ಕೊಲ್ಕತ್ತಾ: ಪಶ್ಚಿಮಬಂಗಾಳದ ನಾರ್ಥ್ 24 ಪಾರ್ಗಾನಸ್ ಭಾತ್ಪಾರಾದಲ್ಲಿ ಮತ್ತೊಮ್ಮೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ಕೇಂದ್ರ ಸಚಿವ ಎಸ್.ಎಸ್.ಅಹ್ಲುವಾಲಿಯಾ ಅವರು ಈ ಸ್ಥಳಕ್ಕೆ ಭೇಟಿ ನೀಡಿದ ಸಂಬಂಧದಲ್ಲಿ ಪೊಲೀಸರ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ದಿನದ ಹಿಂದೆ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದರು. ಆದಾಗ್ಯೂ ಮೃತ ಕುಟುಂಬಕ್ಕೆ ಸಮಾಧಾನ ಹೇಳಲು ಕೇಂದ್ರ ಸಚಿವರು ಬಂದಾಗ ಮತ್ತೆ ಹಿಂಸಾಚಾರವಾಗಿದೆ.
ಬಂಗಾಳಿ ಪೊಲೀರು ಮತ್ತು ಮಮತಾ ಬ್ಯಾನರ್ಜಿಯನ್ನು ಮೂದಲಿಸಿ ಬಿಜೆಪಿ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಬೀಸಿ, ಗುಂಪನ್ನು ಚದುರಿಸಿದ್ದಾರೆ


No comments
Post a Comment