ಮೋಜು ಮಸ್ತಿಗಾಗಿ ಬೈಕ್​ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಆರೆಸ್ಟ್


ಬೆಂಗಳೂರು:ರಸ್ತೆ ಬದಿಯಲ್ಲಿ‌ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕದ್ದು ಪೆಟ್ರೋಲ್​​ ಮುಗಿಯುವವರೆಗೂ ಮೋಜು ಮಸ್ತಿ ಮಾಡಿ ಪೆಟ್ರೋಲ್​ ಖಾಲಿಯಾದ ಬಳಿಕ ಎಲ್ಲೆಂದರಲ್ಲಿ ಬಿಟ್ಟು ಎಸ್ಕೇಪ್ ಆಗ್ತಿದ್ದ ಇಬ್ಬರು ಕುಖ್ಯಾತ ದ್ವಿಚಕ್ರ ವಾಹನ ಕಳ್ಳರನ್ನ ಕೊತ್ತನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾನ್ (20) ಮತ್ತು ಸಂಜಯ್ ಅಲಿಯಾಸ್​ ಮೋರಿ (19) ಬಂಧಿತ ಆರೋಪಿಗಳು. ಈಗಾಗಲೇ ಒಮ್ಮೆ ಕಳ್ಳತನ ಮಾಡಿ ಜೈಲಿಗೆ ಹೋಗಿ ಹೊರಬಂದ ಇವರು ಮತ್ತೆ ಹಳೆ ಚಾಳಿಯನ್ನೇ ಮುಂದುವರೆಸಿದ್ದರು. ಕದ್ದ ವಾಹನದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗಲೇ ಇವರು ಸಿಕ್ಕಿ ಬಿದ್ದಿದ್ದು, ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇನ್ನು ಬಂಧಿತರಿಂದ ಕೊತ್ತನೂರು, ಕೊಡಿಗೆಹಳ್ಳಿ, ಬಾಣಸವಾಡಿ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆರು ಲಕ್ಷ ಮೌಲ್ಯದ ಹದಿನೇಳು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.