ಸೋಮವಾರಪೇಟೆ ಜಲಾಲಿಯ ಮದ್ರಸದಲ್ಲಿ ಫತ್‌ಹೇ ಮುಬಾರಕ್ ಪ್ರಾರಂಭೋತ್ಸವ


 ಚೆಟ್ಟಳ್ಳಿ : ರಮಝಾನ್ ಪ್ರಯುಕ್ತ ರಜೆ ನೀಡಲಾಗಿದ್ದ ಸೋಮವಾರಪೇಟೆಯ ಜಲಾಲಿಯ ಮದ್ರಸ ಫತ್‌ಹೇ ಮುಬಾರಕ್ ಎಂಬ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಪುನರಾರಂಭ ಮಾಡಲಾಯಿತು. ಜಮಾಅತ್ ಅಧ್ಯಕ್ಷ ಆದಂ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಮಾತನಾಡಿ "ವಿದ್ಯಾರ್ಥಿಗಳ‌ ಭವಿಷ್ಯಕ್ಕೆ ಲೌಕಿಕ ಧಾರ್ಮಿಕ ಸಮನ್ವಯ ಶಿಕ್ಷಣ ಅತ್ಯಗತ್ಯ. ಧಾರ್ಮಿಕ ಶಿಕ್ಷಣದ ಕೊರತೆ ಸಮಾಜದಲ್ಲಿ ಅಶಾಂತಿಯ ವಾತಾವರಣಕ್ಕೆ ಕಾರಣವಾಗುತ್ತಿದೆ. ಮಧ್ಯಪಾನ, ಮಾದಕ ದ್ರವ್ಯಗಳಲ್ಲಿ ಮುಳುಗಿ ಮುಂದಿನ ಪೀಳಿಗೆಗೆ ದೊಡ್ಡ ಸಮಸ್ಯೆಯಾಗುತ್ತಿದೆ. ಆದ್ದರಿಂದ ನಮ್ಮ ಮಕ್ಕಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆಸಲು ಮುಂದೆ ಬರಬೇಕು" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮದ್ರಸ ಪ್ರಧಾನ ಅಧ್ಯಾಪಕರಾದ ಮುನೀರ್ ಸಅದಿ ಕೊಳಕೇರಿ, ಸಾಲಿಹ್ ರಹ್ಮಾನಿ, ಮದ್ರಸ ಮೇಲ್ವಿಚಾರಕರಾದ ಮುಹಿಯದ್ದೀನ್, ಎಂ.ಬಿ.ಮುಹಮ್ಮದ್, ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತಿರಿದ್ದರು.