ಎಸ್.ಡಿ.ಪಿ.ಐ ವತಿಯಿಂದ ಬ್ಯಾಡಗೊಟ್ಟದಲ್ಲಿ ಟಾರ್ಪಲ್ ವಿತರಣೆ


ಕೂಡಿಗೆ: ಸೊಶಿಯಲ್‌ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಮಳೆಗಾಲದಲ್ಲಿ ವಾಸಕ್ಕೆ ಯೋಗ್ಯವಲ್ಲದ ಮನೆಗಳಿಗನ್ನು ಗುರುತಿಸಿ ತಾತ್ಕಾಲಿಕ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಹೊದಿಕೆ(ಟಾರ್ಪಲ್) ವಿತರಿಸಲಾಯಿತು. ಆರು ತಿಂಗಳ ಹಿಂದೆ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ದಲಿತ‌‌ನಿವಾಸಿಗಳ ಹೀನಾಯ ಸ್ಥಿತಿ ಬಗ್ಗೆ ಮಾಧ್ಯಮವೊಂದರಲ್ಲಿ ಪ್ರಸಾರ ಆದದನ್ನು ಗಮನಿಸಿ ಗ್ರಾಮಕ್ಕೆ ಭೇಟಿ ಪರಿಶೀಲಿಸಿ ದ SDPI ನಾಯಕರು ನಂತರ ಗ್ರಾಮಸ್ಥರೊಂದಿಗೆ ವಸತಿ ಮತ್ತು

ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ಆಗ್ರಹಿಸಿ ನಿರಂತರವಾಗಿ ಹೋರಾಟವನ್ನು ಮಾಡುತ್ತಾ ಬಂದಿದೆ. ಈ ಹಿಂದೆ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ಮಾಡಿದ ನಂತರ ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು ಸಹ ಇದುವರೆಗು ಯಾವುದೇ ರೀತಿಯ ಸ್ಪಂದನೆ ಜಿಲ್ಲಾಧಿಕಾರಿಗಳಿಂದಾಗಲಿ,ಸಂಭಂದಿಸಿದ ಅಧಿಕಾರಿಗಳಿಂದಾಗಲಿ ,ಸ್ಥಳೀಯ ಜನಪ್ರತಿನಿಧಿಗಳಿಂದಾಗಲಿ ದೊರಕಿರುವುದಿಲ್ಲ. ಈಗ ಸಿಕ್ಕಿದ ಟಾರ್ಪಲ್ ನಿಂದ ತಾತ್ಕಾಲಿಕವಾಗಿ ಒಂದೆರಡು ಮಳೆ ಕಳೆದು ಹೋಗಬಹುದೇ ಹೊರತು ಈ ಬಾರಿಯ ಮಳೆಗಾಲದಲ್ಲಿ ಎಲ್ಲಿ ಹೋಗಬೇಕು ಎಂಬ ಪ್ರಶ್ನೆ ಎದುರಾಗಿದೆ. ಈ ಸಂದರ್ಭದಲ್ಲಿ ಹೋರಾಟ ಸಮಿತಿಯು ಮುಂದಿನ ದಿನಗಳಲ್ಲಿ ತೀವ್ರ

ಹೋರಾಟದ ಎಚ್ಚರಿಕೆಯನ್ನು ನಿಡಿದೆ. ಈ‌ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಶಫೀ,ತಾಲ್ಲೂಕು ಮುಸ್ಲಿಂ ಒಕ್ಕೂಟ ,ಕುಶಾಲನಗರ ಅಧ್ಯಕ್ಷರಾದ ಹನೀಫ್,ಎಸ್.ಡಿ.ಪಿ.ಯ ನಗರಾಧ್ಯಕ್ಷರಾದ ಬಾಷಾ,ಬ್ಯಾಡಗೊಟ್ಟ ಹೋರಾಟ ಸಮಿತಿಯ ಪ್ರಮುಖರಾದ ಅಬ್ದುಲ್ ಸಲಾಂ,ಗಣೇಶ್,ಜಯ,ಅರುಣ್ ಉಪಸ್ತಿತರಿದ್ದರು.