ಕೆ.ವೈ.ಸಿ ಯುವಕ ಸಂಘದ ವತಿಯಿಂದ:,ವಿಶ್ವ ಪರಿಸರ ದಿನಾಚರಣೆ 

No comments

ಚೆಟ್ಟಳ್ಳಿ: ಕೊಂಡಂಗೇರಿ ಯುವಕ ಸಂಘ ಕೊಂಡಂಗೇರಿ (ಕೆ.ವೈ.ಸಿ) ಇವರ ವತಿಯಿಂದ ೧೫ ಕ್ಕೂ ಹೆಚ್ಚು ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಹನೀಪ್ ಸಖಾಫಿ ಕೊಂಡಂಗೇರಿ ಮಾತನಾಡಿ, ಇಡೀ ದಕ್ಷಿಣ ಭಾರತಕ್ಕೆ ಜೀವಜಲವಾದ ಕಾವೇರಿಯ ಒಡಲು ಕಲುಷಿತಗೊಳ್ಳುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಕಾವೇರಿ ನದಿ ಸೇರುತ್ತಿದೆ.ಪ್ಲಾಸ್ಟಿಕ್ ಮುಕ್ತವನ್ನಾಗಿಸುವುದರ ಮೂಲಕ ನಾವು ಪರಿಸರವನ್ನು ಸಂರಕ್ಷಿಸಬೇಕು ಎಂದರು. ಅನಗತ್ಯವಾಗಿ ಲಕ್ಷಗಟ್ಟಲೆ ಮರಗಳು ಹನನವಾಗುತ್ತಿದೆ.ಇದಕ್ಕೆಲ್ಲಾ ಕಾರಣ ಮನುಷ್ಯರಾದ ನಾವು ಎಂದು ವಿಷಾದ ವ್ಯಕ್ತಪಡಿಸಿದರು. ಎಲ್ಲರೂ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವುದರೊಂದಿಗೆ, ಪರಿಸರ ಸಂರಕ್ಷಣೆಗೆ ಪಣತೊಡಬೇಕು ಎಂದರು. ಈ ಸಂದರ್ಭ ಕೆ.ವೈ.ಸಿ ಅಧ್ಯಕ್ಷರಾದ ನಾಸೀರ್, ಕೊಡಗು ಮುಸ್ಲಿಂ ಫುಟ್ಬಾಲ್ ಸಂಸ್ಥಾಪಕ ಆಶಿಫ್(ಆಪು) ,ಮಶೂದ್, ಶಾಹಿದ್, ಅಸ್ಕರ್ ,ಫಾಸಿಲ್ ಇದ್ದರು.

No comments

Post a Comment