ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಪ್ರತೀ ತಿಂಗಳ ನಾಲ್ಕನೇ ಶನಿವಾರ ರಜೆ ಘೋಷಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿರುವ ಬೆನ್ನ ಹಿಂದೆಯೇ ಶಾಲಾ – ಕಾಲೇಜಿನ ವಿದ್ಯಾರ್ಥಿಗಳಿಗೂ ಸಿಹಿ ಸುದ್ಧಿಯೊಂದು ಹೊರಬಿದ್ದಿದೆ. ಶಾಲಾ – ಕಾಲೇಜುಗಳಿಗೂ ಕೂಡ ಪ್ರತೀ ತಿಂಗಳ ನಾಲ್ಕನೇ ಶನಿವಾರದಂದು ರಜೆ ನೀಡಲು ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಆರನೇ ವೇತನ ಆಯೋಗವು ಕನಕ ಜಯಂತಿ, ಬಸವ ಜಯಂತಿ ಮತ್ತು ವಾಲ್ಮೀಕಿ ಜಯಂತಿಗೆ ನೀಡಲಾಗುತ್ತಿರುವ ರಜೆಯನ್ನು ರದ್ದುಪಡಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತಾದರೂ ಸಚಿವ ಸಂಪುಟ ಈ ರಜೆಗಳನ್ನು ರದ್ದುಪಡಿಸದೇ ಯಥಾವತ್ತಾಗಿ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದೆ. ಆದರೆ ಪ್ರತೀ ತಿಂಗಳ ನಾಲ್ಕನೇ ಶನಿವಾರದ ರಜೆಯ ಆದೇಶ ಯಾವಾಗ ಜಾರಿಗೊಳ್ಳುತ್ತದೆ ಎಂಬ ಬಗ್ಗೆ ಸ್ಪಷತೆ ದೊರೆತಿಲ್ಲ. ಈ ಕುರಿತು ಸರಕಾರ ಇನ್ನಷ್ಟೇ ಅಧಿಕೃತ ಆದೇಶ ಹೊರಡಿಸಬೇಕಿದೆ.
ಶಾಲಾ – ಕಾಲೇಜಿಗೂ 4ನೇ ಶನಿವಾರ ರಜೆ ಭಾಗ್ಯ

No comments
Post a Comment