ವಿಶ್ವಕಪ್: ವಿಂಡೀಸ್ 212ಕ್ಕೆ ಆಲೌಟ್



 ಸೌತಾಂಪ್ಟನ್ , ಜೂ.14: ವಿಶ್ವಕಪ್‌ನ 19ನೇ ಪಂದ್ಯದಲ್ಲಿ ಇಂಗ್ಲೆಂಡ್‌ನ ದಾಳಿಗೆ ಸಿಲುಕಿ 44.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟಾಗಿದೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವಿಂಡೀಸ್ ಪರ ನಿಕೋಲಾಸ್ ಪೂರನ್ ಮಾತ್ರ ಅರ್ಧಶತಕ (63) ಗಳಿಸಿದರು. ಆರಂಭಿಕ ದಾಂಡಿಗ ಕ್ರಿಸ್ ಗೇಲ್ (36) , ಆ್ಯಂಡ್ರೆ ರಸೆಲ್(21) ಮತ್ತು ಕಾರ್ಲೊಸ್ ಬ್ರಾತ್‌ವೇಟ್(14) ಎರಡಂಕೆಯ ಕೊಡುಗೆ ನೀಡಿದರು. ಇಂಗ್ಲೆಂಡ್‌ನ ಆರ್ಚರ್ ಮತ್ತು ಮಾರ್ಕ್‌ವುಡ್ ತಲಾ 3 ವಿಕೆಟ್, ಜೋ ರೂಟ್ 27ಕ್ಕೆ 2 ,ಕ್ರಿಸ್ ವೋಕ್ಸ್ ಮತ್ತು ಲಿಯಾಮ್ ಪ್ಲೆಂಕೆಟ್ ತಲಾ 1 ವಿಕೆಟ್ ಹಂಚಿಕೊಂಡರು.