comment