ಗುಡುಗಳಲೆ ಗೋಪಾಲಪುರ ಬದ್ರಿಯಾ ಅರೇಬಿಕ್ ಮದ್ರಸದಲ್ಲಿ ಮಿಹ್ರಾಜುಲ್ ಬಿದಾಯ ಪ್ರಾರಂಭೋತ್ಸವ


ಶನಿವಾರಸಂತೆ : ಗುಡುಗಳಲೆ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಗೋಪಾಲಪುರ ಬದ್ರಿಯಾ ಅರೇಬಿಕ್ ಮದ್ರಸದಲ್ಲಿ ದಿನಾಂಕ 13ರಂದು ಗುರುವಾರ ಅಧ್ಯಯನವರ್ಷದ ಪ್ರಾರಂಭೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಆಡಳಿತಮಂಡಳಿಯ ಉಪಾಧ್ಯಕ್ಷರಾದ ಶೇಖಬ್ಬಹಾಜಿ(ಚೆರಿಯಾಕ) ರವರ ಅದ್ಯಕ್ಷತೆಯಲ್ಲಿ ನಡೆದಸಭೆಯಲ್ಲಿ ಅಧ್ಯಾಪಕರಾದ ಹಸೈನಾರ್ ಮುಸ್ಲಿಯಾರ್ ಕಾಜೂರು. ರವರು ಪ್ರಾರ್ಥಿಸಿದರು ಪ್ರಮುಖರಾದ ಟಿಂಬರ್ ಮರ್ಚೆಂಟ್ ಇಬ್ರಾಹಿಂ. ಫಾರೂಕ್ ಮೌಲವಿ.ನಾಸಿರ್ ಆರ್ಮಿ. ಅಬ್ದುಲ್ ರಜಾಕ್.ಪಾಲ್ಗೊಂಡಿದ್ದರು ಅರಬಿ ಮದ್ರಸದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು. ಸಿಹಿ ಹಂಚುವ.ಮೂಲಕ ಆಚರಿಸಲಾಯಿತು. ಹಸೈನಾರ್ ಕಾಜೂರು ಸ್ವಾಗತಿಸಿ ವಂಧಿಸಿದರು.