ಕುಶಾಲನಗರದಲ್ಲಿ ಲಾರಿಯ ಬ್ಯಾಟರಿ ಕಳವು

No comments

ಕುಶಾಲನಗರ : ಇಲ್ಲಿನ ಗುಂಡೂರಾವ್ ಬಡಾವಣೆಯಲ್ಲಿ ನಿಲ್ಲಿಸಿದ್ದ ಲಾರಿಯಲ್ಲಿ ಬ್ಯಾಟರಿ ಕಳುವಾಗಿರುವ ಕುರಿತು ಕುಶಾಲನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಾರಿ ಮಾಲೀಕ ಚೇತನ್ ಯೋಗಾನಂದ ಅವರಿಗೆ ಸೇರಿದ ಲಾರಿಯಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಸುಮಾರು 15 ಸಾವಿರ ರೂ. ಮೌಲ್ಯದ ಬ್ಯಾಟರಿಯನ್ನು ಕಳವು ಮಾಡಿದ್ದಾರೆ.
ಹಾಗೆಯೇ ಗುಂಡೂರಾವ್ ಬಡಾವಣೆಯಲ್ಲಿ ಪಂಚಾಯಿತಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಸೇರಿದ ಲಾರಿಯಲ್ಲೂ ಕೆಲವು ದಿನಗಳ ಹಿಂದೆ ಬ್ಯಾಟರಿ ಕಳ್ಳತನ ಮಾಡಲಾಗಿತ್ತು. 
ಇದೇ ರೀತಿ ಪಟ್ಟಣದಾದ್ಯಂತ ಇನ್ನೂ ಐದಾರು ಲಾರಿಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿದ್ದು ಬ್ಯಾಟರಿ ಖದೀಮರ ತಂಡವೇ ವ್ಯವಸ್ಥಿತವಾಗಿ ಇಂತಹ ದುಷ್ಕೃತ್ಯ ಎಸಗುತ್ತಿರುವುದಾಗಿ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ದೂರಿದ್ದಾರೆ.

No comments

Post a Comment