ಯಡಿಯೂರಪ್ಪ ಆರೋಪದಲ್ಲಿ ಯಾವುದೇ ಹುರುಳಿಲ್ಲ : ಬಿ.ಸಿ. ಪಾಟೀಲ್ ತಿರುಗೇಟು


ಹಾವೇರಿ : ಯಡಿಯೂರಪ್ಪ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸಿದ್ದರಾಮಯ್ಯ ನಾಲ್ಕು ಶಾಸಕರನ್ನು ಬಿಟ್ಟಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಜೊತೆಗೆ ಅವರು ಆ ನಾಲ್ಕು ಶಾಸಕರ ಹೆಸರನ್ನು ಹೇಳಲಿ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಆಪರೇಷನ್​ ಕಮಲಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಕಾಂಗ್ರೆಸ್ ಶಾಸಕ, ಕಾಂಗ್ರೆಸ್​ನಲ್ಲಿ ಇದ್ದೇನೆ. ಲೋಕಸಭೆ ಫಲಿತಾಂಶ ನನ್ನಲ್ಲಿ ಅಸಮಾಧಾನ ಉಂಟು ಮಾಡಿದ್ದು ನಿಜ. ಈ ಕುರಿತಂತೆ ನಾಯಕರಿಗೆ ನಾನು ತಿಳಿಸಿದ್ದು ಸಹ ಸತ್ಯ ಎಂದು ತಿಳಿಸಿದರು.
ಈ ಬಾರಿ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕೆ ಸಿಗುತ್ತೆ ಎಂದು ನಮ್ಮ ನಾಯಕರು ನಮಗೆ ಭರವಸೆ ನೀಡಿದ್ದಾರೆ. ಖಂಡಿತ ಈ ಬಾರಿ ಸಚಿವ ಸಂಪುಟದಲ್ಲಿ ನಾನು ಸಚಿವನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.